ಭಟ್ಕಳ: ಮಹಿಳೆಯ ಮೇಲೆ ಮಂಗನಿಂದ ದಾಳಿ; ಆಸ್ಪತ್ರೆಗೆ ದಾಖಲು

Source: S O News service | By I.G. Bhatkali | Published on 20th January 2021, 5:25 PM | Coastal News |

ಭಟ್ಕಳ: ನಡೆದುಕೊಂಡು ಹೋಗುತ್ತಿದ್ದ ಮಹಿಳೆಯೋರ್ವರ ಮೇಲೆ ಮಂಗವೊಂದು ದಾಳಿ ನಡೆಸಿದ ಪರಿಣಾಮವಾಗಿ ಗಂಭೀರವಾಗಿ ಗಾಯಗೊಂಡ ಮಹಿಳೆ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾದ ಘಟನೆ ತಾಲೂಕಿನ ಪುರಸಭಾ ಜಂಬೂರಮಠ ವ್ಯಾಪ್ತಿಯಲ್ಲಿ ನಡೆದಿದೆ.  

ಗಾಯಗೊಂಡ ಮಹಿಳೆಯನ್ನು ತಾಲೂಕಿನ ವಿ.ವಿ.ರೋಡ್ ನಿವಾಸಿ ಸರೋಜಿನಿ ಶೇಟ್ (55 ) ಎಂದು ಗುರುತಿಸಲಾಗಿದೆ. ಇವರ ಕೈಯನ್ನು ಮಂಗ ಕಚ್ಚಿ ಗಾಯಗೊಳಿಸಿದ್ದು, ರಕ್ತ ನಾಳಕ್ಕೆ ಹಾನಿಯಾಗಿದೆ. ಇಲ್ಲಿನ ಸರಕಾರಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿದ ನಂತರ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲಕ್ಕೆ ಸಾಗಿಸಲಾಗಿದೆ. ಘಟನೆಯ ಕುರಿತು ಭಟ್ಕಳ ಶಹರ ಠಾಣಾ ಪೊಲೀಸರಿಗೆ ಮಾಹಿತಿಯನ್ನು ನೀಡಲಾಗಿದೆ. 

Read These Next

ಕಾರವಾರ: ಭ್ರಷ್ಟಾಚಾರ ಆರೋಪ-ಸಂಚಾರಿ ನಿಯಮ ಉಲ್ಲಂಘನೆ ಆರ್‌ಟಿಓ, ಟ್ರಾಫಿಕ್ ಅಧಿಕಾರಿಗಳಿಗೆ ಬಾಡಿ ಕ್ಯಾಮರಾ

ಪೊಲೀಸ್ ಸಂಚಾರಿ ವಿಭಾಗ ಹಾಗೂ ಆರ್.ಟಿ.ಓ. ಅಧಿಕಾರಿ ಗಳ ವಿರುದ್ಧ ಕೇಳಿ ಬರುತ್ತಿರುವ ಭ್ರಷ್ಟಾಚಾ ರದ ಆರೋಪ ಹಾಗೂ ನಾಗರಿಕರು ಸಂಚಾರಿ ...