ಭಟ್ಕಳ ತೆರ್ನಮಕ್ಕಿಯಲ್ಲಿ ರೈಲಿನಡಿ ಸಿಲುಕಿ ವೃದ್ಧೆ ಸಾವು

Source: S O News service | By I.G. Bhatkali | Published on 21st September 2021, 4:53 PM | Coastal News |

ಭಟ್ಕಳ: ವೃದ್ಧೆಯೋರ್ವರು ರೈಲಿನ ಅಡಿಗೆ ಸಿಲುಕಿ ಸಾವನ್ನಪಪಿರುವ ಘಟನೆ ಸೋಮವಾರ ಮಧ್ಯಾಹ್ನ 1.30 ಸುಮಾರಿಗೆ ತಾಲೂಕಿನ ಕೈಕಿಣಿ ಗ್ರಾಪಂ ವ್ಯಾಪ್ತಿಯ ತೆರ್ನಮಕ್ಕಿಯಲ್ಲಿ ನಡೆದಿದೆ.

ಮೃತರನ್ನು ತಾಲೂಕಿನ ಕೈಕಿಣಿ ಮಠದಹಿತ್ಲು ಮೂಲದ ನಾಗಮ್ಮ ನಾಗಪ್ಪ ನಾಯ್ಕ (70) ಎಂದು ಗುರುತಿಸಲಾಗಿದೆ.

ಬಹಳ ವರ್ಷಗಳ ಹಿಂದೆಯೇ ಪತಿಯಿಂದ ದೂರವಾಗಿದ್ದ ಈಕೆ ಮಾನಸಿಕ ಒತ್ತಡಕ್ಕೆ ಸಿಲುಕಿ ಅರೆ ಹುಚ್ಚಿಯಂತೆ ಅಲೆದಾಡುತ್ತಿದ್ದಳು. ಕಳೆದ 8-10 ವರ್ಷಗಳಿಂದ ಈಕೆ ಅಲ್ಲಿ ಇಲ್ಲಿ ಊಟ ಮಾಡಿಕೊಂಡು ಜೀವನ ಸಾಗಿಸುತ್ತಿದ್ದಳು ಎಂದು ತಿಳಿದು ಬಂದಿದೆ. ರೈಲಿನ ಅಡಿಗೆ ಸಿಲುಕಿ ಈಕೆಯ ದೇಹ ಸಂಪೂರ್ಣ ಛಿದ್ರಗೊಂಡಿದ್ದು, ಸ್ಥಳಕ್ಕೆ ಎಎಸ್‍ಐ ವಿ.ಜಿ.ಗುನಗಾ ಸಿಬ್ಬಂದಿಗಳೊಡನೆ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ. ಮುರುಡೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read These Next

ಭಟ್ಕಳ ಪುರಸಭಾ 21 ಅಂಗಡಿ ಹರಾಜು ಪ್ರಕ್ರಿಯೆ ಮುಂದೂಡಿಕೆ; ಹರಾಜು ನಡೆಸಲು ಸದಸ್ಯರ ಪಟ್ಟು ; ಹಿಂದೆ ಸರಿದ ಅಧಿಕಾರಿಗಳು

ಅ.25ರಂದು ನಿಗದಿಯಾಗಿದ್ದ ತಾಲೂಕಿನ ಪುರಸಭಾ ವ್ಯಾಪ್ತಿಯ 21 ಅಂಗಡಿಗಳ ಹರಾಜು ಪ್ರಕ್ರಿಯೆಯನ್ನು ಮುಂದೂಡಲು ಭಟ್ಕಳ ಸಹಾಯಕ ಆಯುಕ್ತೆ ...

ನೂರು ಕೋಟಿ ಲಸಿಕೆ ಗುರಿ ಸಾಧಿಸಿದ ಭಾರತ. ಪ್ರಧಾನಿ ನರೇಂದ್ರ ಮೋದಿಗೆ ಅಭಿನಂದನೆ : ವೆಂಕಟೇಶ ನಾಯಕ.

ಕಾರವಾರ : ಈ ಮೊದಲು ವ್ಯಾಕ್ಸಿನ್ ಗಳು ಬೇರೆ ದೇಶಗಳಲ್ಲಿ ಕಂಡು ಹಿಡಿದು ನಮ್ಮ ದೇಶಕ್ಕೆ ಬರುತಿತ್ತು. ಆದರೆ ಪ್ರಧಾನಮಂತ್ರಿ ನರೇಂದ್ರ ...