ಸುನೀಲ್ ನರೇನ್‌ ಬೇಕೇ ಬೇಕು ಎಂದು ಪಟ್ಟು ಹಿಡಿದಿದ್ದೇಕೆ ಗೌತಮ್ ಗಂಭೀರ್‌!

Source: uni | Published on 1st August 2020, 12:25 AM | Sports News | Don't Miss |


ನವದೆಹಲಿ: ಭಾರತ ತಂಡದ ಮಾಜಿ ಆರಂಭಿಕ ಬ್ಯಾಟ್ಸ್‌ಮನ್‌ ಗೌತಮ್‌ ಗಂಭೀರ್‌ ಅವರ ನಾಯಕತ್ವವನ್ನು ಕೋಲ್ಕತ್ತಾ ನೈಟ್‌ ರೈಡರ್ಸ್‌ ಮಾಜಿ ಸಹಾಯಕ ಕೋಚ್‌ ವಿಜಯ್‌ ದಹಿಯಾ ಶ್ಲಾಘಿಸಿದ್ದಾರೆ.
ಸ್ಪೋರ್ಟ್‌ಕೀಡಾದ ಫೇಸ್‌ಬುಕ್‌ ಪೇಜ್‌ನಲ್ಲಿ ಶಾನಿವಿ ಸಾದನ ಅವರೊಂದಿಗೆ ಲೈವ್‌ ಚಾಟ್‌ನಲ್ಲಿ ಮಾತನಾಡಿದ ಅವರು, ಕೋಲ್ಕತ್ತಾ ನೈಟ್‌ ರೈಡರ್ಸ್ ತಂಡದ ಯಶಸ್ಸಿನಲ್ಲಿ ಗೌತಮ್‌ ಗಂಭೀರ್‌ ಅವರ ಪಾತ್ರವನ್ನು ಶ್ಲಾಘಿಸಿದರು ಹಾಗೂ ವೆಸ್ಟ್ ಇಂಡಿಸ್‌ ತಂಡದ ಹಿರಿಯ ಆಫ್‌ ಸ್ಪಿನ್ನರ್ ಸುನೀಲ್‌ ನರೇನ್‌ ಅವರನ್ನು ತಂಡಕ್ಕೆ ಕರೆದುಕೊಂಡ ಉದ್ದೇಶವನ್ನು ಬಹಿರಂಗಪಡಿಸಿದರು.
ಐಪಿಎಲ್‌ ಮೊದಲು ಮೂರು ಆವೃತ್ತಿಗಳಲ್ಲಿ ಕೋಲ್ಕತ್ತಾ ನೈಟ್‌ ರೈಡರ್ಸ್‌ ತಂಡ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನವನ್ನು ಪಡೆದಿತ್ತು. 2011ರಲ್ಲಿ ಟೀಮ್‌ ಮ್ಯಾನೇಜ್‌ಮೆಂಟ್‌ ಗೌತಮ್‌ ಗಂಭೀರ್‌ ಅವರನ್ನು ತಂಡಕ್ಕೆ ಸೇರಿಸಿಕೊಂಡು ನಾಯಕತ್ವವನ್ನು ನೀಡಿತ್ತು. ಅದೇ ವರ್ಷ ಮೊಟ್ಟ ಮೊದಲ ಬಾರಿ ಕೆಕೆಆರ್‌ ಪ್ಲೇ ಅಫ್‌ಗೆ ತಲುಪಿತ್ತು. ನಂತರ, 2012 ಮತ್ತು 2014ರ ಆವೃತ್ತಿಗಳಲ್ಲಿ ಟ್ರೋಫಿಯನ್ನು ಮುಡಿಗೇರಿಸಿಕೊಂಡಿತ್ತು. ಗೌತಮ್‌ ಗಂಭೀರ್‌ ಅವರ ಆಕ್ರಮಣಕಾರಿ ನಾಯಕತ್ವ ತಂಡದ ಯಶಸ್ಸಿಗೆ ಕಾರಣವಾಗಿತ್ತು.
2012ರಲ್ಲಿ ಐಪಿಎಲ್‌ ಹರಾಜು ಪ್ರಕ್ರಿಯೆ ಕೆಲ ಕ್ಷಣಗಳನ್ನು ವಿಜಯ್ ದಹಿಯಾ ಮೆಲುಕು ಹಾಕಿದರು. ಭಾರತ ತಂಡ, ಆಸ್ಟ್ರೇಲಿಯಾ ಪ್ರವಾಸಕ್ಕೆ ತೆರಳಿದ್ದ ವೇಳೆ, ಗೌತಮ್‌ ಗಂಭೀರ್‌ ನನಗೆ ಕರೆ ಮಾಡಿ, ಎಷ್ಟು ಬೆಲೆಯಾದರೂ ಪರವಾಗಿಲ್ಲ ಸುನೀಲ್‌ ನರೇನ್‌ ಬೇಕು ಎಂದು ಹೇಳಿದ್ದರು. ಅದರಂತೆ, ವೆಸ್ಟ್ ಇಂಡೀಸ್‌ ಸ್ಪಿನ್ನರ್‌ 110 ಐಪಿಎಲ್‌ ಪಂದ್ಯಗಳಿಂದ 122 ವಿಕೆಟ್‌ಗಳನ್ನು ಕಬಳಿಸಿದ್ದಾರೆ ಹಾಗೂ ಎರಡು ಬಾರಿ ಟೂರ್ನಿ ಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಿದ್ದರು. ಕಳೆದ ಆವೃತ್ತಿಗಳಲ್ಲಿ ಅವರನ್ನು ಅಗ್ರ ಕ್ರಮಾಂಕದಲ್ಲಿ ಆಡಿಸಲಾಗಿತ್ತು

Read These Next

ಕಿರುಕುಳಕ್ಕೊಳಗಾದ ನಿರ್ಗತಿಕನಿಗೆ ಆಪತ್ಬಾಂಧವನಾಗಿ ರಿಯಲ್ ಹೀರೋ ಆದ ಫುಟ್ಬಾಲ್ ತಾರೆ ಮುಹಮ್ಮದ್ ಸಲಾಹ್

ಲಂಡನ್ : ಲಿವರ್ ಪೂಲ್ ಫುಟ್ಬಾಲ್ ತಾರೆ ಮುಹಮ್ಮದ್ ಸಲಾಹ್ ಇತ್ತೀಚೆಗೆ ನಿರ್ಗತಿಕ ವ್ಯಕ್ತಿಯೊಬ್ಬನ ಮೇಲೆ ನಡೆಯುತ್ತಿದ್ದ ದೌರ್ಜನ್ಯ ...

ಮಂಜುಸುತ ವಿರಚಿತ ಬಸವನಬಾಯಿ ಮಹಾಗಣಪತಿ ಭಕ್ತಿಗೀತೆಗಳ ಕೃತಿ "ಜಲಧಾರೆ" ಲೋಕಾರ್ಪಣೆ.

ಭಟ್ಕಳ : ತಾಲೂಕಿನ ಕುರುಂದೂರು ಗ್ರಾಮದ ಬಸವನಬಾಯಿ ಮಹಾಗಣಪತಿ ಕುರಿತು ಮಂಜುಸುತ ಜಲವಳ್ಳಿ ರಚಿಸಿ ಭಕ್ತಿಗೀತೆಗಳ ಕೃತಿ ಜಲಧಾರೆ ದೇವರ ...