ರಾತ್ರಿ 12ಗಂಟೆಯಿಂದ ಎ.14 ರ ವರೆಗೆ 21 ದಿನಗಳ ದೇಶದ ಮಹಾ ಲಾಕ್ ಡೌನ್

Source: sonews | By Staff Correspondent | Published on 24th March 2020, 8:49 PM | National News |

ಹೊಸದಿಲ್ಲಿ: ಕೊರೋನ ತಡೆಗಟ್ಟಲು ಮುನ್ನೆಚ್ಚರಿಕಾ ಕ್ರಮವಾಗಿ ಇಂದು ರಾತ್ರಿ 12 ಗಂಟೆಯಿಂದ ಎ.14 ರ ವರೆಗೆ 21 ದಿನಗಳ ಕಾಲ ದೇಶದ ಮಹಾ ಲಾಕ್ ಡೌನ್ ಆಗಲಿದ್ದು ಈ ಕುರಿತಂತೆ ದೇಶವನ್ನುದ್ದೇಶಿ ಪ್ರಧಾನಿ ಮೋದಿಯವರು ಮಂಗಳವಾರ ಘೋಷಿಸಿದ್ದಾರೆ. 

ಕೊರೊನಾವೈರಸ್ ಭೀತಿಯ ಹಿನ್ನೆಲೆಯಲ್ಲಿ ದೇಶವನ್ನುದ್ದೇಶಿಸಿ 2ನೆ ಬಾರಿಗೆ ಮಾತನಾಡಿದ ಅವರು, ಭಾರತವನ್ನು ರಕ್ಷಿಸಲು ಇದು ಅಗತ್ಯ. ರಾಜ್ಯಗಳಿಗೆ, ಕೇಂದ್ರಡಳಿತ ಪ್ರದೇಶಗಳು, ಜಿಲ್ಲೆಗಳು ಲಾಕ್ ಡೌನ್ ಆಗಲಿದ್ದು, ಕರ್ಫ್ಯೂ ಪರಿಸ್ಥಿತಿ ಇರಲಿದೆ. 21 ದಿನಗಳ ಕಾಲ ಈ ಲಾಕ್ ಡೌನ್ ಇರಲಿದೆ ಎಂದು ಪ್ರಧಾನಿ ತಿಳಿಸಿದ್ದಾರೆ.

ದೇಶದಲ್ಲಿ ಈಗ ಎಲ್ಲಿದ್ದೀರೋ ಅಲ್ಲಿಯೇ ಇರಿ, ಎಲ್ಲಿಗೂ ಹೋಗಬೇಡಿ. ಈ ಲಾಕ್ ಡೌನ್ 21 ದಿನಗಳ ಕಾಲ ಇರಲಿದೆ. 3 ವಾರಗಳು ಮನೆಯಲ್ಲೇ ಇರಿ. ಮನೆಗಳಿಂದ ಯಾರೂ ಹೊರಹೋಗಬೇಡಿ ಎಂದು ಪ್ರಧಾನಿ ವಿನಂತಿಸಿದ್ದಾರೆ.

"ನಾನು ಮತ್ತೊಮ್ಮೆ ನಿಮ್ಮ ಮುಂದೆ ಬಂದಿದ್ದೇನೆ. ಜನತಾ ಕರ್ಫ್ಯೂಗೆ ಎಲ್ಲಾ ಭಾರತೀಯರು, ಜವಾಬ್ದಾರಿಯಿಂದ ಕಾಳಜಿಯಿಂದ ಪ್ರತಿಕ್ರಿಯಿಸಿದ್ದಾರೆ. ಕೊರೋನ ಮಹಾಮಾರಿಯ ಬಗ್ಗೆ ನೀವು ಮಾಧ್ಯಮಗಳಿಂದ ತಿಳಿದುಕೊಳ್ಳುತ್ತಿದ್ದೀರಿ. ಬೃಹತ್ ದೇಶಗಳು ಕೂಡ ಮಹಾಮಾರಿಯಿಂದ ಕಂಗಾಲಾಗಿವೆ. ಸಾಮಾಜಿಕ ಅಂತರವೇ ಕೊರೋನ ಪರಿಹಾರಕ್ಕಿರುವ ದಾರಿ ಎಂದು ತಜ್ಞರು ಹೇಳಿದ್ದಾರೆ ಎಂದವರು ಹೇಳಿದರು.

ರೋಗಿಗಳಿಗೆ ಮಾತ್ರವಲ್ಲ, ಎಲ್ಲರಿಗೂ ಸಾಮಾಜಿಕ ಅಂತರ ಅಗತ್ಯ. ಪ್ರತಿಯೊಬ್ಬರಿಗೂ, ಕುಟುಂಬದವರಿಗೂ, ಪ್ರಧಾನಿಗೂ ಅಗತ್ಯ ಎಂದ ಅವರು, ದೇಶದಲ್ಲಿ ಸಂಪೂರ್ಣ ಲಾಕ್ ಡೌನ್ ಜಾರಿಯಾಗಲಿದ್ದು, ದೇಶದಲ್ಲಿ ಈಗ ಎಲ್ಲಿದ್ದೀರೋ ಅಲ್ಲಿಯೇ ಇರಿ. ಎಲ್ಲಿಗೂ ಹೋಗಬೇಡಿ. 21 ದಿನಗಳ ಕಾಲ ಈ ಲಾಕ್ ಡೌನ್ ಇರಲಿದೆ ಎಂದರು.

ಇಟಲಿ, ಅಮೆರಿಕಗಳಲ್ಲಿ ಅತ್ಯುತ್ತಮ ಆರೋಗ್ಯ ವ್ಯವಸ್ಥೆಗಳಿದ್ದರೂ ಕೊರೋನ ನಿಯಂತ್ರಣವಾಗಿಲ್ಲ. ಈ ದೇಶಗಳಲ್ಲಿ ಲಾಕ್ ಡೌನ್ ಘೋಷಿಸಿದ್ದು, ಜನರು ಪಾಲಿಸಿದ್ದಾರೆ. ಆ ದೇಶಗಳಲ್ಲಿ ಕೊರೋನ ನಿಯಂತ್ರಣಕ್ಕೆ ಅವರು ಮುಂದಡಿಯಿಟ್ಟಿದ್ದಾರೆ. ನಾವು ಕೂಡ ಇದನ್ನೇ ಪಾಲಿಸಬೇಕು. ಪ್ರಧಾನಿಯಿಂದ ಹಿಡಿದು ಗ್ರಾಮದ ಕಟ್ಟಕಡೆಯ ವ್ಯಕ್ತಿಯವರೆಗೂ ಲಾಕ್ ಡೌನ್ ಪಾಲಿಸಬೇಕು ಎಂದವರು ಹೇಳಿದರು.

Read These Next

ರಿಲಯನ್ಸ್ ಜೊತೆ ನಂಟು ಹೊಂದಿರುವ ಕಂಪೆನಿಯಿಂದ ಬಿಜೆಪಿಗೆ 375 ಕೋಟಿ ರೂ. ಮೌಲ್ಯದ ಚುನಾವಣಾ ಬಾಂಡ್

ರಿಲಯನ್ಸ್ ಗುಂಪಿನೊಂದಿಗೆ ನಂಟು ಹೊಂದಿರುವ, ಆದರೆ ಹೊರಜಗತ್ತಿಗೆ ಅಪರಿಚಿತವಾಗಿರುವ ಕಂಪೆನಿ ಕ್ವಿಕ್ ಸಪ್ಪೆ ಚೇನ್ ಪ್ರೈವೇಟ್ ...

ಲೋಕಸಭಾ ಚುನಾವಣೆ; ಕಾಂಗ್ರೇಸ್ ನ ಎರಡನೇ ಪಟ್ಟಿ ಬಿಡುಗಡೆ; ಉ.ಕ ಕ್ಷೇತ್ರಕ್ಕೆ ಅಂಜಲಿ ನಿಂಬಾಳ್ಕರ್

ಲೋಕಸಭಾ ಚುನಾವಣೆಗೆ ಕಾಂಗ್ರೆಸ್‌ ಪಕ್ಷ ತನ್ನ ಅಭ್ಯರ್ಥಿಗಳ ಎರಡನೇ ಪಟ್ಟಿಯನ್ನು ಬಿಡುಗಡೆಗೊಳಿಸಿದ್ದು, ಕರ್ನಾಟಕದ 17, ಅರುಣಾಚಲ ...

ಸಿಎಎ ನಿಯಮಾವಳಿಗಳಿಗೆ ತಡೆ ಕೋರುವ ಅರ್ಜಿಗಳ ವಿಚಾರಣೆ ; ಸು.ಕೋರ್ಟ್‌ನಿಂದ ಕೇಂದ್ರಕ್ಕೆ ನೋಟಿಸ್

ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ)ಯ ನಿಯಮಗಳಿಗೆ ತಡೆಯಾಜ್ಞೆ ನೀಡಬೇಕೆಂದು ಕೋರಿ ಸಲ್ಲಿಸಲಾಗಿರುವ ಅರ್ಜಿಗಳನ್ನು ಮಂಗಳವಾರ ...