ಮಂಕಿಪಾಕ್ಸ್ ಹಾವಳಿ ಜಾಗತಿಕ ತುರ್ತುಸ್ಥಿತಿ; ಡಬ್ಲ್ಯುಎಚ್ಒ ಘೋಷಣೆ

Source: Vb | By I.G. Bhatkali | Published on 24th July 2022, 12:11 PM | National News |

ಹೊಸದಿಲ್ಲಿ: ಜಗತ್ತಿನ ವಿವಿಧ ರಾಷ್ಟ್ರಗಳಲ್ಲಿ ಕಾಣಿಸಿಕೊಂಡಿರುವ ಮಂಕಿಪಾಕ್ಸ್ ಸೋಂಕು ರೋಗದ ಹಾವಳಿಯನ್ನು ಜಾಗತಿಕ ಆರೋಗ್ಯ ತುರ್ತುಪರಿಸ್ಥಿತಿಯೆಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ ಒ) ಶುಕ್ರವಾರ ಘೋಷಿಸಿದೆ.

ಮಂಕಿಪಾಕ್ಸ್ ಸಾಂಕ್ರಾಮಿಕದ ಕುರಿತಂತೆ ಗುರುವಾರ ನಡೆದ ಸಭೆಯ ಬಳಿಕ ಈ ನಿರ್ಧಾರವನ್ನು ಕೈಗೊಳ್ಳಲಾಯಿತೆಂದು ಅಧಿಕೃತ ಮೂಲಗಳು ತಿಳಿಸಿವೆ. ಮಂಕಿಪಾಕ್ಸ್ ಸೋಂಕು ಜಗತ್ತಿನ 70ಕ್ಕೂ ಅಧಿಕ ರಾಷ್ಟಗಳಿಗೆ ಹರಡಿದ್ದು,ಇದೊಂದು ಅಸಾಧಾರಣ ಸನ್ನಿವೇಶವಾಗಿದ್ದು, ಜಾಗತಿಕ ತುರ್ತುಪರಿಸ್ಥಿತಿಯೆಂದು ಘೋಷಿಸಲು ಅರ್ಹವಾಗಿದೆ ಎಂದು ಶನಿವಾರ ಡಬ್ಲ್ಯುಎಚ್‌ ಒ ಹೇಳಿಕೆಯೊಂದರಲ್ಲಿ ತಿಳಿಸಿದೆ.

ವಿಶ್ವ ಆರೋಗ್ಯ ಸಂಸ್ಥೆಯ ಈ ನಿರ್ಧಾರದಿಂದಾಗಿ ಒಂದು ಕಾಲದಲ್ಲಿ ಅತ್ಯಂತ ಅಪರೂಪವಾಗಿದ ಈ ಸಾಂಕ್ರಾಮಿಕದ ಚಿಕಿತ್ಸೆಗೆ ವಿವಿಧ ದೇಶಗಳು ಭಾರೀ ಮೊತ್ತದ ಹಣವನ್ನು ಹೂಡಿಕೆ ಮಾಡಬೇಕಾಗುತ್ತದೆ ಹಾಗೂ ಲಸಿಕೆಗಳ ಕೊರತೆ ನಿವಾರಣೆಗ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕಾಗುತ್ತದೆ.

ಮಂಕಿಪಾಕ್ಸ್ ಸೋಂಕನ್ನು ಜಾಗತಿಕ ತುರ್ತುಸ್ಥಿತಿಯೆಂದು ಘೋಷಿಸುವ ಬಗ್ಗೆ ಡಬ್ಲ್ಯುಎಚ್‌ಪಿನ ತುರ್ತುಸ್ಥಿತಿ ಸಮಿತಿಯಲ್ಲಿ ಸಹಮತದ ಕೊರತೆಯಿದ್ದ ಹೊರತಾಗಿಯೂ ಡಬ್ಲ್ಯುಎಚ್‌ಓದ ಮಹಾನಿರ್ದೇಶಕರಾದ ಟೆಡೋಸ್ ಅಧಾನೊಮ್ ಗೇಬ್ರಿಯೇಸಸ್ ಅವರು ಈ ಬಗ್ಗೆ ಅಂತಿಮ ನಿರ್ಧಾರವನ್ನು ಕೈಗೊಂಡರೆಂದು ಮೂಲಗಳು ತಿಳಿಸಿವೆ.

ಹಲವಾರು ದಶಕಗಳಿಂದ ಮಂಕಿಪಾಕ್ಸ್ ಸಾಂಕ್ರಾಮಿಕದ ಕೇಂದ್ರ ಹಾಗೂ ಪಶ್ಚಿಮ ಆಫ್ರಿಕಗಳಲ್ಲಿ ಆಗೊಮ್ಮೆ ಈಗೊಮ್ಮೆ ಕಾಣಿಸಿಕೊಳ್ಳುತ್ತಿತ್ತು. ಆದರೆ ಅದೀಗ ಜಗತ್ತಿನ ವಿವಿಧ ರಾಷ್ಟ್ರಗಳಿಗೆ ಹರಡಿರುವುದು ಅಸಾಧಾರಣವಾದ ವಿದ್ಯಮಾನವಾಗಿದೆ ಹಾಗೂ ಅದನ್ನು ನಿಯಂತ್ರಿಸಲು ಜಾಗತಿಕವಾಗಿ ಸಮನ್ವಯತೆಯಿಂದ ಕಾರ್ಯಾಚರಿಸಬೇಕಾದ ಅಗತ್ಯವಿದೆಯೆಂದು ಡಬ್ಲ್ಯು ಎಚ್‌ಒ ಅಭಿಪ್ರಾಯಿಸಿದೆ.

ಮಂಕಿಪಾಕ್ಸ್ ಸೋಂಕು ಯುರೋಪ್‌ ಹಾಗೂ ಉತ್ತರ ಅಮೆರಿಕ ಸೇರಿದಂತೆ ಜಗತ್ತಿನಾದ್ಯಂತ ಪತ್ತೆಯಾಗಿವೆ. ಭಾರತದಲ್ಲಿ ಈವರೆಗೆ ಮೂರು ಪ್ರಕರಣಗಳು ವರದಿಯಾಗಿದ್ದು, ಅವೆಲ್ಲವೂ ಕೇರಳದಲ್ಲಿ ಕಂಡುಬಂದಿವೆ.

ಡಬ್ಲ್ಯುಎಚ್‌ಒ ಈ ಹಿಂದೆ ಕೋವಿಡ್-19 ಸಾಂಕ್ರಾಮಿಕವನ್ನು, 2014ರಲ್ಲಿ ಪಶ್ಚಿಮ ಆಫ್ರಿಕದಲ್ಲಿ ಎಬೋಲಾ ಹಾವಳಿಯನ್ನು, 2016ರಲ್ಲಿ ಲ್ಯಾಟಿನ್ ಅಮೆರಿಕ ರಾಷ್ಟ್ರಗಳಲ್ಲಿ ರಿಜುಕಾ ವೈರಸ್ ಸೋಂಕನ್ನು ಹಾಗೂ ಪ್ರಸಕ್ತ ಪೊಲಿಯೋ ರೋಗವನ್ನು ನಿರ್ಮೂಲಗೊಳಿಸುವ ತನ್ನ ಪ್ರಯತ್ನವನ್ನು ಜಾಗತಿಕ ತುರ್ತು ಪರಿಸ್ಥಿತಿಯೆಂದು ಘೋಷಿಸಿದೆ.

Read These Next

ಅಣಕು ಮತದಾನದ ವೇಳೆ ಬಿಜೆಪಿಗೆ ಮತ

ಕೇರಳದ ಕಾಸರಗೋಡಿನಲ್ಲಿ ಅಣಕು ಮತದಾನದವೇಳೆ ಇವಿಎಂಗಳು ತಪ್ಪಾಗಿ ಬಿಜೆಪಿ ಪರವಾಗಿ ಮತಗಳನ್ನು ದಾಖಲಿಸಿವೆ ಎಂದು ಅರ್ಜಿದಾರರೊಬ್ಬರು ...

ಚುನಾವಣಾ ಪ್ರಕ್ರಿಯೆಯಲ್ಲಿ ಪಾವಿತ್ರ್ಯವಿರಬೇಕು; ಆಯೋಗಕ್ಕೆ ಹೇಳಿದ ಸುಪ್ರೀಂ ಕೋರ್ಟ್

ಚುನಾವಣಾ ಪ್ರಕ್ರಿಯೆ ಯಲ್ಲಿ ಪಾವಿತ್ರ್ಯವಿರಬೇಕು ಎಂದು ಚುನಾವಣಾ ಆಯೋಗಕ್ಕೆ ಇಂದು ಸುಪ್ರೀಂ ಕೋರ್ಟ್ ಹೇಳಿದೆಯಲ್ಲದೆ ಸ್ವತಂತ್ರ ...

'ಚುನಾವಣಾ ಬಾಂಡ್' ವಿಶ್ವದ ದೊಡ್ಡ ಹಗರಣ; ಬಿಜೆಪಿ ವಿರುದ್ಧ ರಾಹುಲ್‌ ಗಾಂಧಿ ವಾಗ್ದಾಳಿ

ಬಿಜೆಪಿಯ ಚುನಾ ವಣಾ ಬಾಂಡ್ ವಿಶ್ವದ ಅತ್ಯಂತ ದೊಡ್ಡ ಹಗರಣವಾಗಿದ್ದು, ಗೂಂಡಾಗಳ ರೀತಿಯಲ್ಲಿ ಕೆಲವು ಉದ್ಯಮಿಗಳನ್ನು ಬೆದರಿಸಿ ಹಫ್ತಾ ...

ಗುಂಪಿನಿಂದ ಹತ್ಯೆ, ಗೋರಕ್ಷಣೆ ಹೆಸರಿನಲ್ಲಿ ಹಿಂಸಾಚಾರ ತಡೆಯಲು ಕೈಗೊಂಡ ಕ್ರಮಗಳ ಬಗ್ಗೆ ತಿಳಿಸಿ; ರಾಜ್ಯಗಳಿಗೆ ಸುಪ್ರೀಂ ಸೂಚನೆ

ಗುಂಪಿನಿಂದ ಥಳಿಸಿ ಹತ್ಯೆ ಮತ್ತು ಗೋರಕ್ಷಣೆಯ ಹೆಸರಿನಲ್ಲಿ ಹಿಂಸಾಚಾರದ ಘಟನೆಗಳನ್ನು ತಡೆಯಲು ಕೈಗೊಂಡಿರುವ ಕ್ರಮಗಳ ಬಗ್ಗೆ ಆರು ...