ಉತ್ತರಕನ್ನಡ ಜನರ ಈ ಪರಿಸ್ಥಿತಿಗೆ ಮುಕ್ತಿ ಯಾವಾಗ ? ಜೋಲಿಯ ಮೂಲಕ ರೋಗಿಯ ಸಾಗಾಟ..

Source: SO News | By Laxmi Tanaya | Published on 4th March 2021, 9:51 PM | State News | Don't Miss |

ಅಂಕೋಲಾ : ಕುಗ್ರಾಮಗಳ ಜನರು ಅನಾರೋಗ್ಯಕ್ಕೀಡಾದಾಗ ಜೋಲಿಯ ಮೂಲಕ ಹೊತ್ತು ಆಸ್ಪತ್ರೆಗೆ ಸಾಗಿಸುವ ಸನ್ನಿವೇಶ ಇಂದಿಗೂ ಕಾಣಿಸುತ್ತಲೆ ಇದೆ. ಉತ್ತರಕನ್ನಡ ಜಿಲ್ಲೆಯ ಅಂಕೋಲಾದ ವೈಲಬೇಣ ಗ್ರಾಮದ ವೃದ್ಧರೋರ್ವರನ್ನ   ಕಾಡಿನಲ್ಲಿ ಹೊತ್ತು ತಂದ ಘಟನೆ ನಡೆದಿದೆ.

  70 ವರ್ಷದ ನೂರಾ ಪೊಕ್ಕ ಗೌಡ   ಎಂಬುವವರು ಬುಧವಾರ ಪಾರ್ಶ್ವವಾಯು ಗೆ ಒಳಗಾಗಿದ್ದರು.  ಹೆಚ್ಚಿನ  ಚಿಕಿತ್ಸೆಗಾಗಿ ಅವರನ್ನ ಆಸ್ಪತ್ರೆಗೆ ಸಾಗಿಸಬೇಕಾಗಿತ್ತು. ಗ್ರಾಮಕ್ಕೆ ಸಮರ್ಪಕ ರಸ್ತೆ ಸೌಕರ್ಯ ಇಲ್ಲದೇ ಇರೋದ್ರಿಂದ  ವಾಹನ ಕೂಡ ಬರುತ್ತಿಲ್ಲಿ ಹೀಗಾಗಿ ಜೋಲಿ ಕಟ್ಟಿಕೊಂಡು ಮನೆಯವರು ಕರೆ ತಂದಿದ್ದಾರೆ. ಮಂಗಳೂರಿಗೆ ಕರೆದೊಯ್ಯಬೇಕಾಗಿತ್ತು. ಆದ್ರೆ ರಸ್ತೆ ಸಂಪರ್ಕ ಇಲ್ಲದೆ ಇರೋದ್ರಿಂದ ಕುಟುಂಬದವರು ಅವರನ್ನ ಜೋಲಿಯ ಮೂಲಕ ಹೊತ್ತು ಹೆದ್ದಾರಿಗೆ ತರಲಾಯಿತು. ಬಳಿಕ  ಖಾಸಗಿ ವಾಹನದಲ್ಲಿ ಮಂಗಳೂರು ಆಸ್ಪತ್ರೆಗೆ ಒಯ್ಯಲಾಯಿತು.

ಉತ್ತರಕನ್ನಡ ಜಿಲ್ಲೆಯ ಗ್ರಾಮೀಣ ಪ್ರದೇಶಗಳಲ್ಲಿ  ಈ ರೀತಿಯ ಪರದಾಟಕ್ಕೆ ಯಾವಾಗ ಕೊನೆಯಾಗುತ್ತೊ. ಆಳುವವರು ಈ ಬಗ್ಗೆ   ಗಮನ ಹರಿಸಬೇಕಾಗಿದೆ.

Read These Next

ಕುಕ್ಕೆ ಸುಬ್ರಹ್ಮಣ್ಯ ದೇವಾಲಯಕ್ಕೆ ಬಂದ ಭಕ್ತರಿಗೆ ನಿರಾಶೆ. ಬುಧವಾರದಿಂದ ಮುಚ್ಚಿದ ದೇವಾಲಯ. ಸೇವೆಗಳು ಬಂದ್.

ಮಂಗಳೂರು : ದೇವಸ್ಥಾನಗಳಿಗೆ ಭಕ್ತರ ಪ್ರವೇಶ ನಿರ್ಬಂಧಿಸಿ ಸರ್ಕಾರದ ಆದೇಶ ಹೊರಡಿಸಿದ ಹಿನ್ನಲೆಯಲ್ಲಿ ಸರ್ಪ ಸಂಸ್ಕಾರ ಸೇವೆಗೆ ...

1ರಿಂದ 9ನೇ ತರಗತಿಗಳಿಗೆ ಪೈನಲ್ ಪರೀಕ್ಷೆಯಿಲ್ಲ. ವಿದ್ಯಾಗಮ, ಆನ್‌ಲೈನ್ ಚಟುವಟಿಕೆ ಆಧರಿಸಿ ಮೌಲ್ಯಾಂಕನ ವಿಶ್ಲೇಷಣೆ ಫಲಿತಾಂಶ

ಬೆಂಗಳೂರು: ಕೊರೋನಾ ಸೋಂಕಿನ ಎರಡನೇ ಅಲೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಒಂದರಿಂದ ಒಂಭತ್ತನೇ ತರಗತಿಗಳಿಗೆ ವಿದ್ಯಾಗಮ, ...

ರಾಜ್ಯದಲ್ಲಿ ಏಪ್ರಿಲ್ 21 ರಿಂದ ಮೇ 4 ರವರೆಗೆ ನೈಟ್ ಕರ್ಪ್ಯೂ. ಶುಕ್ರವಾರದಿಂದ ಸೋಮವಾರ ಬೆಳಿಗ್ಗೆವರೆಗೆ ವೀಕೆಂಡ್ ಕರ್ಪ್ಯೂ ಘೋಷಣೆ

ಬೆಂಗಳೂರು : ರಾಜ್ಯದಲ್ಲಿ ಕೊರೋನಾ ಎರಡನೇ ಅಲೆ ತೀವೃವಾಗಿ ವ್ಯಾಪಿಸುತ್ತಿರೋದ್ರಿಂದ ಏಪ್ರಿಲ್ 21 ರಿಂದ ಮೇ 4ರ ವರೆಗೆ ರಾತ್ರಿ 9 ರಿಂದ ...

ಕೋವಿಡ್ ಸೋಂಕಿತರು ಮೃತಪಟ್ಟರೇ ಮನಾಪಾಲಿಕೆಯಿಂದ ಅಂತ್ಯಸಂಸ್ಕಾರದ ವೆಚ್ಚ: ಶಾಸಕ ವೇದವ್ಯಾಸ ಕಾಮತ್.

ಮಂಗಳೂರು : ಮಹಾನಗರ ಪಾಲಿಕೆ ವ್ಯಾಾಪ್ತಿಯಲ್ಲಿ ಕೋವಿಡ್ ಸೋಂಕಿನಿಂದ ಮೃತಪಟ್ಟ ವ್ಯಕ್ತಿಯ ಅಂತ್ಯ ಸಂಸ್ಕಾರದ ವೆಚ್ಚವನ್ನು ಮಂಗಳೂರು ...

ಮದುವೆಗೆ 50 ಜ‌ನರಿಗಷ್ಟೆ ಅನುಮತಿ. ನಿಯಮ ಮೀರಿದರೇ ಕ್ರಮ. ಮಂಗಳೂರು ಡಿಸಿ ಮತ್ತು ಪೊಲೀಸ್ ಕಮಿಷನರ್ ಮಾಹಿತಿ.

ಮಂಗಳೂರು : ರಾಜ್ಯ ಸರ್ಕಾರದಿಂದ ಹೊಸ ಕೋವಿಡ್ ಗೈಡ್ ಲೈನ್ಸ್ ಪ್ರಕಟಗೊಳಿಸಿದ ಹಿನ್ನೆಲೆಯಲ್ಲಿ ಮಂಗಳೂರಿನಲ್ಲಿ ಜಿಲ್ಲಾಧಿಕಾರಿ ...