ಮಿಥುನ್ ರೈ ಹಿಂದುತ್ವದ ಬಗ್ಗೆ ಬಿಜೆಪಿಗೆ ಏನು ಗೊತ್ತು? ಕಾಂಗ್ರೆಸ್ ಎಸ್ಸಿಎಸ್ಟಿ ಘಟಕದ ಪ್ರಶ್ನೆ.

Source: SO News | By Laxmi Tanaya | Published on 14th October 2020, 9:24 PM | Coastal News | Don't Miss |

ಮಂಗಳೂರು : ಮಿಥುನ್ ರೈ ಹಿಂದುತ್ವದ ಬಗ್ಗೆ ಬಿಜೆಪಿಗೇನು ಗೊತ್ತು ಎಂದು ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಎಸ್ಸಿ ಎಸ್ಟಿ ಘಟಕದ ನಾಯಕರ ಪ್ರಶ್ನಿಸಿದ್ದಾರೆ.

  ಜಿಲ್ಲಾ ಕಾಂಗ್ರೆಸ್ ಭವನದ ಪತ್ರಿಕಾಗೋಷ್ಠಿ ಯಲ್ಲಿ  ಮಾತನಾಡಿದ ಜಿಲ್ಲಾ ಕಾಂಗ್ರೆಸ್ ಎಸ್ಸಿ ಎಸ್ಟಿ ಘಟಕದ ಅಧ್ಯಕ್ಷ ಶೇಖರ ಕುಕ್ಕಾಡಿ ಮತ್ತು ರಘುರಾಜ್ ಕದ್ರಿ ಅವರು,  ಮಿಥುನ್ ರೈ ನಿಜವಾದ ಹಿಂದೂ  ನಾಯಕ ಅವರು ಅನೇಕ ದೇವಸ್ಥಾನ ದೈವಸ್ಥಾನಗಳ ಜೀರ್ಣೋದ್ಧಾರಕ್ಕಾಗಿ ನೆರವು ನೀಡಿದ್ದಾರೆ. 

೧೫೦ಕ್ಕೂ ಎಚ್ಚು ಗೋವುಗಳನ್ನ  ದಾನ ಮಾಡಿದ್ದಾರೆ. ಹಾಗಾಗಿ ಮಿಥುನ್  ಹಿಂದುತ್ವದ ಬಗ್ಗೆ ಮಾತನಾಡಲು ಬಿಜೆಪಿಯವರಿಗೆ ನೈತಿಕತೆ ಇಲ್ಲ ಎಂದು ಹೇಳಿದರು.  ಉತ್ತರ ಪ್ರದೇಶದಲ್ಲಿ ದಲಿತ ಯುವತಿಯರ ಅತ್ಯಾಚಾರ ಕೊಲೆ ಕೃತ್ಯಗಳು ನಡೆಯುತ್ತಲೇ ಇದೆ. ಅಲ್ಲಿನ ಮುಖ್ಯಮಂತ್ರಿ ವೈಫಲ್ಯದ ಬಗ್ಗೆ ಮಿಥುನ್ ರೈ ಮಾತನಾಡಿದ್ದಾರೆ ವಿನಾ ಯಾವುದೇ ಸಮುದಾಯವನ್ನು ಅವಮಾನಿಸುವ ಹೇಳಿಕೆ ನೀಡಿಲ್ಲ.  ಸಾಮಾಜಿಕ ಹೋರಾಟಗಾರ ಸ್ವಾಮಿ ಅಗ್ನಿವೇಶ್ ಮೇಲೆ ದೈಹಿಕ ಹಲ್ಲೆಗಳ ಬಗ್ಗೆ ಮಾತನಾಡದ ಬಿಜೆಪಿಗರು ಉತ್ತರ ಪ್ರದೇಶದ ಮುಖ್ಯಮಂತ್ರಿ ಆದಿತ್ಯನಾಥರ ಆಡಳಿತ ವೈಫಲ್ಯದ ವಿರುದ್ಧ ಧ್ವನಿ ಎತ್ತಿರುವುದಕ್ಕೆ ಅಪಸ್ವರ ಎತ್ತುವುದು ಯಾವ ನ್ಯಾಯ ಎಂದು ಕಿಡಿಕಾರಿದರು. 

ಜಿಲ್ಲೆಯ ಬಿಜೆಪಿಗರಿಗೆ ದಲಿತರ ಬಗ್ಗೆ ನಿಜವಾಗಿಯೂ ಕಾಳಜಿ ಇದ್ದರೆ ದಲಿತರ ಮೇಲಾಗುವ ಅನ್ಯಾಯದ ವಿರುದ್ಧ ಮೊದಲು ಧ್ವನಿ ಎತ್ತಲಿ ಎಂದು ಆಗ್ರಹಿಸಿದರು.  ದೇಶದ ನಲವತ್ತು ಕೋಟಿ ದಲಿತರಿಗೆ ರಕ್ಷಣೆ ಇಲ್ಲದಂತಹ ಸ್ಥಿತಿ ನಿರ್ಮಾಣವಾಗಿದೆ. ದಿನನಿತ್ಯ ದೇಶಾದ್ಯಂತ ದಲಿತರ ಮೇಲೆ ಅತ್ಯಾಚಾರ ದೌರ್ಜನ್ಯ ಕೊಲೆಯಾಗುತ್ತಿದೆ ಅವುಗಳಲ್ಲಿ ಕೆಲವು ಪ್ರಕರಣಗಳು ಮಾತ್ರ ಬೆಳಗ್ಗೆ ಬರುತ್ತಿದೆ ಎಂದು ವಿಷಾದಿಸಿದರು.

 ಸುದ್ದಿಗೋಷ್ಠಿಯಲ್ಲಿ ಪಕ್ಷದ ಮುಖಂಡರಾದ ರಜನೀಶ್ ಕಾಪಿಕಾಡ್ , ರೋಹಿತ್ ಉಳ್ಳಾಲ್ , ಹೊನ್ನಯ್ಯ , ಪ್ರೇಮನಾಥ್ ಬಲ್ಲಾಳ್ಬಾಗ್ , ವಿಜಯಲಕ್ಷ್ಮಿ  , ದಿನೇಶ್  , ಪ್ರಭಾಕರ  , ಚಂದ್ರಿಕಾ ಉಪಸ್ಥಿತರಿದ್ದರು.

Read These Next

ಭಾಷಾ ಜ್ಞಾನದ ಕುರಿತು ಯಾರ ಬಗ್ಗೆಯೂ ಕೇವಲವಾಗಿ ಮಾತನಾಡಿಲ್ಲ: ಜೆ.ಪಿ.ಹೆಗ್ಡೆ ಸ್ವಷ್ಟನೆ

ಉಡುಪಿ: ಈವರೆಗಿನ ರಾಜಕೀಯ ಜೀವನದಲ್ಲಿ ಯಾರ ಮನಸ್ಸನ್ನೂ ನೋಯಿಸುವುದಾಗಲಿ ಅಥವಾ ಕೇವಲವಾಗಿ ಮಾತನಾಡುವುದನ್ನಾಗಲಿ ಮಾಡದೆ ಇರುವ ನಾನು ...