ಭಟ್ಕಳ: ಪಶ್ಷಿಮ ವಲಯ ಐ.ಜಿ.ಪಿ. ದೇವ್‍ಜ್ಯೋತಿ ಭೇಟಿ; ಲಾಕ್ ಡೌನ್ ಪರಿಶೀಲನೆ

Source: S.O. News Service | By Staff Correspondent | Published on 8th April 2020, 3:44 PM | Coastal News |

ಭಟ್ಕಳ: ಪಶ್ಷಿಮ ವಲಯ ಐ.ಜಿ.ಪಿ. ದೇವ್‍ಜ್ಯೋತಿ ಬುಧವಾರ ಭಟ್ಕಳಕ್ಕೆ ಭೇಟಿ ನೀಡಿ ಲಾಕ್‍ಡೌನ್ ಆದ ನಂತರದಿಂದ ಇಲ್ಲಿನ ತನಕ ಇಲಾಖೆಯಿಂದ ಕೈಗೊಂಡ ಕ್ರಮಗಳ ಕುರಿತು ಪರಿಶೀಲನೆ ನಡೆಸಿದರು. 

ಮಂಗಳೂರಿನಿಂದ ನೇರವಾಗಿ ಭಟ್ಕಳಕ್ಕೆ ಆಗಮಿಸಿದ್ದ ಅವರು ಭಟ್ಕಳ ನಗರದಲ್ಲಿ ಒಂದು ಸುತ್ತು ಹಾಕಿದ್ದು ಎಲ್ಲಾ ಕಡೆಗಳಲಿಯೂ ತೆಗೆದುಕೊಂಡಿರುವ ಸುರಕ್ಷತಾ ಕ್ರಮವನ್ನು ಪರಿಶೀಲಿಸಿದರು. ನಂತರ ಇಲ್ಲಿನ ನಗರ ಠಾಣೆಯ ಆವರಣಕ್ಕೆ ಆಗಮಿಸಿದ್ದ ಅವರನ್ನು ಮಾಧ್ಯಮಪ್ರತಿನಿಧಿಗಳು ಭೇಟಿಯಾಗಿ ಮಾತನಾಡಿದ್ದು, ಸರಕಾರ ಈ ಹಂತದಲ್ಲಿ ಸಾಕಷ್ಟು ಸುರಕ್ಷತಾ ಕ್ರಮಗಳನ್ನು ತೆಗೆದುಕೊಂಡಿದೆ. ಲಾಕ್ ಡೌನ್  ನಂತರವೂ ಕೂಡಾ ಸರಕಾರ ಯಾವ ಕ್ರಮ ಕೈಗೊಳ್ಳುತ್ತದೆ ಎನ್ನುವುದರ ಮೇಲೆ ತಮ್ಮ ಇಲಾಖೆ ಕಾರ್ಯಾಚರಣೆ ನಡೆಸಲಿದೆ. ಎ.14ರ ನಂತರ ಬಂದೋಬಸ್ತ ಯಾವ ರೀತಿಯಾಗಿರಲಿದೆ ಎಂದು ಹೇಳಲು ಸಾಧ್ಯವಿಲ್ಲ, ಬೇರೆ ಬೇರೆ ಕಡೆ ಇದ್ದವರು ಅವರವರ ಸ್ಥಾನ ಸೇರಲು ಅವಕಾಶ ನೀಡುವ ಕುರಿತೂ ಹೇಳಲು ಸಾಧ್ಯವಿಲ್ಲ ಎಂದರು. ಭಟ್ಕಳದಲ್ಲಿ ವಿಷೇಶವಾಗೇನೂ ಇಲ್ಲ, ಆದರೆ ಯಾವುದೇ ವ್ಯಕ್ತಿಯ ಪೂರ್ವಾಪರವನ್ನು ವಿಚಾರಿಸಿ ಸಂಶಯಿತರಾಗಿದ್ದಲ್ಲಿ ಅವರನ್ನು ಪರೀಕ್ಷೆಗೊಳಪಡಿಸಲಾಗುತ್ತಿದೆ. ಭಟ್ಕಳದಿಂದ ಮಾತ್ರವಲ್ಲ, ಎಲ್ಲಾ ಜಿಲ್ಲೆಗಳಲ್ಲಿಯೂ ಕೂಡಾ ಗಡಿಯನ್ನು ಬಂದ್ ಮಾಡಲಾಗಿದ್ದು ಜನರ ಓಡಾಟವನ್ನು ನಿರ್ಬಂಧಿಸಲಾಗಿದೆ ಎಂದರು. 

ಕಳೆದ ಎರಡು ತಿಂಗಳ ಹಿಂದೆ ಜನರಲ್ಲಿ ಕೋವಿಡ್-19 ಕುರಿತು ಜಾಗೃತಿ ಇರಲಿಲ್ಲ, ಆದರೆ ಈಗ ಜನರಲ್ಲಿಯೂ ಕೂಡಾ ಜಾಗೃತಿ ಮೂಡಿದೆ. ಪ್ರತಿಯೋರ್ವರೂ ಕೂಡಾ ತಾವಾಗಿಯೇ ಬಂದು ಪರೀಕ್ಷೆಗೊಳಪಡುತ್ತಿದ್ದಾರೆ. ಯಾವುದೇ ರೀತಿಯ ಮಾಹಿತಿ ಬಂದರೂ ಕೂಡಾ ನಾವು ತಕ್ಷಣ ಕಾರ್ಯಪ್ರವೃತ್ತರಾಗುತ್ತೇವೆ. ಭಟ್ಕಳದಲ್ಲಿ ಪರೀಕ್ಷೆಗೆ ಕಳುಹಿಸಿದ ಮಾದರಿಗಳಲ್ಲಿ ಅನೇಕರದ್ದು ನೆಗೆಟಿವ್ ಬಂದಿರುವುದು ಒಂದು ಉತ್ತಮ ಬೆಳವಣಿಗೆಯಾಗಿದೆ ಎಂದ ಅವರು ಸರಕಾರದ ನಿಯಮದಂತೆ ನಾವು ಕಾರ್ಯಾಚರಣೆ ಮಾಡಬೇಕಾಗುತ್ತದೆ ಎಂದರು. 

ಅವರೊಂದಿಗೆ ಉತ್ತರಕನ್ನಡ ಜಿಲ್ಲಾ ಪೊಲೀಸ್ ವರಿಷ್ಠ ಶಿವಪ್ರಕಾಶ ದೇವರಾಜು, ಡಿ.ವೈ.ಎಸ್.ಪಿ. ಗೌತಮ್, ನಗರ ಠಾಣೆಯ ಸಬ್ ಇನ್ಸಪೆಕ್ಟರ್ ಎಚ್.ಬಿ. ಕುಡಗುಂಟಿ ಸೇರಿದಂತೆ ಇತರ ಅಧಿಕಾರಿಗಳು ಇದ್ದರು. 

Read These Next

ಸೌದಿ ಅರೇಬಿಯಾದ ತಾಯಿಫ್‌ನಲ್ಲಿ ಕಾರು ಅಪಘಾತ ಉಡುಪಿ ಜಿಲ್ಲೆಯ ಯುವಕನ ಸಾವು ಮತ್ತೊಬ್ಬ  ಗಂಭೀರ

ಭಟ್ಕಳ:  ಸೌದಿ ಅರೇಬಿಯಾದ ತಾಯಿಫ್‌ ಎಂಬಲ್ಲಿ ಬುಧವಾರ ನಡೆದ ರಸ್ತೆ ಅಪಘಾತದಲ್ಲಿ  ಉಡುಪಿ ಜಿಲ್ಲೆಯ ಗಂಗೋಳಿ ನಿವಾಸಿಗಳಾದ ಮುಹಮ್ಮದ್ ...