ಪಶ್ಚಿಮ ಬಂಗಾಳ ಮಮತಾ ದೀದಿಗೆ ಭಾರಿ ಹೊಡೆತ; ರಾಜಿನಾಮೆ ನೀಡಿ ಬಿಜೆಪಿ ಸೇರಿದ ಸಚಿವ

Source: sonews | By Staff Correspondent | Published on 27th November 2020, 11:20 PM | National News | Don't Miss |

ಹೊಸದಿಲ್ಲಿ: ಪಶ್ಚಿಮ ಬಂಗಾಳದಲ್ಲಿ ಮಮತಾ ದೀದಿಗೆ ಭಾರಿ ಹೊಡೆತ ನೀಡಲು ಸಜ್ಜಾಗಿರುವ ಬಿಜೆಪಿ ಪಾಳೆಯ ಆರಂಭಿಕ ವೀಕೆಟೊಂದು ಉರುಳಿಸಿದ್ದು ಸಾರಿಗೆ ಸಚಿವ ಸುವೇಂದು ಅಧಿಕಾರಿ ಸಚಿವ ಸ್ಥಾನಕ್ಕೆ ರಾಜಿನಾಮೆ ನೀಡಿ ಬಿಜೆಪಿ ಸೇರುತ್ತಿರುವುದಾಗಿ ತಿಳಿದುಬಂದಿದೆ.

ತೃಣಮೂಲ ಕಾಂಗ್ರೆಸ್ ನಾಯಕ ಹಾಗೂ ಪಶ್ಚಿಮ ಬಂಗಾಳದ ಸಾರಿಗೆ ಸಚಿವ ಸುವೇಂದು ಅಧಿಕಾರಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ರಾಜೀನಾಮೆ ಪತ್ರವನ್ನು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹಾಗೂ ಅದರ ಪ್ರತಿಯನ್ನು ರಾಜ್ಯಪಾಲ ಜಗ್ದೀಪ್ ಧನ್ಕರ್ ರಿಗೆ ಕಳುಹಿಸಿದ್ದಾರೆ.

ಕೇವಲ ಶಾಸಕರಾಗಿ ಉಳಿದಿರುವ ಸುವೇಂದು ಅಧಿಕಾರಿ ಪಕ್ಷಕ್ಕೆ ರಾಜೀನಾಮೆ ನೀಡಲಿದ್ದಾರೆ ಎನ್ನಲಾಗುತ್ತಿದೆ. ಬಿಜೆಪಿಗೆ ಸೇರ್ಪಡೆಗೊಳ್ಳುವ ಎಲ್ಲ ಲಕ್ಷಣಗಳು ಗೋಚರಿಸುತ್ತಿವೆ. ಮುಂದಿನ ವರ್ಷ ಪಶ್ಚಿಮ ಬಂಗಾಳದ ವಿಧಾನಸಭೆಗೆ ಚುನಾವಣೆ ನಡೆಯಲಿದೆ. ಪಶ್ಚಿಮ ಬಂಗಾಳದ ನಂದಿ ಗ್ರಾಮದಿಂದ ವಿಧಾನಸಭೆ ಪ್ರವೇಶಿಸಿದ್ದ ಸುವೇಂದು ಕಳೆದ ಕೆಲವು ತಿಂಗಳಿಂದ ಪಾರ್ಟಿಯೊಂದಿಗೆ ಅಸಹಮತ ವ್ಯಕ್ತಪಡಿಸುತ್ತಾ ಬಂದಿದ್ದರು.

ಪಾರ್ಟಿಯ ಮೀಟಿಂಗ್ ಕ್ಯಾಬಿನೆಟ್ ಸಭೆಗಳಲ್ಲಿ ಪಾಲ್ಗೊಂಡಿರಲಿಲ್ಲ. ತೃಣಮೂಲ ಕಾಂಗ್ರೆಸ್‍ ಧ್ವಜ, ಬ್ಯಾನರ್‍ಗಳಿಲ್ಲದೆ ಸ್ವಂತವಾಗಿ ರ್ಯಾಲಿ ಮತ್ತು ಸಭೆಗಳನ್ನು ಮಾಡಿದ್ದರು. ಹಿರಿಯ ನಾಯಕರಾದ ಸುವೇಂದುರನ್ನು ಸಮಾಧಾನ ಪಡಿಸಲು ಪಾರ್ಟಿ ಪ್ರಯತ್ನಿಸಿ ವಿಫಲವಾಗಿದೆ.

Read These Next

ಪಣಜಿ: ಗೋವಾ ಜಿಎಂಸಿಎಚ್‌ನಲ್ಲಿ ಆಮ್ಲಜನಕದ ಕೊರತೆ; 26 ಸೋಂಕಿತರ ಸಾವು ತನಿಖೆಗೆ ಸಚಿವ ರಾಣೆ ಮನವಿ

ಸರಕಾರಿ ಸ್ವಾಮಿತ್ವದ ಗೋವಾ ವೈದ್ಯಕೀಯ ಕಾಲೇಜು ಹಾಗೂ ಆಸ್ಪತ್ರೆ (ಜಿಎಂಸಿಎಚ್)ಯಲ್ಲಿ ಮಂಗಳವಾರ ಬೆಳಗ್ಗೆ 26 ಕೊರೋನ ಸೋಂಕಿತರು ...

ಗಂಗಾ ನದಿಯಲಿ ಇನ್ನಷ್ಟು ಶವಗಳು ಪತ್ತೆ, ಕೊರೋನ ಸಹಿತ ಇನ್ನಿತರ ಸಾಂಕ್ರಾಮಿಕ ಸೋಂಕು ಹರಡುವ ಭೀತಿ

ಉತ್ತರಪ್ರದೇಶದ ಘಾಝಿಪುರದ ಗಂಗಾ ನದಿ ತೀರಕ್ಕೆ ಮಂಗಳವಾರ ಹಲವು ಮೃತದೇಹಗಳು ತೇಲಿ ಬಂದಿವೆ. ಸೋಮವಾರ 100ಕ್ಕೂ ಅಧಿಕ ಮೃತದೇಹಗಳು ತೇಲಿ ...

ಕರ್ನಾಟಕಕ್ಕೆ 1,200 ಮೆಟ್ರಿಕ್ ಟನ್ ಆಕ್ಸಿಜನ್ ಸರಬರಾಜ ಆಗಬೇಕೆಂಬ ಹೈಕೋರ್ಟ್ ಆದೇಶವನ್ನು ಎತ್ತಿ ಹಿಡಿದ ಸುಪ್ರೀಂ ಕೋರ್ಟ್.

ಕರ್ನಾಟಕಕ್ಕೆ 1,200 ಮೆಟ್ರಿಕ್ ಟನ್ ಆಕ್ಸಿಜನ್ ಸರಬರಾಜ ಆಗಬೇಕೆಂಬ ಹೈಕೋರ್ಟ್ ಆದೇಶವನ್ನು ಎತ್ತಿ ಹಿಡಿದ ಸುಪ್ರೀಂ ಕೋರ್ಟ್.

ಜನರ ಜೀವನವನ್ನು ಕೇಂದ್ರವಾಗಿಸಿ, ನಿಮ್ಮ ಕುರುಡು ದುರಹಂಕಾರವನ್ನಲ್ಲ: ಸೆಂಟ್ರಲ್ ವಿಸ್ಟಾ ಯೋಜನೆ ಕುರಿತು ರಾಹುಲ್ ಗಾಂಧಿ ವಾಗ್ದಾಳಿ

ಕೇಂದ್ರ ಸರ್ಕಾರದ "ಸೆಂಟ್ರಲ್ ವಿಸ್ಟಾ " ಯೋಜನೆ ಕುರಿತು ಟೀಕಿಸಿರುವ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಅದೊಂದು "ಕ್ರಿಮಿನಲ್ ವೇಸ್ಟ್" ...

ಭಟ್ಕಳ ಸರಕಾರಿ ಆಸ್ಪತ್ರೆಯಲ್ಲಿ ಆಮ್ಲಜನಕ ಬಳಕೆಯ ಬಗ್ಗೆ ನೌಕಾದಳದ ಅಧಿಕಾರಿಗಳಿಂದ ಮಾಹಿತಿ

ಪ್ರಸಕ್ತವಾಗಿ ಕೋವಿಡ್ ಕೇಂದ್ರಗಳಿಗೆ ಆಮ್ಲಜನಕ ಬೇಡಿಕೆ ಹೆಚ್ಚುತ್ತಿದ್ದು, ಆಮ್ಲಜನಕ ಬಳಕೆಯ ಸಂದರ್ಭದಲ್ಲಿ ಯಾವುದೇ ಅನಾಹುತ ...

ಸಂಘ ಸಂಸ್ಥೆಗಳು ಅವಶ್ಯವಿರುವ ಎಲ್ಲಾ ವ್ಯಕ್ತಿಗಳಿಗೆ ಆಹಾರ ವಿತರಿಸಿ : ಜಿಲ್ಲಾಧಿಕಾರಿ ಡಾ.ರಾಜೆಂದ್ರ ಕೆ.ವಿ.

ಮಂಗಳೂರು : ಸಂಘ ಸಂಸ್ಥೆಗಳು ಜಿಲ್ಲಾಡಳಿತದೊಂದಿಗೆ ಸಮನ್ವಯ ಸಾಧಿಸಿ , ಅವಶ್ಯವಿರುವ ನಿರಾಶ್ರಿತರಿಗೆ ಹಾಗೂ ವಲಸೆ ಕಾರ್ಮಿಕರಿಗೆ ಆಹಾರ ...