ಪಶ್ಚಿಮಬಂಗಾಳ: ರೋಡ್‌ ಶೋನಲ್ಲಿ ಸೇರಿದ ಭಾರೀ ಜನಸ್ತೋಮ; ಇಷ್ಟೊಂದು ಜನ ಸೇರಿದ್ದು ನೋಡಿರಲೇ ಇಲ್ಲ; ಮೋದಿ

Source: VB | By JD Bhatkali | Published on 19th April 2021, 5:01 PM | National News |

ಕೋಲ್ಕತಾ: ಪಶ್ಚಿಮಬಂಗಾಳದ ಅಸ್ಸನ್‌ಸೋಲ್‌ನಲ್ಲಿ ಶನಿವಾರ ನಡೆದ ಚುನಾವಣಾ ಪ್ರಚಾರ ಸಭೆಯಲ್ಲಿ ಪಾಲ್ಗೊಂಡ ಜನಸಂದಣಿಗೆ ಶ್ಲಾಘನೆ ವ್ಯಕ್ತಪಡಿಸಿದ ಪ್ರಧಾನಿ ನರೇಂದ್ರ ಮೋದಿ ಅವರ ನಿಲುವು ವ್ಯಾಪಕ ಟೀಕೆಗಳಿಗೆ ಕಾರಣವಾಗಿದೆ. ಕೊರೋನ ಹಿನ್ನೆಲೆಯಲ್ಲಿ ಕುಂಭಮೇಳವನ್ನು ಸಾಂಕೇತಿಕವಾಗಿ ಆಚರಿಸಿ ಎಂದು ನಿನ್ನೆಯಷ್ಟೇ ಕರೆ ನೀಡಿದ್ದ ನರೇಂದ್ರ ಮೋದಿ, ಇದೀಗ ತನ್ನ ರ‍್ಯಾಲಿಯಲ್ಲಿ ಭಾರೀ ಪ್ರಮಾಣದ ಜನ ಸೇರಿಸಿರುವುದು ಹುಬ್ಬೇರುವಂತೆ ಮಾಡಿದೆ.

“ಲೋಕಸಭಾ ಚುನಾವಣೆಯ ಸಂದರ್ಭ ನಾನು ಎರಡು ಬಾರಿಗೆ ಇಲ್ಲಿಗೆ ಬಂದಿದ್ದೇನೆ. ಕಳೆದ ಬಾರಿ ನಾನು ಬಾಬುಜಿ (ಕೇಂದ್ರ ಸಚಿವ ಬಾಬುಲ್ ಸುಪ್ರಿಯೋ) ಅವರಿಗೆ ಮತ ಯಾಚಿಸಲು ಆಗಮಿಸಿದ್ದೆ. ಆಗ ನಾನು ನೋಡಿದ ಜನಸಂದಣಿ ಇಂದು ಸೇರಿದ ಜನಸಂದಣಿಯ ಕಾಲು ಭಾಗದಷ್ಟು ಮಾತ್ರ ಇತ್ತು' ಎಂದು ಅವರು ಹೇಳಿದ್ದಾರೆ.

ಆದರೆ, ಇಂದು ನನಗೆ ಎಲ್ಲಾ ದಿಸೆಯಲ್ಲೂ ದೊಡ್ಡ ಸಂಖ್ಯೆಯ ಜನಸಂದಣಿ ಕಾಣುತ್ತಿದೆ.

ಲಸಿಕೆ ನೀಡಿಕೆ ಹೆಚ್ಚಿಸಿ ಮೋದಿಗೆ ಸಿಂಗ್ ಪತ

ಹೊಸದಿಲ್ಲಿ: ದೇಶದಲ್ಲಿ ಉಲ್ಬಣ ಗೊಂಡಿರುವ ಕೋವಿಡ್-19 ಸ್ಥಿತಿಯ ಬಗ್ಗೆ ರವಿವಾರ ಪ್ರಧಾನಿ ನರೇಂದ್ರ ಮೋದಿಯವರಿಗೆ ಪತ್ರವನ್ನು ಬರೆದಿರುವ ಮಾಜಿ ಪ್ರಧಾನಿ ಮನಮೋಹನ ಸಿಂಗ್ ಅವರು, ಲಸಿಕೆ ನೀಡಿಕೆಯನ್ನು ಹೆಚ್ಚಿಸುವುದು ಸಾಂಕ್ರಾಮಿಕದ ವಿರುದ್ಧ ಹೋರಾಟದಲ್ಲಿ ನಿರ್ಣಾಯಕವಾಗಿದೆ ಎಂದು ಒತ್ತಿ ಹೇಳಿದ್ದಾರೆ.

ಎಷ್ಟು ಜನರಿಗೆ ಲಸಿಕೆ ನೀಡಲಾಗಿದೆ ಎನ್ನುವುದು ಮುಖ್ಯವಲ್ಲ, ದೇಶದ ಒಟ್ಟು ಜನಸಂಖ್ಯೆಯಲ್ಲಿ ಎಷ್ಟು ಜನರಿಗೆ ಲಸಿಕೆ ನೀಡಲಾಗಿದೆ ಎನ್ನುವುದನ್ನು ನೋಡಬೇಕು. ಲಸಿಕೆ ನೀಡಿಕೆ ಪ್ರಯತ್ನವನ್ನು ಹೆಚ್ಚಿಸುವುದು ಕೋವಿಡ್-19 ವಿರುದ್ಧದ ನಮ್ಮ ಹೋರಾಟದಲ್ಲಿ ಮುಖ್ಯವಾಗಬೇಕು ಎಂದು ಪತ್ರದಲ್ಲಿ ಬರೆದಿರುವ ಸಿಂಗ್,ಈಗ ಜನಸಂಖ್ಯೆಯ ಸಣ್ಣ ಪ್ರಮಾಣಕ್ಕೆ ಲಸಿಕೆ ನೀಡಲಾಗಿದೆ. ಸರಿಯಾದ ನೀತಿ ನಿರೂಪಣೆಯೊಂದಿಗೆ ನಾವು ಕಡಿಮೆ ಸಮಯದಲ್ಲಿ ಹೆಚ್ಚಿನ ಸಾಧನೆಯನ್ನು ಮಾಡಬಹುದಾಗಿದೆ. ಸಾಂಕ್ರಾಮಿಕದ ವಿರುದ್ಧದ ಹೋರಾಟದಲ್ಲಿ ನಾವು ಮಾಡಲೇಬೇಕಿರುವ ಹಲವಾರು ಕಾರ್ಯಗಳಿವೆ, ಆದರೆ ಲಸಿಕೆ ನೀಡಿಕೆ ಕಾರ್ಯಕ್ರಮವನ್ನು ವೇಗಗೊಳಿಸುವುದು ಎಲ್ಲಕ್ಕೂ ಮುಖ್ಯವಾಗಿದೆ ಎಂದಿದ್ದಾರೆ.

ತಾನು ಸದಾ ನಂಬಿಕೊಂಡು ಬಂದಿರುವ ಮತ್ತು ಕಾರ್ಯರೂಪಕ್ಕೆ ತಂದಿರುವ ರಚನಾತ್ಮಕ ಸಹಕಾರದ ಸ್ಫೂರ್ತಿಯಲ್ಲಿ ಪರಿಗಣನೆಗಾಗಿ ತನ್ನ ಸಲಹೆಗಳನ್ನು ಮುಂದಿಡುತ್ತಿರುವುದಾಗಿ ಅವರು ಪತ್ರದಲ್ಲಿ ತಿಳಿಸಿದ್ದಾರೆ.

ಮುಂದಿನ ಆರು ತಿಂಗಳುಗಳಿಗಾಗಿ ಎಷ್ಟು ಡೋಸ್ ಲಸಿಕೆಗಾಗಿ ಬೇಡಿಕೆಯನ್ನು ಸಲ್ಲಿಸಲಾಗಿದೆ ಮತ್ತು ಈ ಪೈಕಿ ಎಷ್ಟು ಡೋಸ್ ಗಳ ಪೂರೈಕೆಯನ್ನು ಸ್ವೀಕರಿಸಲಾಗಿದೆ ಎನ್ನುವುದನ್ನು ಕೇಂದ್ರವು ಬಹಿರಂಗಗೊಳಿಸಬೇಕು ಎಂದಿರುವ ಸಿಂಗ್, ರಾಜ್ಯಗಳಿಗೆ ಲಸಿಕೆಗಳನ್ನು ಹೇಗೆ ವಿತರಿಸಲಾಗುತ್ತದೆ ಎನ್ನುವುದನ್ನು ಸರಕಾರವು ತಿಳಿಸಬೇಕು ಎಂದಿದ್ದಾರೆ.

ಇಂತಹ ರ‍್ಯಾಲಿಗೆ ನಾನು ಮೊದಲ ಬಾರಿ ಸಾಕ್ಷಿಯಾಗುತ್ತಿದ್ದೇನೆ. ಇಂದು ನೀವು ನಿಮ್ಮ ಶಕ್ತಿ ತೋರಿಸಿದ್ದೀರಿ. ಮುಂದಿನ ಹೆಜ್ಜೆ ತುಂಬಾ ಮುಖ್ಯವಾದುದು. ಮತ ಹಾಕಿ ಹಾಗೂ ಇತರರನ್ನು ಕರೆದೊಯ್ದು ಮತ ಹಾಕಿಸಿ” ಎಂದು ನರೇಂದ್ರ ಮೋದಿ ಹೇಳಿದ್ದರು. ಪಶ್ಚಿಮಬಂಗಾಳದ ವಿಧಾನ ಸಭೆ ಚುನಾವಣೆಯ 8 ಹಂತಗಳಲ್ಲಿ ಏಳನೇ ಹಂತದ ಮತದಾನ ಎಪ್ರಿಲ್ 26ರಂದು ನಡೆಯಲಿದೆ.

ಕೊರೋನ ಸೋಂಕಿನ ಎರಡನೇ ಅಲೆಯ ವಿರುದ್ಧ ದೇಶ ಹೋರಾಡುತ್ತಿರುವಾಗ ಚುನಾವಣಾ ರ‍್ಯಾಲಿಯಲ್ಲಿ ನರೇಂದ್ರ ಮೋದಿ ಅವರು ಭಾಗಿಯಾಗುತ್ತಿರುವ ಬಗ್ಗೆ ಪ್ರತಿಪಕ್ಷಗಳು ಪ್ರಶ್ನಿಸಿವೆ. ರೋಮ್ ಹೊತ್ತಿ ಉರಿಯುತ್ತಿರುವಾಗ ನೀರೋ (ಚಕ್ರವರ್ತಿ) ಪಿಟೀಲು ಬಾರಿಸುತ್ತಿದ್ದಂತೆ ಸಾಂಕ್ರಾಮಿಕ ರೋಗದ ಸಂದರ್ಭ ಚುನಾವಣಾ ಪ್ರಚಾರವನ್ನು ಪ್ರಶಂಸಿಸುತ್ತಿರುವ ಪ್ರಧಾನಿ ನರೇಂದ್ರ ಮೋದಿ ಅವರನ್ನು ಟೀಕಿಸಿ ಕಾಂಗ್ರೆಸ್ ಎರಡೂವರೆ ನಿಮಿಷಗಳ ವೀಡಿಯೊವನ್ನು ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿದೆ. ಸಾಮಾಜಿಕ ಮಾಧ್ಯಮಗಳಲ್ಲಿ ಮೋದಿಯ ದ್ವಂದ್ವ ನಿಲುವಿಗೆ ಭಾರೀ ಆಕ್ರೋಶ ವ್ಯಕ್ತವಾಗಿದೆ. ಮೋದಿಯ ಮನವಿಯ ಮೇರೆಗೆ ಸಾಧುಸಂತರು ಕುಂಭಮೇಳದಿಂದ ಹಿಂದೆ ಸರಿದಿದ್ದರು. ಆದರೆ, ಮನವಿ ಮಾಡಿದ ಮರುದಿನವೇ ಮೋದಿಯವರು ತಮ್ಮ ರಾಜಕೀಯ ರ‍್ಯಾಲಿಯಲ್ಲಿ ಭಾರೀ ಪ್ರಮಾಣದ ಜನಸ್ತೋಮ ಸೇರಿರುವುದಕ್ಕೆ ಅವರನ್ನು ಅಭಿನಂದಿಸಿದ್ದಾರೆ.

ಚುನಾವಣಾ ರ‍್ಯಾಲಿಗಳನ್ನು ರದ್ದುಗೊಳಿಸಿದ ರಾಹುಲ್ ಗಾಂಧಿ

ಹೊಸದಿಲ್ಲಿ: ಕೊರೋನ ಸೋಂಕಿನ ಪ್ರಕರಣಗಳ ಸಂಖ್ಯೆಯಲ್ಲಿ ತೀವ್ರ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ತನ್ನ ಪಶ್ಚಿಮಬಂಗಾಳದ ಚುನಾವಣೆಯ ಪ್ರಚಾರ ರ‍್ಯಾಲಿಗಳನ್ನು ರದ್ದುಗೊಳಿಸಿದ್ದಾರೆ.

“ಕೊರೋನ ಪರಿಸ್ಥಿತಿ ಹಿನ್ನೆಲೆಯಲ್ಲಿ ನಾನು ಪಶ್ಚಿಮಬಂಗಾಳದ ಎಲ್ಲಾ ಸಾರ್ವಜನಿಕ ಚುನಾವಣಾ ರ‍್ಯಾಲಿಗಳನ್ನು ರದ್ದುಗೊಳಿಸಿದ್ದೇನೆ. ಪ್ರಸಕ್ತ ಪರಿಸ್ಥಿತಿಯಲ್ಲಿ ದೊಡ್ಡ ಮಟ್ಟದಲ್ಲಿ ಸಾರ್ವಜನಿಕ ರ‍್ಯಾಲಿ ನಡೆಸುವುದರಿಂದ ಉಂಟಾಗುವ ಪರಿಣಾಮದ ಬಗ್ಗೆ ಆಳವಾಗಿ ಚಿಂತಿಸುವಂತೆ ನಾನು ಎಲ್ಲ ರಾಜಕೀಯ ನಾಯಕರಿಗೆ ಸಲಹೆ ನೀಡಿದ್ದೇನೆ' ಎಂದು ರಾಹುಲ್ ಗಾಂಧಿ ಟ್ವಿಟ್ ಮಾಡಿದ್ದಾರೆ.

ಶನಿವಾರ ನಡೆದ ಚುನಾವಣಾ ಪ್ರಚಾರ ರ‍್ಯಾಲಿಯಲ್ಲಿ ದೊಡ್ಡ ಸಂಖ್ಯೆಯಲ್ಲಿ ಸೇರಿದ ಪಶ್ಚಿಮಬಂಗಾಳದ ಜನರನ್ನು ಪ್ರಶಂಸಿಸಿದ ಪ್ರಧಾನಿ ನರೇಂದ್ರ ಮೋದಿ ಅವರನ್ನು ರಾಹುಲ್ ಗಾಂಧಿ ಇಂದು ಟ್ವಿಟ್ ಮಾಡಿ ಟೀಕಿಸಿದ್ದಾರೆ.

ಇಷ್ಟು ದೊಡ್ಡ ಪ್ರಮಾಣದಲ್ಲಿ ಜನರು ಅನಾರೋಗ್ಯಕ್ಕೀಡಾಗುತ್ತಿರುವುದು ಹಾಗೂ ಸಾವನ್ನಪ್ಪುತ್ತಿರುವುದು ಇದೇ ಮೊದಲ ಬಾರಿಗೆ ನೋಡುತ್ತಿದ್ದೇನೆ' ಎಂದು ರಾಹುಲ್ ಟ್ವಿಟ್‌ನಲ್ಲಿ ಹೇಳಿದ್ದಾರೆ.

ಸೋಂಕಿನ ಎರಡನೇ ಅಲೆಯಿಂದ ಆರ್ಥಿಕ ಅನಿಶ್ಚಿತತೆ: ನೀತಿ ಆಯೋಗ

ಹೊಸದಿಲ್ಲಿ: ಕೊರೋನ ವೈರಸ್ ಸೋಂಕಿನ ಎರಡನೇ ಅಲೆಯಿಂದಾಗಿ ಗ್ರಾಹಕರು ಮತ್ತು ಹೂಡಿಕೆದಾರರ ಅಭಿಪ್ರಾಯದ ವಿಷಯದಲ್ಲಿ ದೇಶ ಹೆಚ್ಚಿನ ಅನಿಶ್ಚಿತತೆಗೆ ಸಿದ್ಧವಾಗಬೇಕಿದೆ ಮತ್ತು ಅಗತ್ಯಬಿದ್ದಾಗ ಸರಕಾರ ಆರ್ಥಿಕ ಉಪಕ್ರಮಗಳನ್ನು ಜಾರಿಗೊಳಿಸಬೇಕಾಗುತ್ತದೆ ಎಂದು ನೀತಿ ಆಯೋಗದ ಉಪಾಧ್ಯಕ್ಷ ರಾಜೀವ್ ಕುಮಾರ್ ಹೇಳಿದ್ದಾರೆ.

ಕೊರೋನ ಸೋ೦ಕು ಪ್ರಕರಣ ಹೆಚ್ಚುತ್ತಿರುವುದರಿಂದಾಗಿ ಈಗಿನ ಪರಿಸ್ಥಿತಿ ಈ ಹಿಂದಿನದಕ್ಕಿಂತ ಬಹಳಷ್ಟು ಕಠಿಣವಾಗಿದೆ. ಆದರೂ 2022ರ ಮಾರ್ಚ್ 31ಕ್ಕೆ ಅಂತ್ಯವಾಗುವ ಹಾಲಿ ಆರ್ಥಿಕ ವರ್ಷದಲ್ಲಿ ದೇಶದ ಆರ್ಥಿಕತೆ 11 ಶೇ.ದಷ್ಟು ಪ್ರಗತಿ ಹೊಂದುವ ನಿರೀಕ್ಷೆಯಿದೆ ಎಂದು ಕುಮಾರ್ ಹೇಳಿದ್ದಾರೆ.

ಕೊರೋನ ಸೋಂಕಿನ ವಿರುದ್ಧದ ಯುದ್ಧದಲ್ಲಿ ಭಾರತ ಸಂಪೂರ್ಣ ಯಶ ಪಡೆಯುವ ಹಂತಕ್ಕೆ ತಲುಪಿತ್ತು. ಆದರೆ ಬ್ರಿಟನ್ ಮತ್ತು ಇತರ ಕೆಲ ದೇಶಗಳಿಂದ ಬಂದಿರುವ ಸೋಂಕಿನ ಹೊಸ ತಳಿಯು ಪರಿಸ್ಥಿತಿಯನ್ನು ಕಠಿಣವಾಗಿಸಿದೆ. ಸೇವಾ ಕ್ಷೇತ್ರಗಳಂತಹ ಕೆಲವು ಕ್ಷೇತ್ರಗಳ ಮೇಲೆ ನೇರ ಪರಿಣಾಮ ಬೀರುವ ಜೊತೆಗೆ, ದ್ವಿತೀಯ ಅಲೆಯು ಆರ್ಥಿಕತೆಯಲ್ಲಿರುವ ಅನಿಶ್ಚಿತತೆಯನ್ನು ವೃದ್ಧಿಸಿದ್ದು ಇದು ಆರ್ಥಿಕ ಚಟುವಟಿಕೆಗಳ ಮೇಲೆ ವ್ಯಾಪಕ ಪರೋಕ್ಷಪರಿಣಾಮಕ್ಕೆ ಕಾರಣವಾಗಬಹುದು. ಆದ್ದರಿಂದ ಆರ್ಥಿಕ ಕ್ಷೇತ್ರದ ಮೇಲಾಗುವ ಅನಿಶ್ಚಿತತೆಗೆ ನಾವು ಸಿದ್ಧರಾಗಬೇಕಿದೆ ಎಂದರು.

ಪರಿಸ್ಥಿತಿಯ ಹಿನ್ನೆಲೆಯಲ್ಲಿ ಸರಕಾರ ಹೊಸ ಆರ್ಥಿಕ ಪ್ಯಾಕೇಜ್ ಘೋಷಿಸಬಹುದೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಕೊರೋನ ಸೋಂಕಿನ ಎರಡನೇ ಅಲೆಯಿಂದ ಉಂಟಾಗುವ ಪ್ರತ್ಯಕ್ಷ ಮತ್ತು ಪರೋಕ್ಷ ಪರಿಣಾಮಗಳ ಬಗ್ಗೆ ಕೇಂದ್ರದ ವಿತ್ತ ಸಚಿವಾಲಯ ವಿಶ್ಲೇಷಣೆ ನಡೆಸಿದ ಬಳಿಕ ಈ ಪ್ರಶ್ನೆಗೆ ಉತ್ತರ ದೊರಕಲಿದೆ ಎಂದರು. ಆರ್‌ಬಿಐ ಬಡ್ಡಿದರದಲ್ಲಿ ಯಥಾಸ್ಥಿತಿ ಕಾಯ್ದುಕೊಂಡಿದೆ. ಇದೇ ರೀತಿ ಅಗತ್ಯವಿದ್ದಾಗ ಸರಕಾರವೂ ಕೆಲವು ಉಪಕ್ರಮಗಳ ಮೂಲಕ ಪ್ರತಿಕ್ರಿಯಿಸಬಹುದು ಎಂದು ರಾಜೀವ್ ಕುಮಾರ್ ಹೇಳಿದರು

Read These Next

ಪಣಜಿ: ಗೋವಾ ಜಿಎಂಸಿಎಚ್‌ನಲ್ಲಿ ಆಮ್ಲಜನಕದ ಕೊರತೆ; 26 ಸೋಂಕಿತರ ಸಾವು ತನಿಖೆಗೆ ಸಚಿವ ರಾಣೆ ಮನವಿ

ಸರಕಾರಿ ಸ್ವಾಮಿತ್ವದ ಗೋವಾ ವೈದ್ಯಕೀಯ ಕಾಲೇಜು ಹಾಗೂ ಆಸ್ಪತ್ರೆ (ಜಿಎಂಸಿಎಚ್)ಯಲ್ಲಿ ಮಂಗಳವಾರ ಬೆಳಗ್ಗೆ 26 ಕೊರೋನ ಸೋಂಕಿತರು ...

ಗಂಗಾ ನದಿಯಲಿ ಇನ್ನಷ್ಟು ಶವಗಳು ಪತ್ತೆ, ಕೊರೋನ ಸಹಿತ ಇನ್ನಿತರ ಸಾಂಕ್ರಾಮಿಕ ಸೋಂಕು ಹರಡುವ ಭೀತಿ

ಉತ್ತರಪ್ರದೇಶದ ಘಾಝಿಪುರದ ಗಂಗಾ ನದಿ ತೀರಕ್ಕೆ ಮಂಗಳವಾರ ಹಲವು ಮೃತದೇಹಗಳು ತೇಲಿ ಬಂದಿವೆ. ಸೋಮವಾರ 100ಕ್ಕೂ ಅಧಿಕ ಮೃತದೇಹಗಳು ತೇಲಿ ...

ಕರ್ನಾಟಕಕ್ಕೆ 1,200 ಮೆಟ್ರಿಕ್ ಟನ್ ಆಕ್ಸಿಜನ್ ಸರಬರಾಜ ಆಗಬೇಕೆಂಬ ಹೈಕೋರ್ಟ್ ಆದೇಶವನ್ನು ಎತ್ತಿ ಹಿಡಿದ ಸುಪ್ರೀಂ ಕೋರ್ಟ್.

ಕರ್ನಾಟಕಕ್ಕೆ 1,200 ಮೆಟ್ರಿಕ್ ಟನ್ ಆಕ್ಸಿಜನ್ ಸರಬರಾಜ ಆಗಬೇಕೆಂಬ ಹೈಕೋರ್ಟ್ ಆದೇಶವನ್ನು ಎತ್ತಿ ಹಿಡಿದ ಸುಪ್ರೀಂ ಕೋರ್ಟ್.

ಜನರ ಜೀವನವನ್ನು ಕೇಂದ್ರವಾಗಿಸಿ, ನಿಮ್ಮ ಕುರುಡು ದುರಹಂಕಾರವನ್ನಲ್ಲ: ಸೆಂಟ್ರಲ್ ವಿಸ್ಟಾ ಯೋಜನೆ ಕುರಿತು ರಾಹುಲ್ ಗಾಂಧಿ ವಾಗ್ದಾಳಿ

ಕೇಂದ್ರ ಸರ್ಕಾರದ "ಸೆಂಟ್ರಲ್ ವಿಸ್ಟಾ " ಯೋಜನೆ ಕುರಿತು ಟೀಕಿಸಿರುವ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಅದೊಂದು "ಕ್ರಿಮಿನಲ್ ವೇಸ್ಟ್" ...