ಭಟ್ಕಳ : ದೋಣಿ ಹಾನಿಗೊಳಗಾದ ತೆಂಗಿನಗುಂಡಿ ಮೀನುಗಾರರಿಗೆ ಪರಿಹಾರಕ್ಕೆ ಮನವಿ.

Source: SO News | By Laxmi Tanaya | Published on 8th August 2022, 10:47 PM | Coastal News |

ಭಟ್ಕಳ :  ತಾಲೂಕಿನ ತೆಂಗಿನಗುಂಡಿ ಭಾಗದಲ್ಲಿ ಅತಿವೃಷ್ಟಿಯಿಂದ ಮೀನುಗಾರರು ಅಪಾರ ಪ್ರಮಾಣದ ದೋಣಿಗಳನ್ನ ಕಳೆದುಕೊಂಡಿದ್ದು ಸರ್ಕಾರದಿಂದ ಪರಿಹಾರ ನೀಡಬೇಕೆಂದು ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ಒತ್ತಾಯಿಸಿದ್ದಾರೆ.

ದೋಣಿಗಳು ಸಂಪೂರ್ಣ ಹಾನಿಯಾಗಿರುವ ಬಗ್ಗೆ ಸರಕಾರದ ವತಿಯಿಂದ ಸರ್ವೆ ಆಗಿದೆ. ಆದರೆ ಯಾವುದೇ ಪರಿಹಾರ ಇಂದಿನವರೆಗೂ ಸಿಕ್ಕಿಲ್ಲ.  ಇಲ್ಲಿನ ಒಂಬತ್ತು ಮೀನುಗಾರರ ದೋಣಿಗಳು ಸಂಪೂರ್ಣ ಹಾನಿಯಾಗಿದ್ದು,  ಮೀನುಗಾರರ ಕುಟುಂಬಗಳು  ತುಂಬಾ ಸಂಕಷ್ಟದಲ್ಲಿದೆ. ಹೀಗಾಗಿ  ಕೂಡಲೇ ತಾಲೂಕಾಡಳಿತ ತಕ್ಷಣ ಪ್ರತಿ ಮೀನುಗಾರರ ದೋಣಿಗೆ ಒಂದು ಲಕ್ಷ ರೂ. ಪರಿಹಾರ ಮೊತ್ತವನ್ನು  ನೀಡಬೇಕು. ಸಂಕಷ್ಟದಲ್ಲಿ ಇರುವ ಮೀನುಗಾರರಿಗೆ ತಾಲೂಕಿನ ಆಡಳಿತ ಅವರ ನೋವಿಗೆ ಸ್ಪಂದಿಸಿ ತಕ್ಷಣ ಅವರ ಸಮಸ್ಯೆಯನ್ನು ಬಗೆಹರಿಸಬೇಕೆಂದು  ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ಅಗ್ರಹಿಸಿದೆ.,

ಈ ಸಂದರ್ಭದಲ್ಲಿ ಉತ್ತರಕನ್ನಡ ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ  ಆಸಿಫ್ ಶೇಖ್,  ಖಜಾಂಚಿ ಅಬ್ದುಲ್ ಜಬ್ಬಾರ್ ಅಸದಿ, ಮುಖಂಡರಾದ ಫಾರೂಕ್ ಶೇಕ್, ಯುವ ಕಾಯ೯ಕತ೯ ಝಹೂರ್ ಲಾಟ್ ಮುಂತಾದವರು ಹಾಜರಿದ್ದರು.

Read These Next

ಕಾರವಾರ: ಮತದಾನ ಜಾಗೃತಿ ಜಾಥಾ

ಪ್ರತಿಯೊಂದು ಮತವು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ನೀವು ನಿಮ್ಮ ಸುತ್ತಲಿನವರಿಗೂ ಮತದಾನ ಜಾಗೃತಿ ಮೂಡಿಸಬೇಕು ...