ಕೋವಿಡ್ ಮುಂಜಾಗ್ರತ ಕ್ರಮಗಳೊಂದಿಗೆ 26 ಮತಗಟ್ಟೆಗಳಲ್ಲಿ ಬುಧವಾರ ಮತದಾನ    

Source: sonews | By Staff Correspondent | Published on 27th October 2020, 8:30 PM | Coastal News |

ಕಾರವಾರ:  ಕರ್ನಾಟಕ ಪಶ್ಚಿಮ ಪದವಿಧರರ ಕ್ಷೇತ್ರದಿಂದ ವಿಧಾನ ಪರಿಷತ್‍ಗೆ ಬುಧವಾರ ಮತದಾನ ನಡೆಯಲಿದ್ದು, ಜಿಲ್ಲೆಯ 23 ಸ್ಥಳದ  26 ಮತಗಟ್ಟೆಗಳಲ್ಲಿ ಕೋವಿಡ್-19 ಮುಂಜಾಗ್ರತೆಗಾಗಿ ಸೆಕ್ಟರ್ ಹೇಲ್ತ್ ರೇಗ್ಯೂಲೇಟರಗಳನ್ನು  ನೇಮಿಸುವದರೊಂದಿಗೆ ಎಲ್ಲ ಅಗತ್ಯಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಡಾ. ಹರೀಶಧಕುಮಾರ ಕೆ. ಅವರು ಹೇಳಿದರು. 

ಮಂಗಳವಾರ ಜಿಲ್ಲಾಧಿಕಾರಿ ಕಚೇರಿ ನ್ಯಾಯಾಲಯ ಸಭಾಂಗಣದಲ್ಲಿ ಪಶ್ಚಿಮ ಪದವಿಧರ ಕ್ಷೇತ್ರದ ಚುನಾವಣೆ ಕುರಿತು ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿ, ಕೋವಿಡ್‍ನಂತಹ ಸಂದಿಗ್ದ ಪರಿಸ್ಥಿತಿಯಲ್ಲಿ  ಪ್ರಥಮಬಾರಿಗೆ ಚುನಾವಣೆ ನಡೆಯುತ್ತಿರುವುದರಿಂದ ಜಿಲ್ಲೆಯ ಎಲ್ಲಾ ಮತಗಟ್ಟೆಗಳಲ್ಲಿ ಥರ್ಮಲ್ ಸ್ಕ್ಯಾನರ್, ಆಕ್ಷಿಮೀಟರ್ ವ್ಯವಸ್ಥೆ ಮಾಡುವುದರೊಂದಿಗೆ ಕೋವಿಡ್-19 ಶಂಕಿತರನ್ನು ಗುರುತಿಸಲು ಮತ್ತು ಅಂತವರು ಮತ ಚಲಾಯಿಸಲು ಅನುಕೂಲವಾಗಲೆಂದು ಆರೋಗ್ಯ ಇಲಾಖೆಯಿಂದ ಪ್ರತಿ ಮತಗಟ್ಟೆಯಲ್ಲಿ  ಸೆಕ್ಟರ್ ಹೇಲ್ತ್ ರೇಗ್ಯೂಲೇಟರನ್ನು ನೇಮಿಸಲಾಗಿರುತ್ತದೆ ಮತ್ತು ಕೋವಿಡ್ ಶಂಕಿತರಿಗೆ ಸಂಜೆ 4 ಗಂಟೆಯಿಂದ ಮತದಾನಕ್ಕೆ ಅವಕಾಶ ಕಲ್ಪಿಸಲಾಗುವುದೆಂದು ಹೇಳಿದರು.

ಸುಗಮ ಮತದಾನಕ್ಕಾಗಿ 26 ಮತಗಟ್ಟೆಗಳಲ್ಲಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆಯನ್ನು ಕೈಗೊಳ್ಳುವುದರೊಂದಿಗೆ ಅಗತ್ಯ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲಾಗಿರುತ್ತದೆ. ಮತದಾರರಿಗೆ ಮಾಸ್ಕ್ ಹಾಗೂ ಪ್ರತ್ಯೇಕ ನೇರಳೆ ಬಣ್ಣದ ಸ್ಕೆಚ್ ಪೆನ್ ಹಾಗೂ ಬ್ಯಾಲೇಟ್ ಪೇಪರ್ ನೀಡಲಾಗುವುದು.

ಮತದಾರರು ಚುನಾವಣಾ ಸಿಬ್ಬಂದಿ ನೀಡಿದಂತಹ ನೇರಳೆ ಬಣ್ಣದ ಸ್ಕೆಚ್ ಪೆನ್ ಮಾತ್ರ ಬಳಸಿ, ಇಂಗ್ಲೀಷ್, ರೋಮನ್ ಅಥವಾ ಕನ್ನಡ ಅಂಕಿಗಳನ್ನು ನಮೂದಿಸುವುದರ ಮೂಲP ಮಾತ್ರÀ ಮತ ಚಲಾಯಿಸಬೇಕು. ಅಂಕಿಗಳನ್ನು ಹೊರತುಪಡಿಸಿ, ಇತರೆ ಯಾವುದೇ ಚಿಹ್ನೆ ಅಥವಾ ಅಕ್ಷರ ಬರವಣಿಗೆಯಲ್ಲಿ ಮತ ಚಲಾಯಿಸುವ ಹಾಗೆ ಇರುವುದಿಲ್ಲವೆಂದು ಅವರು ಹೇಳಿದರು.

ಮತದಾನ ನಡೆಯುವ ಸ್ಥಳಗಳು: ಅಂಕೋಲಾ ತಹಶೀಲ್ದಾರ ಕಚೇರಿ, ಭಟ್ಕಳ ತಹಶೀಲ್ದಾರ ಕಚೇರಿ, ಅಂಬಿಕಾ ನಗರದ ಕೆಎಚ್‍ಇಪಿ ಹೈಸ್ಕೂಲ್, ದಾಂಡೇಲಿಯ ನಗರಸಭೆ ಕಟ್ಟಡದ ಕೆಳಮಹಡಿಯ ಬಲಭಾಗದಲ್ಲಿ, ಹಳಿಯಾಳ ತಹಶೀಲ್ದಾರ ಕಚೇರಿ ರೂಮ್‍ನಂ:1, ಹೊನ್ನಾವರದ ತಹಶೀಲ್ದಾರ ಕಚೇರಿಯ ಬಲ ಮತ್ತು ಎಡಬಾಗದಲ್ಲಿ, ಹೇರಗಂಡಿ ಗ್ರಾಮ್ ಪಂಚಾಯತ್, ರಾಮನಗರ ಗ್ರಾಮ ಲೆಕ್ಕಾಧಿಕಾರಿ ಕಚೇರಿ, ಜೊಯಿಡಾದ ತಹಶೀಲ್ದಾರ ಕಚೇರಿಯ ಚುನಾವಣಾ ವಿಭಾಗದ ಕೊಠಡಿಯ ಎಡಬಾಗದಲ್ಲಿ, ಕುರ್ಣಿಪೇಟೆಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಹೊಸ ಕಟ್ಟಡ, ಕಾರವಾರ ನಗರದಲ್ಲಿ ಸೇಂಟ್ ಮೈಕಲ್ ಕಾನ್ವೆಂಟ್ ಹೈಸ್ಕೂಲ್‍ನ 7ನೇ ತರಗತಿಯ ‘ಎ’ ಕೊಠಡಿಯ ಪೂರ್ವಬಾಗ ಹಾಗೂ 7ನೇ ತರಗತಿಯ ‘ಬಿ’ ಕೊಠಡಿಯ ಮಧ್ಯಬಾಗದಲ್ಲಿ, ಗೋಕರ್ಣದ ಹೊಸ ನಾಡಕಚೇರಿ ಸಭಾಂಗಣ, ಕುಮಟಾ ತಹಶೀಲ್ದಾರ ಕಚೇರಿಯ ಬಲಬಾಗದಲ್ಲಿ ಮತ್ತು ಎಡಬಾಗದಲ್ಲಿ, ಮುಂಡಗೊಡ ತಹಶೀಲ್ದಾರ ಕಚೇರಿಯ ಎಡಬಾಗದಲ್ಲಿ, ಸಿದ್ದಾಪುರ ತಹಶೀಲ್ದಾರ ಕಚೇರಿಯ ಪೂರ್ವಬಾಗದಲ್ಲಿ ಹೇರೂರಿನ ನಾಡಕಚೇರಿ, ವಂದನೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ,  ಶಿರಸಿಯ ಗಣೇಶ ನಗರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಶಿರಸಿಯ ಯಲ್ಲಾಪುರ ನಾಕಾ 3 ನಂಬರ್ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಶಿರಸಿಯ ರಾಯಪ್ಪ ಹುಲೇಕಲ್ ಹಿರಿಯ ಪ್ರಾಥಮಿಕ ಶಾಲೆ, ಯಲ್ಲಾಪುರ ತಾಲೂಕು ಕಚೇರಿಯ ಪೂರ್ವಬಾಗದಲ್ಲಿ, ಮಂಚಿಕೇರಿಯ ಉಪತಹಶೀಲ್ದಾರ ಕಚೇರಿಯಲ್ಲಿ ಮತದಾನ ನಡೆಯಲಿರುತ್ತದೆ. 

Read These Next

ಭಟ್ಕಳ : ಈದುಲ್ ಫಿತ್ರ್ ನಿಮಿತ್ತ ಒಂದು ಲಕ್ಷ ಇಪ್ಪತ್ತು ಸಾವಿರಕ್ಕೂ ಅಧಿಕ ಫೀತ್ರ್ ಅಕ್ಕಿ ವಿತರಣೆ

ಭಟ್ಕಳ: ಈದುಲ್ ಫಿತ್ರ್ ಸಂದರ್ಭದಲ್ಲಿ ಪ್ರತಿಯೊಬ್ಬ ಮುಸ್ಲಿಮನು ತನ್ನ ಈದ್ ಹಬ್ಬಕ್ಕೆ ಒಂದು ಮುಂಚೆ ಕಡ್ಡಾಯವಾಗಿ ನೀಡುವ ಫಿತ್ರ್ ...

ಭಟ್ಕಳ ಸ್ಪೋರ್ಟ್ಸ್ ಅಕಾಡೆಮಿ ಮತ್ತು BMYF ಸಹಯೋಗದೊಂದಿಗೆ ಎ.20-21 ರಂದು ಯುವ ಪ್ರತಿಭೆಗಳಿಗಾಗಿ ಇಂಟರ್-ಕ್ರಿಕೆಟ್ ಲೀಗ್ ಆಯ್ಕೆ

ಭಟ್ಕಳ: ಉತ್ತರ ಕನ್ನಡ ಜಿಲ್ಲೆಯ ಉದಯೋನ್ಮುಖ ಕ್ರಿಕೆಟ್ ಪ್ರತಿಭೆಗಳನ್ನು ಗುರುತಿಸುವ ಮತ್ತು ಪೋಷಿಸುವ ಪ್ರಯತ್ನದಲ್ಲಿ, ಭಟ್ಕಳ ...

ಭಟ್ಕಳ ತಾಲೂಕಿನಲ್ಲಿ ಸರಣಿ ಕಳ್ಳತನ; ತಲೆಗೆ ಹೆಲ್ಮೆಟ್ ಹಾಗೂ ಮುಖಕ್ಕೆ ಮಾಸ್ಕ್ ಧರಿಸಿ ಲಕ್ಷಾಂತರ ರೂ ಲೂಟಿ

ಭಟ್ಕಳ: ನಗರದ ರಂಗನಕಟ್ಟೆಯಲ್ಲಿರುವ ವಿನಾಯಕ ಸಹಕಾರಿ ಸಂಘ ಸೇರಿದಂತೆ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಒಂದು ಅಂಗಡಿ ಹಾಗೂ ...