ವೆನ್ಲಾಕ್‍ನಲ್ಲಿ ನೀರಿನ ಘಟಕ ಉದ್ಘಾಟನೆ

Source: so news | Published on 9th December 2019, 11:56 PM | Coastal News | Don't Miss |

 


ಮಂಗಳೂರು: ಎಂಫ್ರೆಂಡ್ಸ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಮಂಗಳೂರಿನ ಜಿಲ್ಲಾ ಸರಕಾರಿ ವೆನ್ಲಾಕ್ ಆಸ್ಪತ್ರೆಯ ಮಕ್ಕಳ ವಿಭಾಗದಲ್ಲಿ ಸತ್ವಾ ಬಾಯ್ಸ್ ದುಬಾಯಿ ಪ್ರಾಯೋಜಕತ್ವದಲ್ಲಿ ಸುಮಾರು 50 ಸಾವಿರ ರೂ. ವೆಚ್ಚದಲ್ಲಿ ಅಳವಡಿಸಿದ ಶುದ್ಧ ಕುಡಿಯುವ ನೀರಿನ ಘಟಕದ ಉದ್ಘಾಟನೆ ಶನಿವಾರ ನಡೆಯಿತು.
ವೆನ್ಲಾಕ್ ಆಸ್ಪತ್ರೆಯ ಅಧೀಕ್ಷಕಿ ಡಾ.ರಾಜೇಶ್ವರಿ ದೇವಿ ಎಚ್.ಆರ್. ಅವರು ನೂತನ ಘಟಕ ಉದ್ಘಾಟಿಸಿ, ಅತ್ಯಂತ ಬಡವರು ಚಿಕಿತ್ಸೆಗೆ ಬರುವ ವೆನ್ಲಾಕ್ ಸರಕಾರಿ ಆಸ್ಪತ್ರೆಗೆ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಮಾಡುವ ಮೂಲಕ ಅತೀ ದೊಡ್ಡ ಮಾನವೀಯ ಕೆಲಸವನ್ನು ಎಂಫ್ರೆಂಡ್ಸ್ ಮಾಡಿದೆ. ಇದಕ್ಕೆ ಪ್ರಾಯೋಜಕತ್ವ ನೀಡಿದವರನ್ನು ಸರಕಾರದ ಪರವಾಗಿ ಅಭಿನಂದಿಸುತ್ತಿದ್ದೇನೆ. ಎಂಫ್ರೆಂಡ್ಸ್‍ನಿಂದ ಈಗಾಗಲೇ ಒಳರೋಗಿಗಳ ವಿಭಾಗದಲ್ಲಿ ನೀರಿನ ಘಟಕ ಮತ್ತು ಪ್ರತಿದಿನ ರಾತ್ರಿ ರೋಗಿಗಳ ಜತೆಗಾರರಿಗೆ ಊಟ ನೀಡುತ್ತಿರುವುದು ಶ್ಲಾಘನೀಯ ಎಂದರು.
ಎಂಫ್ರೆಂಡ್ಸ್ ಟ್ರಸ್ಟಿಗಳಾದ ಅಹ್ಮದ್ ಇರ್ಶಾದ್ ತುಂಬೆ, ಸುಜಾ ಮೊಹಮ್ಮದ್, ವೆನ್ಲಾಕ್ ವೈದ್ಯ ಡಾ.ಬಾತಿಶ್, ಸತ್ವಾ ಬಾಯ್ಸ್ ವೆಲ್ಫೇರ್ ವಾಟ್ಸ್ಯಾಪ್ ರೂಪಿನ ಅಡ್ಮಿನ್‍ಗಳಾದ ಅಬ್ದುಲ್ ಸಮದ್, ಮೊಹಮ್ಮದ್ ಶಮೀಮ್, ಸುಹೈಬ್ ಮೊಹಮ್ಮದ್, ಸದಸ್ಯರಾದ ನಿಝಾಮ್ ಮೊಹಮ್ಮದ್, ಮೊಹಮ್ಮದ್ ಹಾರೀಸ್, ಅಬ್ದುಲ್ ಗಫ್ಫಾರ್ ಮತ್ತಿತರರು ಉಪಸ್ಥಿತರಿದ್ದರು

Read These Next

ಕಾರವಾರ: ಮತದಾನ ಜಾಗೃತಿ ಜಾಥಾ

ಪ್ರತಿಯೊಂದು ಮತವು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ನೀವು ನಿಮ್ಮ ಸುತ್ತಲಿನವರಿಗೂ ಮತದಾನ ಜಾಗೃತಿ ಮೂಡಿಸಬೇಕು ...

ಗುಲಬರ್ಗಾ ಲೋಕಸಭಾ (ಮೀಸಲು) ಕ್ಷೇತ್ರದ ಚುನಾವಣೆ: ಚುನಾವಣಾ ಸ್ಪರ್ಧಾ ಕಣದಲ್ಲಿ 14 ಅಭ್ಯರ್ಥಿಗಳು

ಕಲಬುರಗಿ : ಗುಲಬರ್ಗಾ ಲೋಕಸಭಾ (ಪ.ಜಾ. ಮೀಸಲು) ಕ್ಷೇತ್ರಕ್ಕೆ 2024ರ ಮೇ 7ರಂದು ನಡೆಯುವ ಚುನಾವಣೆಗಾಗಿ ನಾಮಪತ್ರಗಳನ್ನು ಹಿಂದಕ್ಕೆ ಪಡೆಯಲು ...

ಧಾರವಾಡ ಲೋಕಸಭೆ : ಉಮೇದುವಾರಿಕೆ ಹಿಂಪಡೆದ ಎಂಟು ಅಭ್ಯರ್ಥಿಗಳು; ಅಂತಿಮವಾಗಿ ಚುನಾವಣಾ ಸ್ಪರ್ಧೆಯಲ್ಲಿ 17 ಅಭ್ಯರ್ಥಿಗಳು

ಧಾರವಾಡ : 11-ಧಾರವಾಡ ಚುನಾವಣಾ ಕ್ಷೇತ್ರದಿಂದ ಲೋಕಸಭೆಗೆ ನಡೆಯುವ ಚುನಾವಣೆಗೆ ಕ್ರಮಬದ್ದವಾಗಿ ನಾಮನಿರ್ದೇಶನ ಮಾಡಲ್ಪಟ್ಟಿದ್ದ 25 ...

ಅಡಕೆ, ಕಾಫಿ ಬೆಳೆಗಾರರ ಸಂಕಷ್ಟಕ್ಕೆ ಬಿಜೆಪಿ ಏಕೆ ಸ್ಪಂದಿಸಿಲ್ಲ: ಜಯಪ್ರಕಾಶ್ ಹೆಗ್ಡೆ ಪ್ರಶ್ನೆ

ಬಾಳೆಹೊನ್ನೂರು: ಕಳೆದ ಹತ್ತು ವರ್ಷಗಳಿಂದ ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿ, ಮಲೆನಾಡಿನ ಅಡಕೆ, ಕಾಫಿ ಬೆಳೆಗಾರರ ಸಂಕಷ್ಟಕ್ಕೆ ...