ಭಟ್ಕಳದಲ್ಲಿ ನಡೆದ ಸ್ವಾಮೀ ವಿವೇಕಾನಂದರ 157 ನೇ ಜಯಂತಿ ಅಂಗವಾಗಿ ವಾಕಥಾನ್. ಶಾಸಕ ಸುನೀಲ್ ನಾಯ್ಕ ಭಾಗಿ.

Source: SO News | By Laxmi Tanaya | Published on 10th January 2021, 10:10 PM | Coastal News | Don't Miss |

ಭಟ್ಕಳ : ಆಧ್ಯಾತ್ಮದ ತಳಹದಿ ಮೇಲೆ ದೇಶದ ಸಂಸ್ಕೃತಿ ಎತ್ತಿ ಹಿಡಿದು ಯುವಕರಿಗೆ ಸ್ಫೂರ್ತಿಯಾಗಿದ್ದ ಸ್ವಾಮಿ ವಿವೇಕಾನಂದರ ಆದರ್ಶ ತತ್ವಗಳು ಸರ್ವಕಾಲಿಕ ಎಂದು ಭಟ್ಕಳ ಶಾಸಕ ಸುನೀಲ್ ನಾಯ್ಕ ಹೇಳಿದ್ದಾರೆ

ಸ್ವಾಮಿ ವಿವೇಕಾನಂದರ 157 ನೇ ಜಯಂತಿಯ ಅಂಗವಾಗಿ ಭಟ್ಕಳ ಯುವಮೋರ್ಚ ವತಿಯಿಂದ ನಡೆದ 'ಸಮರ್ಥ ಭಾರತ' ಉತ್ತಮನಾಗು ಉಪಕಾರಿಯಾಗು "ವಾಕಥಾನ್" ಜಾಥಾದಲ್ಲಿ ಪಾಲ್ಗೊಂಡು ಮಾತನಾಡುತ್ತಿದ್ದರು.

ಇಚ್ಛಾಶಕ್ತಿ, ಜ್ಞಾನಶಕ್ತಿ, ಕ್ರಿಯಾಶಕ್ತಿಗಳನ್ನು ಜೀವನದಲ್ಲಿ ಕಾರ್ಯರೂಪಕ್ಕೆ ತರುವವರಿಗೆ ಯಶಸ್ಸು ಕಟ್ಟಿಟ್ಟಬುತ್ತಿ. ಈ ನಿಟ್ಟಿನಲ್ಲಿ ಸ್ವಾಮಿ ವಿವೇಕಾನಂದರ ಉನ್ನತ ಅಂಶಗಳನ್ನು ಅಳವಡಿಸಿಕೊಳ್ಳುವುದರ ಜತೆಗೆ ಯುವಕರು ಮನಸ್ಸನ್ನು ಹತೋಟಿಯಲ್ಲಿ ಇಟ್ಟುಕೊಂಡು ಏಕಾಗ್ರತೆ ಬೆಳೆಸಿಕೊಳ್ಳಬೇಕು. ಆಗ ಮಾತ್ರ ಸಾಧನೆಯತ್ತ ದೃಷ್ಠಿ ಹರಿಸಬಹುದು ಎಂದರು.

ಭಟ್ಕಳ ಚಿತ್ತರಂಜನ್ ಸರ್ಕಲ್ ನಿಂದ ಸರ್ದಾರ್ ವಲ್ಲಭಭಾಯ್ ಪಟೇಲ್ ಉದ್ಯಾನವನದ ವರೆಗೆ ಕಾಲ್ನಡಿಗೆಯ ಜಾಥಾ ನಡೆಯಿತು.

Read These Next

ಭಾಷಾ ಜ್ಞಾನದ ಕುರಿತು ಯಾರ ಬಗ್ಗೆಯೂ ಕೇವಲವಾಗಿ ಮಾತನಾಡಿಲ್ಲ: ಜೆ.ಪಿ.ಹೆಗ್ಡೆ ಸ್ವಷ್ಟನೆ

ಉಡುಪಿ: ಈವರೆಗಿನ ರಾಜಕೀಯ ಜೀವನದಲ್ಲಿ ಯಾರ ಮನಸ್ಸನ್ನೂ ನೋಯಿಸುವುದಾಗಲಿ ಅಥವಾ ಕೇವಲವಾಗಿ ಮಾತನಾಡುವುದನ್ನಾಗಲಿ ಮಾಡದೆ ಇರುವ ನಾನು ...