ಅ.28 ರಂದು ಪಶ್ಚಿಮ ಪದವಿಧರ ಮತ ಕ್ಷೇತ್ರಕ್ಕೆ ಮತದಾನ

Source: SO News | By Laxmi Tanaya | Published on 27th October 2020, 9:40 PM | State News |

ಹುಬ್ಬಳ್ಳಿ :  ಕರ್ನಾಟಕ ಪಶ್ಚಿಮ ಪದವಿಧರ ಮತ ಕ್ಷೇತ್ರಕ್ಕೆ ಅ.28 ರಂದು ಮತದಾನ ಜರುಗಲಿದೆ.  

ಚುನಾವಣಾ ಆಯೋಗ ಸುವ್ಯವಸ್ಥಿತ ಹಾಗೂ ಶಾಂತಿಯುತ ಮತದಾನಕ್ಕೆ ಅವಕಾಶ ಕಲ್ಪಿಸಿದೆ. ಪದವಿಧರ ಮತದಾರ ಪಟ್ಟಿಯಲ್ಲಿ ಹೆಸರು ಇರುವ ಮತದಾರರು, ಚುನಾವಣಾ ಗುರುತಿನ ಚೀಟಿ, ಆಧಾರ್ ಕಾರ್ಡು, ಡ್ರೈವಿಂಗ್ ಲೈಸೆನ್ಸ್, ಪಾನ್ ಕಾರ್ಡು, ಪಾಸ್ ಪೋರ್ಟ್, ರಾಜ್ಯ, ಕೇಂದ್ರ ಹಾಗೂ ಸಾರ್ವಜನಿಕ ಉದ್ದಿಮೆಗಳನ್ನು ಅಥವಾ ಇತರೆ ಔದ್ಯಮಿಕ ಸಂಸ್ಥೆಗಳು ನೀಡಿರುವ ಗುರುತಿನ ಚೀಟಿ, ಲೋಕಸಭಾ, ವಿಧಾನ ಸಭಾ, ಪರಿಷತ್ ಸದಸ್ಯರ ಗುರುತಿನ ಚೀಟಿ, ಶಿಕ್ಷಣ ಸಂಸ್ಥೆಗಳು ನೀಡಿರುವ ಗುರುತಿನ ಚೀಟಿ, ವಿಶ್ವವಿದ್ಯಾಲಯದಿಂದ ನೀಡುರುವ ಪದವಿ, ಡಿಪ್ಲೋಮೋ ಪ್ರಮಾಣ ಪತ್ರ, ಅಂಗವಿಕಲರಿಗೆ ಸಮಕ್ಷಮ ಪ್ರಾಧಿಕಾರ ನೀಡಿದ ಪ್ರಮಾಣ ಪತ್ರದ ಮೂಲ ಪ್ರತಿಯೊಂದಿಗೆ ಆಗಮಿಸಿ ಮತದಾನ ಮಾಡಬಹುದು. 

ಪದವಿಧರ ಮತಕ್ಷೇತ್ರದ ಚುನಾವಣೆಯು ಪ್ರಾಶಸ್ತ್ಯ ಮತದಾನ ಪದ್ದತಿಯನ್ನು ಹೊಂದಿದೆ. ಮತದಾರರು ಮತಪತ್ರದಲ್ಲಿ ಪ್ರಾಶಸ್ತ್ಯವನ್ನು ರೋಮನ್, ಇಂಗ್ಲೀಷ್ ಅಥವಾ ಕನ್ನಡ ಅಂಕಿಗಳಲ್ಲಿ ಮಾತ್ರವೇ ನಮೂದಿಸಬೇಕು. ಪದಗಳಲ್ಲಿ ಸೂಚಿಸಿದರೆ ಮತವು ತಿರಸ್ಕೃತವಾಗುವುದು. ಮತಗಟ್ಟೆಯೊಳಗೆ ಯಾವುದೇ ರೀತಿಯ ಪೆನ್ನು, ಇಂಕ್, ಕಡ್ಡಿ ಪೊಟ್ಟಣ, ಲೈಟರ್, ಪಾನೀಯ ಬಾಟಲಿಗಳನ್ನು ಒಯ್ಯುವ ಹಾಗಿಲ್ಲ. 

ಮತಗಟ್ಟೆಯೊಳಗೆ ಮೊಬೈಲ್, ಕ್ಯಾಮರಾ, ತಿಂಡಿ ತಿನಿಸು, ಯಾವುದೇ ರೀತಿಯ ಆಯುಧಗಳನ್ನು ತರುವುದನ್ನು ನಿಷೇಧಿಸಲಾಗಿದೆ. ಮತಗಟ್ಟೆ ಅಧಿಕಾರಿ ನೀಡುವ ನೇರಳೆ ಬಣ್ಣದ ಸ್ಕೆಚ್ ಪೆನ್ನು ಬಳಸಿ ಮತದಾನ ಮಾಡಬೇಕು. ಬೆಳಿಗ್ಗೆ 8 ರಿಂದ ಸಂಜೆ 5 ಗಂಟೆಯ ಒಳಗಾಗಿ ಮತದಾನ ಮಾಡಬೇಕು. ಮತಗಟ್ಟೆ ಮಾಸ್ಕ್ ಧರಿಸಿ ಆಗಮಿಸಬೇಕು. ಮತದಾನದ ಸಮಯದಲ್ಲಿ ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕೆಂದು ಸ್ವೀಪ್ ಸಮಿತಿ ಪ್ರಕಟಣೆಯಲ್ಲಿ ತಿಳಿಸಿದೆ

Read These Next

ರಾಜ್ಯದಲ್ಲಿ ಬಿಜೆಪಿ ಕುರುಬ ಸಮಾಜದ ಒಬ್ಬರಿಗೂ ಟಿಕೆಟ್ ಕೊಟ್ಟಿಲ್ಲ, ಒಬ್ಬೇ ಒಬ್ಬ ಮರಾಠರಿಗೂ, ಒಬ್ಬ ಮುಸ್ಲಿಂಗೂ ಟಿಕೆಟ್ ಕೊಟ್ಟಿಲ್ಲ: ಸಿ ಎಂ ಸಿದ್ದರಾಮಯ್ಯ

ಬೀದರ್ : ಅಧಿಕಾರ, ಅವಕಾಶ, ಸಂಪತ್ತು‌ ಎಲ್ಲ ಸಮುದಾಯಗಳಿಗೂ ಹಂಚಿಕೆ ಆದರೆ ಮಾತ್ರ ದೇಶದ ಪ್ರಗತಿ ಸಾಧ್ಯ ಎಂದು ಮುಖ್ಯಮಂತ್ರಿ ...

ಗುಲಬರ್ಗಾ ಲೋಕಸಭಾ (ಮೀಸಲು) ಕ್ಷೇತ್ರದ ಚುನಾವಣೆ: ಚುನಾವಣಾ ಸ್ಪರ್ಧಾ ಕಣದಲ್ಲಿ 14 ಅಭ್ಯರ್ಥಿಗಳು

ಕಲಬುರಗಿ : ಗುಲಬರ್ಗಾ ಲೋಕಸಭಾ (ಪ.ಜಾ. ಮೀಸಲು) ಕ್ಷೇತ್ರಕ್ಕೆ 2024ರ ಮೇ 7ರಂದು ನಡೆಯುವ ಚುನಾವಣೆಗಾಗಿ ನಾಮಪತ್ರಗಳನ್ನು ಹಿಂದಕ್ಕೆ ಪಡೆಯಲು ...

ಗದಗ: ಒಂದೇ ಕುಟುಂಬದ ನಾಲ್ವರ ಹತ್ಯೆ ಪ್ರಕರಣ ಭೇದಿಸಿದ ಪೊಲೀಸರು; ಸುಪಾರಿ ನೀಡಿದ ಮನೆಮಗ ಸಹಿತ 8 ಮಂದಿಯ ಬಂಧನ

ಮೂರು ದಿನಗಳ ಹಿಂದೆ ಗದಗದಲ್ಲಿ ನಡೆದಿದ್ದ ಒಂದೇ ಕುಟುಂಬದ ನಾಲ್ವರ ಹತ್ಯೆ ಪ್ರಕರಣವನ್ನು ಭೇದಿಸಿರುವ ಪೊಲೀಸರು ಎಂಟು ಮಂದಿ ...