ಭಟ್ಕಳ: ಶಾಂತಿಯುತ ಬಿರುಸಿನ ಮತದಾನಕ್ಕೆ ಮಳೆ ಅಡ್ಡಿ

Source: sonews | By Staff Correspondent | Published on 23rd April 2019, 10:56 PM | Coastal News | Don't Miss |

ಭಟ್ಕಳ: ಮಂಗಳವಾರ ನಡೆದ ಉತ್ತರಕನ್ನಡ  ಲೋಕಸಭಾ ಕ್ಷೇತ್ರದ ಚುನಾವಣೆಗೆ ಭಟ್ಕಳ-ಹೊನ್ನಾವರ ವಿಧಾನಸಭಾ ಕ್ಷೇತ್ರದ 248 ಬೂತ್ ಗಳಲ್ಲಿಶಾಂತಿಯುತ ಹಾಗೂ ಬಿರುಸಿನ ಮತದಾನ ನಡೆಯಿತು.

ಬೆಳಗ್ಗೆ 7 ಗಂಟೆಯಿಂದಲೇ ಮತದಾನ ಪ್ರಕ್ರೀಯೆ ಪ್ರಾರಂಬಗೊಂಡಿದ್ದು,, ಮತದಾರರು ಬೆಳಗ್ಗಿನಿಂದಲೇ ಮತದಾನ ಕೇಂದ್ರಗಳಿಗೆ ಬಂದು ಸರತಿ ಸಾಲಿನಲ್ಲಿ ನಿಂತು ತಮ್ಮ ಮತದಾನ ಹಕ್ಕು ಚಲಾಯಿಸಿದರು. ನಗರ ಮತ್ತು ಗ್ರಾಮೀಣ ಪ್ರದೇಶಗಳೆರಡರಲ್ಲೂ ಮತದಾರರು ಶಾಂತಿಯುತವಾಗಿ ಮತ್ತು ಉತ್ಸಾಹದಿಂದ ತಮ್ಮ ಮತ ಚಲಾಯಿಸಿದರು. ಎಲ್ಲ ಮತಗಟ್ಟೆಗಳಲ್ಲಿ ಸೂಕ್ತ ಬಂದೋಬಸ್ತ ಮತ್ತು ಅಗತ್ಯ ವ್ಯವಸ್ಥೆಗಳನ್ನು ಕಲ್ಪಿಸಲಾಗಿತ್ತು. 

ಸಂಜೆ 5 ಗಂಟೆ ವೇಳೆಗೆ ಶೇ65ರಷ್ಟು ಮತದಾನವಾಗಿದ್ದು ಮತದಾನ ಮುಗಿಯುವವರೆಗೆ ಸುಮಾರು 70% ಮತದಾನವಾಗುವ ನಿರೀಕ್ಷೆಯನ್ನು ಇಟ್ಟುಕೊಳ್ಳಲಾಗಿದೆ.

ಮಳೆ ಅಡ್ಡಿ: ಬೆಳಿಗ್ಗೆಯಿಂದ ಮತದಾನ ಬಿರುಸಿನಿಂದ ನಡೆಯಿತಾದರೂ ಸಂಜೆ ವೇಳೆಗೆ ಮಳೆಗಾಳಿಯಿಂದಾಗಿ ಮತದಾನಕ್ಕೆ ಅಡ್ಡಿಯುಂಟಾಯಿತು. 

ಸಖಿ ಮತಗಟ್ಟೆ: ತಾಲೂಕಿನ ಹೆಬಳೆ ಗ್ರಾ.ಪಂ ವ್ಯಾಪ್ತಿಯ ಗಾಂಧೀ ನಗರ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಸಖಿ ಮತಗಟ್ಟೆಯುನ್ನು ಸ್ಥಾಪಿಸಲಾಗಿತ್ತು.ಈ ಮತಗಟ್ಟೆಯನ್ನು ನೀಲಿ ಬಣ್ಣ ಹಾಗೂ ತಳಿರು ತೋರಣಗಳಿಂದ ಸಿಂಗರಿಸಲಾಗಿತ್ತು. ಈ ಮತಗಟ್ಟೆಯ ಸಿಬ್ಬಂದಿಗಳೆಲ್ಲ ಮಹಿಳೆಯರಾಗಿದ್ದರು. ಇಲ್ಲಿ ಬರುವ ಮಹಿಳಾ ಮತದಾರರ ಮಕ್ಕಳಿಗೆ ಆಟ ಆಡಲು ಆಟಿಕೆ ಸಾಮಾನುಗಳ ವ್ಯವಸ್ಥೆ ಮಾಡಲಾಗಿತ್ತು.

ಶಾಸಕ ಮಾಜಿಶಾಸಕರಿಂದ ಮತಚಲಾವಣೆ; ಶಾಸಕ ಸುನಿಲ್ ನಾಯ್ಕ, ಮಾಜಿ ಶಾಸಕ ಮಾಂಕಾಳ ವೈದ್ಯ, ಜೆ.ಡಿ.ನಾಯ್ಕ ಸೇರಿದಂತೆ ಪ್ರಮುಖ ರಾಜಕೀಯ ಪಕ್ಷದ ಮುಖಂಡರು ತಮ್ಮ ಹಕ್ಕನ್ನು ಚಲಾಯಿಸಿದರು. 

ಮದೀನಕಾಲೋನಿ ಮುಹಿದ್ದೀನ್ ಸ್ಟ್ರೀಟನ ಮತಗಟ್ಟೆಯೊಂದರಲ್ಲಿ ತಾಂತ್ರಿಕ ತೊಂದರೆಯಿಂದಾಗಿ ಅರ್ದ ಗಂಟೆ ತಡವಾಗಿ ಮತದಾನ ಕಾರ್ಯ ಆರಂಭಗೊಂಡಿತು.


 

Read These Next

ಭಾಷಾ ಜ್ಞಾನದ ಕುರಿತು ಯಾರ ಬಗ್ಗೆಯೂ ಕೇವಲವಾಗಿ ಮಾತನಾಡಿಲ್ಲ: ಜೆ.ಪಿ.ಹೆಗ್ಡೆ ಸ್ವಷ್ಟನೆ

ಉಡುಪಿ: ಈವರೆಗಿನ ರಾಜಕೀಯ ಜೀವನದಲ್ಲಿ ಯಾರ ಮನಸ್ಸನ್ನೂ ನೋಯಿಸುವುದಾಗಲಿ ಅಥವಾ ಕೇವಲವಾಗಿ ಮಾತನಾಡುವುದನ್ನಾಗಲಿ ಮಾಡದೆ ಇರುವ ನಾನು ...