ಕಾರವಾರ ಮತದಾರರ ಜಾಗೃತಿ ರಥ ಸಂಚಾರ ಆರಂಭ

Source: so news | By Manju Naik | Published on 11th April 2019, 12:27 AM | Coastal News | Don't Miss |

         

ಕಾರವಾರ: ಉತ್ತರ ಕನ್ನಡ ಜಿಲ್ಲೆ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಮತದಾರರ ಜಾಗೃತಿ ಅಂಗವಾಗಿ ಜಿಲ್ಲಾ ಸ್ವೀಪ್ ಸಮಿತಿ ವತಿಯಿಂದ ರೂಪಿಸಿರುವ ಮತದಾರರ ಜಾಗೃತಿ ರಥ ಬುಧವಾರದಿಂದ ಜಿಲ್ಲೆಯಲ್ಲಿ ಸಂಚಾರ ಆರಂಭಿಸಿದೆ.
ಕಾರವಾರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಚಿತ್ತಾಕುಲ ಗ್ರಾಮ ಪಂಚಾಯ್ತಿಯಲ್ಲಿ ಬುಧವಾರ ಜಿಲ್ಲಾ ಪಂಚಾಯ್ತಿ ಮುಖ್ಯ ಯೋಜನಾಧಿಕಾರಿ ವಿ.ಎಂ.ಹೆಗಡೆ ಹಾಗೂ ಯೋಜನಾ ನಿರ್ದೇಶಕಿ ಶ್ಯಾಮಲಾ ಮಹಾಲೆ ಅವರು ಜಂಟಿಯಾಗಿ ಜಾಗೃತಿ ರಥಕ್ಕೆ ಚಾಲನೆ ನೀಡಿದರು.
ಜಾಗೃತಿ ರಥ ದಿನಾಂಕ 10-04-2019ರಿಂದ 20-04-2019ರವರೆಗೆ ಜಿಲ್ಲೆಯ ವಿವಿಧ ಪ್ರಮುಖ ಗ್ರಾಮ ಪಂಚಾಯ್ತಿಗಳ ವ್ಯಾಪ್ತಿಯಲ್ಲಿ ಸಂಚರಿಸಿ ಮತದಾರರಲ್ಲಿ ಜಾಗೃತಿ ಮೂಡಿಸಲಿದೆ.
ಮತದಾರರ ಜಾಗೃತಿ ಅಂಗವಾಗಿ ವಿಶೇಷವಾಗಿ ಅಲಂಕರಿಸಿರುವ ಈ ವಾಹನದಲ್ಲಿ ಜಿಲ್ಲಾ ಚುನಾವಣಾಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಮತದಾರರಿಗೆ ಇರುವ ಸೌಲಭ್ಯಗಳ ಬಗ್ಗೆ ಜಾಗೃತಿ ಮೂಡಿಸಿರುವ ಸಂದೇಶದ ವಿಡಿಯೋ ಪ್ರದರ್ಶನ ಇದ್ದು ಜಿಲ್ಲೆಯ ಸುಮಾರು 10ಕ್ಕೂ ಹೆಚ್ಚು ಗ್ರಾಮ ಪಂಚಾಯ್ತಿಗಳ, ಪ್ರಮುಖ ಗ್ರಾಮಗಳಿಗೆ ಭೇಟಿನೀಡಿ ಪ್ರದರ್ಶನ ನೀಡಲಿದೆ.
ಪ್ರತಿ ಗ್ರಾಮ ಪಂಚಾಯ್ತಿಗೂ ಜಾಗೃತಿ ರಥ ತೆರಳಿದಾಗ ಆ ಗ್ರಾಮದ ಜನರನ್ನು ಒಂದೆಡೆ ಸೇರಿಸಿ ಜಾಗೃತಿ ಚಿತ್ರೀಕರಣವನ್ನು ಪ್ರದರ್ಶಸಲು ವ್ಯವಸ್ಥೆ ಮಾಡಲು ಆಯಾ ಗ್ರಾಮ ಪಂಚಾಯ್ತಿ ಅಧಿಕಾರಿಗಳಿಗೆ ಜಿಲ್ಲಾ ಪಂಚಾಯ್ತಿಯಿಂದ ಸೂಚನೆ ನೀಡಲಾಗಿದೆ ಎಂದು ಜಿಲ್ಲಾ ಪಂಚಾಯ್ತಿ ಮುಖ್ಯ ಯೋಜನಾಧಿಕಾರಿ ವಿ.ಎಂ.ಹೆಗಡೆ ತಿಳಿಸಿದ್ದಾರೆ.

 

Read These Next

ಬರಿದಾಗುತ್ತಿರುವ ಇಂಧನದಿಂದ ಮುಂದಿನ ದಿನಗಳಲ್ಲಿ ಆತಂಕದ ಸ್ಥಿತಿ ನಿರ್ಮಾಣ-ಭಾರ್ಗವ ಕಳವಳ

ಭಟ್ಕಳ : ಪೆಟ್ರೋಲ್, ಡಿಸೇಲ್ ಸೇರದಂತೆ ನೈಸರ್ಗಿಕ ಇಂಧನಗಳನ್ನು ಇಂದು ಮೀತಿಯಲ್ಲದೆ ಬಳಸಲಾಗುತ್ತದೆ. ಸುಲಭವಾಗಿ ಸಿಕ್ಕುತ್ತಿರುವ ...

ಬೇಂಗ್ರೆ ಮಾವಿನಕಟ್ಟೆ ರಾ.ಹೆ.66ರಲ್ಲಿ  ಲಿಂಕ್ ರೋಡ್ ಗೆ ಆಗ್ರಹಿಸಿ ಸಹಾಯಕ ಆಯುಕ್ತರಿಗೆ ಮನವಿ

ಭಟ್ಕಳ: ತಾಲೂಕಿನ ಬೇಂಗ್ರೆ ಪಂಚಾಯತ್ ವ್ಯಾಪ್ತಿಯ ಬೆಂಗ್ರೆ ಮಾವಿನಕಟ್ಟೆ ಭಾಗದಲ್ಲಿ ರಾ.ಹೆ.66ರಲ್ಲಿ ಲಿಂಕ್ ರೋಡ್ ನಿರ್ಮಾಣಕ್ಕೆ ...

ಬೇಂಗ್ರೆ ಮಾವಿನಕಟ್ಟೆ ರಾ.ಹೆ.66ರಲ್ಲಿ  ಲಿಂಕ್ ರೋಡ್ ಗೆ ಆಗ್ರಹಿಸಿ ಸಹಾಯಕ ಆಯುಕ್ತರಿಗೆ ಮನವಿ

ಭಟ್ಕಳ: ತಾಲೂಕಿನ ಬೇಂಗ್ರೆ ಪಂಚಾಯತ್ ವ್ಯಾಪ್ತಿಯ ಬೆಂಗ್ರೆ ಮಾವಿನಕಟ್ಟೆ ಭಾಗದಲ್ಲಿ ರಾ.ಹೆ.66ರಲ್ಲಿ ಲಿಂಕ್ ರೋಡ್ ನಿರ್ಮಾಣಕ್ಕೆ ...