ಕಾರವಾರ: ಪಶ್ಚಿಮ ಪದವಿಧರ ಕ್ಷೇತ್ರದಲ್ಲಿ ಕುಬೇರಪ್ಪನವರಿಗೆ ಮತ ನೀಡಿ. ಎಚ್ ಕೆ ಪಾಟೀಲ್ ಮತಯಾಚನೆ.

Source: SO News | By Laxmi Tanaya | Published on 24th October 2020, 3:39 PM | Coastal News |

ಕಾರವಾರ: ‌ಅಕ್ಟೋಬರ್ 28ರಂದು ನಡೆಯುವ ಪಶ್ಚಿಮ ಪದವಿಧರ ಕ್ಷೇತ್ರದ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗೆ ಮತ ನೀಡುವಂತೆ ಕಾಂಗ್ರೆಸ್ ಮುಖಂಡ, ಮಾಜಿ ಸಚಿವ ಎಚ್ ಕೆ ಪಾಟೀಲ್ ಹೇಳಿದ್ದಾರೆ.

ಕಾರವಾರದ ಜಿಲ್ಲಾ ಪತ್ರಿಕಾ ‌ಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಿದ್ದ ಅವರು,  ಪಶ್ಚಿಮ ಪದವಿಧರ ಕ್ಷೇತ್ರ ತಮಗೆ ಅತ್ಯಂತ ಪ್ರಿಯವಾದ, ಭಾವನಾತ್ಮಕವಾದ ಕ್ಷೇತ್ರವಾಗಿದೆ.  ಈ ಕ್ಷೇತ್ರವನ್ನ ತಾವು ನಾಲ್ಕು ಬಾರೀ ಪ್ರತಿನಿಧಿಸಿದ್ದೇನೆ.  ಸಾರ್ವಜನಿಕ ಬದುಕಿನಲ್ಲಿ  ಎತ್ತರಕ್ಕೆ ಬೆಳೆಯಲು ಈ ಕ್ಷೇತ್ರ ಬಹುದೊಡ್ಡ ಕೊಡುಗೆ ನೀಡಿದೆ ಎಂದರು.

ಹೀಗಾಗಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಕುಬೇರಪ್ಪನವರಿಗೆ ಮತ ನೀಡಿ ಗೆಲ್ಲಿಸುವಂತೆ ಕರೆ ನೀಡಿದರು.

ಬಿಜೆಪಿ ಸರ್ಕಾರದ ವಿರುದ್ಧ ಆಕ್ರೋಶ.

ಈಗೀಗ ಚುನಾವಣೆಯಿಂದ ಚುನಾವಣೆಗೆ ವಾತಾವರಣ ಬದಲಾಗುತ್ತಿದೆ. ಹಿಂದಿನ‌ ಚುನಾವಣೆಗೆ ಹೋಲಿಸಿದರೇ, ಬಿಜೆಪಿ ಆಡಳಿತ ಜನರ ಮನಸ್ಸಿಗೆ ಘಾಸಿಯಾಗುವ ರೀತಿಯಲ್ಲಿ ಆಡಳಿತ ನಡೆಸಿದೆ. ಪ್ರಜಾಪ್ರಭುತ್ವದ ಮೌಲ್ಯಗಳನ್ನ ಧಿಕ್ಕರಿಸಿ ಸಂಸದೀಯ  ಸಂಸ್ಕೃತಿಗೆ ಬಿಜೆಪಿ ಪಕ್ಷ ನಡೆಸುತ್ತಿದೆ. ಹೀಗಾಗಿ ಪ್ರಜ್ಞಾವಂತ ಮತದಾರರು ಈ ಬೆಳವಣಿಗೆಯನ್ನ ಗಂಭೀರವಾಗಿ ಗಮನಿಸಬೇಕು ಎಂದು ಕಿವಿ ಮಾತು ಹೇಳಿದರು.

ಕೃಷಿ ವಿರೋಧಿ ಕಾನೂನನ್ನು ಪಾಸ್ ಮಾಡುವ ಸಲುವಾಗಿ ಸಂವಿಧಾನಾತ್ಮಕ ಮೌಲ್ಯಗಳನ್ನ ಧಿಕ್ಕರಿಸಿ, ರಾಷ್ಟ್ರದ ಸಂಸದೀಯ ವ್ಯವಸ್ಥೆ ಗೆ ಅಪಮಾನ ಮಾಡಿದ್ದಾರೆಂದು ಆಪಾದಿಸಿದ ಎಚ್ ಕೆ ಪಾಟೀಲ್,  ಸ್ವಿಜರ್ಲ್ಯಾಂಡ್ ನಿಂದ ಬ್ಲಾಕ್ ಮನಿ ತರ್ತೇವೆ. ಅದನ್ನ ನಿಮ್ಮ ಅಕೌಂಟ್ ಗೆ ಹಾಕ್ತೀವಿ ಅಂತ ಬಡವರಿಗೆ ಹೇಳಿದ್ರು. ಆದರೆ ಇದುವರೆಗೆ ಭರವಸೆ  ಈಡೇರಿಲ್ಲ ಎಂದರು.

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು, ಪ್ರತಿ ವರ್ಷ ಎರಡು ಕೋಟಿ ಉದ್ಯೋಗ ಸೃಷ್ಟಿ ಮಾಡ್ತೇವೆ ಎಂದಿದ್ದರು. ಆದರೆ ಉದ್ಯೋಗ ನಷ್ಟ ಮಾಡಿದ್ದಾರೆ.‌ ಬಿಜೆಪಿಯ ಮೋಸ, ಸುಳ್ಳುಗಾರಿಕೆಗೆ ಜನ ಬೇಸತ್ತಿದ್ದಾರೆ.  ಈಡಿ, ಸಿಬಿಐ, ಇನ್ಕಮ್ ಟ್ಯಾಕ್ಷ್ ದುರಪಯೋಗಪಡಿಸಿಕೊಂಡಿದ್ದಾರೆ.

ಬಿಹಾರದಲ್ಲಿ  ಸರ್ಕಾರ  ಬಂದ್ರೆ ವ್ಯಾಕ್ಸಿನ್ ಕೊಡುವ ಭರವಸೆಗೆ ಅರ್ಥವಿಲ್ಲ. ಶವವನ್ನ ಕೊಡುವುದಕ್ಕೆ  ಲಂಚಾವತಾರ ಆಗಿದೆ. ಇನ್ನು ವ್ಯಾಕ್ಸಿನ್ ಮಾತೆಲ್ಲಿ ಎಂದು ಪ್ರಶ್ನಿಸಿದ್ದಾರೆ. 

ಬಿಜೆಪಿ ಆಡಳಿತದಲ್ಲಿ ಯುವಕರು ಭೃಮ ನಿರಸನವಾಗಿದ್ದಾರೆ. ಕುಬೇರಪ್ಪನವರು ಹೋರಾಟಗಾರರು. ಹೀಗಾಗಿ ಅವರನ್ನ ಆಯ್ಕೆ ಮಾಡಿ. ಕುಬೇರಪ್ಪನವರಿಗೆ ವೋಟ್ ಮಾಡಿದರೇ, ತಮಗೆ, ಆರ್ ವಿ ದೇಶಪಾಂಡೆ ಅವರಿಗೆ ಬಲ ನೀಡಿದಂತಾಗಿದೆ ಎಂದು ಪಾಟೀಲ್ ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಮಾಜಿ ಶಾಸಕ ಸತೀಶ ಸೈಲ್, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಭೀಮಣ್ಣ ನಾಯ್ಕ, ಕಾಂಗ್ರೆಸ್ ಸೇವಾದಳದ ಆರ್ ಎಚ್ ನಾಯ್ಕ ಕುಮಟಾ, ಸಮೀರ್ ನಾಯ್ಕ, ಶಂಭು ಶೆಟ್ಟಿ ಇನ್ನಿತರರು ಉಪಸ್ಥಿತರಿದ್ದರು.

Read These Next

ಕಾರವಾರ: ಮತದಾನ ಜಾಗೃತಿ ಜಾಥಾ

ಪ್ರತಿಯೊಂದು ಮತವು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ನೀವು ನಿಮ್ಮ ಸುತ್ತಲಿನವರಿಗೂ ಮತದಾನ ಜಾಗೃತಿ ಮೂಡಿಸಬೇಕು ...