ಪ್ರವಾಸಿಗರನ್ನು ಕೈಬಿಸಿ ಕರೆಯುತ್ತಿದೆ, ಮುರ್ಡೇಶ್ವರ

Source: ಜಗದೀಶ ವಡ್ಡಿನ | By MV Bhatkal | Published on 19th May 2019, 6:45 PM | Coastal News | Special Report | Don't Miss | Tour |

ಕಾರವಾರ: ಮುರುಡೇಶ್ವರವು ಕರ್ನಾಟಕ ರಾಜ್ಯದ ಕರಾವಳಿ ಜಿಲ್ಲೆಯಾದ ಉತ್ತರ ಕನ್ನಡದ ಭಟ್ಕಳ ತಾಲೂಕಿನ ಒಂದು ಪುಣ್ಯ ಕ್ಷೇತ್ರ. ಮುರ್ಡೇಶ್ವರವು ಪೌರಾಣಿಕ, ಪ್ರಾಕೃತಿಕ ತಾಣ. ಕಡಲಂಚಿನಲ್ಲಿ ಬಟ್ಟಕುಗಿರಿ (ಕಂದಕು ಹಿಲ್) ಗುಡ್ಡದ ಮೇಲೆ ಮುರ್ಡೇಶ್ವರನ ದೊಡ್ಡ ದೇವಸ್ಥಾನ ಇದೆ. ಇಲ್ಲಿ ದೇವಾಲಯವನ್ನು ಸುತ್ತುವರೆದು ಅರಭಿ ಸಮುದ್ರದ ಜಲರಾಶಿ ನೋಡುಗರ ಕಣ್ಮನವನ್ನು ಸೆಳೆಯುತ್ತದೆ. ಏಷ್ಯಾದಲ್ಲಿಯೇ ಎರಡನೇ ದೊಡ್ಡದಾದ ಶಿವನ ಮೂರ್ತಿಯನ್ನು ಮತ್ತು ಜಗತ್ತಿನಲ್ಲಿಯೇ ಅತಿ ಎತ್ತರದ ರಾಜಗೋಪುರವಿದೆ. ಇದು ಧಾರ್ಮಿಕರನ್ನಷ್ಟೇ ತನ್ನತ್ತ ಸೆಳೆಯದೆ ವಿಹಾರಿಗಳನ್ನೂ ಆಕರ್ಷಿಸುತ್ತಿದೆ. ಇತ್ತೀಚೆಗೆ ಇಲ್ಲಿ ರಾಮ, ಲಕ್ಷ್ಮಣ ಮತ್ತು ಸೀತಾ ಪ್ರತಿಮೆಯ ರಾಮಮಂದಿರವನ್ನು ಮತ್ತು ಶನಿ ದೇವಾಲಯವನ್ನು ನಿರ್ಮಿಸಲಾಗಿದೆ. ಇಲ್ಲಿನ ಸಮುದ್ರದಲ್ಲಿ ಜಲ ಕ್ರೀಡೆ ಆಡುವುದೇ ಒಂದು ಅನನ್ಯ ಅನುಭವ. ಪೌರಾಣಿಕ ಸನ್ನಿವೇಶಗಳ ಪ್ರದರ್ಶನಾಲಯವನ್ನು ಹೊಂದಿರುವ ಮುರ್ಡೆಶ್ವರವು ಲಕ್ಷೋಪಲಕ್ಷ ಪ್ರವಾಸಿಗರನ್ನು ಕೈ ಬಿಸಿ ಕರೆಯುತ್ತಿದೆ. ರಾಷ್ಟ್ರೀಯ ಹೆದ್ದಾರಿಯಾದ ಮಂಗಳೂರಿನಿಂದ ಗೋವಾ ಹೆದ್ದಾರಿಯಿಂದ ಮುರುರ್ಡೇಶ್ವರವನ್ನು ಪ್ರವೇಶಿಸುವಾಗ ಮಹಾದ್ವಾರವು ಕಲಾತ್ಮಕವಾಗಿದ್ದು ದೇವಾಲಯದ ರಾಜ ಗೋಪುರದ ಮುಂದೆ ಎರಡು ಆನೆಗಳು ಪ್ರವಾಸಿಗರ ಮನವನ್ನು ಸೆಳೆಯುತ್ತವೆ. ಮಂಗಳೂರಿನಿಂದ ಗೋವಾ ಕೊಂಕಣ ರೇಲ್ವೆ ಮಾರ್ಗದ ಮಧ್ಯದಲ್ಲಿ ಮುರುಡೇಶ್ವರ ರೇಲ್ವೆ ನಿಲ್ದಾಣವಿದೆ.

ಪೌರಾಣಿಕ ಕತೆ : 
ಗೋಕರ್ಣದ ಆತ್ಮಲಿಂಗ ಸ್ಥಾಪನೆಯಾದಾಗಲೇ ರಾವಣನಿಂದ ಉತ್ತರ ಕನ್ನಡದ ಜಿಲ್ಲೆಯಲ್ಲಿ ನಾಲ್ಕು ಲಿಂಗಗಳು ಸ್ಥಾಪಿಸಲ್ಪಟ್ಟವು ಎಂದು ಪುರಾಣದ ಕತೆ. ಇನ್ನಿತರ ನಾಲ್ಕು ಕ್ಷೇತ್ರಗಳೆಂದರೆ ಮುರುಡೇಶ್ವರ, ಗುಣವಂತೇಶ್ವರ, ಧಾರೇಶ್ವರ ಮತ್ತು ಸಜ್ಜೇಶ್ವರ. ಮುರ್ಡೇಶ್ವರವು ಕಡಲದಂಡೆಯಲ್ಲಿದ್ದು ಪ್ರಾಚಿನಕಾಲದಿಂದಲೂ ಧಾರ್ಮಿಕತೆ ಹಾಗೂ ಐತಿಹಾಸಿಕ ಪ್ರಸಿದ್ಧ ತಾಣವಾಗಿದೆ.

ಶ್ರೀ ಕೈಲಾಸಾಧಿಪತಿಯಾದ ಶಂಕರನ ಪರಮ ಭಕ್ತನಾದ ರಾವಣನ ತಾಯಿ ಕೈಕಸೆ ಎಂಬವಳು ಈಕೆ ಒಂದು ದಿನ ಪಾರ್ಥಿವ ಲಿಂಗಪೂಜೆಯನ್ನು ಮಾಡಲು ನಿಶ್ಚಯಿಸಿ ಸಮುದ್ರದಲ್ಲಿ ಸ್ಥಾನ ಮಾಡಿ ಮಳಲು ಲಿಂಗವನ್ನು ಮಾಡಿಕೊಂಡು ಪೂಜಿಸುತ್ತಿದ್ದಳು. ಆಗ ಸಮುದ್ರದ ತೆರೆಗಳು ಲಿಂಗವನ್ನು ಕೊಚ್ಚಿಕೊಂಡು ಹೋದವು. ಕೈಕಸೆಯು ದುಃಖಿಸುತ್ತಾ ಮಗನಾದ ರಾವಣನನ್ನು ಕರೆದಳು. ಅವನು ಇದನ್ನು ನೋಡಿ ಎಲ್ಲವನ್ನೂ ಸಹಿಸಿ, ತಾಯಿ ದುಃಖಿಸಬೇಡ ಶಿವನನ್ನು ತಪಸ್ಸಿನಿಂದ ಒಲಿಸಿ ಅವನು ಪೂಜಿಸುವ ಆತ್ಮ ಲಿಂಗವನ್ನೇ ತಂದು ಕೊಡುತ್ತೇನೆಂದು ಸಮಾಧಾನ ಪಡಿಸಿ ಕೈಲಾಸಕ್ಕೆ ಹೋದನು.

ರಾವಣ ತನ್ನ ಶಕ್ತಿಯಿಂದ ಕೈಲಾಸವನ್ನೇ ಲಂಕೆಗೆ ಒಯ್ದರೆ ಹೇಗೆ ಎಂಬ ವಿಚಾರ ಮಾಡಿದ. ಆತ ತನ್ನ ಇಪ್ಪತ್ತು ತೋಳುಗಳ ಬಲದಿಂದ ಕೈಲಾಸವನ್ನು ಎತ್ತಲು ಕೈಲಾಸವು ಅಲುಗಾಡಿತು. ಪಾರ್ವತಿಯು ಭೀತಿಯಿಂದ ಶಿವನನ್ನು ಅಪ್ಪಿದಳು. ಶಿವನು ಪಾರ್ವತಿಯನ್ನು ಸಮಾಧಾನಪಡಿಸಿ ತನ್ನ ಎಡಗಾಲಿನಿಂದ ಭೂಮಿಗೆ ಒತ್ತಿದನು. ರಾವಣನ ಕೈಗಳು ಪರ್ವತದ ಬುಡದಲ್ಲಿ ಸಿಕ್ಕಿದವು. ಅವನು ಬಾಧೆಯಿಂದ ನರಳುತ್ತ ಹರನನ್ನು ಪ್ರಾರ್ಥಿಸಲು ಶಿವನು ಕಾಲನ್ನು ಎತ್ತಿದನು. ರಾವಣನು ನೋವಿಗೆ ಹೆದರದೇ ತಪಸ್ಸನ್ನು ಮಾಡಿದನು. ಅದಕ್ಕೂ ಶಿವ ಪ್ರಸನ್ನನಾಗದಿದ್ದಾಗ ತನ್ನ ತಲೆಯನ್ನೇ ಕಡಿದು ಬುರುಡೆಯನ್ನು ತಯಾರಿಸಿ ದೇಹದ ನಾಳಗಳಿಂದ ತಂತಿಯನ್ನು ಮಾಡಿ ಸಾಮಗಾನವನ್ನು ಹಾಡಿದನು. ರಾವಣನ ಸಾಮಗಾನಕ್ಕೆ ರುದ್ರ ಪ್ರಸನ್ನನಾಗಿ ಬೇಕಾದ ವರವನ್ನು ಬೇಡೆಂದನು. 

ರಾವಣನು ನಮಸ್ಕರಿಸಿ ಶಿವನೇ, ನಿನ್ನ ಅನುಗ್ರಹದಿಂದ ಸಕಲ ಭಾಗ್ಯಗಳೂ, ದೇವತೆಗಳೂ ನನ್ನ ದಾಸರಾಗಿರುವರು. ನನ್ನ ತಾಯಿಯು ನಿತ್ಯವೂ ಪೂಜಿಸಲು ನಿನ್ನಿಂದ ಪೂಜಿಸಲ್ಪಡುವ ಪ್ರಾಣಲಿಂಗವನ್ನು ಅನುಗ್ರಹಿಸು ಎಂದನು. ಭವನು ಆತ್ಮಲಿಂಗವನ್ನು ರಾವಣನಿಗೆ ಕೊಡುತ್ತ ಇದನ್ನು ಭೂಮಿಯಲ್ಲಿ ಎಲ್ಲಿಯೂ ಇಡದೇ ತೆಗೆದುಕೊಂಡು ಹೋಗಬೇಕು. ಭೂಮಿಯಲ್ಲಿ ಇಟ್ಟಿದ್ದಾದರೆ ಅದು ಅಲ್ಲೇ ಗಟ್ಟಿಯಾಗಿ ನಿಲ್ಲುತ್ತದೆ ಮತ್ತು ಅದು ಪುನಃ ಎತ್ತಲು ಸಾಧ್ಯವಿಲ್ಲ ಎಂದು ತಿಳಿಸಿ ಶಿವನು ಅಂತರ್ಧಾನನಾದನು. ರಾವಣನು ಹರ್ಷಿತನಾಗಿ ಹರನಿಗೆ ನಮಸ್ಕರಿಸಿ ಲಂಕೆಗೆ ಹೊರಟನು.

ಇದನ್ನೆಲ್ಲವನ್ನೂ ಲೋಕ ಸಂಚಾರಿಯಾದ ನಾರದನು ತಿಳಿದು ದೇವಲೋಕದಲ್ಲಿ ಸುಖಾಸೀನರಾಗಿರುವ ದೇವತೆಗಳನ್ನು ಕಂಡು “ಹೇ ದೇವತೆಗಳಿರಾ ರಾವಣನು ಕೈಲಾಸನಾಥನನ್ನು ತಪ್ಪಸಿನಿಂದ ಒಲಿಸಿಕೊಂಡು ಅವನ ಆತ್ಮಲಿಂಗವನ್ನು ಪಡೆದು ಲಂಕೆಗೆ ಹೋಗುತ್ತಿದ್ದಾನೆ. ಅವನು ಲಂಕೆಯನ್ನು ಸೇರಿದರೆ ಅದೇ ಕೈಲಾಸವಾಗುವುದು. ಅವನನ್ನು ದೇವ, ದಾನವ, ರಾಕ್ಷಸ, ಯಕ್ರ, ಕನ್ನರ ಮನುಷ್ಯನಿಂದ ಜಯಿಸಲು ಸಾಧ್ಯವಿಲ್ಲ. ನಿವು ಕಾಲ ಕಳೆಯದೇ ಮಾರ್ಗ ಮಧ್ಯದಲ್ಲಿ ಅವನನ್ನು ತಡೆದು ಅವನ ಕೈಯಿಂದ ಆತ್ಮ ಲಿಂಗವನ್ನು ತಪ್ಪಿಸಿ ಭೂಮಿಯಲ್ಲಿ ಇಡುವಂತೆ ಮಾಡಿದರೆ ಪುನಃ ಆ ದುಷ್ಟನಿಗೆ ಅದು ಸಿಗುವುದಿಲ್ಲವೆಂದು ಶಿವನೇ ಹೇಳಿದ್ದಾನೆ. ಬೇಗನೇ ಕಾರ್ಯ ತತ್ಪರರಾಗಿ ಎಂದು ಹೇಳಿ ನಾರದರು ಹೊರಟು ಹೋದರು.

ದೇವತೆಗಳು ಗಾಬರಿಯಿಂದ ಏನೊಂದು ತಿಳಿಯದೇ ತಮ್ಮನ್ನು ಯಾವಾಗಲೂ ಕಷ್ಟದಲ್ಲಿ ರಕ್ಷಿಸುವ ಮಹಾ ವಿಷ್ಣುವಿನ ಸ್ತೋತ್ರ ಮಾಡಿ ಅವನಿಗೆ ಎಲ್ಲವನ್ನೂ ಅರಿಕೆ ಮಾಡಿದರು. ವಿಷ್ಣುವು ಹೊಸ ಸಂಕಟವು ಪ್ರಾಪ್ತವಾಯಿತಲ್ಲಾ ಎಂದು ಚಿಂತಿಸಿ ಅದಕ್ಕೊಂದು ಪರಿಹಾರವನ್ನು ಯೋಚಿಸಿ ಗಣಪತಿಯನ್ನು ಕರೆದು ರಾವಣನು ನಿನ್ನನ್ನು ಪೂಜಿಸದೇ ನಿನ್ನ ತಂದೆಯನ್ನು ತಪಸ್ಸಿನಿಂದ ಒಲಿಸಿಕೊಂಡು ಮನೆಗೆ ಹೋಗುತ್ತಿದ್ದಾನೆ. ಅವನಿಗೆ ನೀನು ವಿಘ್ನವನ್ನುಂಟು ಮಾಡು. ನೀನು ರಾವಣನಿಂದ ಆತ್ಮಲಿಂಗವನ್ನು ಪಡೆದು ಭೂಮಿಯಲ್ಲಿ ಇರಿಸಬೇಕೆಂದು ತಿಳಿಸಿದನು. ದೇವತೆಗಳೂ ಭಕ್ತಿಯಿಂದ ಗಣಪತಿಯನ್ನು ಪೂಜಿಸಿ ಸ್ತೋತ್ರ ಮಾಡಿ ನಮ್ಮನ್ನು ಉದ್ಧರಿಸಬೇಕೆಂದು ಬೇಡಿಕೊಂಡರು.

ಗಣಪತಿಯು ಪಶ್ಚಿಮ ಸಮುದ್ರ ತೀರದಲ್ಲಿರುವ ಗೋಕರ್ಣದ ಸಮೀಪದಲ್ಲಿ ರಾವಣನು ಬರುತ್ತಿರುವುದನ್ನು ಕಂಡ ಬ್ರಹ್ಮಚಾರಿಯ ರೂಪವನ್ನು ಧರಿಸಿ ಕಬ್ಬು ತಿನ್ನುತ್ತಿದ್ದನು. ಆಕಾಲಕ್ಕೆ ಸರಿಯಾಗಿ ವಿಷ್ಣುವು ತನ್ನ ಸುದರ್ಶನ ಚಕ್ರದಿಂದ ಮರೆಮಾಡಿ ಸಂಧ್ಯಾಕಾಲವೆಂಬ ಭ್ರಮೆಯನ್ನು ರಾವಣನಿಗೆ ಉಂಟು ಮಾಡಿದನು. ರಾವಣನು ಬ್ರಾಹ್ಮಣನೂ, ಜ್ಞಾನಿಯೂ, ಕರ್ಮನಿಷ್ಟನೂ ಆದ್ದರಿಂದ ಸೂರ್ಯನು ಅಸ್ತವಾದದ್ದನ್ನು ನೋಡಿ ಸಂಧ್ಯಾವಂದನೆಯನ್ನು  ಮಾಡಬೇಕು. ಆದರೆ ಲಿಂಗವನ್ನು ಭೂಮಿಯ ಮೇಲೆ ಇಡುವಂತಿಲ್ಲ, ಏನು ಮಾಡಲಿ? ಎಂದು ಆಲೋಚಿಸುತ್ತಿರುವಾಗ ವಟುವೇಷಧಾರಿಯಾದ ಗಣಪತಿಯನ್ನು ಕಂಡನು.

ಮುಗುಳು ನಗೆಯಿಂದ ಅವನನ್ನು ಹತ್ತಿರ ಕರೆದು ಬಾಲಕನೆ, ಈ ಲಿಂಗವನ್ನು ಸ್ವಲ್ಪ ಹಿಡಿದುಕೊಂಡಿರು ನಾನು ಸಂಧ್ಯಾವಂದನೆಯನ್ನು ಮುಗಿಸಿ ಬರುತ್ತೆನೆ. ಅಲ್ಲಿಯವರೆಗೆ ಭೂಮಿಯ ಮೇಲೆ ಇದನ್ನು ಇಡಬಾರದು, ಜೋಕೆ ಎಂದನು. ಗಣಪತಿಯು ಲಿಂಗವನ್ನು ತೆಗೆದುಕೊಂಡು ಇದು ಭಾರವಾಗಿದೆ, ನನ್ನಿಂದ ಬಹಳ ಹೊತ್ತು ಹಿಡಿದುಕೊಳ್ಳಲು ಸಾಧ್ಯವಿಲ್ಲ ಮೂರು ಬಾರಿ ನಿನ್ನನ್ನು ಕರೆಯುತ್ತೇನೆ, ನೀನು ಬರಬೇಕು, ಬರದಿದ್ದಲ್ಲಿ ಇದನ್ನು ಭೂಮಿಯ ಮೇಲೆ ಇಡುತ್ತೇನೆ, ಎಂದು ಹೇಳಲು ರಾವಣನು ಅದಕ್ಕೆ ಒಪ್ಪಿಕೊಂಡನು ರಾವಣನು ಶೌಚವನ್ನು ಪೂರೈಸಿ ಕಾಲು, ತೊಳೆಯುತ್ತಿರುವಾಗ ಒಮ್ಮೆ ರಾವಣಾ ಎಂದು ಕರೆದನು, ಅಘ್ರ್ಯವನ್ನು ಕೊಡುತ್ತಿರುವಾಗ ರಾವಣಾ ಎಂದು ಕರೆದನು ಜಪವನ್ನು ಪ್ರಾರಂಭಿಸುತ್ತಿರುವಾಗ ಓ ರಾವಣಾ ಎಂದು ಮೂರನೇ ಬಾರಿ ಕೂಗಿದನು. ರಾವಣನು ಓ ಬಂದೆ ಎಂದು ಕೂಗುತ್ತ ಓಡಿ ಬರುವುದೊಳಗಾಗಿ ಲಿಂಗವನ್ನು ಭೂಮಿಯ ಮೇಲೆ ಶಿವಸ್ಮರಣೆ ಮಾಡುತ್ತ ಇಟ್ಟನ್ನು.

ರಾವಣನು ಸಿಟ್ಟಿನಿಂದ ಗಣಪತಿಯ ನೆತ್ತಿಯ ಮೇಲೆ ಮುಷ್ಠಿಯಿಂದ ಗುದ್ದಿದನು, ಬಲಿಷ್ಟವಾದ ರಾವಣನ ಗುದ್ದಿನಿಂದ ನೆತ್ತಿಯ ಮೇಲೆ ಒಂದು ಕುಳಿಯಾಗಿ ಹೊಟ್ಟೆಯು ಕುಸಿಯಿತು. ರಾವಣನು ತನ್ನ ಶಕ್ತಿಯ ಗರ್ವದಿಂದ ಲಿಂಗವನ್ನು ಕೀಳಲು ಪ್ರಯತ್ನಿಸಿದನು. ಆದರೂ ಅದನ್ನು ಕೀಳಲು ಅವನಿಂದ ಆಗಲಿಲ್ಲ. ಆಗ ತನ್ನ ತಪಸ್ಸು ನಿಷ್ಟವಾದ ಸಿಟ್ಟಿನಿಂದ ಅಲ್ಲಿಯೇ ಇದ್ದ ಆತ್ಮಲಿಂಗವನ್ನು ಶಕ್ತಿಯಿಂದ ಎಳೆಯುತ್ತಾನೆ. ಕೈಗೆ ಬಂದ ಆತ್ಮಲಿಂಗದ ಭಾಗಗಳನ್ನು ನಾಲ್ಕು ದಿಕ್ಕಿಗೆ ಬೀಸಿದನು. ಅದುವೆ ಸಜ್ಜೇಶ್ವರ, ಗುಣವಂತೇಶ್ವರ, ಧಾರೇಶ್ವರ, ಹಾಗೂ ಅಂತಿಮವಾಗಿ, ರಾವಣನು ಬಟ್ಟಕು-ಗಿರಿ (ಕಂದಕು ಹಿಲ್) ನಲ್ಲಿ ಶ್ರೀಧೇಶ್ವರ ಎಂಬ ಸ್ಥಳಕ್ಕೆ ಆತ್ಮ ಲಿಂಗವನ್ನು ಒಳಗೊಂಡ ಬಟ್ಟೆಯನ್ನು ಎಸೆದರು. ಶ್ರೀದೇಶ್ವರನನ್ನು ಮುರುಡೇಶ್ವರ ಎಂದು ಮರುನಾಮಕರಣ ಮಾಡಲಾಗಿದೆ.

ಇಂದಿಗೂ ಮುರುಡೇಶ್ವರದಲ್ಲಿ ಹಾಡುವಳ್ಳಿಯ ಸಾಳ್ವ ದೊರೆಗಳು ನಿರ್ಮಿಸಿದ ಬಸದಿ, ತೀರ್ಥಂಕರರ ಮೂರ್ತಿಗಳು, ಹಲವು ದೇವಾಲಯಗಳು, ಕೆರೆ, ವೀರರ ಮನೆ, ವೀರಗಲ್ಲುಗಳು, ಮರದಿಂದ ತಯಾರಿಸಿದ 16 ಮಾಸತಿಯರ ಕುರುಹುಗಳು, ಇವೆಲ್ಲಕ್ಕೂ ಕಿರೀಟವಿಟ್ಟಂತೆ ಸುಂದರ ನೆಲೆಯಲ್ಲಿ ಶೋಭಿಸುತ್ತಿರುವ ಮುರುಡೇಶ್ವರ ದೇವಾಲಯ ಹಾಗೂ ಹಳೆಯ ದೇವಾಲಯಗಳ ಅವಶೇಷಗಳನ್ನೆಲ್ಲ ಕಾಣಬಹುದು.

ಪ್ರಮುಖ ಆಕರ್ಷಣೆಗಳು:
ಮುರುಡೇಶ್ವರ ದೇವಸ್ಥಾನ ಕಂದುಕಾ ಬೆಟ್ಟದ ಮೇಲೆ ಕಟ್ಟಲಾಗಿದೆ. ಇದು ಮೂರು ಕಡೆಗಳಲ್ಲಿ ಅರೇಬಿಯನ್ ಸಮುದ್ರದ ನೀರಿನಿಂದ ಆವೃತವಾಗಿದೆ. ರಾಜ ಗೋಪುರ 20 ಅಂತಸ್ತಿನ ಗೋಪುರವನ್ನು ದೇವಸ್ಥಾನದಲ್ಲಿ ನಿರ್ಮಿಸಲಾಗಿದೆ. ದೇವಸ್ಥಾನದ ಅಧಿಕಾರಿಗಳು ರಾಜ ಗೋಪುರದಿಂದ 123 ಅಡಿ ಎತ್ತರದ ಶಿವನ ವಿಗ್ರಹದ ನೋಟವನ್ನು ನೀಡುವ ಲಿಫ್ಟ ಅನ್ನು ಸ್ಥಾಪಿಸಿದ್ದಾರೆ. ಬೆಟ್ಟದ ಕೆಳಭಾಗದಲ್ಲಿ ರಾಮೇಶ್ವರ ಲಿಂಗ ಕೂಡ ಇದೆ. ಶ್ರೀ ಅಕ್ಷಯಗುಣದ ವಿಗ್ರಹದ ಬಳಿ ಶನೇಶ್ವರ ದೇವಸ್ಥಾನವನ್ನು ನಿರ್ಮಿಸಲಾಗಿದೆ. ಎರಡು ಜೀವ ಗಾತ್ರದ ಆನೆಗಳು ದಾರಿಗಳಲ್ಲಿ ಕಾವಲುಗಾರರಾಗಿ ನಿಂತಿವೆ. ರಾಜಾ ಗೋಪುರದ ಎತ್ತರ 237.5 ಅಡಿ ಭಗವಾನ್ ಶಿವನ ಮೂರ್ತಿಯು ದೇವಸ್ಥಾನದ ಸಂಕೀರ್ಣದಲ್ಲಿದೆ. ಇದು ವಿಶ್ವದಲ್ಲಿ ಶಿವನ ಎರಡನೇ ಎತ್ತರದ ಪ್ರತಿಮೆಯಾಗಿದೆ. ಪ್ರತಿಮೆಯು 123 ಅಡಿಗಳು (37 ಮೀ) ಎತ್ತರವಿದೆ. ಶಿವಮೊಗ್ಗದ ಕಾಶಿನಾಥ್ ಮತ್ತು ಹಲವಾರು ಶಿಲ್ಪಿಗಳು ಈ ಪ್ರತಿಮೆಯನ್ನು ಎರಡು ವರ್ಷಗಳಲ್ಲಿ ನಿರ್ಮಿಸಿದ್ದಾರೆ. ಉದ್ಯಮಿ ಮತ್ತು ಲೋಕೋಪಕಾರಿ ಡಾ. ಆರ್. ಎನ್. ಶೆಟ್ಟಿ ಆರ್ಥಿಕ ಸಹಾಯ ಮಾಡಿದ್ದಾರೆ.

ಮುರುಡೇಶ್ವರದ ಪಾರ್ಕಿನಲ್ಲಿ ಅರ್ಜುನನು ಭಗವಾನ್ ಕೃಷ್ಣನಿಂದ ಗೀತೊಪದೇಶ ಪಡೆಯುವ ಪ್ರತಿಮೆ, ರಾವಣನಿಂದ ಆತ್ಮಲಿಂಗವನ್ನು ಗಣಪತಿಯು ಪಡೆಯುವ ಪ್ರತಿಮೆ, ಭಗೀರಥನ ಪ್ರತಿಮೆ, ಹಾಗೂ ಸೂರ್ಯನ ರಥದ ಪ್ರತಿಮೆಗಳಿವೆ.

ಈ ದೇವಸ್ಥಾನವನ್ನು ಸಂಪೂರ್ಣವಾಗಿ ಆಧುನಿಕರಿಸಲಾಗಿದೆ. ಆದರೆ ಗರ್ಭಗುಡಿಯು ಹಿಡಿತವನ್ನು ಉಳಿಸಿಕೊಂಡಿದೆ. ಮುಖ್ಯ ದೇವರಾದ ಶ್ರೀ ಮೃದುಲಿಂಗ, ಇದನ್ನು ಮುರುಡೇಶ್ವರ ಎಂದೂ ಕರೆಯುತ್ತಾರೆ. ಈ ಲಿಂಗದ ಮೂಲ ಆತ್ಮಲಿಂಗದ ಒಂದು ಭಾಗವೆಂದು ನಂಬಲಾಗಿದೆ ಮತ್ತು ಇದು ನೆಲದ ಮಟ್ಟಕ್ಕಿಂತ ಎರಡು ಅಡಿಗಳಷ್ಟು ಎತ್ತರದಲ್ಲಿದೆ. ಅಭಿಷೇಕ್, ರುದ್ರಭಿಶೇಕ, ರಥೋತ್ಸವ ಮುಂತಾದ ವಿಶೇಷ ಸೇವೆಗಳನ್ನು ಭಕ್ತರು ನಿರ್ವಹಿಸುತ್ತಾರೆ. ಮುರುಡೇಶ್ವರದ ಸಮುದ್ರ ಮಧ್ಯದಲ್ಲಿ ಸೂರ್ಯಸ್ಥವು ಪ್ರವಾಸಿಗರ ಮನವನ್ನು ಸೇಳೆಯುತ್ತದೆ. ಮುರ್ಡೇಶ್ವರವು ಪ್ರತಿ ದಿನ ಲಕ್ಷೋಪಲಕ್ಷ ಪ್ರವಾಸಿಗರನ್ನು ಕೈ ಬಿಸಿ ಕರೆಯುತ್ತಿದೆ.

ಲೇಖಕರು: ಜಗದೀಶ ವಡ್ಡಿನ, ಗ್ರಂಥಪಾಲಕರು, ಶಿವಾಜಿ ಶಿಕ್ಷಣ ಮಹಾವಿದ್ಯಾಲಯ, ಬಾಡ, ಕಾರವಾರ.

Read These Next

ಅಂಕೋಲಾದ ಅನ್ನದಂಗಳದಲ್ಲಿ ಮಾತುಕತೆ ಕಾರ್ಯಕ್ರಮ. ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಉದ್ಘಾಟನೆ. ಕೃಷಿಕರೊಂದಿಗೆ ಸಂವಾದ

ಕಾರವಾರ : ರೈತರ ಏಳಿಗೆಯ ಜೊತೆ ಕೃಷಿಯಲ್ಲಿ ದೇಶ ಸ್ವಾವಲಂಬಿಯಾಗುವ ದೃಷ್ಟಿಯಲ್ಲಿ ಕೇಂದ್ರ ಸರ್ಕಾರವು ರೈತ ಸ್ನೇಹಿ ಸರ್ಕಾರವಾಗಿ ...

ಶಾಲಾ ಕಾಲೇಜುಗಳಲ್ಲಿ ಕೋವಿಡ್-19 ಮಾರ್ಗಸೂಚಿ ಪಾಲನೆ. ಲೋಕಾಯುಕ್ತ ಪೊಲೀಸ್ ಅಧೀಕ್ಷಕರಿಂದ ಪರಿಶೀಲನೆ.

ಉಡುಪಿ : ಕೋವಿಡ್-19 ಹರಡುವುದನ್ನು ತಡೆಗಟ್ಟಲು ಸರ್ಕಾರದ ಮಾರ್ಗಸೂಚಿಗಳನ್ನು ಶೈಕ್ಷಣಿಕ ಸಂಸ್ಥೆಗಳಲ್ಲಿ ಪಾಲನೆ ಮಾಡುತ್ತಿರುವ ...

ಭಾರತ ವಿಶ್ವಕ್ಕೆ ಸಿರಿ ಧಾನ್ಯ ರಫ್ತು ಮಾಡುವ ಹಬ್ ಆಗಲಿದೆ - ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ

ಉಡುಪಿ : ಮುಂದಿನ ಎರಡು ವರ್ಷದ ಅವಧಿಯಲ್ಲಿ ದೇಶದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಸಿರಿಧಾನ್ಯಗಳನ್ನು ಉತ್ಪಾದನೆ ಮಾಡುವುದರ ಜೊತೆಗೆ, ...

ಭಟ್ಕಳ ಮಿನಿ ವಿಧಾನಸೌಧದಲ್ಲಿ ಕಲ್ಲೇರಿ ನಿಂತರಷ್ಟೇ ಕೆಲಸ ! ಮರಿಪುಢಾರಿಗಳ ಕಾಟ ತಾಳಲಾರದೆ ಒಳಗಡೆಗೂ ಬಿದ್ದಿದೆ ಬೀಗ; ಸದ್ದಿಲ್ಲದೇ ಸೊರಗುತ್ತಿದೆ ಕನಸಿನ ಸೌಧ

ಇದು ಜನರ ಅಲೆದಾಟವನ್ನು ತಪ್ಪಿಸಿ ಒಂದೇ ಸೂರಿನಡಿ ಜನರಿಗೆ ಸೇವೆ ನೀಡಲು ರು.10ಕೋ.ಗೂ ಅಧಿಕ ಹಣವನ್ನು ವ್ಯಯಿಸಿ ಕಟ್ಟಲಾದ ಭಟ್ಕಳ ಮಿನಿ ...

ಜಾನುವಾರು ಸಾಗಾಟಕ್ಕೆ ನಿರಂತರ ತಡೆ ಹಿನ್ನೆಲೆ; ಬಕ್ರೀದ್ ಹಬ್ಬಕ್ಕಾಗಿ ಭಟ್ಕಳಕ್ಕೆ ಬಂದ ಸಾವಿರಾರು ಕುರಿಗಳು; ಭಟ್ಕಳದಲ್ಲಿ ಬೀಡುಬಿಟ್ಟ ಪರ ಜಿಲ್ಲೆಗಳ ಕುರಿಗಾಹಿಗಳು

ಇಸ್ಲಾಮ್ ಧರ್ಮೀಯರ ಪವಿತ್ರ ಹಬ್ಬ ಬಕ್ರೀದ್‍ಗೆ 3 ದಿನಗಳಷ್ಟೇ ಬಾಕಿ ಇದೆ. ಜಾನುವಾರು ಸಾಗಾಟಕ್ಕೆ ಪೊಲೀಸರು ನಿರಂರವಾಗಿ ತಡೆಯೊಡ್ಡಿರುವ ...

ರಾಜ್ಯದಲ್ಲಿ ಕೊರೊನಾ, ಲಸಿಕೆ ಪೂರೈಕೆ ಸಂಕಟದ ನಡುವೆ ಡಯಾಲಿಸೀಸ್ ರೋಗಿಗಳಿಗೂ ಆತಂಕ ತಂದ ಸರಕಾರ; ಸೇವೆಯಿಂದ ಹಿಂದೆ ಸರಿಯಲು ಬಿ.ಆರ್.ಶೆಟ್ಟಿ ಫೌಂಡೇಶನ್ ನಿರ್ಧಾರ

ಸರಿಯಾದ ಪೂರ್ವ ತಯಾರಿ, ವ್ಯವಸ್ಥಿತ ಕಾರ್ಯಯೋಜನೆ ಇಲ್ಲದೇ ಕೊರೊನಾ ಸೋಂಕು ನಿಯಂತ್ರಣ, ಲಸಿಕೆ ಪೂರೈಕೆ ಕೆಲಸ ಕಾರ್ಯಗಳ ನಡುವೆ ಬಿದ್ದು ...

ಆಸ್ಪತ್ರೆಗಳಿಗೆ ಧಾವಂತ, ಬೃಹತ್ ಸಮಾವೇಶಗಳಿಂದ ಭಾರತದ ಕೋವಿಡ್ ಸ್ಥಿತಿ ಇನ್ನಷ್ಟು ಉಲ್ಬಣ, ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಕೆ

ಭಾರತದಲ್ಲಿ ಜನರು ಅನಗತ್ಯವಾಗಿ ಆಸ್ಪತ್ರೆಗಳಿಗೆ ಧಾವಿಸುವ ಮೂಲಕ ಬೃಹತ್ ಸಮಾವೇಶಗಳು, ಹೆಚ್ಚು ಸಾಂಕ್ರಾಮಿಕವಾಗಿರುವ ರೂಪಾಂತರಿತ ...

ಅಂಕೋಲಾದ ಅನ್ನದಂಗಳದಲ್ಲಿ ಮಾತುಕತೆ ಕಾರ್ಯಕ್ರಮ. ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಉದ್ಘಾಟನೆ. ಕೃಷಿಕರೊಂದಿಗೆ ಸಂವಾದ

ಕಾರವಾರ : ರೈತರ ಏಳಿಗೆಯ ಜೊತೆ ಕೃಷಿಯಲ್ಲಿ ದೇಶ ಸ್ವಾವಲಂಬಿಯಾಗುವ ದೃಷ್ಟಿಯಲ್ಲಿ ಕೇಂದ್ರ ಸರ್ಕಾರವು ರೈತ ಸ್ನೇಹಿ ಸರ್ಕಾರವಾಗಿ ...

ಕೋಲಾರ:ವಿವಿಧ ಸಂಘಟನೆಗಳ ವತಿಯಿಂದ ಜಾನಪದ ಬೆಳದಿಂಗಳು ಪ್ರಯುಕ್ತ ತತ್ವಪದ ಮತ್ತು ಜಾನಪದ ಗಾಯನ ಕಾರ್ಯಕ್ರಮ

 ಪ್ರತಿ ಹಳ್ಳಿಗಳಲ್ಲಿರುವ ಕಲಾವಿದರುಗಳನ್ನು ಇಲಾಖೆ ಮತ್ತು ಸರ್ಕಾರ ಗುರ್ತಿಸಿ ಪ್ರೋತ್ಸಾಹಿಸಬೇಕಾಗಿದೆ - ಜಿ. ಮುನಿಕೃಷ್ಣ