ವಿಶ್ವಕರ್ಮ ಸರ್ವ ಜನಾಂಗದ ಆರಾಧ್ಯ ದೈವ-ಬಿ.ಎಸ್‌.ರಾಜೀವ್‌

Source: sonews | By Staff Correspondent | Published on 17th September 2019, 6:16 PM | Coastal News |

ಶ್ರೀನಿವಾಸಪುರ: ವಿಶ್ವಕರ್ಮ ಸರ್ವ ಜನಾಂಗದ ಆರಾಧ್ಯ ದೈವವಾಗಿದ್ದಾರೆ ಎಂದು ತಹಶೀಲ್ದಾರ್‌ ಬಿ.ಎಸ್‌.ರಾಜೀವ್‌ ಹೇಳಿದರು.

ಪಟ್ಟಣದ ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ತಾಲ್ಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಏರ್ಪಡಿಸಿದ್ದ ವಿಶ್ವಕರ್ಮ ಜಯಂತಿ ಸಮಾರಂಭದಲ್ಲಿ ಪುರಾಣ ಪುರುಷ ವಿಶ್ವಕರ್ಮರ ಭಾವ ಚಿತ್ರಕ್ಕೆ ಮಾಲಾರ್ಪಣೆ ಮಾಡಿ ಮಾತನಾಡಿ, ಶಸ್ತ್ರಾಸ್ತ್ರ ತಯಾರಿಕೆಯಲ್ಲಿ ಪರಿಣತಿ ಪಡೆದಿದ್ದ ವಿಶ್ವಕರ್ಮ ದೇವತೆಗಳಿಗೆ ಅಗತ್ಯಾದ ಆಯುಧಗಳನ್ನು ಮಾಡಿಕೊಡುತ್ತಿದ್ದರು. ಅವರ ದಿವ್ಯಾಸ್ತ್ರಗಳು ಶತ್ರು ಸಂಹಾರದಲ್ಲಿ ಪ್ರಮುಖ ಪಾತ್ರ ವಹಿಸಿದ್ದವು ಎಂಬ ಅಂಶ ಪೌರಾಣಿಕ ಕತೆಗಳಿಂದ ತಿಳಿದುಬರುತ್ತದೆ ಎಂದು ಹೇಳಿದರು.

ಕಲೆಗೆ ದೇಶ ಭಾಷೆಗಳ ಹಂಗು ಇರುವುದಿಲ್ಲ. ಶಿಲ್ಪಿಗಳು ಜಗತ್ತಿನ ಜನರ ಗೌರವಕ್ಕೆ ಪಾತ್ರರಾಗಿದ್ದಾರೆ. ವಿಶ್ವಕರ್ಮರನ್ನು ಯಾವುದೇ ಒಂದು ಸಮುದಾಯಕ್ಕೆ ಸೀಮಿತಗೊಳಿಸಬಾರದು. ಮಹಾನ್‌ ವ್ಯಕ್ತಿಗಳು ಸಮಾಜದ ಆಸ್ತಿ. ದೇವ ಶಿಲ್ಪಿ ವಿಶ್ವಕರ್ಮ ಸರ್ವಜನ ವಂದಿತರಾಗಿದ್ದಾರೆ ಎಂದು ಹೇಳಿದರು.

ಶಿರಸ್ತೇದಾರ್‌ ನಾರಾಯಣಸ್ವಾಮಿ, ಹಿರಿಯ ಕಂದಾಯ ನಿರೀಕ್ಷಕ ಬಿ.ವಿ.ಮುನಿರೆಡ್ಡಿ, ತಾಲ್ಲೂಕು ವಿಶ್ವಕರ್ಮ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಕೆ.ಮೋಹನಾಚಾರಿ  ವಿಶ್ವಕರ್ಮರ ಭಾವ ಚಿತ್ರಕ್ಕೆ ಪುಷ್ಪಾರ್ಪಣೆ ಮಾಡಿದರು.

ನಿವೃತ್ತ ತಹಶೀಲ್ದಾರ್‌ ಶೀನಿವಾಸಯ್ಯಶೆಟ್ಟಿ, ಗ್ರಾಮ ಲೆಕ್ಕಾಧಿಕಾರಿ ಹರೀಶ್‌, ಶ್ರೀನಿವಾಸಯ್ಯ, ತಾಲ್ಲೂಕು ವಿಶ್ವಕರ್ಮ ಕ್ಷೇಮಾಭಿವೃದ್ಧಿ ಸಂಘದ ಪದಾಧಿಕಾರಿಗಳಾದ ರವಿಚಂದ್ರಾಚಾರಿ. ರಾಮಚಂದ್ರಾಚಾರಿ, ರತ್ನಾಚಾರಿ, ಕೃಷ್ಣಮೂರ್ತಿ, ಶ್ರಿಕಂಠಾಚಾರಿ, ಮುಖಂಡರಾದ ಕೆ.ಎಸ್‌.ಶ್ರೀನಿವಾಸಾಚಾರಿ, ಎಸ್‌.ಮಂಜುನಾಥ್‌, ಕೆ.ಎಸ್‌.ಮಂಜುನಾಥ್‌, ಚಂದ್ರಮೌಳಿ ಇದ್ದರು

ವರದಿ ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ

Read These Next

ಕರ್ನಾಟಕದ ಅನ್ನ ಉಂಡಿದ್ದೇನೆ, ಕರ್ಮಭೂಮಿಯ ಋಣ ತೀರಿಸಬೇಕು: ಡಾ.ಅಂಜಲಿ ನಿಂಬಾಳ್ಕರ್

ಕಾರವಾರ: ಕರ್ನಾಟಕದ ಅನ್ನ ಉಂಡಿದ್ದೇನೆ, ಕರ್ಮಭೂಮಿಯ ಋಣ ತೀರಿಸಬೇಕು. ಹಾಗಾಗಿ ಉತ್ತರ ಕನ್ನಡಕ್ಕಾಗಿ ಕೆಲಸ ಮಾಡುವೆ ಎಂದು ಕಾಂಗ್ರೆಸ್ ...

ಜೆಡಿಎಸ್ ಮತ ಬುಟ್ಟಿಗೆ ’ಕೈ’ ಹಾಕಿದ ಅಂಜಲಿ ತಾಯಿ ; ಪದ್ಮಶ್ರೀ ಪುರಸ್ಕೃತ ಸುಕ್ರಿ ಬೊಮ್ಮ ಗೌಡರ ಮನೆಗೆ ಭೇಟಿ

ಅಂಕೋಲಾ: ಉ.ಕ ಲೋಕಸಭಾ ಕ್ಷೇತ್ರದ ಅಂಕೋಲಾ, ಕುಮಟಾ ಹಾಗೂ ಹೊನ್ನಾವರ ತಾಲೂಕಿನಲ್ಲಿ ಹಾಲಕ್ಕಿ ಒಕ್ಕಲಿಗ ಸಮುದಾಯದ ಮತಗಳು ಹೆಚ್ಚಿನ ...