ಪೊಲೀಸರಿಂದ ದಾಖಲೆ ಪರಿಶೀಲನೆ,ಸಂಚಾರ ನಿಯಮ ಉಲ್ಲಂಘಿಸುತ್ತಿರುವವರ ವಿರುದ್ಧ ಕ್ರಮ:ಪಿ.ಎಸ್.ಐ ಕುಸುಮಾಧರ

Source: S.O. News Service | Published on 27th June 2019, 9:23 PM | Coastal News | Don't Miss |

ಭಟ್ಕಳ:ತಾಲೂಕಿನ ರಸ್ತೆಗಳಲ್ಲಿ ಹೆಚ್ಚುತ್ತಿರುವ ಅಪಘಾತ, ಅಪ್ರಾಪ್ತ ವಯಸ್ಸಿನವರಿಂದ ಬೇಕಾಬಿಟ್ಟಿ ವಾಹನ ಚಾಲನೆ, ಸಂಚಾರ ನಿಯಮ ಉಲ್ಲಂಘಿಸುತ್ತಿರುವವರ ವಿರುದ್ಧ ಪೊಲೀಸರು ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದಾರೆ.
ತಾಲೂಕಿನಾದ್ಯಂತ ಕೆಲ ದಿನಗಳಿಂದ ಅಪಘಾತ ಸಂಖ್ಯೆ ಹೆಚ್ಚುತ್ತಿರುವುದು ಸಾರ್ವಜನಿಕರ ಆತಂಕಕ್ಕೆ ಕಾರಣವಾಗಿತ್ತು. ಅಪಘಾತ ಗೊಂಡವರಿಗೆ ಸೂಕ್ತ ಚಿಕಿತ್ಸೆ ನೀಡಲು ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ನಿರ್ವಣಕ್ಕೆ ಜಿಲ್ಲೆಯ ಜನತೆ ಆಂದೋಲನ ಆರಂಭಿಸಿದ್ದರೆ, ಒಂದು ಹೆಜ್ಜೆ ಮುಂದೆ ಹೋಗಿರುವ ಪೊಲೀಸರು ಅಪಘಾತ ನಡೆಯದಂತೆ ಕ್ರಮ ಕೈಗೊಳ್ಳಲು ಮುಂದಾಗಿದ್ದಾರೆ.
ಸಂಚಾರ ನಿಯಮ ಉಲ್ಲಂಘಿಸಿ ಬೇಕಾಬಿಟ್ಟಿ ವಾಹನ ಚಲಾಯಿಸುವವರ ವಿರುದ್ಧ ಕ್ರಮ ಕೈಗೊಳ್ಳಲು ಆರಂಭಿಸಿದ್ದಾರೆ. ಸಂಜೆ ಮತ್ತು ಬೆಳಗಿನ ಸಮಯದಲ್ಲಿ ಪಟ್ಟಣದಾದ್ಯಂತ ವಾಹನ ದಟ್ಟಣೆ ಹೆಚ್ಚಿದೆ. ಅದರಲ್ಲಿ ಅಪ್ರಾಪ್ತ ವಯಸ್ಸಿನವರ ಸಂಖ್ಯೆಯೆ ಹೆಚ್ಚು. ಅತಿವೇಗದಿಂದ ಬೈಕ್ ಚಲಾಯಿಸಿ ಪಾದಚಾರಿಗಳ ಮೇಲೆ ವಾಹನ ಹರಿದು ಅವರು ಆಸ್ಪತ್ರೆಗೆ ದಾಖಲಾಗುತ್ತಿದ್ದಾರೆ. ಇದನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸ್ ಇಲಾಖೆ ತಾಲೂಕಿನ ವಿವಿಧ ಭಾಗಗಳಲ್ಲಿ ತಪಾಸಣೆ ತೀವ್ರಗೊಳಿಸಿದೆ. ಇದರಿಂದ ವಾಹನ ಸವಾರರಲ್ಲಿ ಆತಂಕ ಶುರುವಾಗಿದೆ. ಸಂಚಾರಿ ನಿಯಮದಂತೆ ವಾಹನದ ದಾಖಲೆಗಳನ್ನು ಸರಿಮಾಡಿಕೊಳ್ಳಲು ಹೆಣಗಾಡುತ್ತಿದ್ದಾರೆ. ಶಿರಾಲಿ ಮುರ್ಡೆಶ್ವರ ಸೇರಿ ಹೆದ್ದಾರಿ ಬದಿಯಲ್ಲಿ ತಪಾಸಣೆ ಜೋರಾಗಿದೆ.
ಒಂದೆ ದಿನ 430 ಪ್ರಕರಣ: ಪಟ್ಟಣದಲ್ಲಿ ಮಂಗಳವಾರ ವಾಹನ ತಪಾಸಣೆ ಆರಂಭಿಸಿದ ಪೊಲೀಸರು ಒಂದೆ ದಿನದಲ್ಲಿ 430 ಪ್ರಕರಣ ದಾಖಲಿಸಿದ್ದಾರೆ. 51,400 ರೂ. ದಂಡ ವಸೂಲಿ ಮಾಡಿದ್ದು, ಅಪ್ರಾಪ್ತರಿಗೆ ಎಚ್ಚರಿಕೆ ನೀಡಿದ್ದಾರೆ. ಇಂಥ ಘಟನೆಗಳು ಪುನರಾವರ್ತನೆಯಾದರೆ ಪರವಾನಗಿ ರದ್ದು ಮಾಡಲಾಗುವುದು. ಜತೆಗೆ ಅಪ್ರಾಪ್ತರ ಪಾಲಕರ ವಿರುದ್ಧ ಕಾನೂನು ಪ್ರಕಾರ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾರೆ. ಶಾಲೆಯ ವಿದ್ಯಾರ್ಥಿಗಳನ್ನು ಕರೆದುಕೊಂಡು ಹೋಗುವ ಆಟೋ ಚಾಲಕರ ಮೇಲೂ ಪೊಲೀಸ್ ಇಲಾಖೆ ಕಣ್ಣಿಟ್ಟಿದೆ. ಈಗಾಗಲೆ ಪಟ್ಟಣದ 18 ಆಟೋ ಚಾಲಕರ ಪರವಾನಗಿ ರದ್ದು ಮಾಡಲು ಶಿಫಾರಸು ಮಾಡಿದ್ದಾರೆ. ಕೆಲವರ ಚಾಲನಾ ಪರವಾನಗಿ ರದ್ದುಪಡಿಸಿದ್ದು ಆಟೋ ಯೂನಿಯನ್​ಗೂ ಈ ಕುರಿತು ಖಡಕ್ ಸಂದೇಶ ರವಾನಿಸಿದ್ದಾರೆ.
ಪಟ್ಟಣದ ಸವಾರರಿಗೆ ಸಂಚಾರ ನಿಯಮ ಪಾಲನೆ ಮಾಡುವಂತೆ ಮನವಿ ಮಾಡಿದ್ದೇವೆ. ಅಪ್ರಾಪ್ತ ವಯಸ್ಸಿನಲ್ಲಿ ಬೈಕ್ ಚಾಲನೆ, ದಾಖಲೆ ಇಲ್ಲದ ಬೈಕ್​ಗಳು, ಅತಿ ವೇಗದ ಚಾಲನೆಯಿಂದ ಸವಾರರಿಗೂ ತೊಂದರೆ. ಅಲ್ಲದೆ, ಸಾರ್ವಜನಿಕರಿಗೂ ಇದರಿಂದ ಅಪಾಯ ತಪ್ಪಿದ್ದಲ್ಲ. ಈ ಹಿನ್ನೆಲೆಯಲ್ಲಿ ವಾಹನ ತಪಾಸಣೆಯನ್ನು ಗಂಭೀರವಾಗಿ ಪರಿಗಣಿಸಿದ್ದು, ಉಲ್ಲಂಘಿಸುವವರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗುತ್ತಿದೆ. ಅಪಘಾತ ಮುಕ್ತ ಭಟ್ಕಳ ನಿರ್ವಿುಸಲು ಸಾರ್ವಜನಿಕರು ಇಲಾಖೆಯೊಂದಿಗೆ ಕೈಜೋಡಿಸಬೇಕು.ಎಂದು ನಗರ ಠಾಣೆ ಪಿ.ಎಸ್.ಐ ಕುಸುಮಾಧರ ಕೆ.ತಿಳಿಸಿದರು

|

Read These Next

ಕೋವಿಡ್-19 ತಡೆಗಟ್ಟಲು ವರ್ಗಾವಣೆ ಮಾಡಿದರೂ ಪರವಾಗಿಲ್ಲ ಕಠಿಣ ಕ್ರಮ ಕೈಗೊಂಡು ಕೊರೊನ ನಿಯಂತ್ರಿಸಲು ಪ್ರಯತ್ನಿಸುತ್ತೇನೆ : ತಹಶೀಲ್ದಾರ ಮುಂದಲಮನಿ

ಮುಂಡಗೋಡ : ನನ್ನನ್ನು ಇಲ್ಲಿಂದ ವರ್ಗಾವಣೆ ಮಾಡಿದರು ಪರವಾಗಿಲ್ಲ ಕೋವಿಡ್ 19 ನಿಯಂತ್ರಣಕ್ಕೆ ನಾನು ಕಠಿಣ ಕ್ರಮ ಕೈಗೊಳ್ಳುತ್ತೇನೆ. ...