ಜನರ ಧ್ವನಿಯಾಗಿ ಗ್ರಾಮ ಸಂಪರ್ಕ- ಸ್ವಚ್ಛತೆಗೆ ಪ್ರೇರಣೆ ನೀಡಿದ ಕಲಾ ತಂಡ

Source: so news | Published on 19th October 2019, 11:51 AM | State News | Don't Miss |


ಹಾವೇರಿ: ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆವತಿಯಿಂದ ಜನಸಂಪರ್ಕ ಯೋಜನೆಯಡಿ ಹಿರೇಕೆರೂರು ತಾಲೂಕಿನ ಆಯ್ದ ಗ್ರಾಮಗಳಲ್ಲಿ ಸರ್ಕಾರದ ವಿವಿಧ ಯೋಜನೆಗಳು ಕುರಿತು ನಡೆದ ಜಾಗೃತಿ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು.
ಹಿರೇಕೆರೂರು ತಾಲೂಕಿನ ನೂಲಗೇರಿ, ಅಬಲೂರು, ಗೊಡಚಿಕೊಂಡ, ಯತ್ತಿನಹಳ್ಳಿ ಎಂ.ಕೆ, ಕೋಡ, ಶಂಕರನಹಳ್ಳಿ ಎಂ.ಕೆ, ಯಲವದಹಳ್ಳಿ, ಆಲದಗೇರಿ, ವಡೇಯನಪುರ, ಅರಳಿಕಟ್ಟಿ ಗ್ರಾಮಗಳಲ್ಲಿ ಸರ್ಕಾರದ ವಿವಧ ಯೋಜನೆಗಳಾದ ಕೃಷಿ ಸಮ್ಮಾನ್ ಯೋಜನೆ, ನೇಕಾರರ ಸಾಲಮನ್ನಾ, ಮೀನುಗಾರರ ಸಾಲಮನ್ನಾ, ನೆರೆ ಪರಿಹಾರ ಕಾರ್ಯಗಳು ಹಾಗೂ ನೀರಿನ ಮಿತ ಬಳಕೆ, ಪರಿಸರ ನಾಶನದಿಂದಾಗುವ ಅಪಾಯಗಳು ಕೊಳವೆ ಬಾವಿ ದುರಂತ, ಹೊರ ಮಲವಿಸರ್ಜನೆ ತಡೆ ಮತ್ತು ಬಾಲ್ಯ ವಿವಾಹ, ಬಾಲಕಾರ್ಮಿಕ ಪದ್ಧತಿ ಹೆಣ್ಣು ಭ್ರೂಣಹತ್ಯೆ ಸೇರಿದಂತೆ ವಿವಿಧ ಅನಿಷ್ಟ ಪದ್ಧತಿಗಳ ಕುರಿತು ಜೋಡಿ ಬಸವೇಶ್ವರ ಕಲಾತಂಡ ಹಾಗೂ ಜೈಹನುಮಾನ್ ಕಲಾತಂಡಗಳು ಬೀದಿ ನಾಟಕ ಸಂಗೀತದ ಮೂಲಕ ಜನಜಾಗೃತಿ ಮೂಡಿಸಿ ಜನ ಮೆಚ್ಚುಗೆ ಪಡೆದವು.
ಕಾರ್ಯಕ್ರಮದ ಕುರಿತು ಕೋಡ ಗ್ರಾ.ಪಂಚಾಯತ್ ಅಧ್ಯಕ್ಷರಾದ ರುದ್ರಮಪ್ಪ ಹನುಮಂತಪ್ಪ ಮತ್ತು ಪಿಡಿಓ ಅಧಿಕಾರಿಗಳಾದ ಪರಮೇಶ್ ಅವರು ಮಾತನಾಡಿ ಮಹಿಳೆಯರು ಮಕ್ಕಳು ಹಾಗೂ ಗರ್ಭಿಣಿ ತಾಯಂದಿರ ಪಾಲನೆ ಪೋಷಣೆಗೆಂದು ಸರ್ಕಾರ ವಿವಿಧ ಯೋಜನೆ ಜಾರಿ ತಂದಿದೆ. ಅದರ ಸದುಪಯೋಗವನ್ನು ನಾಗರೀಕರು ಪಡೆದುಕೊಳ್ಳುವಂತೆ ಗ್ರಾಮಸ್ಥರಿಗೆ ತಿಳಿಸಿದರು.
ಒಡೆಯನಪುರ ಗ್ರಾಮಸ್ಥರಾದ ವಿರೇಶ ಅವರು ಮಾತನಾಡಿ, ಜನಪರ ಕಾರ್ಯಕ್ರಮಗಳು ಜನರ ಬವಣೆ ನೀಗುವ ಜತೆ ಸ್ಥಳೀಯ ಮಟ್ಟದ ಕಲೆ, ಸಾಹಿತ್ಯ ಉಳಿವಿಗೆ ಸಹಕಾರಿಯಾಗುತ್ತಿದೆ ಎಂದು ಜನ ಸಂಪರ್ಕ ಕಾರ್ಯಕ್ರಮದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. 
ಸುಮಾರು ಎರಡು ವರ್ಷದಿಂದ ನೆನೆಗುದಿಗೆ ಬಿದ್ದಿದ್ದ ಅರಳಿಕಟ್ಟಿ ಗ್ರಾಮದ ರಸ್ತೆಯಂಚಿನ ಕೊಳಚೆ ಗುಂಡಿಗಳ ಸ್ವಚ್ಛತೆಗೆ ಜನಸಂಪರ್ಕ ಕಾರ್ಯಕ್ರಮದ ಬಳಿಕ ವಿದ್ಯುಕ್ತ ಚಾಲನೆ ನೀಡಲಾಯಿತು. ಈ ವೇಳೆ ಗ್ರಾಮದ ಯುವಕರು ಸ್ವಯಂ ಪ್ರೇರಿತವಾಗಿ ಬಂದು ಕೊಳಚೆ ಸ್ವಚ್ಛತಾ ಕಾರ್ಯದಲ್ಲಿ ತೊಡಗಿ ಮೆಚ್ಚುಗೆ ಪಡೆದರು.
ಯತ್ತಿನಹಳ್ಳಿ ಗ್ರಾಮ ಪಂಚಾಯತಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಪಂಚಾಯತ್ ಸಿಬ್ಬಂದಿ ಬಸವರಾಜ್ ಅವರು ಉಪಸ್ಥಿತರಿದ್ದರು. ವಾರ್ತಾ ಇಲಾಖೆ ಸಿಬ್ಬಂದಿ ರಾಮಚಂದ್ರ ಉಕ್ಕಲಿ ಹಾಗೂ  ಅಪ್ರೆಂಟಿಸ್ ತರಬೇತಿ ಅಭ್ಯರ್ಥಿ ಮಂಜುಳಾ ಲಮಾಣಿ ಕಾರ್ಯಕ್ರಮ ನಡೆಸಿಕೊಟ್ಟರು.

Read These Next

ಸಂವಿಧಾನದ ಆಶಯವನ್ನು ಎತ್ತಿಹಿಡಿಯುವಲ್ಲಿ ನ್ಯಾಯಾಂಗದ ಪಾತ್ರ ದೊಡ್ಡದು: ಮುಖ್ಯಮಂತ್ರಿ ಸಿದ್ದರಾಮಯ್ಯ

ಭಾರತದ ನ್ಯಾಯಾಂಗವು ಸಂವಿಧಾನದ ಆಶಯಗಳನ್ನು ಎತ್ತಿ ಹಿಡಿಯುವಲ್ಲಿ ಪ್ರಮುಖ ಪಾತ್ರ ವಹಿಸುತ್ತಾ ಬಂದಿದೆ. ಮೂಲಭೂತ ಹಕ್ಕುಗಳಿಗೆ ...

ವಿದ್ಯಾರ್ಥಿಗಳ ಗೊಂದಲಕ್ಕೆ ತೆರೆ: 5, 8, 9ನೇ ತರಗತಿಗೆ ಬೋರ್ಡ್ ಪರೀಕ್ಷೆ ನಡೆಸಲು ಹೈಕೋರ್ಟ್ ವಿಭಾಗೀಯ ಪೀಠ ಅಸ್ತು!

ವಿದ್ಯಾರ್ಥಿಗಳ ಗೊಂದಲಕ್ಕೆ ತೆರೆ: 5, 8, 9ನೇ ತರಗತಿಗೆ ಬೋರ್ಡ್ ಪರೀಕ್ಷೆ ನಡೆಸಲು ಹೈಕೋರ್ಟ್ ವಿಭಾಗೀಯ ಪೀಠ ಅಸ್ತು!

ಕೋಲಾರ ಕ್ಷೇತ್ರಕ್ಕೆ ಏಪ್ರಿಲ್ 26 ಕ್ಕೆ ಮತದಾನ, ಜೂನ್ 4ಕ್ಕೆ ಫಲಿತಾಂಶ, ತಕ್ಷಣದಿಂದಲೆ ಜಿಲ್ಲೆಯಾದ್ಯಂತ ನೀತಿ ಸಂಹಿತೆ ಜಾರಿ

ಲೋಕಸಭಾ ಚುನಾವಣೆಗೆ ಚುನಾವಣಾ ಆಯೋಗ ದಿನಾಂಕ ಘೋಷಣೆ ಮಾಡಿರುವ ಹಿನ್ನೆಲೆಯಲ್ಲಿ ತಕ್ಷಣದಿಂದಲೆ ಜಿಲ್ಲೆಯಾದ್ಯಂತ ಮಾದರಿ ನೀತಿ ಸಂಹಿತೆ ...

ಭಾಷಾ ಜ್ಞಾನದ ಕುರಿತು ಯಾರ ಬಗ್ಗೆಯೂ ಕೇವಲವಾಗಿ ಮಾತನಾಡಿಲ್ಲ: ಜೆ.ಪಿ.ಹೆಗ್ಡೆ ಸ್ವಷ್ಟನೆ

ಉಡುಪಿ: ಈವರೆಗಿನ ರಾಜಕೀಯ ಜೀವನದಲ್ಲಿ ಯಾರ ಮನಸ್ಸನ್ನೂ ನೋಯಿಸುವುದಾಗಲಿ ಅಥವಾ ಕೇವಲವಾಗಿ ಮಾತನಾಡುವುದನ್ನಾಗಲಿ ಮಾಡದೆ ಇರುವ ನಾನು ...