ನ.2ರಂದು ಮಂಗಳೂರಿಗೆ ಉಪರಾಷ್ಟ್ರಪತಿ

Source: so news | Published on 19th October 2019, 12:29 PM | Coastal News | Don't Miss |


ಮಂಗಳೂರು:- ಉಪರಾಷ್ಟ್ರಪತಿ ಎಂ.ವೆಂಕಯ್ಯ ನಾಯ್ಡು ಅವರು ನವೆಂಬರ್ 2ರಂದು ಮಂಗಳೂರಿಗೆ ಆಗಮಿಸಲಿದ್ದಾರೆ.
ಅಂದು ಬೆಳಿಗ್ಗೆ 10.30ಕ್ಕೆ ಮಂಗಳೂರು ವಿಮಾನನಿಲ್ದಾಣಕ್ಕೆ ಆಗಮಿಸುವ ಉಪರಾಷ್ಟ್ರಪತಿಗಳು, ನಂತರ ಸುರತ್ಕಲ್ ಎನ್.ಐ.ಟಿ.ಕೆ. ಯಲ್ಲಿ ನಡೆಯುವ 17ನೇ ಘಟಿಕೋತ್ಸವ ಹಾಗೂ ವಜ್ರಮಹೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸುವರು. ಮಧ್ಯಾಹ್ನ 3.10ಕ್ಕೆ ವಿಶೇóಷ ವಿಮಾನದಲ್ಲಿ ಮೈಸೂರಿಗೆ ತೆರಳುವರು.
ಪೂರ್ವಸಿದ್ಧತಾ ಸಭೆ : ಉಪರಾಷ್ಟ್ರಪತಿಗಳ ಆಗಮನದ ಹಿನ್ನೆಲೆಯಲ್ಲಿ ಶುಕ್ರವಾರ ಜಿಲ್ಲಾಧಿಕಾರಿ ಸಿಂಧೂ ಬಿ. ರೂಪೇಶ್ ಅವರ ಅಧ್ಯಕ್ಷತೆಯಲ್ಲಿ ಹಿರಿಯ ಅಧಿಕಾರಿಗಳ ಸಭೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆಯಿತು. ಅವರು ಮಾತನಾಡಿ, ಎಲ್ಲಾ ರೀತಿಯ ಅಗತ್ಯ ಸಿದ್ಧತೆಗಳನ್ನು ಈಗಿಂದಲೇ ಕೈಗೊಳ್ಳಬೇಕು. ಭದ್ರತೆ ಸೇರಿದಂತೆ ಯಾವುದೇ ರೀತಿಯ ಲೋಪಗಳು ಕಂಡುಬರದಂತೆ ಸಿದ್ಧತೆಗಳನ್ನು ಕೈಗೊಳ್ಳಲು ಅವರು ಸೂಚಿಸಿದರು.
ಉಪರಾಷ್ಟ್ರಪತಿಗಳು ವಿಮಾನನಿಲ್ದಾಣದಿಂದ ಸುರತ್ಕಲ್ ಎನ್.ಐ.ಟಿ.ಕೆ ವರೆಗೆ ರಸ್ತೆಯಲ್ಲಿ ಸಂಚರಿಸಲಿದ್ದು, ಈ ನಿಟ್ಟಿನಲ್ಲಿ ರಾಷ್ಟ್ರೀಯ ಹೆದ್ದಾರಿ ಇಲಾಖೆ ಹಾಗೂ ಮಹಾನಗರಪಾಲಿಕೆ ಅಧಿಕಾರಿಗಳು ರಸ್ತೆಯನ್ನು ಕೂಡಲೇ ಸುವ್ಯಸ್ಥಿತಗೊಳಿಸಬೇಕು. ಅದರಲ್ಲೂ ಸುರತ್ಕಲ್‍ನಿಂದ ನಗರದ ಸಕ್ರ್ಯೂಟ್ ಹೌಸ್‍ವರೆಗೆ ಹೆದ್ದಾರಿಯನ್ನು ತಕ್ಷಣದಿಂದಲೇ ರಸ್ತೆ ಸುವ್ಯಸ್ಥಿತಗೊಳಿಸಲು ಜಿಲ್ಲಾಧಿಕಾರಿಗಳು ತಾಕೀತು ಮಾಡಿದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ರೂಪಾ, ಡಿಸಿಪಿ ಅರುಣಾಂಶು ಗಿರಿ, ಎನ್‍ಐಟಿಕೆ ನಿರ್ದೇಶಕ ಉಮಾಮಹೇಶ್ವರ ರಾವ್, ರಿಜಿಸ್ಟ್ರಾರ್ ರವೀಂದ್ರನಾಥ್, ಮಂಗಳೂರು ವಿಮಾನನಿಲ್ದಾಣದ ನಿರ್ದೇಶಕ ವಿ.ವಿ. ರಾವ್ ಮತ್ತಿತರರು ಇದ್ದರು.

Read These Next

ಅಯೋಧ್ಯಾ- ಜಾಗವೋ? ಅವಕಾಶದ ಹರಹೋ?

ವಾಸ್ತವವಾಗಿ ನೋಡುವುದಾದರೆ ಇತ್ತೀಚೆಗೆ ಸುಪ್ರೀಂ ಕೋರ್ಟು ನೀಡಿರುವ ಅಯೋಧ್ಯಾ ತೀರ್ಪು ವಿವಿಧ ವಾದಿ-ಪ್ರತಿವಾದಿಗಳು ವ್ಯಾಜ್ಯ ...