ಹರ್ಯಾಣ: ಬಿಜೆಪಿ ಸಂಸದನ ಬೆಂಗಾವಲು ವಾಹನ ಪ್ರತಿಭಟನಾನಿರತ ರೈತರಿಗೆ ಢಿಕ್ಕಿ

Source: VB | By I.G. Bhatkali | Published on 8th October 2021, 7:04 PM | National News |

ಚಂಡಿಗಡ: ಕೃಷಿ ಕಾಯ್ದೆಗಳ ವಿರುದ್ಧ ಅವರ ಬೆಂಗಾವಲು ವಾಹನವೊಂದು ಢಿಕ್ಕಿ ಹೊಡೆದು ಓರ್ವ ಗಾಯಗೊಂಡ ಘಟನೆ ಅಂಬಾಲ ಸಮೀಪದ ನಾರಾಯಣ್ ಫರ್‌ನಲ್ಲಿ ನಡೆದಿದೆ.

ಪ್ರತಿಭಟನೆ ನಡೆಸುತ್ತಿದ್ದ ಜನರ ಗುಂಪಿನ ಮೇಲೆ ಓರ್ವನಿಗೆ ಹರ್ಯಾಣದ ಬಿಜೆಪಿ ಸಂಸದ ನಯಬ್ ಸೈನಿ ಗಾಯಾಳು ರೈತನನ್ನು ನಾರಾಯಣ್‌ಫರ್‌ನ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಿದ ಆನಂತರ ಆತನನ್ನು ಬಿಡುಗಡೆಗೊಳಿಸಲಾಗಿದೆ. ಸಂಸದ ಸೈನಿ ಅವರಿದ್ದ ಕಾರನ್ನು ಹಿಂಬಾಲಿಸುತ್ತಿದ್ದ ವಾಹನವು ರೈತನಿಗೆ ಢಿಕ್ಕಿ ಹೊಡೆದಿದೆಯೆಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ವಾಹನ ಚಾಲಕನ ವಿರುದ್ಧ ಎಫ್‌ಐಆರ್‌ ದಾಖಲಿಸ ಬೇಕೆಂದು ರೈತರು ಆಗ್ರಹಿಸಿದ್ದಾರೆ. ಇಲ್ಲವಾದಲ್ಲಿ ಅಕ್ಟೋಬರ್ 10ರಂದು ಪೊಲೀಸ್ ಠಾಣೆಗೆ ಮುತ್ತಿಗೆ ಹಾಕುವುದಾಗಿ ಬೆದರಿಕೆಯೊಡ್ಡಿದ್ದಾರೆ.

ನಾರಾಯಣ್‌ಫರ್‌ನ ಸೈನಿಭವನದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಕುರುಕ್ಷೇತ್ರ ಸಂಸದ ನಯಬ್ ಸೈನಿ, ಹರ್ಯಾಣದ ಗಣಿಗಾರಿಕಾ ಸಚಿವ ಮೂಲ್‌ಚಂದ್ ಶರ್ಮಾ ಸೇರಿದಂತೆ ಕೆಲವು ಬಿಜೆಪಿ ನಾಯಕರು ಭಾಗವಹಿಸಿದ್ದರು. ಬಿಜೆಪಿ ಮುಖಂಡರ ಭೇಟಿಯನ್ನು ವಿರೋಧಿಸಿ ಪ್ರತಿಭಟನೆಯನ್ನು ನಡೆಸಲು ದೊಡ್ಡ ಸಂಖ್ಯೆಯಲ್ಲಿದ್ದ ಜನರ ಗುಂಪೊಂದು ಸೈನಿ ಭವನದ ಹೊರಗೆ ಜಮಾಯಿಸಿತ್ತು.

ಕಾರ್ಯಕ್ರಮ ಮುಗಿಯುತ್ತಿದ್ದಂತೆಯೇ ಸ್ಥಳದಿಂದ ನಿರ್ಗಮಿಸಿದ ಸೈನಿಕರ ಬೆಂಗಾವಲು ಕಾರೊಂದು ಪ್ರತಿಭಟನಾನಿರತ ರೈತರ ಗುಂಪಿನಲ್ಲಿದ್ದ ರೈತನೊಬ್ಬನಿಗೆ ಢಿಕ್ಕಿ ಹೊಡೆಯಿತೆಂದು ಮೂಲಗಳು ಹೇಳಿವೆ.

ನಾಲ್ಕು ದಿನಗಳ ಉತ್ತರಪ್ರದೇಶದ ಲಖಿಂಪುರ ಖೇರಿಯಲ್ಲಿ ಕೇಂದ್ರ ಸಹಾಯಕ ಗೃಹ ಸಚಿವ ಅಜಯ್‌ ಮಿಶ್ರಾ ಅವರಿದ್ದ ಕಾರೊಂದು ಪ್ರತಿಭಟನಾನಿರತರ ಮೇಲೆ ಹರಿದು ರೈತರು ಸಾವನಪ್ಪಿದ ಘಟನೆ ಭಾರೀ ಜನಾಕ್ರೋಶಕ್ಕೆ ಕಾರಣವಾಗಿತ್ತು. ಆ ವಾಹನವನ್ನು ಅಜಯ್ ಮಿಶ್ರಾ ಅವರ ಪುತ್ರ ಆಶೀಷ್ ಮಿಶ್ರಾ ಚಲಾಯಿಸುತ್ತಿದ್ದರೆನ್ನಲಾಗಿದೆ.

ಈ ಮಧ್ಯೆ ಲಖಿಂಪುರ ಖೇರಿ ಘಟನೆಯ ಕುರಿತಾದ ವೀಡಿಯೊವೊಂದು ಬುಧವಾರ ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರವಾಗಿದ್ದು, ಅದರಲ್ಲಿದ್ದ ಎಸ್‌ಯುವಿ ಕಾರು ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದ ರೈತರಿಗೆ ಉದ್ದೇಶಪೂರ್ವಕವಾಗಿ ಢಿಕ್ಕಿ ಹೊಡೆದಿರುವುದು ಸ್ಪಷ್ಟವಾಗಿ ಕಂಡುಬರುತ್ತಿದೆಯೆಂದು ಎನ್‌ಡಿಟಿವಿ ಸುದ್ದಿ ವಾಹಿನಿ ತನ್ನ ವರದಿಯಲ್ಲಿ ತಿಳಿಸಿದೆ. ತಾವು ಪ್ರಯಾಣಿಸುತ್ತಿದ್ದ ಮಹೀಂದ್ರಾ ಥಾರ್ ವಾಹನದ ಮೇಲೆ ಪ್ರತಿಭಟನಾ ನಿರತರು ದಾಳಿ ನಡೆಸಿದ್ದಾರೆಂಬ ಸಚಿವ ಮಿಶ್ರಾ ಹಾಗೂ ಅವರ ಪುತ್ರನ ಆರೋಪವನ್ನು ಈ ವೀಡಿಯೊ ಪ್ರಶ್ನಿಸುತ್ತಿದೆಯೆಂದು ಅವರು ಹೇಳಿದ್ದಾರೆ.

ಆಶೀಷ್ ಮಿಶ್ರಾ ವಿರುದ್ಧ ಪೊಲೀಸರು ಕೊಲೆ ಹಾಗೂ ನಿರ್ಲಕ್ಷ್ಯದಿಂದ ವಾಹನ ಚಲಾಯಿಸಿದ ಆರೋಪವನ್ನು ಹೊರಿಸಿದ್ದಾರೆ. ಆದಾಗ್ಯೂ ಆಶೀಷ್ ಮಿಶ್ರಾ ಅವರನ್ನು ಪೊಲೀಸರು ಇನ್ನೂ ವಶಕ್ಕೆ ತೆಗೆದುಕೊಂಡಿಲ್ಲ ಹಾಗೂ ಪ್ರಶ್ನಿಸಿಲ್ಲ.

Read These Next