ತರಕಾರಿ ಹಾಗೂ ದಿನಸಿ ವಸ್ತುಗಳಿಗೆ ಕೃತಕ ಭಾವ ಸೃಷ್ಠಿಸಿ ಹೆಚ್ಚಿನ ಬೆಲೆಗೆ ಮಾರಾಟ 

Source: sonews | By Staff Correspondent | Published on 26th March 2020, 7:03 PM | State News | Don't Miss |

ಕೋಲಾರ: ಕೋರೋನಾ ಲಾಕ್ ಡೌನ್ ನಿಂದ ಭಯಬೀತವಾಗಿರುವ ಜಿಲ್ಲೆಯ ಜನತೆಗೆ ಅಗತ್ಯ ವಸ್ತುಗಳಾದ ತರಕಾರಿ ಹಾಗೂ ದಿನಸಿ ವಸ್ತುಗಳಿಗೆ ಕೃತಕ ಭಾವ ಸೃಷ್ಠಿಸಿ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿರುವವÀರ ವಿರುದ್ದ ಕ್ರಮ ಕೈಗೊಂಡು ಜಿಲ್ಲಾಡಳಿತ ಅಗತ್ಯ ವಸ್ತುಗಳ ಸಿಗುವಂತೆ ವ್ಯವಸ್ಥೆ ಮಾಡಬೇಕೆಂದು ರೈತ ಸಂಘದಿಂದ ಒತ್ತಾಯಿಸಿದರು.
    
ಪತ್ರಿಕಾ ಹೇಳಿಕೆ ನೀಡಿ ಮಾತನಾಡಿದ ಜಿಲ್ಲಾದ್ಯಕ್ಷೆ ಎ.ನಳಿನಿ ಸರ್ಕಾರದ ನೀಷೇದಾಜ್ಞೆಗೆ ಇಡೀ ಜಿಲ್ಲೆಯ ಜನತೆ ಸ್ಪಂದಿಸಿದ್ದು, ಆದರೆ ಹಳ್ಳಿಗಾಡಿನಲ್ಲಿ ಯಾವುದೇ ತರಕಾರಿ ಮತ್ತು ಸೊಪ್ಪುಗಳಿಗೆ ಬೆಲೆ ಇಲ್ಲದಿದ್ದರೂ ರೈತರು ದಿಟ್ಟತನದಿಂದ ಜಿಲ್ಲಾಡಳಿತದ ಕ್ರಮಕ್ಕೆ ಬೆಂಬಲ ನೀಡಿದ್ದಾರೆ. ಆದರೆ ಸೊಪ್ಪು ಮತ್ತು ತರಕಾರಿಗಳನ್ನು ಕೆ.ಜಿ 20-100ರೂ  ಮಾರಾಟ ಮಾಡಿಕೊಂಡು ಜನರ ಶೋಷಣೆಗೆ ಮುಂದಾಗಿದ್ದಾರೆ.ಮತ್ತೊಂದೆಡೆ ಕೆಲವು ದಿನಸಿ ಅಂಗಡಿಗಳು ಬೆಳೆ ಮುಂತಾದ ಆಹಾರ ಸಾಮಾಗ್ರಿಗಳನ್ನು ದುಪ್ಪಟ್ಟು ಮಾರಾಟ ಮಾರುತ್ತಿದ್ದು, ಜಿಲ್ಲಾಡಳಿತದ ಕಾನೂನನ್ನು ಗಾಳಿಗೆ ತೂರಿದ್ದಾರೆ. ಆದ್ದರಿಂದ ಜಿಲ್ಲಾಧಿಕಾರಿಗಳು  ಅಗ್ರ ಬೆಲೆಯಲ್ಲಿ ದೊರೆಯುವ ತರಕಾರಿಗಳನ್ನು ಅದೇ ಬೆಲೆಗೆ ತಾಲ್ಲೂಕಿನ 4 ಕಡೆ ಹಾಗೂ ಹೋಬಳಿ ಕೇಂದ್ರಗಳಲ್ಲಿ ಎ.ಪಿ.ಎಂ.ಸಿ ಮತ್ತು, ಗ್ರಾಮಪಂಚಾಯಿತಿ ಹಾಗೂ ನಗರಸಭೆ ಅಧಿಕಾರಿಗಳಿಗೆ ಸೂಚನೆ ನೀಡಿ ತರಕಾರಿಗಳನ್ನು ಮಾರುಕಟ್ಟೆಯ ದರದಲ್ಲೇ ಸಿಗುವ ವ್ಯವಸ್ಥೆ ಕಲ್ಪಿಸಿ, ಹಾಗೂ ದಿನಸಿ ಅಂಗಡಿಗಳಿಗೆ ದುಪ್ಪಟ ದರಕ್ಕೆ ಮಾರದಂತೆ ಖಡಕ್ ಸೂಚನೆ ನೀಡಿ ಇಡೀ ಜಿಲ್ಲೆಯ ಜನರ ಭಯದ ಹಸಿವನ್ನು ನೀಗಿಸಲು ಜಿಲ್ಲಾಡಳಿತ ಮುಂದಾಗಬೇಕು, ಮತ್ತು ತರಕಾರಿ ಮತ್ತು ಆಹಾರ ಸಾಮಾಗ್ರಿಗಳನ್ನು ಹೆಚ್ಚಿನ ಬೆಲೆಗೆ ಮಾರಾಟ ಮಾಡುವವರ ವಿರುದ್ದ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ. ಅಗತ್ಯವಸ್ತುಗಳನ್ನು ಒದಗಿಸಿ ಕೊಡಬೇಕೆಂದು  ಅಗ್ರಹಿಸಿದರು.
    
 

Read These Next

ಅವಿಭಜಿತ ಜಿಲ್ಲೆಯ ಫ್ಯಾಕ್ಸ್‍ಗಳ ಗಣಕೀಕರಣಕ್ಕೆ ಜೂನ್ 30ರ ಕಾಲಮಿತಿ ತಪ್ಪಿದಲ್ಲಿ ಆರ್ಥಿಕ ಸೌಲಭ್ಯ ನಿಲುಗಡೆ-ಬ್ಯಾಲಹಳ್ಳಿ ಗೋವಿಂದಗೌಡ ಎಚ್ಚರಿಕೆ

ಕೋಲಾರ: ಅವಿಭಜಿತ ಜಿಲ್ಲೆಯ ಎಲ್ಲಾ ಸೊಸೈಟಿಗಳ ಗಣಕೀಕರಣ ಕಾರ್ಯ ಜೂನ್ ಅಂತ್ಯದೊಳಗೆ ಮುಗಿಸಿರಬೇಕು ಇಲ್ಲವಾದಲ್ಲಿ ಯಾವುದೇ ಆರ್ಥಿಕ ...

ಭಟ್ಕಳದಲ್ಲಿ ಭಾನುವಾರದಂದು ಬೆ.8ರಿಂದ ಮ.2 ಗಂಟೆ ವರೆಗೆ ಲಾಕ್‍ಡೌನ್  ಸಡಿಲಿಕೆ-ಸಹಾಯ ಆಯುಕ್ತ

ಭಟ್ಕಳ: ರಾಜ್ಯಾದ್ಯಂತ ಭಾನುವಾರದ ಕಫ್ರ್ಯೂ ಆದೇಶವನ್ನು ಸರ್ಕಾರ ಹಿಂಪಡೆದ ಹಿನ್ನೆಯಲ್ಲಿ ಈ ಆದೇಶ ಭಟ್ಕಳಕ್ಕೂ ಅನ್ವಯಿಸುತ್ತಿದ್ದು ...