ರಣಜಿ ಟ್ರೋಫಿ ಇತಿಹಾಸದ ಗರಿಷ್ಠ ವಿಕೆಟ್ ದಾಖಲೆ ವೀರ ರಾಜಿಂದರ್​ ಗೋಯೆಲ್​ ಇನ್ನಿಲ್ಲ

Source: UNI | By MV Bhatkal | Published on 22nd June 2020, 4:17 PM | National News | Sports News | Don't Miss |

ನವದೆಹಲಿ: ದೇಶೀಯ ಕ್ರಿಕೆಟ್‌ನಲ್ಲಿ ಅತ್ಯುತ್ತಮ ನಿರ್ವಹಣೆ ತೋರಿದರೂ ಎಂದೂ ಭಾರತ ತಂಡದ ಪರ ಆಡುವ ಅದೃಷ್ಟ ಪಡೆಯದ ಮಾಜಿ ಎಡಗೈ ಸ್ಪಿನ್ನರ್ ರಾಜಿಂದರ್ ಗೋಯೆಲ್ (77 ವರ್ಷ) ಭಾನುವಾರ ರೋಹ್ಟಕ್‌ನಲ್ಲಿ ನಿಧನ ಹೊಂದಿದರು. ರಣಜಿ ಟ್ರೋಫಿ ಇತಿಹಾಸದಲ್ಲಿ ಸರ್ವಾಧಿಕ 637 ವಿಕೆಟ್ ಕಬಳಿಸಿದ ಬೌಲರ್ ಎಂಬ ದಾಖಲೆಯನ್ನು ಈಗಲೂ ತಮ್ಮ ಹೆಸರಿನಲ್ಲಿ ಹೊಂದಿರುವ ರಾಜಿಂದರ್, 44ನೇ ವಯಸ್ಸಿನವರೆಗೂ ಪ್ರಥಮ ದರ್ಜೆ ಪಂದ್ಯಗಳನ್ನು ಆಡಿದ್ದರು. ಅವರು ವಯೋಸಹಜ ಕಾಯಿಲೆಗಳಿಂದ ಬಳಲುತ್ತಿದ್ದರು. ಅವರು ಪತ್ನಿ ಮತ್ತು ಪುತ್ರ, ಮಾಜಿ ಪ್ರಥಮ ದರ್ಜೆ ಕ್ರಿಕೆಟಿಗ ಹಾಗೂ ಹಾಲಿ ದೇಶೀಯ ಮ್ಯಾಚ್ ರೆಫ್ರಿ ನಿತಿನ್ ಗೋಯೆಲ್‌ರನ್ನು ಅಗಲಿದ್ದಾರೆ.
ಹರಿಯಾಣ, ಪಂಜಾಬ್, ದೆಹಲಿ ಪರ ರಣಜಿ ಆಡಿದ್ದ ರಾಜಿಂದರ್ ಒಟ್ಟು 157 ಪ್ರಥಮ ದರ್ಜೆ ಪಂದ್ಯಗಳಲ್ಲಿ 750 ವಿಕೆಟ್ ಕಬಳಿಸಿದ್ದಾರೆ. 59 ಬಾರಿ 5 ವಿಕೆಟ್ ಗೊಂಚಲು ಪಡೆದಿದ್ದರು. ಸ್ಪಿನ್ ದಿಗ್ಗಜರಾದ ಬಿಷನ್ ಸಿಂಗ್ ಬೇಡಿ, ಬಿಎಸ್ ಚಂದ್ರಶೇಖರ್, ಎಸ್. ವೆಂಕಟರಾಘವನ್ ಅವರ ಸಮಕಾಲೀನರಾಗಿದ್ದ ಕಾರಣ ರಾಜಿಂದರ್‌ಗೆ ರಾಷ್ಟ್ರೀಯ ತಂಡದ ಪರ ಆಡುವ ಅವಕಾಶ ಒಲಿದು ಬರಲಿಲ್ಲ. 1974-75ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಸರಣಿಯ ಬೆಂಗಳೂರು ಟೆಸ್ಟ್‌ಗೆ ಅವರು ಭಾರತ ತಂಡಕ್ಕೆ ಆಯ್ಕೆಯಾಗಿದ್ದರೂ ಆಡುವ ಅವಕಾಶ ಲಭಿಸಿರಲಿಲ್ಲ. 12ನೇ ಆಟಗಾರನಾಗಿ ಉಳಿದುಬಿಟ್ಟಿದ್ದರು. ಬಿಸಿಸಿಐನಿಂದ ಸಿಕೆ ನಾಯ್ಡು ಜೀವಮಾನ ಸಾಧನೆ ಪ್ರಶಸ್ತಿಗೆ ಅವರು ಭಾಜನರಾಗಿದ್ದಾರೆ.
1958-59ರಿಂದ 1984-85ರವರೆಗೆ 26 ದೇಶೀಯ ಕ್ರಿಕೆಟ್ ಋತುವಿನಲ್ಲಿ ಆಡಿದ್ದ ರಾಜಿಂದರ್ ಎಂದೂ ಸಕಾರಾತ್ಮಕ ಗುಣ ಕಳೆದುಕೊಂಡವರಲ್ಲ. ಗಂಟೆಗಟ್ಟಲೆ ಬೌಲಿಂಗ್ ಮಾಡುವ ಸಾಮರ್ಥ್ಯ ಹೊಂದಿದ್ದರು. 18 ಪಂದ್ಯಗಳಲ್ಲಿ 10 ವಿಕೆಟ್ ಗೊಂಚಲು ಪಡೆದಿದ್ದರು. 1991ರಲ್ಲಿ ಅವರು ಹರಿಯಾಣದ ಆಯ್ಕೆ ಸಮಿತಿ ಅಧ್ಯಕ್ಷರೂ ಆಗಿದ್ದರು. ದಿಗ್ಗಜ ಸುನೀಲ್ ಗಾವಸ್ಕರ್ ಅವರ ಪುಸ್ತಕ ‘ಐಡಾಲ್ಸ್’ನಲ್ಲಿ ರಾಜಿಂದರ್ ಗೋಯೆಲ್ ಅವರನ್ನು ‘ನಗುವಿನ ದಾಳಿಗಾರ’ ಎಂದು ಬಣ್ಣಿಸಲಾಗಿದೆ.

Read These Next

ಉತ್ತರಪ್ರದೇಶ: ಮಾಜಿ ಸಚಿವರಿಬ್ಬರ ಸಹಿತ ಹಲವು ಬಿಜೆಪಿ, ಬಿಎಸ್ಪಿ ನಾಯಕರು ಸಮಾಜವಾದಿ ಪಕಕ್ಕೆ ಸೇರ್ಪಡೆ

ಉತ್ತರಪ್ರದೇಶ ವಿಧಾನಸಭೆ ಚುನಾವಣೆ ಗೆ ಕೆಲವೇ ದಿನಗಳು ಬಾಕಿ ಇರುವಾಗ ಇಬ್ಬರು ಮಾಜಿ ಸಚಿವರು ಸೇರಿದಂತೆ ಹಲವು ಬಿಜೆಪಿ ಹಾಗೂ ಬಿಎಸ್ಪಿ ...

ಮೊದಲ ಬಾರಿ ಟ್ವೆಂಟಿ-20 ವಿಶ್ವಕಪ್ ಗೆದ್ದ ಆಸ್ಟ್ರೇಲಿಯ; ವಾರ್ನರ್, ಮಾರ್ಷ್ ಅಬ್ಬರದ ಬ್ಯಾಟಿಂಗ್

ಆಲ್‌ರೌಂಡರ್ ಮಿಚೆಲ್ ಮಾರ್ಷ್ (ಔಟಾಗದೆ 77, 50 ಎಸೆತ, 6 ಬೌಂಡರಿ, 4 ಸಿಕ್ಸರ್) ಹಾಗೂ ಆರಂಭಿಕ ಬ್ಯಾಟ್ಸ್‌ಮನ್ ಡೇವಿಡ್ ವಾರ್ನರ್ (53, 38 ಎಸೆತ, 4 ...

ಐತಿಹಾಸಿಕ ಸ್ವರ್ಣ ಗೆದ್ದ ಸುಮಿತ್, ಅವನಿ; ಭಾರತಕ್ಕೆ ಒಂದೇ ದಿನ 2 ಚಿನ್ನ ಸಹಿತ ಐದು ಪದಕ

ಪ್ಯಾರಾಲಿಂಪಿಕ್ ಗೇಮ್ಸ್‌ನಲ್ಲಿ ಪ್ಯಾರಾಲಿಂಪಿಕ್ಸ್ ಅಂಟಿಲ್ ಎಫ್64 ಸ್ಪರ್ಧೆಯಲ್ಲಿ 68.55 ಮೀ.ದೂರಕ್ಕೆ * ಜಾವಲಿನ್ ಎಸೆದು ತನ್ನದೇ ವಿಶ್ವ ...

ರಾಜ್ಯದಲ್ಲಿ ವೀಕೆಂಡ್ ಕರ್ಪ್ಯೂ ಇಲ್ಲ. ನೈಟ್ ಕರ್ಪ್ಯೂ ಮುಂದುವರಿಕೆ. ಎಚ್ಚರ ತಪ್ಪದಂತೆ ಜನತೆಗೆ ಸರ್ಕಾರದ ಮನವಿ

ಬೆಂಗಳೂರು : ಕೋವಿಡ್ ಹೆಚ್ಚುತ್ತಿರುವ ಹಿನ್ನಲೆಯಲ್ಲಿ ವಿಧಿಸಿದ್ದ ವೀಕೆಂಡ್ ಕರ್ಪ್ಯೂವನ್ನ ರಾಜ್ಯ ಸರ್ಕಸರವರದ್ದು ಮಾಡಿದೆ.

ಅಬಕಾರಿ ದಾಳಿ: ಅಕ್ರಮ ಮದ್ಯ ವಶ

ಶಿವಮೊಗ್ಗ : ತೀರ್ಥಹಳ್ಳಿಯ ಇಂದಿರಾನಗರ, ತಾಲೂಕಿನ ಮಾರಿಗುಣಿ, ತಲ್ಲೂರು ಅಂಗಡಿ ಕೈಮರ ಗ್ರಾಮಗಳಲ್ಲಿ ಅಬಕಾರಿ ಇಲಾಖೆಯ ಆಯುಕ್ತರು ಹಾಗೂ ...

ಕೋವಿಡ್ ತಜ್ಞರ ಸಮಿತಿ ಸಭೆ. ಎರಡು ಲಸಿಕೆ ಪಡೆದವರಿಗೆ ಗಂಭೀರ ರೋಗ ಲಕ್ಷಣ ಸಾಧ್ಯತೆ ಅತಿ ಕಡಿಮೆ

ಶಿವಮೊಗ್ಗ : ಕೋವಿಡ್ ಮೂರನೇ ಅಲೆಯಲ್ಲಿ ಹಲವೆಡೆ ವಿದ್ಯಾರ್ಥಿಗಳಿಗೆ ಕೋವಿಡ್ ಪಾಸಿಟಿವ್ ಕಂಡು ಬಂದಿದ್ದರೂ, ಆತಂಕಪಡದೇ ಶಾಲಾ ...