ಮುಂಬೈ: ರಾಮ ಮಂದಿರ ಟ್ರಸ್ಟ್‌ನಿಂದ ಭ್ರಷ್ಟಾಚಾರ ಆರೋಪ, ಸ್ಪಷ್ಟನೆ ನೀಡುವಂತೆ ಟ್ರಸ್ಟ್‌ಗೆ ವಿವಿಧ ಮುಖಂಡರ ಆಗ್ರಹ

Source: VB | By S O News | Published on 15th June 2021, 3:48 PM | National News |

ಮುಂಬೈ: ಅಯೋಧ್ಯೆಯ ರಾಮಜನ್ಮಭೂಮಿ ಟ್ರಸ್ಟ್ ಖರೀದಿಸಿರುವ ಜಮೀನಿನ ವ್ಯವಹಾರದಲ್ಲಿ ಭ್ರಷ್ಟಾಚಾರ ನಡೆದಿದೆ ಎಂಬ ವರದಿಯ ಬಗ್ಗೆ ಸೋಮವಾರ ಪ್ರತಿಕ್ರಿಯಿಸಿರುವ ವಿವಿಧ ರಾಜಕೀಯ ಪಕ್ಷಗಳ ಮುಖಂಡರು ಆರೋಪದ ಬಗ್ಗೆ ಟ್ರಸ್ಟ್‌ನ ಮುಖಂಡರು ಹಾಗೂ ಇತರರು ಸ್ಪಷ್ಟಿಕರಣ ನೀಡಬೇಕೆಂದು ಆಗ್ರಹಿಸಿದ್ದಾರೆ.

ಈ ಕುರಿತು ಮಾತನಾಡಿರುವ ಶಿವಸೇನೆಯ ಸಂಸದ ಸಂಜಯ್ ರಾವತ್, ಮಂದಿರ ರ್ಮಾಣ ಬಿಜೆಪಿಗಷ್ಟೇ ಅಲ್ಲ ಜನಸಾಮಾನ್ಯರಿಗೂ ನಂಬಿಕೆ ಹಾಗೂ ವಿಶ್ವಾಸದ ವಿಷಯವಾಗಿದೆ. ಸೋಮವಾರ ಬೆಳಗ್ಗೆ ಈ ವಿಷಯದ ಬಗ್ಗೆ ಆಮ್ ಆದ್ಮಿ ಪಕ್ಷದ ಸಂಸದ ಸಂಜಯ್ ಸಿಂಗ್ ತನಗೆ ಫೋನ್ ಮೂಲಕ ತಿಳಿಸಿದ್ದು, ಅವರು ಒದಗಿಸಿರುವ ಪುರಾವೆ ಕಂಡು ಆಘಾತವಾಯಿತು ಎಂದು ಹೇಳಿದರು. ರಾಮ ದೇವರು ಹಾಗೂ ರಾಮಮಂದಿರದ ಹೋರಾಟ ನಮಗೆ ವಿಶ್ವಾಸದ ವಿಷಯವಾಗಿದ್ದರೆ ಕೆಲವರಿಗೆ ಇದೊಂದು ರಾಜಕೀಯ ಮಾಡುವ ವಿಷಯವಾಗಿದೆ. ರಾಮಮಂದಿರ ನಿರ್ಮಾಣಕ್ಕೆ ಜನತೆ ದೇಣಿಗೆ ನೀಡಿದ್ದಾರೆ. ಶಿವಸೇನೆಯೂ 1 ಕೋಟಿ ರೂ. ದೇಣಿಗೆ ನೀಡಿದೆ. ಆದ್ದರಿಂದ ಕೇಳಿಬಂದಿರುವ ಭ್ರಷ್ಟಾಚಾರ ಆರೋಪದ ಬಗ್ಗೆ ಟ್ರಸ್ಟ್ ಸ್ಪಷ್ಟಿಕರಣ ನೀಡಬೇಕು. ಮಂದಿರದ ಭೂಮಿಪೂಜೆ ಕಾರ್ಯ ಕ್ರಮದಲ್ಲಿ ಪಾಲ್ಗೊಂಡಿದ್ದ ಉ.ಪ್ರದೇಶ ಮುಖ್ಯಮಂತ್ರಿ ಆದಿತ್ಯನಾಥ್ ಮತ್ತು ಆರೆಸ್ಸೆಸ್ ಮುಖಂಡ ಮೋಹನ್ ಭಾಗವತ್ ಕೂಡಾ ಈ ವಿಷಯದಲ್ಲಿ ಮಾತನಾಡಬೇಕಿದೆ. 6ನೇ ಪುಟಕ್ಕೆ

ವಿಶ್ವಾಸದ ಆಧಾರದಲ್ಲಿ ಸಂಗ್ರಹಿಸಿದ ಹಣದ ದುರ್ಬಳಕೆಯಾಗಿದೆ ಎಂದರೆ, ವಿಶ್ವಾಸಕ್ಕೆ ಬೆಲೆಯಿಲ್ಲವೇ? ಏನು ನಡೆದಿದೆ ಎಂಬುದು ನಮಗೆ ತಿಳಿಯಬೇಕಾಗಿದೆ ಎಂದು ರಾವತ್ ಆಗ್ರಹಿಸಿದರು. ಟ್ರಸ್ಟ್ ನ ಸದಸ್ಯರನ್ನು ಬಿಜೆಪಿ ನೇಮಿಸಿದೆ. ರಾಮಮಂದಿರ ಚಳವಳಿಯಲ್ಲಿ ಶಿವಸೇನೆಯೂ ಪಾಲ್ಗೊಂಡಿರುವುದರಿಂದ ಶಿವಸೇನೆಯನ್ನೂ ಟ್ರಸ್ಟ್ ಸದಸ್ಯರನ್ನಾಗಿ ನೇಮಿಸಬೇಕು ಎಂಬುದು ನಮ್ಮ ಬೇಡಿಕೆಯಾಗಿತ್ತು ಎಂದು ರಾವತ್ ಹೇಳಿದ್ದಾರೆ.

ರಾಮಮಂದಿರದ ಕಟ್ಟಡದ ಬಳಿಯಿರುವ ಸುಮಾರು 2 ಕೋಟಿ ರೂ. ಮೌಲ್ಯದ ಜಮೀನನ್ನು ರಾಮಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ನ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ರಾಮಮಂದಿರಕ್ಕಾಗಿ 18.50 ಕೋಟಿ ರೂ.ಗೆ ಖರೀದಿಸಿದ್ದಾರೆ ಎಂಬ ಆರೋಪ ಇದಾಗಿದೆ. ಆಮ್ ಆದ್ಮಿ ಪಕ್ಷದ ರಾಜ್ಯಸಭಾ ಸಂಸದ ಸಂಜಯ್ ಸಿಂಗ್ ಹಾಗೂ ಉತ್ತರಪ್ರದೇಶದ ಮಾಜಿ ಸಚಿವ ಪವನ್ ಪಾಂಡೆ ಈ ಆರೋಪ ಮಾಡಿದ್ದು, ಸಿಬಿಐ ಮತ್ತು ಜಾರಿ ನಿರ್ದೇಶನಾಲಯದ ತನಿಖೆಯಾಗಬೇಕು ಎಂದು ಆಗ್ರಹಿಸಿದ್ದಾರೆ. ಆರೋಪವನ್ನು ಚಂಪತ್ ರಾಯ್ ನಿರಾಕರಿಸಿದ್ದಾರೆ.

ಭಕರ ದೇಣಿಗೆ ದುರ್ಬಳಕೆ ವಿಶ್ವಾಸದ್ರೋಹದ ಕ್ರಮ: ಪ್ರಿಯಾಂಕಾ

ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ಸಂಗ್ರಹಿಸಿದದೇಣಿಗೆಯ ದುರ್ಬಳಕೆಯಾಗಿದೆ ಎಂಬ ಆರೋಪದ ಬಗ್ಗೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ, ಭಕ್ತರಿಂದ ಸಂಗ್ರಹಿಸಿದ ದೇಣಿಗೆಯನ್ನು ದುರ್ಬಳಕೆ ಮಾಡಿಕೊಂಡಿರುವುದು ಅಪರಾಧವಾಗಿದೆ ಮತ್ತು ಭಕ್ತರ ನಂಬಿಕೆಗೆ ಎಸಗಿರುವ ಅವಮಾನವಾಗಿದೆ ಎಂದಿದ್ದಾರೆ.

ದೇವರ ಮೇಲಿನ ಭಕ್ತಿ, ವಿಶ್ವಾಸದಿಂದ ಕೋಟ್ಯಂತರ ಜನತೆ ದೇಣಿಗೆ ಅರ್ಪಿಸಿದ್ದಾರೆ. ಇದನ್ನು ದುರ್ಬಳಕೆ ಮಾಡಿರುವುದು ಅನ್ಯಾಯ ಮತ್ತು ಅಪರಾಧವಾಗಿದೆ ಎಂದವರು ಟ್ವೀಟ್ ಮಾಡಿದ್ದಾರೆ.

ಶ್ರೀರಾಮನ ಹೆಸರಿನಲ್ಲಿ ಸಂಗ್ರಹಿಸಿದ ದೇಣಿಗೆಯಲ್ಲೂ ಹಗರಣ ನಡೆಯುತ್ತಿದೆ. ರಾಮದೇವರೇ, ಇವು ಯಾವ ರೀತಿಯ ದಿನಗಳು? ರಾವಣನಂತೆ ದುರಹಂಕಾರದಿಂದ ತುಂಬಿರುವ ನಾಚಿಕೆಗೆಟ್ಟ ಲೂಟಿಕೋರರು ನಂಬಿಕೆ, ವಿಶ್ವಾಸವನ್ನೇ ಮಾರಾಟಕ್ಕಿಟ್ಟಿದ್ದಾರೆ ಎಂದು ಕಾಂಗ್ರೆಸ್‌ನ ಪ್ರಧಾನ ವಕ್ತಾರ ರಣದೀಪ್ ಸುರ್ಜೇವಾಲ ಟ್ವಿಟ್ ಮಾಡಿದ್ದಾರೆ.

 ನರೇಂದ್ರ ಮೋದಿ ಹಾಗೂ ಆದಿತ್ಯನಾಥ್ ಅವರನ್ನು ಗುರಿಯಾಗಿರಿಸಿ ವಾಗ್ದಾಳಿ ನಡೆಸಿದ ರಾಜ್‌ಭರ್, “ಇಬ್ಬರೂ ನಾಯಕರು ಶೂನ್ಯ ಸಹಿಷ್ಣುತೆ ವ್ಯಕ್ತಪಡಿಸುತ್ತಿದ್ದಾರೆ. ರಾಮ ಮಂದಿರ ಟ್ರಸ್ಟಿಗಳ ವಿರುದ್ಧ ಯಾವಾಗ ಪ್ರಕರಣ ದಾಖಲಿಸುತ್ತೀರಿ ಹಾಗೂ ಯಾವಾಗ ಆರೋಪಿಗಳನ್ನು ಜೈಲಿಗೆ ಕಳುಹಿಸುತ್ತೀರಿ ಎಂದು ಮೋದಿ ಜಿ ಹಾಗೂ ಯೋಗಿ ಜಿ ಸ್ಪಷ್ಟಪಡಿಸಬೇಕು” ಎಂದಿದ್ದಾರೆ.

ಬಿಜೆಪಿ, ಆರೆಸ್ಸೆಸ್‌ಗೆ, ರಾಮ ಮಂದಿರ ಒಂದು ದಂಧೆ, ಎಸ್‌ಬಿಎಸ್‌ಪಿ ವರಿಷ್ಠ ರಾಜ್‌ಭರ್

ಬಲ್ಲಿಯಾ: ಅಯೋಧ್ಯೆಯಲ್ಲಿ ಪ್ರಸ್ತಾವಿತ ರಾಮಮಂದಿರಕ್ಕೆ ಭೂ ಖರೀದಿಯಲ್ಲಿ ನಡೆದಿದೆ ಎನ್ನಲಾದ ಅಕ್ರಮದ ಕುರಿತು ಕೇಂದ್ರದ ತನಿಖಾ ಸಂಸ್ಥೆಯಿಂದ ತನಿಖೆಯ ಆಗ್ರಹಕ್ಕೆ ಸೋಮವಾರ ಬೆಂಬಲ ವ್ಯಕ್ತಪಡಿಸಿರುವ ಸುಹೇಲ್‌ದೇವ್‌ ಭಾರತೀಯ ಸಮಾಜ್ ಪಾರ್ಟಿ (ಎಸ್ ಬಿಎಸ್‌ಪಿ) ವರಿಷ್ಠ ಓಂ ಪ್ರಕಾಶ್ ರಾಜ್ ಭರ್, ಬಿಜೆಪಿ ಹಾಗೂ ಆರೆಸ್ಸೆಸ್ ರಾಮ ಮಂದಿರವನ್ನು ವ್ಯವಹಾರದ ಮಾಧ್ಯಮನ್ನಾಗಿ ಮಾಡಿವೆ ಎಂದು ಆರೋಪಿಸಿದ್ದಾರೆ.

ಆರೋಪಿಗಳ ವಿರುದ್ಧ ಯಾವಾಗ ಕ್ರಮ ಕೈಗೊಳ್ಳುತ್ತೀರಿ ಎಂದು ಅವರು ಪ್ರಧಾನಿ ನರೇಂದ್ರ ಮೋದಿ ಹಾಗೂ ಉತ್ತರಪ್ರದೇಶದ ಮುಖ್ಯಮಂತ್ರಿ ಆದಿತ್ಯನಾಥ್ ಅವರಲ್ಲಿ ಪ್ರಶ್ನಿಸಿದ್ದಾರೆ.

ರಾಸ್ರಾದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ರಾಜ್‌ಭರ್, "ದೇವಾಲಯ ಸಾಮಾನ್ಯ ಜನರ ನಂಬಿಕೆಯ ಸಂಕೇತ. ಆದರೆ, ಬಿಜೆಪಿ ಹಾಗೂ ಆರೆಸ್ಸೆಸ್ ಅದನ್ನು ವ್ಯವಹಾರದ ಮಾಧ್ಯ ಮವನ್ನಾಗಿ ಮಾಡಿದೆ'' ಎಂದಿದ್ದಾರೆ.

ರಾಮಮಂದಿರ ನಿರ್ಮಾಣ ಮಾಡಲು ಮಾರ್ಚ್ 18ರಂದು 2 ಕೋಟಿ ರೂಪಾಯಿಗೆ ತುಂಡು ಭೂಮಿಯೊಂದನ್ನು ಖರೀದಿಸಲಾಗಿತು. ಐದು ನಿಮಿಷಗಳ ಬಳಿಕ ಅದನ್ನು ರಾಮ ಮಂದಿರ ಟ್ರಸ್ಟ್ ಗೆ 18.50 ಕೋಟಿ ರೂಪಾಯಿಗೆ ಮಾರಾಟ ಮಾಡಲಾಯಿತು ಎಂದು ಅವರು ಹೇಳಿದ್ದಾರೆ. ಈ ಹಗರಣದ ವಿರುದ್ಧ ಸಿಬಿಐ ಹಾಗೂ ಜಾರಿ ನಿರ್ದೇಶನಾಲಯದಿಂದ ತನಿಖೆ ನಡೆಸಬೇಕು ಎಂದು ಅವರು ಆಗ್ರಹಿಸಿದ್ದಾರೆ.

Read These Next

ಹುಬ್ಬಳ್ಳಿ: ಹುಬ್ಬಳ್ಳಿಯ ಚರ್ಚ್‌ಗೆ ನುಗ್ಗಿ ಭಜನೆ ಮಾಡಿದ ಸಂಘಪರಿವಾರದ ಕಾರ್ಯಕರ್ತರು

ಬಲವಂತದಿಂದ ಮತಾಂತರಗಳನ್ನು ಮಾಡಲಾಗುತ್ತಿದೆ ಎಂದು ಆರೋಪಿಸಿ ರವಿವಾರ ಬೆಳಗ್ಗೆ ಇಲ್ಲಿಯ ಭೈರಿದೇವರ ಕೊಪ್ಪದಲ್ಲಿರುವ ಚರ್ಚೆಂದಕ್ಕೆ ...

ಫೇಸ್ ಕ್ರೀಂನಲ್ಲಿ 24 ಲಕ್ಷ ರೂ. ಮೌಲ್ಯದ ಚಿನ್ನ ಕಳ್ಳಸಾಗಣೆ ಯತ್ನ: ಏರ್ ಪೋರ್ಟ್ ನಲ್ಲಿ ಆರೋಪಿ ಬಂಧನ

ಹೈದರಾಬಾದ್: ಹೈದರಾಬಾದ್ ಆರ್ ಜಿ ಐ ವಿಮಾನ ನಿಲ್ದಾಣದ ಕಸ್ಟಮ್ಸ್ ಅಧಿಕಾರಿಗಳು ಫೇಸ್ ಕ್ರೀಮ್ ನಲ್ಲಿ ಚಿನ್ನ ಕಳ್ಳಸಾಗಣೆ ಮಾಡುತ್ತಿದ್ದ ...