ಕಾರವಾರ: ಕೈಗಾರಿಕೆಗಳ ಕೆಲಸಗಾರರಿಗೆ ವೆಕ್ಸಿನೇಷನ್

Source: S.O. News service | By S O News | Published on 5th June 2021, 8:10 PM | Coastal News |

ಕಾರವಾರ: ಕೋವಿಡ್-19 ಹಿನ್ನೆಲೆಯಲ್ಲಿ ಕೈಗಾರಿಕೆಗಳಲ್ಲಿ ಕೆಲಸ ನಿರ್ವಹಿಸುತ್ತಿರುವ ಕೆಲಸಗಾರರಿಗೆ ಹತ್ತಿರದ ವೆಕ್ಸಿನೇಷನ್ ಕೇಂದ್ರಗಳಲ್ಲಿ ವೆಕ್ಸಿನೇಷನ್ ನೀಡುವಂತೆ ಸರ್ಕಾರದ ಆದೇಶವಾಗಿದ್ದು, ಜಿಲ್ಲೆಯ ಕೈಗಾರಿಕಾ ಘಟಕಗಳ ಮಾಲಿಕರು ತಮ್ಮ ಕೈಗಾರಿಕಾ ಘಟಕಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಕೆಲಸಗಾರರ ವಿವರಗಳನ್ನು ಜಿಲ್ಲಾ ಕೈಗಾರಿಕಾ ಕೇಂದ್ರ ಕಾರವಾರ ಕಛೇರಿಗೆ ಸಲ್ಲಿಸಬೇಕಾಗಿರುತ್ತದೆ. ಕೈಗಾರಿಕಾ ಘಟಕಗಳ ಮಾಲಿಕರು ಕೆಲಸಗಾರರ ವಿಳಾಸ, ವಯಸ್ಸು, ಆಧಾರ ಸಂಖ್ಯೆ, ಹತ್ತಿರದ ವೆಕ್ಸಿನೇಷನ್ ಕೇಂದ್ರದ ವಿವರವನ್ನೊಳಗೊಂಡ ಯಾದಿಯನ್ನು ಜಿಲ್ಲಾ ಕೈಗಾರಿಕಾ ಕೇಂದ್ರ ಕಾರವಾರ ಕಛೇರಿಯ ಇ-ಮೇಲ್ [email protected] ಗೆ ಕಳುಹಿಸಲು ಕೋರಿದೆ

ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಕೈಗಾರಿಕಾ ಕೇಂದ್ರ, ಶಿರವಾಡ, ಕಾರವಾರ ಕಛೇರಿಯನ್ನು 9481372678 ಅಥವಾ 9611091333 ಮೂಲಕ ಸಂಪರ್ಕಿಸಬಹುದಾಗಿದೆ ಎಂದು ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಧನಂಜಯ ಹೆಗಡೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Read These Next

ಕಾರವಾರ: ಮತದಾನ ಜಾಗೃತಿ ಜಾಥಾ

ಪ್ರತಿಯೊಂದು ಮತವು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ನೀವು ನಿಮ್ಮ ಸುತ್ತಲಿನವರಿಗೂ ಮತದಾನ ಜಾಗೃತಿ ಮೂಡಿಸಬೇಕು ...