ತೌಕ್ತೆ ಚಂಡಮಾರುತ ದ ಎಫೆಕ್ಟ್ ಗೆ ತತ್ತರಿಸಿದ ಉತ್ತರಕನ್ನಡ ಕರಾವಳಿ. ಮನೆಗಳಿಗೆ ನುಗ್ಗಿದ ನೀರು, ಆಸ್ತಿಪಾಸ್ತಿಗೆ ಹಾನಿ.

Source: SO News | By Laxmi Tanaya | Published on 15th May 2021, 5:36 PM | Coastal News | Don't Miss |

ಕಾರವಾರ : ತೌಕ್ತೆ ಚಂಡಮಾರುತದ ಎಫೆಕ್ಟ್ ಉತ್ತರಕನ್ನಡ ಜಿಲ್ಲೆಯ ಕರಾವಳಿ ಭಾಗದಲ್ಲಿ ತಟ್ಟಿದೆ. ಪರಿಣಾಮವಾಗಿ  ಜಿಲ್ಲೆಯ ಕಡಲಂಚಿನಲ್ಲಿ ನೀರು ನುಗ್ಗಿದೆ.

ಕಾರವಾರ, ಭಟ್ಕಳ, ಕುಮಟಾ, ಹೊನ್ನಾವರ, ಅಂಕೋಲಾದ ಸಮುದ್ರದಂಚಿನಲ್ಲಿರುವ ಗ್ರಾಮೀಣ ಪ್ರದೇಶಗಳಲ್ಲಿ ಸಮುದ್ರದಲ್ಲಿ ಅಲೆಯ ಅಬ್ಬರ ಹೆಚ್ಚಾಗಿದೆ.  ಭಟ್ಕಳ ತಾಲೂಕಿನ ಮುರ್ಡೇಶ್ವರ, ಹೆರ್ತಾರ, ಹೊನ್ನೆಗದ್ದೆ, ತೆಂಗಿನಗುಂಡಿ, ಅಳ್ವೆಕೋಡಿ ಭಾಗದಲ್ಲಿ ಸಮುದ್ರ ಉಕ್ಕಿ ಹರಿದಿದೆ. ಕುಮಟಾ ತಾಲೂಕಿನ ಹೆಡ್ ಬಂದರ್, ಮೂಡಂಗಿ, ತದಡಿ, ಹೊಸ್ಕಟ್ಟಾ, ಬಾಡದಲ್ಲಿ ಕಡಲು ರಸ್ತೆಯನ್ನ ಅಕ್ರಮಿಸಿಕೊಂಡಿದೆ. ಅಂಕೋಲಾದ ಹಾರವಾಡ, ಗಾಬಿತವಾಡ ಮತ್ತು  ಕಾರವಾರದ ರವೀಂದ್ರನಾಥ ಟ್ಯಾಗೋರ್  ಕಡಲತೀರ, ದೇವಭಾಗದಲ್ಲಿ ಸಮುದ್ರ ನೀರು ಮಾಮೂಲಿ ದಿನಕ್ಕಿಂದ ಹೆಚ್ಚಾಗಿ ಆರ್ಭಟಿಸುತ್ತಿದೆ.

ಸಮುದ್ರದಲ್ಲಿ ಅಲೆಗಳ ಅಬ್ಬರ ಜಾಸ್ತಿಯಾಗಿದ್ದರಿಂದ  ಅಲ್ಲಲ್ಲಿ ದೋಣಿಗಳಿಗೂ ಹಾನಿಯಾಗಿದೆ. ಅಲ್ಲದೇ ತೀರ ಪ್ರದೇಶದಲ್ಲಿರುವ ತೆಂಗಿನ ಮರಗಳು ಕೂಡ ಅಲೆಯ ರುದ್ರನರ್ತನಕ್ಕೆ ಬುಡಸಮೇತ ಬಿದ್ದು ನೀರು ಪಾಲಾಗಿದೆ. 

ಬಂದರುಗಳಲ್ಲಿ ಲಂಗರು ಹಾಕಿರುವ ಯಾಂತ್ರಿಕ ದೋಣಿಗಳು ಒಂದಕ್ಕೊಂದು ಘರ್ಷಣೆಯಾಗಿ ಹಾನಿಯಾಗಿವೆ. ಇನ್ನೂ ನಾಲ್ಕು ದಿನಗಳ ಕಾಲ ಕರಾವಳಿ ಭಾಗದ ನಾಗರಿಕರು ಜಾಗೃತೆಯಿಂದಿರುವಂತೆ ಉತ್ತರಕನ್ನಡ ಜಿಲ್ಲಾಡಳಿತ ಎಚ್ಚರಿಕೆ ನೀಡಿದೆ.

Read These Next

ಕಾರವಾರ: ಟ್ಯಾಬ್ ನೊಂದಿಗೆ ಭವಿಷ್ಯ ಕೂಡ ವಿದ್ಯಾರ್ಥಿ ಕೈಯಲ್ಲೇ ಇದೆ : ಶಾಸಕಿ ರೂಪಾಲಿ ನಾಯ್ಕ

“ಇಂದು ವಿತರಿಸಲಾಗುತ್ತಿರುವ ಟ್ಯಾಬ್‍ನೊಂದಿಗೆ ಭವಿಷ್ಯ ಕೂಡ ನಿಮ್ಮ ಕೈಯಲ್ಲೇ ಇದೆ, ವಿದ್ಯಾರ್ಥಿಗಳು ಸರಕಾರ ನೀಡಿರುವ ಟ್ಯಾಬ್ ಪಿಸಿ ...

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಡೀ ದಿನ ಲಾಕ್ ಡೌನ್ ಸಡಿಲಿಸಬೇಕು. ಮಾಜಿ ಶಾಸಕ ಐವಾನ್ ಡಿಸೋಜಾ ಆಗ್ರಹ.

ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಲಾಕ್ ಡೌನ್ ಇಡೀ ದಿನ ಸಡಿಲಿಕೆ ಮಾಡಬೇಕು. ತಕ್ಷಣ ಬಸ್ ಸಂಚಾರ ಆರಂಭಿಸಬೇಕು. ಎಲ್ಲರಿಗೆ ಲಸಿಕೆ ...

ಮೂರು ತಿಂಗಳ ಅವಧಿಯ ವಿದ್ಯುತ್ ಬಿಲ್ಲು, ನೀರಿನ ಬಿಲ್ಲು ಮನ್ನಾ ಮಾಡಬೇಕು- ಮುನೀರ್ ಕಾಟಿಪಳ್ಳ

ಮಂಗಳೂರು: ಕೊರೋನಾ ಕಾಲದ ಈ ಎರಡನೇ ಅಲೆಯಲ್ಲಿ ಸರಕಾರ ಘೋಷಿಸಿದ ಲಾಕ್ಡೌನ್ ನ ಈ ಸಂಕಷ್ಟದ ಕಾಲದಲ್ಲಿ ಜನರಿಗೆ ಉದ್ಯೋಗ ಇಲ್ಲದೆ ಅನ್ನ , ...