ಪಿಎಂ ಕಿಸಾನ್ ನೋಂದಣಿಯಲ್ಲಿ ಉತ್ತರ ಕನ್ನಡ ರಾಜ್ಯದಲ್ಲೇ ಪ್ರಥಮ: ಡಿಸಿ

Source: sonews | By Staff Correspondent | Published on 16th July 2019, 6:05 PM | Coastal News | Don't Miss |

ಕಾರವಾರ: ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ ಶೇಕಡಾವಾರು 101.92ರಷ್ಟು ರೈತರನ್ನು ನೋಂದಾಯಿಸುವ ಮೂಲಕ ಉತ್ತರ ಕನ್ನಡ ಜಿಲ್ಲೆ ರಾಜ್ಯದಲ್ಲೇ ಪ್ರಥಮ ಸ್ಥಾನದಲ್ಲಿದೆ.

ಪಿ.ಎಂ.ಕಿಸಾನ್ ಯೋಜನೆಯಡಿ ರೈತರನ್ನು ನೋಂದಾಯಿಸುವ ಸಂಬಂಧ ರಾಜ್ಯಾದ್ಯಂತ ಗುರಿ ನೀಡಲಾಗಿತ್ತು. ಅದರಂತೆ ದಿನಾಂಕ 15-07-2019ರ ವರದಿಯಂತೆ ರಾಜ್ಯದ 30 ಜಿಲ್ಲೆಗಳ ಪೈಕಿ ಉತ್ತರ ಕನ್ನಡ ಜಿಲ್ಲೆ ಪ್ರಥಮ ಸ್ಥಾನದಲ್ಲಿದೆ ಎಂದು ಜಿಲ್ಲಾಧಿಕಾರಿ ಡಾ.ಹರೀಶ್‍ಕುಮಾರ್ ಕೆ. ತಿಳಿಸಿದ್ದಾರೆ.

2015-16ರ ಕೃಷಿ ಗಣತಿಯಂತೆ ಉತ್ತರ ಕನ್ನಡ ಜಿಲ್ಲೆಯಲ್ಲಿ ಒಟ್ಟು 1,99,241 ಹಿಡುವಳಿದಾರರಿದ್ದು ಈ ಪೈಕಿ 54,278 ಹಿಡುವಳಿದಾರರನ್ನು ಅನರ್ಹರೆಂದು ಗುರುತಿಸಲಾಗಿದೆ. 1,44,963 ಪರಿಷ್ಕøತ ಗುರಿ ಇದ್ದು ಇದರಲ್ಲಿ 1,47,751 ರೈತರನ್ನು ಪಿ.ಎಂ.ಕಿಸಾನ್ ಯೋಜನೆಯಡಿ ನಮೂದಿಸಲಾಗಿದ್ದು ಪರಿಷ್ಕøತ ಗುರಿಗೆ ಹೋಲಿಸಿದೆ ಶೇ.101.92 ರಷ್ಟು ನೋಂದಣಿ ಮಾಡಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಎಲ್ಲ ಉಪ ವಿಭಾಗಗಳ ಸಹಾಯಕ ಕಮಿಷನರ್‍ಗಳು, ಜಿಲ್ಲೆಯ ಎಲ್ಲ ತಾಲೂಕುಗಳ ತಹಸೀಲ್ದಾರ್ ಸೇರಿದಂತೆ ವಿವಿಧ ಇಲಾಖೆಗಳ ಸಿಬ್ಬಂದಿಯ ಪರಿಶ್ರಮದಿಂದ ಪಿ.ಎಂ.ಕಿಸಾನ್ ನೋಂದಣಿಯಲ್ಲಿ ರಾಜ್ಯದಲ್ಲಿಯೇ ಪ್ರಥಮ ಸ್ಥಾನದಲ್ಲಿ ಉತ್ತರ ಕನ್ನಡ ಜಿಲ್ಲೆ ದಾಖಲೆ ಮಾಡಿದೆ. ಈ ಮೂಲಕ ಜಿಲ್ಲೆಯ ಎಲ್ಲ ರೈತರೂ ಈ ಯೋಜನೆ ವ್ಯಾಪ್ತಿಗೊಳಪಟ್ಟಿದ್ದಾರೆ. ಈ ಸಾಧನೆಗೆ ಶ್ರಮಿಸಿದ ಎಲ್ಲ ಅಧಿಕಾರಿಗಳು ಹಾಗೂ ಸಿಬ್ಬಂದಿಯವರಿಗೆ ಅಭಿನಂದಿಸಲಾಗಿದೆ ಎಂದು ಅವರು ತಿಳಿಸಿದರು.

ಜಿಲ್ಲೆಯಿಂದ ಹೊರಗಿರುವ ರೈತರು ಆನ್‍ಲೈನ್‍ನಲ್ಲೂ ಪಿ.ಎಂ.ಕಿಸಾನ್ ಯೋಡಿನೆಯಡಿ ನೋಂದಣಿ ಮಾಡಿಕೊಳ್ಳಲು ಅವಕಾಶ ನೀಡಲಾಗಿದೆ ಎಂದು ಜಂಟಿ ಕೃಷಿ ನಿರ್ದೇಶಕ ಹೊನ್ನಪ್ಪಗೌಡ ತಿಳಿಸಿದರು.

ರೈತರ ಅನುಕೂಲಕ್ಕಾಗಿಯೇ ಹೊಸದಾಗಿ ಪ್ರತ್ಯೇಕ ಪೋರ್ಟನ್ ಒಂದನ್ನು ಪರಿಚಯಿಸಿದ್ದು ಹೊರಭಾಗದಲ್ಲಿರುವ ರೈತರು ಅಲ್ಲಿಂದಲೇ ನೋಂದಣಿ ಮಾಡಲು ಅವಕಾಶವಿದೆ. ಈ ನಿಟ್ಟಿನಲ್ಲಿ ಜಿಲ್ಲೆಯಿಂದ ಹೊರಗಿರುವ ರೈತರೂ ಈ ಯೋಜನೆಯ ಸದುಪಯೋಗಪಡಿಸಿಕೊಳ್ಳಬಹುದಾಗಿದೆ ಎಂದರು.

ಸರ್ವೆ ನಂಬರಿನ ಆಧಾರದ ಮೇಲೆ ರೈತರನ್ನು ಸ್ವಯಂ ಘೋಷಣೆಗಳನ್ನು ನೋಂದಣಿ ಮಾಡಲು ನಮಗೆ ಪರಿಷ್ಕøತ ಗುರಿ ನೀಡಲಾಗಿತ್ತು. ಕೆಲವೆಡೆ ಜಂಟಿ ಖಾತೆಗಳೂ ಇರುವುದರಿಂದ ಶೇ.101.92 ಸಾಧನೆ ಮಾಡಲಾಗಿದೆ. ಈ ಪ್ರಕ್ರಿಯೆಯಲ್ಲಿ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು, ಕೃಷಿ ಮತ್ತು ತೋಟಗಾರಿಕೆ ಇಲಾಖೆ ಅಧಿಕಾರಿಗಳು, ಕಂದಾಯ ಇಲಾಖೆ ಅಧಿಕಾರಿಗಳು, ಅಟಲ್‍ಜಿ, ಬಾಪೂಜಿ ಸೇವಾ ಕೇಂದ್ರಗಳು ನೋಂದಣಿಯಲ್ಲಿ ತೊಡಗಿಸಿಕೊಂಡಿದ್ದರು ಎಂದು ಅವರು ತಿಳಿಸಿದರು
    
Read These Next

ಭಟ್ಕಳ : ಈದುಲ್ ಫಿತ್ರ್ ನಿಮಿತ್ತ ಒಂದು ಲಕ್ಷ ಇಪ್ಪತ್ತು ಸಾವಿರಕ್ಕೂ ಅಧಿಕ ಫೀತ್ರ್ ಅಕ್ಕಿ ವಿತರಣೆ

ಭಟ್ಕಳ: ಈದುಲ್ ಫಿತ್ರ್ ಸಂದರ್ಭದಲ್ಲಿ ಪ್ರತಿಯೊಬ್ಬ ಮುಸ್ಲಿಮನು ತನ್ನ ಈದ್ ಹಬ್ಬಕ್ಕೆ ಒಂದು ಮುಂಚೆ ಕಡ್ಡಾಯವಾಗಿ ನೀಡುವ ಫಿತ್ರ್ ...

ಭಟ್ಕಳ ಸ್ಪೋರ್ಟ್ಸ್ ಅಕಾಡೆಮಿ ಮತ್ತು BMYF ಸಹಯೋಗದೊಂದಿಗೆ ಎ.20-21 ರಂದು ಯುವ ಪ್ರತಿಭೆಗಳಿಗಾಗಿ ಇಂಟರ್-ಕ್ರಿಕೆಟ್ ಲೀಗ್ ಆಯ್ಕೆ

ಭಟ್ಕಳ: ಉತ್ತರ ಕನ್ನಡ ಜಿಲ್ಲೆಯ ಉದಯೋನ್ಮುಖ ಕ್ರಿಕೆಟ್ ಪ್ರತಿಭೆಗಳನ್ನು ಗುರುತಿಸುವ ಮತ್ತು ಪೋಷಿಸುವ ಪ್ರಯತ್ನದಲ್ಲಿ, ಭಟ್ಕಳ ...

ಭಟ್ಕಳ ತಾಲೂಕಿನಲ್ಲಿ ಸರಣಿ ಕಳ್ಳತನ; ತಲೆಗೆ ಹೆಲ್ಮೆಟ್ ಹಾಗೂ ಮುಖಕ್ಕೆ ಮಾಸ್ಕ್ ಧರಿಸಿ ಲಕ್ಷಾಂತರ ರೂ ಲೂಟಿ

ಭಟ್ಕಳ: ನಗರದ ರಂಗನಕಟ್ಟೆಯಲ್ಲಿರುವ ವಿನಾಯಕ ಸಹಕಾರಿ ಸಂಘ ಸೇರಿದಂತೆ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಒಂದು ಅಂಗಡಿ ಹಾಗೂ ...