ಕಾರವಾರ: ಸರಳ ಗಣರಾಜ್ಯೋತ್ಸವ ಆಚರಣೆ : ಡಿಸಿ

Source: S O News service | By I.G. Bhatkali | Published on 8th January 2021, 6:15 PM | Coastal News | Don't Miss |

ಕಾರವಾರ: ಕೋವಿಡ್-19 ಕಾರಣದಿಂದ 2021 ರ ಗಣರಾಜ್ಯೋತ್ಸವನ್ನು ಕೂಡ ಸರಳ ರಿತಿಯಲ್ಲಿ ಹೆಚ್ಚು ಜನರು ಸೇರದಂತೆ ್ತ ಕನ್ನಡ ರಾಜ್ಯೋತ್ಸವ ಮಾದರಿಯಲ್ಲಿಯೇ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳೊಂದಿಗೆ ಆಚರಿಸಲಾಗುವುದೆಂದು ಜಿಲ್ಲಾಧಿಕಾರಿ ಡಾ.ಹರೀಶ ಕುಮಾರ ಕೆ. ಅವರು ಹೆಳಿದರು.

ಶುಕ್ರವಾರ ಜಿಲ್ಲಾಧಿಕರಿ ಕಚೇರಿ ಸಂಭಾಂಗಣದಲ್ಲಿ ಜನವರಿ 26 ರಂದು ಆಚರಿಸಲಾಗುವ ಗಣರಾಜ್ಯೋತ್ಸ ಕಾರ್ಯಕ್ರಮದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಕೋವಿಡ್-19ದಿಂದಾಗಿ ಈ ಬಾರಿಯ ಗಣರಾಜ್ಯೋತ್ಸವನ್ನು ಕೂಡಾ ಹೆಚ್ಚು ಜನರು ಸೇರದಂತೆ ಸರಳವಾಗಿ ಆಚರಿಸಲು ನಿರ್ಧರಿಸಲಾಗಿರುತ್ತದೆ ಎಂದರು. 

ಶಾಲಾ ಕಾಲೇಜಿನ ಮಕ್ಕಳಿಗೆ ಪರೆಡ್‍ನಲ್ಲಿ ಭಾಗವಹಿಸಲು ಅವಕಾಶವಿರುವುದಿಲ್ಲಾ ಅಲ್ಲದೇ ಸಾಂಸ್ಕ್ರತಿಕ ಕಾರ್ಯಕ್ರಮಗಳನ್ನು ಪರೆಡ್‍ನಲ್ಲಾಗಲಿ ಅಥವಾ ರಂಗಮಂದಿರದಲ್ಲಾಗಲಿ ನಡೆಸುವುದನ್ನು ಈ ಬಾರಿ ಕೈ ಬಿಡಲಾಗುವುದು.  

ಒಂದು ಅಂದಾಜಿನ ಪ್ರಕಾರ ಕೋವಿಡ್-19 ಸೊಂಕಿತರ ಸಂಖ್ಯೆ ಇಳಿಮುಖವಾಗುತ್ತಿದೆ ಎನ್ನಲಾಗುತ್ತಿದೆಯಾದರೂ ಮುಂಜಾಗೃತ ಕ್ರಮವಾಗಿ ಹೆಚ್ಚು ಜನಸಂದಣಿ ಸೇರದಂತೆ  ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಅಗತ್ಯವಾಗಿದೆ. ಈ ಹಿನ್ನೆಲೆಯಲ್ಲಿ ಗಣರಾಜ್ಯೋತ್ಸವನ್ನು ಕೂಡಾ ಹೆಚ್ಚು ಜನಸಂದಣಿ ಸೇರದಂತೆ ಸಾಂಸ್ಕ್ರತಿಕ ಕಾರ್ಯಕ್ರಗಳಿಲ್ಲದೆ ಸರಳವಾಗಿ ಆಚರಿಸಲಾಗುವುದು ಎಂದರು. 

ಅಪರ ಜಿಲ್ಲಾಧಿಕಾರಿ ಎಚ್.ಕೆ ಕೃಷ್ಣಮೂರ್ತಿ ಅವರು ಮಾತನಾಡಿ ಗಣರಾಜ್ಯೋತ್ಸವನ್ನು ಸರಳವಾಗಿ ಆಚರಿಸಲಾಗುತ್ತಿದೆ ಆದರೆ ಗಣರಾಜ್ಯೊತ್ಸವದಂತಹ ರಾಷ್ಟ್ರೀಯ ಹಬ್ಬಕ್ಕೆ ಯಾವುದೇ ಚ್ಯುತಿ ಬರದಂತೆ ವಿವಿಧ ಇಲಾಖೆಗಳಿಗೆ ವಹಿಸಿದ ಜವಾಬ್ದಾರಿಗಳ ಹೊಣೆಗಾರಿಕೆಯನ್ನು ಹೊತ್ತು ಅಧಿಕಾರಿ ಮತ್ತು ಸಿಬಂದ್ಧಿ  ಕಾರ್ಯನಿರ್ವಹಿಸಬೇಕೆಂದರು.  ಅಲ್ಲದೇ ಅಂದಿನ ಕಾರ್ಯಕ್ರಮದಲ್ಲಿ ಎಲ್ಲಾ ಇಲಾಖೆ ಅಧಿಕಾರಿ ಮತ್ತು ಸಿಬಂದ್ಧಿ ರಜೆ ಹಾಕಿಕೊಳ್ಳದೆ ತಮ್ಮ ದೇಶಪ್ರೇಮವನ್ನು ವ್ಯಕ್ತಪಡಿಸಬೇಕು, ಹಾಜರಾತಿ ಕಡ್ಡಾಯವಲ್ಲ ಎಂಬುದನ್ನು ಬೇರೆ ರಿತಿಯಲ್ಲಿ ಬಳಸಿಕೊಳ್ಳಬಾರದೆಂದು ಸಲಹೆ ನೀಡಿದರು.  

ಈ ಸಂರ್ಭದಲ್ಲಿ ಹೆಚ್ಚುವರಿ ಪೋಲಿಸ್ ವರಿಷ್ಠಾಧಿಕಾರಿ ಎಸ್. ಬದ್ರಿನಾಥ ಹಾಗೂ ಕಾರವಾರ ಉಪ ವಿಭಾಗಾಧಿಕಾರಿ ವಿದ್ಯಾಶ್ರಿ ಚಂದರಗಿ ಹಾಗೂ ವಿವಿಧ ಇಲಾಖೆಯ ಅಧಿಕಾರಿ ಮತ್ತು ಸಿಬಂದ್ದಿಗಳು ಹಾಜರಿದ್ದರು.  
 

Read These Next

ಧರ್ಮ, ಜಾತಿ, ಜನಾಂಗದ ತಾರತಮ್ಯಗಳಿಂದ ಹೊರಬಂದು ದೇಶ ಹಿತ ಕಾಪಾಡುವಂತೆ ಸಹಾಯಕ ಆಯುಕ್ತ ಭರತ್ ಕರೆ

ಭಟ್ಕಳ: ಭಾರತ ದೇಶ ಸಾರ್ವಭೌಮ ಗಣತಂತ್ರ ರಾಷ್ಟçವಾಗಿದ್ದು ಇಲ್ಲಿ ಎಲ್ಲರೂ ಸಮಾನರು. ಧರ್ಮ, ಜಾತಿ, ಜನಾಂಗದ ತಾರತಮ್ಯಗಳಿಂದ ಹೊರಬಂದು ...