ಉತ್ತರಕನ್ನಡ 12ಮಂದಿಗೆ ಕೋವಿಡ್ 19 ದೃಢ

Source: so news | Published on 13th July 2020, 12:47 AM | Coastal News | Don't Miss |

 
ಕಾರವಾರ: ಜಿಲ್ಲೆಯಲ್ಲಿ ಭಾನುವಾರ 12 ಮಂದಿಗೆ ಕೋವಿಡ್ 19 ದೃಢಪಟ್ಟಿದೆ.ಅವರಲ್ಲಿ ಕಾರವಾರದ ಐವರು, ಸಿದ್ದಾಪುರ, ಭಟ್ಕಳದ ತಲಾ ಇಬ್ಬರು, ಹಳಿಯಾಳ ಮತ್ತು ದಾಂಡೇಲಿಯ ತಲಾ ಒಬ್ಬರು ಸೇರಿದ್ದಾರೆ.
ಇದೇರೀತಿ ಜಿಲ್ಲೆಯ ಇಬ್ಬರು ಮಂಗಳೂರಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರ ಮಾಹಿತಿಯನ್ನು ದಕ್ಷಿಣ ಕನ್ನಡದ ಪಟ್ಟಿಯಲ್ಲಿ ಸೇರಿಸಲಾಗಿದೆ. ಹೊಸದಾಗಿ ಸೋಂಕಿತರಾದವರ ಪೈಕಿ ನಾಲ್ವರ ಸೋಂಕಿನ ಮೂಲವನ್ನು ಹುಡುಕಲಾಗುತ್ತಿದೆ. ಅವರಲ್ಲಿ ಹಳಿಯಾಳದ 53 ವರ್ಷದ ವ್ಯಕ್ತಿ, ಭಟ್ಕಳದ 17 ವರ್ಷದ ಬಾಲಕ ಹಾಗೂ ಕಾರವಾರದ ಇಬ್ಬರು ಒಳಗೊಂಡಿದ್ದಾರೆ.
ಸಿದ್ದಾಪುರದ ತಾಲ್ಲೂಕು ಆಸ್ಪತ್ರೆಯ 44 ವರ್ಷದ ಪುರುಷ ಸಿಬ್ಬಂದಿ ಕಾರವಾರದ ‘ಕ್ರಿಮ್ಸ್‌’ನ 25 ವರ್ಷದ ಮಹಿಳಾ ಸಿಬ್ಬಂದಿಗೂ ಕೋವಿಡ್ ದೃಢಪಟ್ಟಿದೆ. ಉಳಿದಂತೆ, ಕಾರವಾರದ 22 ವರ್ಷದ ಯುವಕ, ಸಿದ್ದಾಪುರದ 73 ವರ್ಷದ ಮಹಿಳೆ, ದಾಂಡೇಲಿಯ 80 ವರ್ಷದ ವ್ಯಕ್ತಿ ಮೂವರು ಪ್ರತ್ಯೇಕವಾಗಿ ಸೋಂಕಿತರ ಪ್ರಾಥಮಿಕ ಸಂಪರ್ಕಕ್ಕೆ ಬಂದವರಾಗಿದ್ದಾರೆ. ಕಾರವಾರದ 16 ವರ್ಷದ ಬಾಲಕ, ಭಟ್ಕಳದ 25 ವರ್ಷದ ಯುವಕ ಬೆಂಗಳೂರಿನಿಂದ ಮರಳಿದವರಾಗಿದ್ದಾರೆ. 
ಆರು ಮಂದಿ ಗುಣಮುಖ: ಕೋವಿಡ್ 19ನಿಂದ ಗುಣಮುಖರಾದ ಆರು ಮಂದಿಯನ್ನು ಕಾರವಾರದ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಕೋವಿಡ್ ವಾರ್ಡ್‌ನಿಂದ ಭಾನುವಾರ ಬಿಡುಗಡೆ ಮಾಡಲಾಯಿತು. ಹಳಿಯಾಳದವರಾದ 12 ವರ್ಷದ ಬಾಲಕಿ, 78 ವರ್ಷದ ಹಿರಿಯ ವ್ಯಕ್ತಿ ಹಾಗೂ 72 ವರ್ಷದ ಹಿರಿಯ ಮಹಿಳೆ, ಅಂಕೋಲಾದ 27 ವರ್ಷದ ಯುವಕ, ಶಿರಸಿಯ 28 ಹಾಗೂ 35 ವರ್ಷದ ಯುವಕರು ಗುಣಮುಖರಾಗಿದ್ದಾರೆ

Read These Next

ಕಾರವಾರ: ಮತದಾನ ಜಾಗೃತಿ ಜಾಥಾ

ಪ್ರತಿಯೊಂದು ಮತವು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ನೀವು ನಿಮ್ಮ ಸುತ್ತಲಿನವರಿಗೂ ಮತದಾನ ಜಾಗೃತಿ ಮೂಡಿಸಬೇಕು ...

ರಾಜ್ಯದಲ್ಲಿ ಬಿಜೆಪಿ ಕುರುಬ ಸಮಾಜದ ಒಬ್ಬರಿಗೂ ಟಿಕೆಟ್ ಕೊಟ್ಟಿಲ್ಲ, ಒಬ್ಬೇ ಒಬ್ಬ ಮರಾಠರಿಗೂ, ಒಬ್ಬ ಮುಸ್ಲಿಂಗೂ ಟಿಕೆಟ್ ಕೊಟ್ಟಿಲ್ಲ: ಸಿ ಎಂ ಸಿದ್ದರಾಮಯ್ಯ

ಬೀದರ್ : ಅಧಿಕಾರ, ಅವಕಾಶ, ಸಂಪತ್ತು‌ ಎಲ್ಲ ಸಮುದಾಯಗಳಿಗೂ ಹಂಚಿಕೆ ಆದರೆ ಮಾತ್ರ ದೇಶದ ಪ್ರಗತಿ ಸಾಧ್ಯ ಎಂದು ಮುಖ್ಯಮಂತ್ರಿ ...

ಗುಲಬರ್ಗಾ ಲೋಕಸಭಾ (ಮೀಸಲು) ಕ್ಷೇತ್ರದ ಚುನಾವಣೆ: ಚುನಾವಣಾ ಸ್ಪರ್ಧಾ ಕಣದಲ್ಲಿ 14 ಅಭ್ಯರ್ಥಿಗಳು

ಕಲಬುರಗಿ : ಗುಲಬರ್ಗಾ ಲೋಕಸಭಾ (ಪ.ಜಾ. ಮೀಸಲು) ಕ್ಷೇತ್ರಕ್ಕೆ 2024ರ ಮೇ 7ರಂದು ನಡೆಯುವ ಚುನಾವಣೆಗಾಗಿ ನಾಮಪತ್ರಗಳನ್ನು ಹಿಂದಕ್ಕೆ ಪಡೆಯಲು ...