ಗೋರಖಪುರದ ಗೋರಖ್ ನಾಥ್ ದೇವಾಲಯ ಸ್ಪೋಟ ಬೆದರಿಕೆ; ಶಿವೇಂದ್ರ ಸಿಂಗ್ ಎಂಬಾತನ ಬಂಧನ

Source: sonews | By Staff Correspondent | Published on 30th September 2020, 11:23 PM | National News |

ಗೋರಖ್‌ಪುರ: ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಅದಿಥ್ಯನಾಥ್  ಸಂಸದೀಯ  ಕ್ಷೇತ್ರವಾಗಿರುವ ಗೋರಖಪುರದ   ಗೋರಖನಾಥ ದೇವಾಲಯವನ್ನು ಸ್ಫೋಟಿಸುವುದಾಗಿ ಬೆದರಿಕೆ ಒಡ್ಡಿದ ವ್ಯಕ್ತಿಯೋರ್ವನನ್ನು ಬಂಧಿಸಲಾಗಿದೆ ಎಂದು ಪೊಲೀಸರು ಬುಧವಾರ ಹೇಳಿದ್ದಾರೆ. ಶಿವೇಂದ್ರ ಸಿಂಗ್ ಎಂಬ ವ್ಯಕ್ತಿ ಎಸ್‌ಎಸ್‌ಪಿಗೆ ಕರೆ ಮಾಡಿ, ‘‘ನಾನು ಬೇಡೋಲಿ ಬಾಬು ಗ್ರಾಮದಿಂದ ಮಾತನಾಡುತ್ತಿದ್ದೇನೆ ಹಾಗೂ ನಾನು ನನ್ನ ಸಹಚರರೊಂದಿಗೆ ಗೋರಖ್‌ನಾಥ ದೇವಾಲಯವನ್ನು ಸ್ಫೋಟಿಸಲಿದ್ದೇವೆ’’ ಎಂದು ಬೆದರಿಕೆ ಒಡ್ಡಿದ್ದಾನೆ.

ಈ ಬೆದರಿಕೆ ಹಿನ್ನೆಲೆಯಲ್ಲಿ ಪೊಲೀಸರು ಗೋರಖ್‌ನಾಥ ದೇವಾಲಯಕ್ಕೆ ಭದ್ರತೆ ಒದಗಿಸಿದ್ದಾರೆ. ‘‘ಆತ ನನಗೆ ಕರೆ ಮಾಡಿ 24 ಗಂಟೆಗಳ ಒಳಗೆ ದೇವಾಲಯ ಸ್ಫೋಟಿಸಲಾಗುವುದು ಎಂದು ಬೆದರಿಕೆ ಒಡ್ಡಿದ್ದ. ಸಾಧ್ಯವಾದರೆ ತಡೆಯಿರಿ ಎಂದು ಸವಾಲು ಹಾಕಿದ್ದ ಎಂದು ಎಸ್‌ಎಸ್‌ಪಿ ಜೋಗೇಂದ್ರ ಕುಮಾರ್ ಹೇಳಿದ್ದಾರೆ. ಎಸ್‌ಎಸ್‌ಪಿ ಅವರಿಗೆ ಕರೆ ಮಾಡಿದ ಬಳಿಕ ಆತನ ಮೊಬೈಲ್ ಸ್ವಿಚ್ ಆಫ್ ಆಗಿದೆ. ಅನಂತರ ಕೆಲವು ಗಂಟೆಗಳ ಬಳಿಕ ಆತನನ್ನು ಬಂಧಿಸಲಾಯಿತು.

Read These Next

ಪ್ರಧಾನಿ ಮೋದಿಯಿಂದ ದ್ವೇಷ ಭಾಷಣ! ಚುನಾವಣಾ ಆಯೋಗದ ನಿಷ್ಕ್ರಿಯತೆಗೆ ಪ್ರತಿಪಕ್ಷಗಳ ಆಕ್ರೋಶ

ಪ್ರಧಾನಿ ನರೇಂದ್ರ ಮೋದಿಯವರು ಮುಸ್ಲಿಮ್ ಸಮುದಾಯದ ವಿರುದ್ದ ಆಕ್ಷೇಪಕಾರಿ ಭಾಷಣಗೈದು ತೀವ್ರ ವಿವಾದಕ್ಕೆ ಗುರಿಯಾಗಿದ್ದಾರೆ. ...

ಅಣಕು ಮತದಾನದ ವೇಳೆ ಬಿಜೆಪಿಗೆ ಮತ

ಕೇರಳದ ಕಾಸರಗೋಡಿನಲ್ಲಿ ಅಣಕು ಮತದಾನದವೇಳೆ ಇವಿಎಂಗಳು ತಪ್ಪಾಗಿ ಬಿಜೆಪಿ ಪರವಾಗಿ ಮತಗಳನ್ನು ದಾಖಲಿಸಿವೆ ಎಂದು ಅರ್ಜಿದಾರರೊಬ್ಬರು ...

ಚುನಾವಣಾ ಪ್ರಕ್ರಿಯೆಯಲ್ಲಿ ಪಾವಿತ್ರ್ಯವಿರಬೇಕು; ಆಯೋಗಕ್ಕೆ ಹೇಳಿದ ಸುಪ್ರೀಂ ಕೋರ್ಟ್

ಚುನಾವಣಾ ಪ್ರಕ್ರಿಯೆ ಯಲ್ಲಿ ಪಾವಿತ್ರ್ಯವಿರಬೇಕು ಎಂದು ಚುನಾವಣಾ ಆಯೋಗಕ್ಕೆ ಇಂದು ಸುಪ್ರೀಂ ಕೋರ್ಟ್ ಹೇಳಿದೆಯಲ್ಲದೆ ಸ್ವತಂತ್ರ ...