ಉತ್ತರಪ್ರದೇಶ: ಮಾಜಿ ಸಚಿವರಿಬ್ಬರ ಸಹಿತ ಹಲವು ಬಿಜೆಪಿ, ಬಿಎಸ್ಪಿ ನಾಯಕರು ಸಮಾಜವಾದಿ ಪಕಕ್ಕೆ ಸೇರ್ಪಡೆ

Source: vb | By I.G. Bhatkali | Published on 15th January 2022, 6:52 AM | National News |

ಲಕ್ಟೋ: ಉತ್ತರಪ್ರದೇಶ ವಿಧಾನಸಭೆ ಚುನಾವಣೆ ಗೆ ಕೆಲವೇ ದಿನಗಳು ಬಾಕಿ ಇರುವಾಗ ಇಬ್ಬರು ಮಾಜಿ ಸಚಿವರು ಸೇರಿದಂತೆ ಹಲವು ಬಿಜೆಪಿ ಹಾಗೂ ಬಿಎಸ್ಪಿ ನಾಯಕರು ಶುಕ್ರವಾರ ಸಮಾಜವಾದಿ ಪಕ್ಷಕ್ಕೆ ಸೇರ್ಪಡೆ ಯಾಗಿದ್ದಾರೆ.

ಉತ್ತರ ಪ್ರದೇಶದ ಮಾಜಿ ಸಚಿವರಾದ ಸ್ವಾಮಿ ಪ್ರಸಾದ್ ಮೌರ್ಯ ಹಾಗೂ ಧರಂ ಸಿಂಗ್ ಸೈನಿ ಅವರು ಲದಲ್ಲಿ ಶುಕ್ರವಾರ ಸಮಾಜವಾದಿ ಪಕ್ಷಕ್ಕೆ ಸೇರಿದ್ದಾರೆ. ಸಮಾಜವಾದಿ ಪಕ್ಷದ ವರಿಷ್ಠ ಅಖಿಲೇಶ್ ಯಾದವ್ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

ಇತ್ತೀಚೆಗೆ ಬಿಜೆಪಿ ತ್ಯಜಿಸಿದ್ದ ಐವರು ಶಾಸಕರಾದ ಬ್ರಿಜೇಶ್ ಪ್ರಜಾಪತಿ, ಭಗವತಿ ಸಾಗರ್‌, ರೋಶನ್‌ಲಾಲ್ ವರ್ಮಾ,  ಮುಖೇಶ್ ವರ್ಮಾ ಹಾಗೂ ವಿನಯ ಶಾಕ್ಯ ಅವರು ಕೂಡ ಲಕ್ಟೋದಲ್ಲಿ ನಡೆದ ವರ್ಚುವಲ್ ಕ್ಯಾಲಿಯಲ್ಲಿ ಸಮಾಜವಾದಿ ಪಕ್ಷ ಸೇರಿದ್ದಾರೆ.

ಅಪ್ನಾ ದಳದ ಶಾಸಕ ಚೌಧರಿ ಅಮರ್ ಸಿಂಗ್, ಬಹುಜನ ಸಮಾಜ ಪಕ್ಷದ ನಾಯಕರಾದ ನೀರಜ್ ಕುಶ್ವಾಹ ಮೌರ್ಯ ಹಾಗೂ ಬಲರಾಮ್ ಸೈನಿ, ಬಿಜೆಪಿ ನಾಯಕರಾದ ಹರ್‌ಪಾಲ್ ಸೈನಿ ಹಾಗೂ ರಾಜೇಂದ್ರ ಪ್ರತಾಪ್ ಸಿಂಗ್, ಕಾಂಗ್ರೆಸ್ ನಾಯಕ ಬನ್ನಿ ಸಿಂಗ್ ಪಹಾಡಿಯ, ಮಾಜಿ ಸಹಾಯಕ ಸಚಿವ ವಿದ್ರೋಹಿ ಮೌರ್ಯ ಹಾಗೂ ಮಾಜಿ ಮುಖ್ಯ ಭದ್ರತಾ ಅಧಿಕಾರಿ ಪದಂ ಸಿಂಗ್ ಕೂಡ ಅಖಿಲೇಶ್ ಯಾದವ್ ನೇತೃತ್ವದ ಸಮಾಜವಾದಿ ಪಕಕ್ಕೆ ಸೇರ್ಪಡೆಯಾಗಿದ್ದಾರೆ.

ಆದಿತ್ಯನಾಥ್ ಸಂಪುಟದಲ್ಲಿ ಕಾರ್ಮಿಕ ಸಚಿವರಾಗಿದ್ದ ಮೌರ್ಯ ಅವರು ಮಂಗಳವಾರ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಇದು ಬಿಜೆಪಿಗೆ ಆಘಾತ ಉಂಟು ಮಾಡಿತ್ತು. ಅವ ರು ರಾಜೀನಾಮೆ ನೀಡಿದ ಮೂರು ದಿನಗಳಲ್ಲಿ 10ಕ್ಕೂ ಅಧಿಕ ನಾಯಕರು ಬಿಜೆಪಿ ತ್ಯಜಿಸಿದ್ದಾರೆ. ಈ ಪಟ್ಟಿಯಲ್ಲಿ ಸಚಿವರಾದ ಧರಂ ಸಿಂಗ್ ಸೈನಿ ಹಾಗೂ ದಾರಾ ಸಿಂಗ್ ಚೌಹಾಣ್ ಕೂಡ ಸೇರಿದ್ದಾರೆ. ಬಿಜೆಪಿಯನ್ನು ನಿರ್ಮೂಲನೆ ಮಾಡಬೇಕು ಹಾಗೂ ಉತ್ತರಪ್ರದೇಶವನ್ನು ದೌರ್ಜನ್ಯ ಮುಕ್ತಗೊಳಿಸಬೇಕು ಎಂದು ಮೌರ್ಯ ಅವರು ಶುಕ್ರವಾರ ಹೇಳಿದ್ದಾರೆ

“ಇಂದು ಬಿಜೆಪಿಯ ಅಂತ್ಯಕ್ಕೆ ಶಂಖ ಮೊಳಗಿದೆ. ದೇಶ ಹಾಗೂ ರಾಜ್ಯದಲ್ಲಿ ಜನರನ್ನು ದಾರಿತಪ್ಪಿಸುವ ಮೂಲಕ ಬಿಜೆಪಿ ಜನರನ್ನು ವಂಚಿಸಿದೆ ಹಾಗೂ ಶೋಷಣೆ ಮಾಡಿದೆ' ಎಂದು ಅವರು ಹೇಳಿದ್ದಾರೆ.

Read These Next

ಹೈದರಾಬಾದ್ ಸಾಮೂಹಿಕ ಅತ್ಯಾಚಾರ-ಕೊಲೆ ಪ್ರಕರಣ; ಆರೋಪಿಗಳ ಎನ್‌ಕೌಂಟರ್‌ ನಕಲಿ. ಸುಪ್ರೀಂ ಕೋರ್ಟ್ ನೇಮಿತ ಆಯೋಗ

ದಿಶಾ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ನಾಲ್ವರು ಆರೋಪಿಗಳ ಸಾವಿನ ಬಗ್ಗೆ ತನಿಖೆ ನಡೆಸಲು ಸುಪ್ರೀಂ ಕೋರ್ಟ್‌ನಿಂದ ...

ಶಾಲಾ ಪಠ್ಯ ಪುಸ್ತಕಗಳು ಆರೆಸಸ್ ಮಯ; ಕೇಜ್ರಿವಾಲ್, ಭಗವಂತ್ ಮಾನ್ ಸಹಿತ ಹಲವು ಮುಖಂಡರಿಂದ ಆಕ್ರೋಶ

ಪಠ್ಯ ಪುಸ್ತಕದಿಂದ ಭಗತ್ ಸಿಂಗ್ ರಂತಹ ರಾಷ್ಟ್ರ ಪ್ರೇಮಿಗಳ ಅಧ್ಯಾಯಗಳನ್ನು ಕಿತ್ತು ಹಾಕಿ, ಸ್ವಾತಂತ್ರ್ಯ ಹೋರಾಟದಲ್ಲಿ ಯಾವ ಪಾತ್ರವೂ ...

ದೇಶದ್ರೋಹ ಕಾನೂನಿಗೆ ತಡೆ; ಸರ್ವೋಚ್ಚ ನ್ಯಾಯಾಲಯದ ಐತಿಹಾಸಿಕ ತೀರ್ಪು; ಪುನರ್‌ಪರಿಶೀಲನೆ ಪೂರ್ಣಗೊಳ್ಳುವವರೆಗೆ ವಿರಾಮ

ಸರಕಾರದಿಂದ ದೇಶದ್ರೋಹ ಕಾನೂನಿನ ಪುನರ್‌ ಪರಿಶೀಲನೆ ಪೂರ್ಣಗೊಳ್ಳುವವರೆಗೆ ಈ ವಿವಾದಾತ್ಮಕ ಕಾನೂನಿನಿಂದ ಕೇಂದ್ರ ಮತ್ತು ರಾಜ್ಯ ...