2 ದಶಕಗಳ ಯುದ್ಧದ ಬಳಿಕ ಅಫ್ಘಾನ್‌ನಿಂದ ಅಮೆರಿಕ ಸೇನೆ ವಾಪಸ್

Source: VB News | By I.G. Bhatkali | Published on 1st September 2021, 12:13 PM | Global News |

ವಾಶಿಂಗ್ಟನ್: ಇಪ್ಪತ್ತು ವರ್ಷಗಳ ದೀರ್ಘ ಸಂಘರ್ಷದ ಬಳಿಕ ಅಮೆರಿಕ ಹಾಗೂ ಮಿತ್ರಪಡೆಗಳು ಸೋಮವಾರ ಅಫ್ಘಾನಿಸ್ತಾನದಿಂದ ತಮ್ಮ ಸೇನೆಯನ್ನು ಸಂಪೂರ್ಣವಾಗಿ ವಾಪಸ್ ಕರೆಸಿಕೊಂಡಿವೆ ಆಗಸ್ಟ್ 31ರೊಳಗೆ ಸೇನಾ ವಾಪಸಾತಿ ಪ್ರಕ್ರಿಯೆಯನ್ನು ಪೂರ್ಣಗೊಳಿಸುವುದಾಗಿ ಅಮೆರಿಕದ ಘೋಷಣೆಗೆ ಅನುಗುಣವಾಗಿ ಒಂದು ದಿನ ಮುಂಚಿತವಾಗಿಯೇ ಅಮೆರಿಕ ಸೇನಾಪಡೆಯನ್ನು ಸಂಪೂರ್ಣ ಹಿಂದಕ್ಕೆ ಕರೆಸಿಕೊಳ್ಳಲಾಗಿದೆ ಎಂದು ಪೆಂಟಗಾನ್ ಪ್ರಕಟಿಸಿದೆ.

ತಾಲಿಬಾನ್ ಕ್ಷಿಪ್ರ ಮುನ್ನಡೆ ಸಾಧಿಸಿ ಈ ತಿಂಗಳ ಆರಂಭದಲ್ಲಿ ಕಾಬೂಲ್ ನಗರವನ್ನು ವಶಪಡಿಸಿಕೊಂಡ ಹಿನ್ನೆಲೆಯಲ್ಲಿ ಅಫ್ಘಾನಿಸ್ತಾನದ ಸ್ಥಿತಿಯನ್ನು ನಿಭಾಯಿಸಿದ ಅಮೆರಿಕದ ಅಧ್ಯಕ್ಷ ಜೋ ಬೈಡನ್ ಕ್ರಮಕ್ಕೆ ಅಮೆರಿಕದಲ್ಲಿ ಡೆಮಾಕ್ರಟಿಕ್ ಹಾಗೂ ರಿಪಬ್ಲಿಕನ್ ಪಕ್ಷಗಳ ಸದಸ್ಯರಿಂದ ವ್ಯಾಪಕ ಟೀಕೆ ವ್ಯಕ್ತವಾಗಿತ್ತು. ಸೇನೆ ವಾಪಸಾತಿ

ಪ್ರಕ್ರಿಯೆ ಪೂರ್ಣಗೊಳಿಸಿರುವುದನ್ನು ಘೋಷಿಸಿದ ಅಮೆರಿಕದ ಸೆಂಟ್ರಲ್ ಕಮಾಂಡ್‌ ಕಮಾಂಡರ್ ಜನರಲ್ ಫ್ರಾಂಕ್ ಮೆಕೆಂಝಿ, ಅಫ್ಘಾನಿಸ್ತಾನದಲ್ಲಿ ಅಮೆರಿಕದ ರಾಯಭಾರಿಯಾಗಿದ್ದ ರಾಸ್ ವಿಲ್ಸನ್ ಕಟ್ಟಕಡೆಯ ಸಿ-17 ವಿಮಾನದಲ್ಲಿ ವಾಪಸಾಗಿದ್ದಾರೆ ಎಂದು ಹೇಳಿದರು.

ತಾಲಿಬಾನ್ ಕ್ಷಿಪ್ರವಾಗಿ ಇಡೀ ದೇಶವನ್ನು ವಶಪಡಿಸಿಕೊಳ್ಳುತ್ತದೆ ಎಂದು ಅಂದಾಜಿಸುವಲ್ಲಿ ವಿಫಲವಾಗಿದ್ದ ವಾಶಿಂಗ್ಟನ್ ಮತ್ತು ನ್ಯಾಟೊ ಮಿತ್ರಪಡೆಗಳು ಗಡಿಬಿಡಿಯಲ್ಲಿ ಅಫ್ಘಾನಿಸ್ತಾನದಿಂದ ವಾಪಸಾಗಬೇಕಾಯಿತು. ನ್ಯಾಟೊ ಪಡೆಗಳಿಗೆ ಕಳೆದ 20 ವರ್ಷಗಳಿಂದ ನೆರವಾಗಿದ್ದ ಸಾವಿರಾರು ಮಂದಿ ಅವರನ್ನು ಅರ್ಧದಲ್ಲಿ ಕೈಬಿಟ್ಟು ದೇಶದಿಂದ ನಿರ್ಗಮಿಸಿವೆ. ವಿಮಾನ ನಿಲ್ದಾಣ ತಲುಪಲು ಸಾಧ್ಯವಾಗದ ಅಮೆರಿಕದ ಹತ್ತಾರು ಮಂದಿ ಅಮೆರಿಕನ್ನರು ಕೂಡಾ ಉಳಿದುಕೊಂಡಿದ್ದಾರೆ ಎಂದು ಮೆಕೆಂಝಿ ಹೇಳಿದ್ದಾರೆ.

ಈ ನಿರ್ಗಮನ ಹಲವು ಹೃದಯ ವಿದ್ರಾವಕ ಅಂಶಗಳನ್ನೂ ಒಳಗೊಂಡಿದೆ. ನಾವು ಯಾರನ್ನೆಲ್ಲ ದೇಶದಿಂದ ಹೊರಕ್ಕೆ ಕರೆತರಬೇಕಿತ್ತೋ ಅವರೆಲ್ಲರನ್ನೂ ಹೊರತರಲು ಸಾಧ್ಯವಾಗಿ ಲ್ಲ. ಆದರೆ ನಾವು ಇನ್ನೂ ಹತ್ತು ದಿನ ಅಲ್ಲಿ ಉಳಿದಿದ್ದರೂ, ಎಲ್ಲರನ್ನೂ ದೇಶದಿಂದ ಹೊರ ಕರೆತರಲು ಸಾಧ್ಯವಾಗುತ್ತಿರಲಿಲ್ಲ ಎಂದು

ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಸ್ಪಷ್ಟಪಡಿಸಿದರು.

Read These Next

ಗಾಝಾದ ಅಲ್-ಶಿಫಾ ಆಸ್ಪತ್ರೆಯನ್ನು 'ಸಾವಿನ ವಲಯ'ವೆಂದು ಘೋಷಿಸಿದ ವಿಶ್ವಸಂಸ್ಥೆ ಪ್ರವೇಶದ್ವಾರದಲ್ಲಿ ಸಾಮೂಹಿಕ ಸಮಾಧಿ: ವಿಶ್ವ ಆರೋಗ್ಯ ಸಂಸ್ಥೆ

ಹಮಾಸ್ ನಿಯಂತ್ರಣದ ಗಾಝಾ ಪಟ್ಟಿಯಲ್ಲಿ ಇಸ್ರೇಲ್‌ನ ವೈಮಾನಿಕ ದಾಳಿಯ ಬಳಿಕ ನೆಲೆಸಿರುವ ಭೀಕರ ಪರಿಸ್ಥಿತಿಯನ್ನು ಅವಲೋಕಿಸಲು ಈ ...