ಹೊಸ ಮನೆಗಾಗಿ ಮೇಲ್ಚಾವಣೆ ಏರಿ ವೃದ್ದೆ ಪ್ರತಿಭಟನೆ. ಕಂಡು ಕಾಣದೇ ತೆರಳಿದ ಆರ್ ಅಶೋಕ.

Source: SO News | By Laxmi Tanaya | Published on 16th October 2020, 8:59 PM | State News | Don't Miss |

ಕಲಬುರ್ಗಿ : ಜಿಲ್ಲೆಯಲ್ಲಿ ಬಾರೀ ಮಳೆಗೆ ಹಲವು ಗ್ರಾಮಗಳ ಜನರು  ತತ್ತರಿಸಿದ್ದಾರೆ.

ಪ್ರವಾಹದಿಂದ ಹಲವು ಜನರು ನೀರಿನಲ್ಲಿ ತೇಲಿ ಹೋಗಿದ್ದು ತಮ್ಮ ಪ್ರಾಣ  ರಕ್ಷಿಸಿಕೊಳ್ಳಲು ಹರಸಾಹಸ ಪಡುತ್ತಿದ್ದಾರೆ. ಈ ನಡುವೆ ವೃದ್ದೆಯೊಬ್ಬರು ತಮಗೆ ಹೊಸ ಮನೆ ನಿರ್ಮಿಸಿಕೊಡಬೇಕೆಂದು ತಮ್ಮ ಮನೆಯ ಮಹಡಿ ಏರಿ ಪ್ರತಿಭಟನೆ ನಡೆಸಿದ್ದಾರೆ.

ಕಲಬುರ್ಗಿ ಜಿಲ್ಲೆಯ ಫಿರೋಜಾಬಾದ್ ಗ್ರಾಮದ ಕಮಲಮ್ಮ ಎಂಬಾಕೆಯೆ ಸೂರಿಗಾಗಿ ಆಗ್ರಹಿಸಿ ತಮ್ಮ ಹಳೆಯ ಮನೆ ಮೇಲ್ಭಾವಣಿ ಮೇಲೇರಿ ಪ್ರತಿಭಟಿಸಿದ್ದಾರೆ. ಬಾರೀ ಮಳೆ ಹಾಗೂ ಭೀಮಾ ನದಿ ಪ್ರವಾಹಕ್ಕೆ ನನ್ನ ಮನೆ ಹಾಳಾಗಿದ್ದು, ವಾಸ್ತವ್ಯಕ್ಕೆ ಯೋಗ್ಯವಾಗಿಲ್ಲ. ಹೀಗಾಗಿ ಸರ್ಕಾರ ಹಾಗೂ ಸ್ಥಳೀಯ ಆಡಳಿತ ನನಗೆ ಹೊಸ ಮನೆ ಕಟ್ಟಿಸಿಕೊಡಬೇಕೆಂದು ವೃದ್ಧೆ ಗೋಗರೆದಿದ್ದಾಳೆ.

ಶುಕ್ರವಾರ  ರಾಜ್ಯ ಕಂದಾಯ ಸಚಿವ ಆರ್.ಅಶೋಕ್ ಪ್ರವಾಹ ಪರಿಶೀಲನೆಗೆ ಆಗಮಿಸಿದ್ದು, ಈ ವೇಳೆಯೂ ಅಜ್ಜಿ ಮನೆ ಮೇಲೆ ಕುಳಿತಿದ್ದಾರೆ. ಆದರೆ ಸಚಿವರು ಅಜ್ಜಿ ವ್ಯಥೆ ఆలిಸದೇ ಮುಂದೆ ನಡೆದಿದ್ದಾರೆ.

ಈ ಅಜ್ಜಿ ಮಳೆ ಹಾಗೂ ನಡುಗುವ ಚಳಿಯಲ್ಲಿ ಕಳೆದ ಮೂರು ದಿನದಿಂದ ಮನೆಯ ಮೇಲೇರಿ ಪ್ರತಿಭಟನೆ ನಡೆಸುತ್ತಿದ್ದು, ಅಸ್ವಸ್ಥರಾಗಿರುವ ಸಾಧ್ಯತೆ ಇದ್ದರೆ ಕೆಳಕ್ಕೆ ಇಳಿಯ ಒಪ್ಪುತ್ತಿಲ್ಲ. ಈ ವೃದ್ಧೆಯನ್ನು ಸೌಜನ್ಯಕ್ಕೂ ಮಾತನಾಡಿಸದ ಕಂದಾಯ ಸಚಿವರ ವಿರುದ್ಧ ಗ್ರಾಮದಲ್ಲಿ ಆಕ್ರೋಶ ವ್ಯಕ್ತವಾಗಿದೆ.

Read These Next

ಯಾವ ವ್ಯಕ್ತಿ ಸೋಲನ್ನು ಜೀರ್ಣಿಸಿಕೊಳ್ಳಲು ಕಲಿಯುತ್ತಾನೋ ಅಂತಹ ವ್ಯಕ್ತಿ ಜೀವನದಲ್ಲಿ ಅತ್ಯುತ್ತಮ ಸಾಧನೆ ಮಾಡಲು ಸಾಧ್ಯ: ಜಿಲ್ಲಾಧಿಕಾರಿ

ಮಂಡ್ಯ : ಪ್ರತಿಯೊಬ್ಬ ಮನುಷ್ಯನಿಗೆ ಓದು ಮತ್ತು ಕ್ರೀಡೆ ಎರಡು ಇರಬೇಕು. ವಿಶ್ವ ಆರೋಗ್ಯ ಸಂಸ್ಥೆ ಹೇಳುವಂತೆ ಭೌತಿಕವಾಗಿ, ...

ಕರ್ನಾಟಕ ಪಶ್ಚಿಮ ಪದವೀಧರ ಮತಕ್ಷೇತ್ರ ಚುನಾವಣೆ-2020 ಕೋವಿಡ್-19 ಮಾರ್ಗಸೂಚಿ ಪಾಲನೆ, ಆರೋಗ್ಯ ಸಿಬ್ಬಂದಿ ಪಾತ್ರವೂ ಮುಖ್ಯ -ಜಿಲ್ಲಾಧಿಕಾರಿ ನಿತೇಶ್ ಪಾಟೀಲ

ಧಾರವಾಡ : ಕರ್ನಾಟಕ ಪಶ್ಚಿಮ ಪದವೀಧರ ಮತಕ್ಷೇತ್ರ ಚುನಾವಣೆ ಪ್ರಕ್ರಿಯೆಯಲ್ಲಿ ಆರೋಗ್ಯ ಇಲಾಖೆ ನೀಡಿರುವ ಕೋವಿಡ್-19 ಮಾರ್ಗಸೂಚಿಗಳ ...

ಬಿಕಾಂ ಫೈನಲ್ ಪರೀಕ್ಷೆಯಲ್ಲಿ ಅಂಜುಮನ್ ಆರ್ಟ್ಸ್, ಸೈನ್ಸ್ ಮತ್ತು ಕಾಮರ್ಸ್ ಕಾಲೇಜು ಸಾಧನೆ.

ಭಟ್ಕಳ : ಅಂಜುಮನ್ ಆರ್ಟ್ಸ್, ಸೈನ್ಸ್ ಮತ್ತು ಕಾಮರ್ಸ್ ಕಾಲೇಜಿನ ಬಿ.ಕಾಂ ಅಂತಿಮ ವಿದ್ಯಾರ್ಥಿಗಳು ಈ ಬಾರಿ ಅತ್ಯುತ್ತಮ ಪ್ರದರ್ಶನ ನೀಡುವ ...