ಉ.ಪ್ರ.ದಲ್ಲಿ ಬಿಜೆಪಿಗೆ ಭಾರೀ ಆಘಾತ; ಚುನಾವಣೆಯ ಹೊಸ್ತಿಲಲ್ಲಿ ಪಕ್ಷ ತೊರೆದು ಎಸ್ಪಿಗೆ ಸೇರಿದ ಸಚಿವ, ನಾಲ್ವರು ಶಾಸಕರು

Source: S O News | By I.G. Bhatkali | Published on 12th January 2022, 10:10 PM | National News |

ಲಕ್ನೋ: ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಗೆ ಕೆಲವೇ ದಿನಗಳು ಬಾಕಿಯಿರುವಾಗ ಆಡಳಿತಾರೂಢ ಬಿಜೆಪಿ ಮತ್ತು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗೆ ಭಾರೀ ಆಘಾತ ಎದುರಾಗಿದೆ. ಹಿರಿಯ ಸಚಿವ ಹಾಗೂ ಒಬಿಸಿ ನಾಯಕ ಸ್ವಾಮಿ ಪ್ರಸಾದ್ ಮೌರ್ಯ ಮತ್ತು ನಾಲ್ವರು ಶಾಸಕರು ಬಿಜೆಪಿಯನ್ನು ತೊರೆದು ಪಕ್ಷದ ಪ್ರಮಖ ಎದುರಾಳಿ ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್ ಅವರೊಂದಿಗೆ ಕೈಜೋಡಿಸಿದ್ದಾರೆ.

ಮೌರ್ಯ ತನ್ನ ರಾಜೀನಾಮೆ ಪತ್ರವನ್ನು ಟ್ವಿಟರ್ ನಲ್ಲಿ ಪೋಸ್ಟ್ ಮಾಡಿದ ಬೆನ್ನಿಗೇ ಬಿಜೆಪಿ ಶಾಸಕರಾದ ರೋಶನ್‌ ಲಾಲ್ ವರ್ಮಾ, ಬೃಜೇಶ್ ಪ್ರಜಾಪತಿ, ಭಗವತಿ ಸಾಗರ್ ಹಾಗೂ ವಿನಯ್ ಶಾಕ್ಯ ಅವರು ತಮ್ಮ ರಾಜೀನಾಮೆಗಳನ್ನು ಪ್ರಕಟಿಸಿದರು.

ಮೌರ್ಯ ಇನ್ನೂ ಕೆಲವು ಸಚಿವರು ಮತ್ತು ಶಾಸಕರನ್ನು ಎಸ್‌ಗೆ ಸೆಳೆಯಬಹುದು ಎಂದು ವರದಿಗಳು ತಿಳಿಸಿವೆ.

'ವಿಭಿನ್ನ ಸಿದ್ಧಾಂತವನ್ನು ಹೊಂದಿದ್ದರೂ ಯೋಗಿ ಆದಿತ್ಯನಾಥ್ ಸಂಪುಟದಲ್ಲಿ ಬದ್ಧತೆಯಿಂದ ಕೆಲಸ ಮಾಡಿದ್ದೇನೆ. ಆದರೆ ದಲಿತರು, ಒಬಿಸಿಗಳು, ರೈತರು, ನಿರುದ್ಯೋಗಿಗಳು ಮತ್ತು ಸಣ್ಣ ಉದ್ಯಮಿಗಳ ಅತೀವ ಶೋಷಣೆಯಿಂದ ಬೇಸತ್ತು ನಾನು ಸಚಿವ ಸ್ಥಾನಕ್ಕೆ ಮತ್ತು ಪಕ್ಷಕ್ಕೆ ರಾಜೀನಾಮೆಯನ್ನು ಸಲ್ಲಿಸುತ್ತಿದ್ದೇನೆ' ಎಂದು ಮೌರ್ಯ ತನ್ನ ರಾಜೀನಾಮೆ ಪತ್ರದಲ್ಲಿ ಹೇಳಿದ್ದಾರೆ.

“ನನ್ನ ನಿರ್ಗಮನವು ಬಿಜೆಪಿಯ ಮೇಲೆ ಯಾವ ಪರಿಣಾಮವನ್ನು ಬೀರುತ್ತದೆ ಎನ್ನುವುದು 2022ರ ವಿಧಾನಸಭಾ ಚುನಾವಣೆ ಬಳಿಕ ಗೊತ್ತಾಗಲಿದೆ' ಎಂದು ಸುದ್ದಿಗಾರರೊಂದಿಗೆ ಮಾತನಾ ಡಿದ ಮಾರ್ಯ ಹೇಳಿದರು.

ಮೌರ್ಯ ರಾಜೀನಾಮೆ ಪತ್ರ ಟ್ವಿಟರ್‌ನಲ್ಲಿ ಕಾಣಿಸಿಕೊಳ್ಳುತ್ತಿದ್ದಂತೆ ಅವರೊಂದಿಗಿನ ಚಿತ್ರವೊಂದನ್ನು ಟೀಟಿಸಿರುವ ಅಖಿಲೇಶ್, ಮೌರ್ಯ ಮತ್ತು ಅವರ ಬೆಂಬಲಿಗರನ್ನು ತನ್ನ ಪಕ್ಷಕ್ಕೆ ಸ್ವಾಗತಿಸಿದ್ದಾರೆ. ಸಾಮಾಜಿಕ ನ್ಯಾಯ ಮತ್ತು ಸಮಾನತೆಗಾಗಿ ಹೋರಾಡುವ ನಾಯಕ ಸ್ವಾಮಿ ಪ್ರಸಾದ್ ಮೌರ್ಯ ಮತ್ತು ಅವರ ಎಲ್ಲ ಬೆಂಬಲಿಗರನ್ನು ನಾನು ಹಾರ್ದಿಕವಾಗಿ ಸ್ವಾಗತಿಸುತ್ತೇನೆ. ಸಾಮಾಜಿಕ ನ್ಯಾಯದಲ್ಲಿ ಕ್ರಾಂತಿಯಾಗಲಿದೆ. 2022ರಲ್ಲಿ ಬದಲಾವಣೆ ಬರಲಿದೆ 'ಎಂದು ಯಾದವ್ ಟೀಟಿಸಿದ್ದಾರೆ.

ಇದರ ಬೆನಿಗೇ ಮೂರು ಬಾರಿಯ ಶಾಸಕ ರೋಶನ್ ಲಾಲ್ ವರ್ಮಾ ಅವರು, ತಾನು ಮೌರ್ಯ ಜೊತೆ ಬಿಜೆಪಿಯನ್ನು ತೊರೆಯುತ್ತಿರುವುದಾಗಿ ಘೋಷಿ ಸಿದರು.

ಮನವಿಯೊಂದನ್ನು ಟ್ವಿಟರ್ ನಲ್ಲಿ ಪೋಸ್ಟ್ ಮಾಡಿರುವ ಉಪ ಮುಖ್ಯಮಂತ್ರಿ ಕೇಶವ ಪ್ರಸಾದ್ ಮೌರ್ಯ ಅವರು ಸ್ವಾಮಿ ಪ್ರಸಾದ್ ಮೌರ್ಯ ಬಿಜೆಪಿಯನ್ನು ಏಕೆ ತೊರೆದಿದ್ದಾರೆ ಎನ್ನುವುದು ನನಗೆ ಗೊತ್ತಿಲ್ಲ, ಆದರೆ ಪಕ್ಷವನ್ನು ಬಿಡಬೇಡಿ, ನಾವು ಮಾತುಕತೆ ನಡೆಸೋಣ ಎಂದು ಅವರನ್ನು ನಾನು ಕೋರುತ್ತಿದ್ದೇನೆ. ಅವಸರದಲ್ಲಿ ತೆಗೆದುಕೊಂಡ ನಿರ್ಧಾರಗಳು ತಿರುಗುಬಾಣವಾಗಬಹುದು' ಎಂದು 
ಹೇಳಿದ್ದಾರೆ. ಉತ್ತರ ಪ್ರದೇಶ ಚುನಾವಣೆಯ ಕಾರ್ಯತಂತ್ರವನ್ನು ಚರ್ಚಿಸಲು ಯೋಗಿ ಆದಿತ್ಯನಾಥ್ ಮತ್ತು ಬಿಜೆಪಿ ನಾಯಕರು ದಿಲ್ಲಿಯಲ್ಲಿ ಸಭೆ ಸೇರಿದಾಗಲೇ ಲಕ್ಟೋದಲ್ಲಿ ನಿರ್ಗಮನ ಪರ್ವ ಆರಂಭವಾಗಿದೆ.

ಹಲವಾರು ಅವಧಿಗೆ ಶಾಸಕರಾಗಿದ್ದ ಪ್ರಭಾವಿ ಒಬಿಸಿ ನಾಯಕ ಮೌರ್ಯ 2016ರಲ್ಲಿ ಮಾಯಾವತಿಯವರ ಬಿಎಸ್‌ಪಿಯನ್ನು ತೊರೆದು ಬಿಜೆಪಿಗೆ ಸೇರ್ಪಡೆಗೊಂಡಿದ್ದರು.

ಮೌರ್ಯ ಪೂರ್ವ ಉತ್ತರ ಪ್ರದೇಶದ ಪಡನಾದಿಂದ ಬಿಜೆಪಿ ಶಾಸಕರಾಗಿ ಆಯ್ಕೆಯಾಗಿದ್ದರೆ, ಅವರ ಪುತ್ರಿ ಸಂಘಮಿತ್ರಾ ಉ.ಪ್ರದೇಶದ ಬಿಜೆಪಿ ಸಂಸದೆಯಾಗಿದ್ದಾರೆ.

ರಾಜಕೀಯವಾಗಿ ಅತ್ಯಂತ ನಿರ್ಣಾಯಕವಾಗಿರುವ ಉತ್ತರ ಪ್ರದೇಶ ವಿಧಾನಸಭೆಗೆ ಏಳು ಹಂತಗಳ ಚುನಾವಣೆ ಫೆ.10ರಿಂದ ಆರಂಭಗೊಳ್ಳಲಿದ್ದು, ಇದನ್ನು 2024ರ ಸಾರ್ವತ್ರಿಕ ಚುನಾವಣೆಗೆ ಮೊದಲಿನ ಸೆಮಿಫೈನಲ್ ಎಂದೇ ಪರಿಗಣಿಸಲಾಗಿದೆ. ಫಲಿತಾಂಶಗಳು ಮಾ.10ರಂದು ಪ್ರಕಟವಾಗಲಿವೆ.

Read These Next

ಅಣಕು ಮತದಾನದ ವೇಳೆ ಬಿಜೆಪಿಗೆ ಮತ

ಕೇರಳದ ಕಾಸರಗೋಡಿನಲ್ಲಿ ಅಣಕು ಮತದಾನದವೇಳೆ ಇವಿಎಂಗಳು ತಪ್ಪಾಗಿ ಬಿಜೆಪಿ ಪರವಾಗಿ ಮತಗಳನ್ನು ದಾಖಲಿಸಿವೆ ಎಂದು ಅರ್ಜಿದಾರರೊಬ್ಬರು ...

ಚುನಾವಣಾ ಪ್ರಕ್ರಿಯೆಯಲ್ಲಿ ಪಾವಿತ್ರ್ಯವಿರಬೇಕು; ಆಯೋಗಕ್ಕೆ ಹೇಳಿದ ಸುಪ್ರೀಂ ಕೋರ್ಟ್

ಚುನಾವಣಾ ಪ್ರಕ್ರಿಯೆ ಯಲ್ಲಿ ಪಾವಿತ್ರ್ಯವಿರಬೇಕು ಎಂದು ಚುನಾವಣಾ ಆಯೋಗಕ್ಕೆ ಇಂದು ಸುಪ್ರೀಂ ಕೋರ್ಟ್ ಹೇಳಿದೆಯಲ್ಲದೆ ಸ್ವತಂತ್ರ ...

'ಚುನಾವಣಾ ಬಾಂಡ್' ವಿಶ್ವದ ದೊಡ್ಡ ಹಗರಣ; ಬಿಜೆಪಿ ವಿರುದ್ಧ ರಾಹುಲ್‌ ಗಾಂಧಿ ವಾಗ್ದಾಳಿ

ಬಿಜೆಪಿಯ ಚುನಾ ವಣಾ ಬಾಂಡ್ ವಿಶ್ವದ ಅತ್ಯಂತ ದೊಡ್ಡ ಹಗರಣವಾಗಿದ್ದು, ಗೂಂಡಾಗಳ ರೀತಿಯಲ್ಲಿ ಕೆಲವು ಉದ್ಯಮಿಗಳನ್ನು ಬೆದರಿಸಿ ಹಫ್ತಾ ...

ಗುಂಪಿನಿಂದ ಹತ್ಯೆ, ಗೋರಕ್ಷಣೆ ಹೆಸರಿನಲ್ಲಿ ಹಿಂಸಾಚಾರ ತಡೆಯಲು ಕೈಗೊಂಡ ಕ್ರಮಗಳ ಬಗ್ಗೆ ತಿಳಿಸಿ; ರಾಜ್ಯಗಳಿಗೆ ಸುಪ್ರೀಂ ಸೂಚನೆ

ಗುಂಪಿನಿಂದ ಥಳಿಸಿ ಹತ್ಯೆ ಮತ್ತು ಗೋರಕ್ಷಣೆಯ ಹೆಸರಿನಲ್ಲಿ ಹಿಂಸಾಚಾರದ ಘಟನೆಗಳನ್ನು ತಡೆಯಲು ಕೈಗೊಂಡಿರುವ ಕ್ರಮಗಳ ಬಗ್ಗೆ ಆರು ...