ಮದುವೆಗೆ ಒಪ್ಪದ ಪೋಷಕರು, ಕ್ರಿಮಿನಾಶಕ ಸೇವಿಸಿ ಪ್ರೇಮಿಗಳ ಆತ್ಮಹತ್ಯೆ…!

Source: so news | By Manju Naik | Published on 23rd June 2019, 6:04 PM | State News | Don't Miss |

ಕೊಳ್ಳೇಗಾಲ:ಪ್ರೀತಿಸುತ್ತಿದ್ದ ಯುವತಿಯೊಂದಿಗೆ ಫೋಷಕರು ಮದುವೆ ಮಾಡಲು ಒಪ್ಪದ ಕಾರಣ ಪ್ರೇಯಸಿಯೊಂದಿಗೆ ಪ್ರಿಯಕರ ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ತಾಲ್ಲೂಕಿನ ಉಗನಿಯ ಗ್ರಾಮದ ಕಿರಣ್ (23) ಹಾಗೂ ಸಂಗೀತಾ (17) ಆತ್ಮಹತ್ಯೆ ಮಾಡಿಕೊಂಡ ಯುವ ಪ್ರೇಮಿಗಳು.
ಪಟ್ಟಣದ ಎಸ್‍ವಿಕೆ ಕಾಲೇಜಿನಲ್ಲಿ ಪಿಯುಸಿ ವ್ಯಾಸಂಗ ಮಾಡುತ್ತಿದ್ದ ಸಂಗೀತಾಳನ್ನು ಕಿರಣ್ ಕಳೆದ ಒಂದು ವರ್ಷದಿಂದ ಪ್ರೀತಿಸುತ್ತಿದ್ದ. ಈ ವಿಚಾರ ಎರಡು ಮನೆಯವರಿಗೂ ತಿಳಿದಿತ್ತು. ಇವರಿಬ್ಬರು ಮದುವೆಯಾಗುವ ನಿರ್ಧಾರ ಮಾಡಿದ್ದರು.
ಈ ಹಿನ್ನೆಲೆಯಲ್ಲಿ ಕಿರಣ್ ಕಳೆದ 4 ದಿನಗಳ ಹಿಂದೆ ತನ್ನ ತಂದೆ ನಾಗರಾಜುರನ್ನು ತಾನು ಪ್ರೀತಿಸುತ್ತಿರುವ ಎದುರು ಮನೆಯ ಸಂಗೀತಳನ್ನು ಮದುವೆ ಮಾಡಿಕೊಡುವಂತೆ ಒತ್ತಾಯಿಸಿದ್ದಾನೆ. ಸಂಗೀತಾ ಇನ್ನೂ ಅಪ್ರಾಪ್ತಳಾಗಿರುವುದರಿಂದ ತಂದೆ ನಾಗ ರಾಜು ಮದುವೆಗೆ ವಿರೋಧ ವ್ಯಕ್ತಪಡಿಸಿದ್ದಾರೆ.
ಪ್ರೇಮದ ಅಮಲಿನಲ್ಲಿದ್ದ ಕಿರಣ್ ಕುಪಿತಗೊಂಡು ಮದುವೆ ಮಾಡಿ ಕೊಡದಿದ್ದರೆ ನನ್ನ ಹೆಣವನ್ನು ಗವಿವರದರಾಜಸ್ವಾಮಿ ಬೆಟ್ಟದಲ್ಲಿ ನೋಡಬೇಕಾಗುತ್ತದೆ ಎಂದು ಬೆದರಿಕೆ ಹಾಕಿ ಹೊರ ನಡೆದಿದ್ದಾನೆ. ಹೋಗುವಾಗ ಮನೆಯಿಂದ 30 ಸಾವಿರ ರೂ.ಹಣವನ್ನು ತೆಗೆದುಕೊಂಡು ಪ್ರೇಯಸಿ ಸಂಗೀತಳನ್ನು ಕರೆದುಕೊಂಡು ಹೋಗಿದ್ದಾನೆ.
ಮನೆ ಬಿಟ್ಟ ಪ್ರೇಮಿಗಳಿಬ್ಬರು ಕೊಳ್ಳೇಗಾಲ ಪಟ್ಟಣಕ್ಕೆ ತೆರಳಿ ಊಟ ಹಾಗೂ (ಎಕಲೆಕ್ಸï) ಕ್ರಿಮಿನಾಶಕವನ್ನು ತೆಗೆದು ಕೊಂಡು ಸತ್ತೇಗಾಲದ ಜಗೇರಿ ಸಮೀಪದ ಗವಿವರದರಾಜಸ್ವಾಮಿ ಬೆಟ್ಟ ಸೇರಿದ್ದಾರೆ. ಬೆಟ್ಟದ ಹನುಮಂತನ ಹಳ್ಳದ ಬಳಿ ತಾವು ತಂದಿದ್ದ ಊಟ (ಅನ್ನ) ಕ್ಕೆ ಕ್ರಿಮಿನಾಶಕ (ಎಕಲೆಕ್ಸï) ವನ್ನು ಬೆರೆಸಿ ತಿಂದು ಹಲ್ಲೆ ಹರಿಯುತ್ತಿದ್ದ ಹಳ್ಳದ ನೀರಿಗೆ ಬಿದ್ದು ಆತ್ಮಹತ್ಯೆ ಮಾಡಿ ಕೊಂಡಿದ್ದಾರೆ.
ಈ ಸಂಬಂದ ಇಲ್ಲಿನ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read These Next