ಮಣಿಪುರ ಹಿಂಸಾಚಾರ ಕ್ಷಿಪ್ರ ಕ್ರಮ ತೆಗೆದುಕೊಳ್ಳಿ; ಭಾರತಕ್ಕೆ ಯುಎನ್‌ಎಚ್‌ಆರ್‌ಸಿ ಒತ್ತಾಯ

Source: Vb | By I.G. Bhatkali | Published on 26th May 2023, 3:07 PM | National News |

ಹೊಸದಿಲ್ಲಿ: ಮಣಿಪುರದಲ್ಲಿ ನಡೆ ಯುತ್ತಿರುವ ಜನಾಂಗೀಯ ಹಿಂಸಾಚಾರವನ್ನು ತಡೆಗಟ್ಟಲು ತುರ್ತು ಕ್ರಮ ಕೈಗೊಳ್ಳಬೇಕೆಂದು ವಿಶ್ವಸಂಸ್ಥೆಯ ಮಾನವಹಕ್ಕುಗಳ ಆಯೋಗ (ಯುಎನ್‌ಎಚ್‌ಆರ್‌ಸಿ) ಕೇಂದ್ರ ಸರಕಾರ ವನ್ನು ಆಗ್ರಹಿಸಿದೆ.

ಈ ಬಗ್ಗೆ ಯುಎನ್‌ಎಚ್‌ಆರ್‌ಸಿ ಕಮಿಶನರ್ ವೊಲ್ಕರ್ ಟರ್ಕ್ ಬಿಡುಗಡೆಗೊಳಿಸಿರುವ ಹೇಳಿಕೆಯೊಂದರಲ್ಲಿ ಮಣಿಪುರ ಹಿಂಸಾಚಾರವನ್ನು ಪ್ರಸ್ತಾವಿಸಿದ್ದಾರೆ. ಜಾಗತಿಕ ಮಾನವಹಕ್ಕುಗಳ ಘೋಷಣೆಗೆ 75 ವರ್ಷಗಳು ತುಂಬಿರುವ ಸಂದರ್ಭದಲ್ಲಿ ಅವರು ಈ ಹೇಳಿಕೆಯನ್ನು ಪ್ರಕಟಿಸಿದ್ದಾರೆ.

ಜಾಗತಿಕ ಮಾನವಹಕ್ಕುಗಳ ಘೋಷಣೆಗೆ 75 ವರ್ಷಗಳು ತುಂಬಿರುವ ಸಂಭ್ರಮದ ಆಚರಣೆಗಾಗಿ ವಿಶ್ವಸಂಸ್ಥೆಯು 'ಹೂಮನ್‌ರೈಟ್ಸ್ 75' ಎಂಬ ಕಾರ್ಯಕ್ರಮವನ್ನು ಆಯೋಜಿಸಿದೆ. ಈ ಕಾರ್ಯಕ್ರಮಕ್ಕೆ ವೊಲ್ಕರ್ ಟರ್ಕ್ ಕಳೆದ ವರ್ಷದ ಡಿಸೆಂಬರ್‌ನಲ್ಲಿ ಚಾಲನೆ ನೀಡಿದ್ದಾರೆ.

ಟರ್ಕ್ ತನ್ನ ಹೇಳಿಕೆಯಲ್ಲಿ, ಮಣಿಪುರದ ಜೊತೆಗೆ, ಮ್ಯಾಸ್ಟಾರ್‌ನಲ್ಲಿ ರೊಹಿಂಗ್ಯಾ ಮುಸ್ಲಿಮರ ಮಾನವಹಕ್ಕು ಉಲ್ಲಂಘನೆಗಳು, ಸುಡಾನ್‌ನಲ್ಲಿ ನಾಗರಿಕರ ಹತ್ಯೆ, ಅಮೆರಿಕದಲ್ಲಿ ಜಾರ್ಜ್ ಫ್ಲಾಯ್ಡ್ ಹತ್ಯೆ, ಎಲ್‌ಜಿಬಿಟಿಕ್ಯೂ ಹಕ್ಕುಗಳ ಉಲ್ಲಂಘನೆಗಳು, ರಿಯಲ್ ಮ್ಯಾಡ್ರಿಡ್ ಫುಟ್ಬಾಲ್ ಆಟಗಾರ ವಿನ್ಸಿಯಸ್ ಜೂನಿಯರ್ ಸ್ಪೇನ್‌ನಲ್ಲಿ ಎದುರಿಸುತ್ತಿರುವ ಜನಾಂಗೀಯ ನಿಂದನೆ, ಚೀನಾದಲ್ಲಿ ಮಾನವಹಕ್ಕುಗಳ ಹೋರಾಟಗಾರರಿಗೆ ವಿಧಿಸಲಾಗುತ್ತಿರುವ ಜೈಲುಶಿಕ್ಷೆ ಮತ್ತು ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಆಡಳಿತವು ಮಹಿಳೆಯರ ವಿರುದ್ಧ ನಡೆಸುತ್ತಿರುವ ಲಿಂಗ ತಾರತಮ್ಯ ವಿಷಯಗಳನ್ನೂ ಪ್ರಸ್ತಾಪಿಸಿದ್ದಾರೆ.

ವಲಸಿಗರು ಮತ್ತು ನಿರಾಶ್ರಿತರ | ವಿರುದ್ಧದ ದ್ವೇಷಪೂರಿತ ಮಾತುಗಳು ಮತ್ತು ಹಾನಿಕಾರಕ ವ್ಯಾಖ್ಯಾನಗಳು ಈಗಲೂ ವ್ಯಾಪಕವಾಗಿ ಹರಿದಾಡುತ್ತಿವೆ. ಇವುಗಳಿಗೆ ವಲಸಿಗ-ವಿರೋಧಿ ಕಾನೂನುಗಳು ಮತ್ತು ನೀತಿಗಳು ಬೆಂಬಲ ನೀಡುತ್ತಿವೆ. ಈ ಮಾತುಗಳು ಮತ್ತು ವ್ಯಾಖ್ಯಾನಗಳು ಅಂತ‌ ರಾಷ್ಟ್ರೀಯ ಮಾನವಹಕ್ಕುಗಳ ಕಾನೂನು ಮತ್ತು ನಿರಾಶ್ರಿತರ ಕಾನೂನುಗಳ ಅಡಿಪಾಯವನ್ನೇ ದುರ್ಬಲಗೊಳಿಸುವ ಬೆದರಿಕೆಯನ್ನು ಒಡ್ಡಿವೆ” ಎಂದು ಟರ್ಕ್ ಹೇಳಿದ್ದಾರೆ.

“ಬ್ರಿಟನ್, ಅಮೆರಿಕ, ಇಟಲಿ, ಗ್ರೀಸ್ ಮತ್ತು ಲೆಬನಾನ್ ಸೇರಿದಂತೆ ಹಲವು ದೇಶಗಳಲ್ಲಿನ ಬೆಳವಣಿಗೆಗಳು ಕಳವಳಕಾರಿಯಾಗಿವೆ. ಅವುಗಳು ಆಶ್ರಯ ಮತ್ತು ಇತರ ರಕ್ಷಣೆಗಳನ್ನು ಕೋರುವುದರಿಂದ ಜನರನ್ನು ತಡೆಯುತ್ತವೆ; ಅವರಿಗೆ ಸಹಾಯ ಮಾಡುವವರನ್ನು ಶಿಕ್ಷಿಸಲು ಮುಂದಾಗುತ್ತವೆ ಅಥವಾ ವಲಸಿಗರನ್ನು ಕಾನೂನುಬಾಹಿರ, ಘನತೆರಹಿತ ಮತ್ತು ಸರಿಯಲ್ಲದ ವಿಧಾನಗಳಲ್ಲಿ ವಾಪಸ್ ಕಳುಹಿಸುವಂತೆ ಬಲವಂತಪಡಿಸುತ್ತದೆ'' ಎಂದು ಅವರು ತಿಳಿಸಿದ್ದಾರೆ.

“ಜಾಗತಿಕ ಮಾನವಹಕ್ಕುಗಳ ಘೋಷಣೆಯ 14ನೇ ವಿಧಿಯು ಹಿಂಸಾಚಾರದಿಂದ ತಪ್ಪಿಸಿಕೊಂಡು ಆಶ್ರಯ ಕೋರುವ ಮತ್ತು ಅನುಭವಿಸುವ ಹಕ್ಕನ್ನು ಪ್ರತಿಯೊಬ್ಬರಿಗೂ ನೀಡುತ್ತದೆ. ಸಂಕಷ್ಟದ ಪರಿಸ್ಥಿತಿಗಳಲ್ಲಿರುವ ಎಲ್ಲಾ ಜನರನ್ನು ಮಾನವೀಯತೆಯಿಂದ ಕಾಣಬೇಕು ಮತ್ತು ಅವರ ಹಕ್ಕುಗಳನ್ನು ಗೌರವಿಸಬೇಕು. ಇಂಥ ಪರಿಸ್ಥಿತಿಯೊಂದು ಸೃಷ್ಟಿಯಾಗಲು ನಾವು ಒಗ್ಗಟ್ಟಿನಿಂದ ಕೆಲಸ ಮಾಡಬೇಕು' ಎಂದು ಅವರು ಹೇಳಿದ್ದಾರೆ.

ಮಣಿಪುರದಲ್ಲಿ, ಕುಕಿ-ರೋಮಿ ಬುಡಕಟ್ಟು ಪಂಗಡಗಳು ಮತ್ತು ಬಹುಸಂಖ್ಯಾತ ಮೈಕೈ ಸಮುದಾಯದ ನಡುವೆ ಇತ್ತೀಚೆಗೆ ಹಿಂಸಾಚಾರ ಸಂಭವಿಸಿದೆ. ಮೈತೈ ಸಮುದಾಯಕ್ಕೆ ಪರಿಶಿಷ್ಟ ಪಂಗಡದ ಸ್ಥಾನಮಾನ ನೀಡುವುದನ್ನು ವಿರೋಧಿಸಿ ಕುಕಿ ಬುಡಕಟ್ಟು ಪಂಗಡಗಳು ಪ್ರತಿಭಟನಾ ಮೆರವಣಿಗೆ ನಡೆಸಿದ ಬಳಿಕ ಹಿಂಸಾಚಾರ ಸ್ಫೋಟಗೊಂಡಿದೆ.

ಹಿಂಸಾಚಾರದಲ್ಲಿ ಈವರಗೆ 70ಕ್ಕೂ ಅಧಿಕ ಮಂದಿ ಪ್ರಾಣ ಕಳೆದುಕೊಂಡಿದ್ದಾರೆ.

Read These Next

ಪ್ರಧಾನಿ ಮೋದಿಯಿಂದ ದ್ವೇಷ ಭಾಷಣ! ಚುನಾವಣಾ ಆಯೋಗದ ನಿಷ್ಕ್ರಿಯತೆಗೆ ಪ್ರತಿಪಕ್ಷಗಳ ಆಕ್ರೋಶ

ಪ್ರಧಾನಿ ನರೇಂದ್ರ ಮೋದಿಯವರು ಮುಸ್ಲಿಮ್ ಸಮುದಾಯದ ವಿರುದ್ದ ಆಕ್ಷೇಪಕಾರಿ ಭಾಷಣಗೈದು ತೀವ್ರ ವಿವಾದಕ್ಕೆ ಗುರಿಯಾಗಿದ್ದಾರೆ. ...

ಅಣಕು ಮತದಾನದ ವೇಳೆ ಬಿಜೆಪಿಗೆ ಮತ

ಕೇರಳದ ಕಾಸರಗೋಡಿನಲ್ಲಿ ಅಣಕು ಮತದಾನದವೇಳೆ ಇವಿಎಂಗಳು ತಪ್ಪಾಗಿ ಬಿಜೆಪಿ ಪರವಾಗಿ ಮತಗಳನ್ನು ದಾಖಲಿಸಿವೆ ಎಂದು ಅರ್ಜಿದಾರರೊಬ್ಬರು ...

ಚುನಾವಣಾ ಪ್ರಕ್ರಿಯೆಯಲ್ಲಿ ಪಾವಿತ್ರ್ಯವಿರಬೇಕು; ಆಯೋಗಕ್ಕೆ ಹೇಳಿದ ಸುಪ್ರೀಂ ಕೋರ್ಟ್

ಚುನಾವಣಾ ಪ್ರಕ್ರಿಯೆ ಯಲ್ಲಿ ಪಾವಿತ್ರ್ಯವಿರಬೇಕು ಎಂದು ಚುನಾವಣಾ ಆಯೋಗಕ್ಕೆ ಇಂದು ಸುಪ್ರೀಂ ಕೋರ್ಟ್ ಹೇಳಿದೆಯಲ್ಲದೆ ಸ್ವತಂತ್ರ ...