ಉಜಿರೆ: ಸೆ. 3 ರಂದು ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರ 9 ನೇ ಪಟ್ಟಾಭಿಷೇಕ

Source: so english | By Arshad Koppa | Published on 24th August 2017, 8:09 PM | Coastal News | Guest Editorial |

ಉಜಿರೆಯ  ಶ್ರೀರಾಮ ಕ್ಷೇತ್ರದ ಸದ್ಗುರು ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರ 9 ನೇ ಪಟ್ಟಾಭಿಷೇಕದ ವರ್ಧಂತ್ಯುತ್ಸವ ಸೆಪ್ಟಂಬರ 3 ರವಿವಾರದಂದು  ಶ್ರೀರಾಮ ಕ್ಷೇತ್ರದಲ್ಲಿ ವಿಜೃಂಭಣೆಯಿಂದ  ನಡೆಯಲಿದೆ.  ಕಾರ್ಯಕ್ರಮವನ್ನು ಕೇಂದ್ರ ಅಂಕಿ ಸಂಖ್ಯೆಯ ಮತ್ತು ಯೋಜನಾ ಸಚಿವ ಡಿ.ವಿ. ಸದಾನಂದ ಗೌಡ ಉದ್ಘಾಟಿಸಲಿದ್ದು ಮುಖ್ಯ ಅತಿಥಿಗಳಾಗಿ  ಕರ್ನಾಟಕ ಸರಕಾರದ ಕಂದಾಯ ಸಚಿವ ಕಾಗೋಡು ತಿಮ್ಮಪ್ಪ, ಅರಣ್ಯ ಸಚಿವ ಬಿ. ರಮಾನಾಥ ರೈ, ಮೀನುಗಾರಿಕಾ ಸಚಿವ ಪ್ರಮೋದ ಮಧ್ವರಾಜ್, ರಾಜ್ಯ ಸಭಾ ಸದಸ್ಯ ಬಿ.ಕೆ.ಹರಿಪ್ರಸಾದ್, ಮಂಗಳೂರು ಸಂಸದ ನಳೀನಕುಮಾರ ಕಟೀಲ್,  ಬೆಳ್ತಂಗಡಿ ಶಾಸಕ ಕೆ. ವಸಂತ ಬಂಗೇರ,  ರಾಜ್ಯ ಆರ್ಯ ಈಡಿಗ ಸಂಘದ ಅಧ್ಯಕ್ಷ ತಿಮ್ಮೇಗೌಡ, ಮಾಜಿ ಸಚಿವ ವಿನಯಕುಮಾರ ಸೊರಕೆ,ಶಾಸಕರಾದ ಸುನೀಲ್ ಕುಮಾರ್,ಕೊಟ ಶ್ರೀನಿವಾಸ ಪೂಜಾರಿ,  ಭಟ್ಕಳ ಶಾಸಕ ಮಂಕಾಳ ವೈದ್ಯ, ಮಾಜಿ ಸಚಿವ ಶಿವಾನಂದ ನಾಯ್ಕ, ಮಾಜಿ ಶಾಸಕ ಜೆ.ಡಿ.ನಾಯ್ಕ, ಮತ್ತಿತರರು  ಉಪಸ್ಥಿತರಿರುವರು.  ಈ ಸಮರಂಭವು ವೇದಮೂರ್ತಿ ಲಕ್ಷ್ಮೀಪತಿ ಗೋಪಾಲಾಚಾರ್ಯ ಇವರಿಂದ ವೈದಿಕ ವಿಧಿ ವಿಧಾನಗೊಳೊಂದಿಗೆ  ವಿಜೃಂಭಣೆಯಿಂದ ನೆರವೇರಲಿದ್ದು ಈ ಪುಣ್ಯತಮವಾದ ಸಮಾರಂಭಕ್ಕೆ ತಾಲೂಕಿನ ಹೆಚ್ಚಿನ ಭಕ್ತಾಧಿಗಳು ಆಗಮಿಸಿ ಪೂಜ್ಯ ಶ್ರೀಗಳಿಂದ ಮಂತ್ರಾಕ್ಷತೆ ಪಡೆದು ಪುನೀತರಾಗಬೇಕು ಎಂದು ಆಸರಕೇರಿಯ ನಾಮಧಾರಿ ಗುರುಮಠ ಶ್ರೀ ನಿಚ್ಚಲಮಕ್ಕಿ ತಿರುಮಲ ವೆಂಕಟರಮಣದ ದೇವಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷರಾದ ಎಂ.ಆರ್. ನಾಯ್ಕ ಹಾಗೂ ಭಟ್ಕಳ  ಶ್ರೀರಾಮ ಕ್ಷೇತ್ರ ಸೇವಾ ಸಮಿತಿಯ ಅಧ್ಯಕ್ಷ  ಶ್ರೀಧರ  ಬಿ. ನಾಯ್ಕ ವಿನಂತಿಸಿದ್ದಾರೆ ಹೆಚ್ಚಿನ ಮಾಹಿತಿಗಾಗಿ  ಆಸರಕೇರಿಯ ನಾಮಧಾರಿ ಸಮಾಜದ ಗುರುಮಠ 08385-222311  ಸಂಪರ್ಕಿಸಲು ಕೋರಲಾಗಿದೆ. 

Read These Next

ಚಿಂದಿ ಆಯುವ ಹಕ್ಕು

ಗಂಭೀರವಾಗಿ ಚರ್ಚಿಸುವುದಾದಲ್ಲಿ ಒಂದು ಸಾಮಾಜಿಕವಾಗಿ ತಿರಸ್ಕಾರಕ್ಕೊಳಪಟ್ಟ ವೃತ್ತಿಯಾದ ಚಿಂದಿ ಆಯುವುದು ನೈತಿಕವಾಗಿ ...

ನಿಜಕ್ಕೂ ಸಾದಿಯಾ ಯಾರು?

ಗಣರಾಜೋತ್ಸವದಂದು ಕಾಶ್ಮೀರದಲ್ಲಿ ಬಾಂಬ್ ಸ್ಫೋಟಿಸಲು ಸಂಚು ನಡೆಸಿರುವಳೆಂದು ಶಂಕಿಸಿ ಬಂಧಿಸಲಾಗಿದ್ದ ಯುವತಿಯನ್ನು ಪೊಲೀಸರು ಫೆ. ...