ಉಡುಪಿ: ಚಲನಚಿತ್ರ ನಿರ್ಮಾಪಕ ಆತ್ಮಹತ್ಯೆಗೆ ಶರಣು

Source: so news | Published on 13th July 2020, 10:09 PM | Coastal News | Don't Miss |

ಉಡುಪಿ: ಚಿತ್ರ ನಿರ್ಮಾಪಕರೊಬ್ಬರು  ತನ್ನ ಮನೆಯ ಹೊರಗೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿರುವ ಘಟನೆ ಉಡುಪಿ ಜಿಲ್ಲೆ ಕುಂದಾಪುರದಲ್ಲಿ ನಡೆದಿದೆ. ಮೃತನನ್ನು ಕುಂದಾಪುರದ ಬೀಜಾಡಿ ನಿವಾಸಿ ನಾಗೇಶ್ ಕುಮಾರ್ (64) ಎಂದು ಗುರುತಿಸಲಾಗಿದೆ.
ಭೂಮಿಕಾ ಪ್ರೊಡಕ್ಷನ್ ಬ್ಯಾನರ್ ಅಡಿಯಲ್ಲಿಭರತ್ ನಾವುಂದ ನಿರ್ದೇಶನದ ಕಿರುಚಿತ್ರವೊಂದರ ನಿರ್ಮಾಣ ಮಾಡಿದ್ದ ನಾಗೇಶ್ ಕುಮಾರ್ ಅದಕ್ಕಾಗಿ 28 ಲಕ್ಷ ರೂ.ಗಳನ್ನು ಹೂಡಿಕೆ ಮಾಡಿರುವುದಾಗಿ ತಿಳಿದುಬಂದಿದೆ.  ಡೆತ್ ನೋಟ್ ನಲ್ಲಿ ಈ ಬಗ್ಗೆ ಉಲ್ಲೇಖ್ಸಿರುವ ನಾಗೇಶ್  ಅವರು ನಷ್ಟ ಅನುಭವಿಸಿದ್ದಾಗಿ ಹೇಳಿಕೊಂಡಿದ್ದಾರೆ. ಅಲ್ಲದೆ ತನ್ನ ಸಾವಿಗೆ ಯಾರೂ ಕಾರಣವಲ್ಲ ಎಂದೂ ಬರೆಯಲಾಗಿದೆ.
ನಿವೃತ್ತ ಬ್ಯಾಂಕ್ ಉದ್ಯೋಗಿಯಾಗಿದ್ದ ನಾಗೇಶ್ ಅವರು ಚಲನಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ಸಿಗದ ಕಾರಣ ಸುದೀರ್ಘ ಕಾಲದಿಂದ ಯಾವ ಆದಾಯವಿಲ್ಲದೆ ನಿರಾಶೆಗೊಳಗಾಗಿದ್ದರು,  ಹೂಡಿಕೆ ವಿಫಲವಾದ ಕಾರಣ ಹಣಕಾಸಿನ ಸಮಸ್ಯೆ ತಲೆದೋರಿ ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದರೆಂದು ಕುಂದಾಪುರ ಪೊಲೀಸ್ ಠಾಣೆಯ ಮೂಲಗಳು ಪತ್ರಿಕೆಗೆ ತಿಳಿಸಿದೆ. 
ಕಳೆದ ಒಂದು ವರ್ಷದಿಂದ ಅವರು ಮಾನಸಿಕ ಅಸ್ವಸ್ಥತೆಗಾಗಿ ಔಷಧ ತೆಗೆದುಕೊಳ್ಳುತ್ತಿದ್ದರು ಎಂದು ಮೂಲಗಳು ತಿಳಿಸಿವೆ. ಈ ನಿಟ್ಟಿನಲ್ಲಿ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಅಸ್ವಾಭಾವಿಕ ಸಾವಿನ ಪ್ರಕರಣ ದಾಖಲಾಗಿದೆ.

Read These Next

ಹೊರರಾಜ್ಯದಿಂದ ಕರ್ನಾಟಕಕ್ಕೆ ಆಗಮಿಸುವ ಮೀನುಗಾರ ಕಾರ್ಮಿಕರಿಗೆ ದೋಣಿಗಳಲ್ಲಿ ಕ್ವಾರಂಟೈನ್ : ಕೋಟಾ ಶ್ರೀನಿವಾಸ ಪೂಜಾರಿ