ಮೀನುಗಾರಿಕೆಗೆ ತೆರಳಿದ ೨ ಬೋಟು ಮುಳುಗಡೆ; ೩೦ಲಕ್ಷಕ್ಕೂ ಹೆಚ್ಚು ನಷ್ಟ

Source: S O News service | By Staff Correspondent | Published on 7th February 2017, 12:36 AM | Coastal News | State News | Incidents | Don't Miss |

ಭಟ್ಕಳ: ಸೋಮವಾರ ಬೆಳಗಿನ ಜಾವ ಅಳ್ವೇಕೋಡಿಯಿಂದ ಮೀನುಗಾರಿಕೆಗೆ ತೆರಳಿದ ಎರಡು ಬೋಟುಗಳು ಸಂಜೆ ೫ಗಂಟೆ ಸುಮಾರು ಮುಳುಗಡೆಯಾಗಿದ್ದು ಸುಮಾರು ೩೦ಲಕ್ಷ ಕ್ಕೂ ಅಧಿಕ ನಷ್ಟವುಂಟಾಗಿದೆ ಎಂದು ಅಂದಾಜಿಸಲಾಗಿದೆ.
ಅಳ್ವೆಕೋಡಿಯ ಯಶವಂತ ಮಾಸ್ತಿ ಮೋಗರ್ ಹಾಗೂ ಲಕ್ಷ್ಮಣ ಶನಿಯಾರ ಮೊಗೇರ್ ರಿಗೆ ಸೇರಿದ ದುರ್ಗಾಗೌರಿ ಹಾಗೂ ಧನಲಕ್ಷ್ಮಿ ಎಂಬ ಎರಡು ಬೋಟುಗಳು ತೆಂಗಿನಗುಂಡಿ ಸಮುದ್ರ ಕಿನಾರೆಯಲ್ಲಿ ಮುಳುಗಡೆಯಾಗಿದ್ದು ಮೀನುಗಾರಿಕೆ ನಡೆಸುತ್ತಿದ್ದ೮ಜನ ಮೀನುಗಾರರನ್ನು ಸ್ಥಳಿಯ ಮೀನುಗಾರರು ರಕ್ಷಿಸಿದ್ದಾರೆ.
ತಂಗಿನಗುಂಡಿ ಸಮುದ್ರ ಕಿನಾರೆಯಲ್ಲಿ ಹೂಳು ತುಂಬಿದ್ದು ರಭಸವಾಗಿ ಏಳುವ ತೆರೆಗಳಿಗೆ ಸಿಲುಕಿ ಈ ದುರಂತ ಸಂಭವಿಸಿದೆ ಎಂದು ಸ್ಥಳಿಯರು ಹೇಳಿದ್ದಾರೆ.
ಗ್ರಾಮೀಣ ಠಾಣಾ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದು ಪ್ರಕರಣ ದಾಖಲಿಸಿಕೊಂಡಿದ್ದಾರೆ
 

Read These Next

ಸಂವಿಧಾನದ ಆಶಯವನ್ನು ಎತ್ತಿಹಿಡಿಯುವಲ್ಲಿ ನ್ಯಾಯಾಂಗದ ಪಾತ್ರ ದೊಡ್ಡದು: ಮುಖ್ಯಮಂತ್ರಿ ಸಿದ್ದರಾಮಯ್ಯ

ಭಾರತದ ನ್ಯಾಯಾಂಗವು ಸಂವಿಧಾನದ ಆಶಯಗಳನ್ನು ಎತ್ತಿ ಹಿಡಿಯುವಲ್ಲಿ ಪ್ರಮುಖ ಪಾತ್ರ ವಹಿಸುತ್ತಾ ಬಂದಿದೆ. ಮೂಲಭೂತ ಹಕ್ಕುಗಳಿಗೆ ...

ವಿದ್ಯಾರ್ಥಿಗಳ ಗೊಂದಲಕ್ಕೆ ತೆರೆ: 5, 8, 9ನೇ ತರಗತಿಗೆ ಬೋರ್ಡ್ ಪರೀಕ್ಷೆ ನಡೆಸಲು ಹೈಕೋರ್ಟ್ ವಿಭಾಗೀಯ ಪೀಠ ಅಸ್ತು!

ವಿದ್ಯಾರ್ಥಿಗಳ ಗೊಂದಲಕ್ಕೆ ತೆರೆ: 5, 8, 9ನೇ ತರಗತಿಗೆ ಬೋರ್ಡ್ ಪರೀಕ್ಷೆ ನಡೆಸಲು ಹೈಕೋರ್ಟ್ ವಿಭಾಗೀಯ ಪೀಠ ಅಸ್ತು!

ಕೋಲಾರ ಕ್ಷೇತ್ರಕ್ಕೆ ಏಪ್ರಿಲ್ 26 ಕ್ಕೆ ಮತದಾನ, ಜೂನ್ 4ಕ್ಕೆ ಫಲಿತಾಂಶ, ತಕ್ಷಣದಿಂದಲೆ ಜಿಲ್ಲೆಯಾದ್ಯಂತ ನೀತಿ ಸಂಹಿತೆ ಜಾರಿ

ಲೋಕಸಭಾ ಚುನಾವಣೆಗೆ ಚುನಾವಣಾ ಆಯೋಗ ದಿನಾಂಕ ಘೋಷಣೆ ಮಾಡಿರುವ ಹಿನ್ನೆಲೆಯಲ್ಲಿ ತಕ್ಷಣದಿಂದಲೆ ಜಿಲ್ಲೆಯಾದ್ಯಂತ ಮಾದರಿ ನೀತಿ ಸಂಹಿತೆ ...

ಭಾಷಾ ಜ್ಞಾನದ ಕುರಿತು ಯಾರ ಬಗ್ಗೆಯೂ ಕೇವಲವಾಗಿ ಮಾತನಾಡಿಲ್ಲ: ಜೆ.ಪಿ.ಹೆಗ್ಡೆ ಸ್ವಷ್ಟನೆ

ಉಡುಪಿ: ಈವರೆಗಿನ ರಾಜಕೀಯ ಜೀವನದಲ್ಲಿ ಯಾರ ಮನಸ್ಸನ್ನೂ ನೋಯಿಸುವುದಾಗಲಿ ಅಥವಾ ಕೇವಲವಾಗಿ ಮಾತನಾಡುವುದನ್ನಾಗಲಿ ಮಾಡದೆ ಇರುವ ನಾನು ...