ವಿದ್ಯುತ್ ತಂತಿ ಸ್ಪರ್ಷ ಒಂದೇ ಮನೆಯ ಇಬ್ಬರು ಬಾಲಕರ ಸಾವು

Source: sonews | By Staff Correspondent | Published on 25th March 2020, 10:41 PM | Coastal News |

ಭಟ್ಕಳ: ಮನೆಯ ಮಹಡಿ ಮೇಲೆ ಆಟವಾಡುತ್ತಿದ್ದ ಇಬ್ಬರು ಸಹೋದರರಲ್ಲಿ ಓರ್ವ ಸಹೋದರ ಕೆಳಗೆ ಬೀಳುತ್ತಿರುವುದನ್ನು ತಪ್ಪಿಸಲು ಹೋಗಿ ವಿದ್ಯುತ್ ತಂತಿ ಸ್ಪರ್ಷಿಸಿ ಮೃತಪಟ್ಟರೆ ಮತ್ತೋರ್ವ ಸಹೋದರ ಕೆಳಗೆ ಬಿದ್ದು ಚಿಕಿತ್ಸೆ ಫಲಕಾರಿಯಾಗದೆ ಮಣಿಪಾಲ ಆಸ್ಪತ್ರೆಯಲ್ಲಿ ಸಾವನ್ನಪ್ಪಿರುವ ದಾರುಣ ಘಟನೆ ಬುಧವಾರ ಸಂಜೆ  ಕಾರ್ ಸ್ಟ್ರೀಟ್ ನಲ್ಲಿರುವ ಕಾರ್ಪೋರೇಷನ್ ಬ್ಯಾಂಕ್ ಎದರು ನಡೆದಿದೆ.

ಮೃತ ಬಾಲಕರನ್ನು  ಮನಿಯಾರ್ ಫಾರೂಕ್ ರ ಪುತ್ರರಾದ ಫಹದ್ ಮನಿಯಾರ್(೧೮) ಹಾಗೂ ಆಂಜಾಫ್ ಮನಿಯಾರ(೧೪) ಎಂದು ಗುರತಿಸಲಾಗಿದೆ.

ಬುಧವಾರ ಸಂಜೆ ಇಬ್ಬರು ಸಹೋದರರು ತಮ್ಮ ಮನೆಯ ಮಹಡಿಯ ಮೇಲೆ ಆಟವಾಡುತ್ತಿದ್ದರು ಎಂದು ಹೇಳಲಾಗಿದ್ದು ಕಾಲು ತಮ್ಮ ಕೆಳಗೆ ಬೀಳುತ್ತಿರುವುದನ್ನು ತಪ್ಪಿಸಲು ಅಣ್ಣ ಫಹದ್ ನು ಮೆಲ್ಗಡೆ ಯಿಂದ ಹಾದು ಹೋಗಿರುವ ವಿದ್ಯುತ್ ತಂತಿಯನ್ನು ಸ್ಪರ್ಷಿಸಿದ್ದಾನೆ. ಇದೇ ವೇಳೆ ತಮ್ಮ ಅಂಜಾಫ್ ಕೈಜಾರಿ ನೆಲದ ಮೇಲೆ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದಾನೆ. ಅತ್ತ ವಿದ್ಯುತ್ ತಂತಿ ಸ್ಪರ್ಷಿಸಿದ ಅಣ್ಣ ಅಸ್ಪತ್ತೆಗೆ ಸಾಗಿಸುವ ಮದ್ಯೆದಲ್ಲೇ ಸಾವನ್ನಪ್ಪಿದ್ದು ಗಂಭೀರವಾಗಿ ಗಾಯಗೊಂಡಿರುವ ಅಂಝಾಫ್ ನನ್ನು ಮಣಿಪಾಲ ಆಸ್ಪತ್ರೆಗೆ ಸಾಗಿಸಿದ್ದು ಅಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿರುವುದಾಗಿ ತಿಳಿದುಬಂದಿದೆ.  

.

Read These Next

ಮುಂಡಗೋಡ: ಜಾನಪದ ರಾಜ್ಯ ಪ್ರಶಸ್ತಿ ವಿಜೇತ ಸಹದೇವಪ್ಪ ನಡಿಗೇರ ಗೆ ಗಂಗಾಮತ ಸಮಾಜದಿಂದ ಸನ್ಮಾನ

ಮುಂಡಗೋಡ ನಗರ ಗಂಗಾಮತಸ್ಥ ಕುಲಬಾಂದವರು  ಭಾನುವಾರ ರಾಜ್ಯಮಟ್ಟದ ಜಾನಪದ ಅಕಾಡಮಿ ಪ್ರಶಸ್ತಿ ಗೆ ಭಾಜನರಾದ ಇಂದೂರ ಗ್ರಾಮದ  ಸಹದೇವಪ್ಪ ...

ದೇಶದ ರಕ್ಷಣೆ, ಭದ್ರತೆ ಕಾಪಾಡುವುದು ರಕ್ಷಣಾ ಸಚಿವರ ಕರ್ತವ್ಯ : ಕೆಪಿಸಿಸಿ ವಕ್ತಾರ ಪ್ರಕಾಶ ರಾಠೋಡ್

ಮಂಗಳೂರು : ದೇಶದ ರಕ್ಷಣೆ ಉದ್ದೇಶದಿಂದ ಭದ್ರತಾ ವಿಷಯ ಗೌಪ್ಯವಾಗಿರಬೇಕು. ದೇಶದ ಹೀನ ಕೃತ್ಯದಲ್ಲಿ ರಿಪಬ್ಲಿಕ್ ಟಿವಿ ಮುಖ್ಯಸ್ಥ ...

ಸಿಎಂ ತವರು ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ : ಶಾಸಕ ಯು ಟಿ ಖಾದರ್ ಆರೋಪ.

ಮಂಗಳೂರು : ಸಿ.ಎಂ ತವರು ಜಿಲ್ಲೆಯಲ್ಲಿ ಕಾನೂನು ವ್ಯವಸ್ಥೆ ಇಲ್ಲವಾ. ಜನ ಸಾಮಾನ್ಯರ ಮರಳು ಗಾಡಿಯನ್ನ ವಶ ಪಡಿಸಿಕೊಳ್ಳತ್ತಾರೆ. ಆದರೆ ...