ಶಿರಸಿಯ ಗಣೇಶನಗರದ ಮನೆಕಳ್ಳತನದ ಆರೋಪಿಗಳ ಬಂಧನ.

Source: SO News | By Laxmi Tanaya | Published on 22nd October 2020, 8:21 PM | Coastal News | Don't Miss |

ಶಿರಸಿ :  ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ ಗಣೇಶನಗರದ ಮಂಜುನಾಥ ಕಾಲೋನಿಯ ಮನೆ ಕಳ್ಳತನಕ್ಕೆ ಸಂಬಂಧಿಸಿದಂತೆ ಇಬ್ಬರು ಕಳ್ಳರನ್ನ ಪೊಲೀಸರು ಬಂಧಿಸಿದ್ದಾರೆ.

 ಹಾನಗಲ್ ಮೂಲದ ಅಬ್ದುಲ್ ಸತ್ತಾರ್ ದೊಡ್ಡಮನಿ (24), ಹಾಗೂ ) ಅಜಯ್   ರಾಜು ನಾಯ್ಡು,(19) ಬಂಧಿತ ಆರೋಪಿಗಳಾಗಿದ್ದಾರೆ.

ಬಂಧಿತರಿಂದ ಒಟ್ಟು 1,30,400 ರೂ. ಮೌಲ್ಯದ ಬಂಗಾರದ ವಸ್ತುಗಳನ್ನು ಜಪ್ತಿ ಮಾಡಲಾಗಿದೆ. ಕಳೆದ ಜೂನ್ 22 ರಂದು ಇವರಿಬ್ಬರು ಮನೆ ಕಳ್ಳತನ ನಡೆಸಿ ಪರಾರಿಯಾಗಿದ್ದರು. 

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ  ಶಿವಪ್ರಕಾಶ ದೇವರಾಜು ಹಾಗೂ ಅಡಿಷನಲ್ ಎಸ್ಪಿ   ಬದರಿನಾಥ , ಶಿರಸಿ ಡಿವೈಎಸ್ಪಿ  ಗೋಪಾಲಕೃಷ್ಣ ನಾಯಕ ಮಾರ್ಗದರ್ಶನದಲ್ಲಿ ವೃತ್ತ ನಿರೀಕ್ಷಕರಾದ  ಪ್ರದೀಪ ಯು ಹಾಗೂ ಶಿರಸಿ ಗ್ರಾಮೀಣ ಪೊಲೀಸ ಠಾಣೆಯ ನಂಜಾನಾಯ್ಕ್,  ಪಿ.ಎಸ್.ಐ,  ಶ್ಯಾಮ್ ಪಾವಸ್ಕರ, ಅಂಕೋಲಾ ಪಿಎಸೈ ಸಂಪತಕುಮಾರ, ಪ್ರೊಬೆಶನರಿ ಪಿಎಸ್ಐ ನಾಗೇಂದ್ರ ನಾಯ್ಕ  ಸೇರಿ ಇತರ ಸಿಬ್ಬಂದಿಗಳು  ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

Read These Next

ಭಟ್ಕಳ ಹೆಬಳೆಯಲ್ಲಿ ಕಸ, ತ್ಯಾಜ್ಯ ಸಂಗ್ರಹಕ್ಕೆ ತಡೆ; ಊರೆಲ್ಲ ದುರ್ವಾಸನೆ; ಜಾಗ, ಹಣವಿದ್ದರೂ ಯೋಜನೆ ಇಲ್ಲ !

ತಾಲೂಕಿನ ಹೆಬಳೆ ಪಂಚಾಯತ ಪ್ರದೇಶದಲ್ಲಿ ಮನೆ ಮನೆಯ ಕಸ, ತ್ಯಾಜ್ಯಗಳನ್ನು ಎತ್ತಿಕೊಂಡು ಊರ ನಡುವಿನ ಖಾಲಿ ಪ್ರದೇಶದಲ್ಲಿ ಸಂಗ್ರಹಿಸಿ ...

ಉ.ಕ.ಜಿಲ್ಲೆಯ 47,708 ಎಕರೆ ಅರಣ್ಯ ಭೂಮಿಯನ್ನು ಕಂದಾಯ ಇಲಾಖೆಗೆ ಹಸ್ತಾಂತರಿಸುವಂತೆ ಅರಣ್ಯ ಹಕ್ಕು ಹೋರಾಟಗಾರ ಆಗ್ರಹ

ಶಿರಸಿ : ರಾಜ್ಯ ಸರ್ಕಾರದ ಅಧಿಸೂಚನೆ ನಿರ್ಲಕ್ಷಿಸಿ ಅರಣ್ಯ ವಾಸಿಗಳು ಸಾಗುವಳಿ ಮಾಡುತ್ತಿರುವ ಜಿಲ್ಲೆಯ 47,708 ಎಕರೆ ಅರಣ್ಯ ಭೂಮಿ ಪ್ರದೇಶ ...

ರಾಜ್ಯದಲ್ಲಿ ಗೋಹತ್ಯೆ ನಿಷೇಧ ಕಾನೂನು ಖಂಡಿತ ಜಾರಿಗೆ ತರುತ್ತೇವೆ : ಗೃಹ ಸಚಿವ ಬೊಮ್ಮಾಯಿ.

ಕಾರವಾರ : ರಾಜ್ಯದಲ್ಲಿ ಗೋಹತ್ಯೆ ನಿಷೇಧ ಕಾನೂನು ಖಂಡಿತವಾಗಿ ಜಾರಿಗೆ ತರುತ್ತೇವೆ ಎಂದು ಗೃಹಸಚಿವ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.