ಹೊಸದಿಲ್ಲಿ: ಟ್ವಿಟರ್ ರೆಕ್ಕೆಗೆ ಕೇಂದ್ರದ ಕತ್ತರಿ, ಮಧ್ಯವರ್ತಿ ವೇದಿಕೆಯ ಸ್ಥಾನಮಾನ ಕಳೆದುಕೊಂಡ ಟ್ವಿಟರ್, ಐಟಿ ನಿಯಮ ಪಾಲಿಸಲು ಸಮ್ಮತಿ

Source: VB | By S O News | Published on 17th June 2021, 1:23 PM | National News |

ಹೊಸದಿಲ್ಲಿ: ಭಾರತದಲ್ಲಿ ಮಧ್ಯವರ್ತಿ ವೇದಿಕೆಯಾಗಿ ತನ್ನ ಸ್ಥಾನಮಾನವನ್ನು ಕಳೆದುಕೊಂಡ ಬಳಿಕ ಮೈಕ್ರೋಬ್ಲಾಗಿಂಗ್ ಫ್ಲ್ಯಾಟ್‌ಫಾರ್ಮ್ ಟ್ವಿಟರ್ ಸರಕಾರದ ನೂತನ ಮಾಹಿತಿ ತಂತ್ರಜ್ಞಾನ (ಐಟಿ) ನಿಯಮಗಳನ್ನು ಪಾಲಿಸಲು ತಾನು ಪ್ರತಿಯೊಂದೂ ಪ್ರಯತ್ನ ಮಾಡುವುದನ್ನು ಮುಂದುವರಿಸುವುದಾಗಿ ಬುಧವಾರ ಹೇಳಿದೆ.

ತಾನು ಕೈಗೊಳ್ಳುವ ಪ್ರತಿಯೊಂದೂ ಕ್ರಮದ ಬಗ್ಗೆ ಸರಕಾರಕ್ಕೆ ಮಾಹಿತಿ

ಕೋಮುವಾದ ಪ್ರಚೋದನೆ ಆರೋಪ ಉ.ಪ್ರ.ದಲ್ಲಿ ಟ್ವಿಟರ್ ವಿರುದ್ಧ ಎಫ್‌ಐಆರ್ ದಾಖಲು

ಥರ್ಡ್ ಪಾರ್ಟಿ ಕಂಟೆಂಟ್‌ಗಾಗಿ ಟ್ವಿಟರ್‌ ಆರೋಪಗಳನ್ನು ಎದುರಿಸಬಹುದಾದ ಮೊದಲ ಪ್ರಕರಣವು ಉತ್ತರ ಪ್ರದೇಶದಲ್ಲಿ ಮಂಗಳವಾರ ರಾತ್ರಿ ದಾಖಲಾಗಿದ್ದು, ಇದು ಜೂ.5ರಂದು ಘಾಝಿಯಾಬಾದ್‌ನಲ್ಲಿ ಮುಸ್ಲಿಂ ವೃದ್ಧರೋರ್ವರ ಮೇಲೆ ನಡೆದಿದ್ದ ಹಲ್ಲೆಗೆ ಸಂಬಂಧಿಸಿದೆ. ಘಟನೆಗೆ ಸಂಬಂಧಿಸಿದ ತಪ್ಪುಮಾಹಿತಿಯನ್ನು ತೆಗೆಯದಿದ್ದಕ್ಕಾಗಿ ಟ್ವಿಟರ್‌ನ್ನು ಎಫ್‌ಐಆರ್‌ನಲ್ಲಿ ಆರೋಪಿಯನ್ನಾಗಿಸಲಾಗಿದೆ.

ತನ್ನ ಮೇಲೆ ಹಲ್ಲೆ ನಡೆಸಿದ್ದ ಗುಂಪು ತನ್ನ ಗಡ್ಡವನ್ನು ಕತ್ತರಿಸಿತ್ತು ಮತ್ತು ವಂದೇ ಮಾತರಂ ಹಾಗೂ ಜೈಶ್ರೀರಾಮ್ ಎಂದು ಕೂಗುವಂತೆ ತನ್ನನ್ನು ಬಲಾತ್ಕರಿಸಿತ್ತು ಎಂದು ಸೂಫಿ ಅಬ್ದುಲ್ ಸಮದ್‌ ಆರೋಪಿಸಿದ್ದು, ಇದನ್ನು ತಳ್ಳಿಹಾಕಿರುವ ಉ.ಪ್ರದೇಶ ಪೊಲೀಸರು ಟೀಟ್‌ಗಳಲ್ಲಿ ಬಣ್ಣಿಸಿರುವಂತೆ ಇದು ಕೋಮುಘಟನೆಯಾಗಿರಲಿಲ್ಲ ಎಂದಿದ್ದಾರೆ.

ಹಿಂದೂಗಳು ಮತ್ತು ಮುಸ್ಲಿಮರು ಸೇರಿದಂತೆ ಆರು ಜನರ ಗುಂಪು ಸಮದ್ ಮೇಲೆ ಹಲ್ಲೆ ನಡೆಸಿದ್ದು, ಅವರೆಲ್ಲ ನಕಲಿ ತಾಯಿತಗಳನ್ನು ಮಾರುತ್ತಿದ್ದಕ್ಕಾಗಿ ಸಮದ್ ವಿರುದ್ಧ ಆಕ್ರೋಶಗೊಂಡಿದ್ದರು. ಕೋಮು ಭಾವನೆಯನ್ನು ಪ್ರಚೋದಿಸುವ ಸ್ಪಷ್ಟ ಉದ್ದೇಶದೊಂದಿಗೆ ಸಮದ್ ಆರೋಪಗಳನ್ನು ಶೇರ್ ಮಾಡಿಕೊಂಡಿದ್ದಕ್ಕಾಗಿ ಟ್ವಿಟರ್ ಹಲವಾರು ಪತ್ರಕರ್ತರು ಮತ್ತು ಕಾಂಗ್ರೆಸ್ ನಾಯಕರನ್ನು ಎಫ್‌ಐಆರ್‌ನಲ್ಲಿ ಹೆಸರಿಸಲಾಗಿದೆ. ಪೊಲೀಸರ ಹೇಳಿಕೆಯನ್ನು ತಿರಸ್ಕರಿಸಿರುವ ಸಮದ್ ಕುಟುಂಬವು ದ್ವೇಷ ಹಲ್ಲೆ ಸೇರಿದಂತೆ ನಾಲ್ಕು ಗಂಟೆಗಳ ಕಾಲ ಅವರನ್ನು ಹಿಂಸಿಸಲಾಗಿತ್ತು ಎಂದು ಆರೋಪಿಸಿದೆ. ನಮ್ಮ ಕುಟುಂಬದಲ್ಲಿ ಯಾರೂ ತಾಯಿತಗಳನ್ನು ಮಾರುವ ದಂಧೆಯನ್ನು ಮಾಡುತ್ತಿಲ್ಲ. ನಾವು ಬಡಗಿ ಕೆಲಸ ಮಾಡುತ್ತಿದ್ದೇವೆ ಎಂದು ಸಮದ್ ಪುತ್ರ ತಿಳಿಸಿದರು.

ಸರಕಾರಕ್ಕೆ ಅಧಿಕಾರವಿಲ್ಲ

ಯಮಗಳ ಪಾಲನೆಯಲ್ಲಿ ವೈಫಲ್ಯಕ್ಕಾಗಿ ಟ್ವಿಟರ್‌ನಂತಹ ನಿಯಮ ಕಂಪೆನಿಗಳು ಮಧ್ಯವರ್ತಿ ವೇದಿಕೆಗಳಾಗಿ ಉಳಿಯಬೇಕೇ ಎನ್ನುವುದನ್ನು ನಿರ್ಧರಿಸುವುದು ನ್ಯಾಯಾಲಯಗಳ ಕೆಲಸವಾಗಿದೆಯೇ ಹೊರತು ಸರಕಾರದಲ್ಲ ಎಂದು ಡಿಜಿಟಲ್ ವಕಾಲತ್ತು ಗುಂಪು ಇಂಟರ್‌ನೆಟ್ ಫ್ರೀಡಂ ಫೌಂಡೇಷನ್ ಹೇಳಿದೆ.

ನೀಡುವುದಾಗಿ ತಿಳಿಸಿರುವ ಟ್ವಿಟರ್, ಮಧ್ಯಂತರ ಮುಖ್ಯ ಪಾಲನಾ ಅಧಿಕಾರಿಯನ್ನು ನೇಮಕಗೊಳಿಸಲಾಗಿದ್ದು, ಶೀಘ್ರವೇ ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯಕ್ಕೆ ವಿವರಗಳನ್ನು ಸಲ್ಲಿಸಲಾಗುವುದು ಎಂದು ಹೇಳಿದೆ. ನೂತನ ನಿಯಮಗಳನ್ನು ಪಾಲಿಸಲು ಟ್ವಿಟರ್ ಪ್ರತಿಯೊಂದೂ ಪ್ರಯತ್ನವನ್ನು ಮಾಡಲಿದೆ ಎಂದು ಕಂಪೆನಿಯ ವಕ್ತಾರರು ತಿಳಿಸಿದರು.

ಇದಕ್ಕೂ ಮುನ್ನ ಟ್ವಿಟರ್ ನೂತನ ಐಟಿ ನಿಯಮಗಳನ್ನು ಪಾಲಿಸದಿದ್ದಕ್ಕಾಗಿ ಭಾರತದಲ್ಲಿ ಮಧ್ಯವರ್ತಿ ವೇದಿಕೆಯಾಗಿ ತನ್ನ ಸ್ಥಾನಮಾನವನ್ನು ಕಳೆದುಕೊಂಡಿದೆ ಎಂದು ಸರಕಾರಿ ಮೂಲಗಳು ತಿಳಿಸಿದ್ದವು.

ಟ್ವಿಟರ್ ಹೊರತುಪಡಿಸಿ ಮುಖ್ಯವಾಹಿನಿಯ ಇತರ ಎಲ್ಲ ಸಾಮಾಜಿಕ ಜಾಲತಾಣಗಳು ನೂತನ ನಿಯಮಗಳನ್ನು ಪಾಲಿಸುತ್ತಿವೆ ಎಂದು ಮೂಲಗಳು ತಿಳಿಸಿದವು. ನೂತನ ಐಟಿ ನಿಯಮಗಳ ಪಾಲನೆಗಾಗಿ ತಾನು ಟ್ವಿಟರ್‌ಗೆ ಅಂತಿಮ ನೋಟಿಸನ್ನು ನೀಡಿರುವುದಾಗಿ ಕೇಂದ್ರ ವಿದ್ಯುನ್ಮಾನ ಮತ್ತು ಮಾಹಿತಿ ಸಚಿವಾಲಯವು ಜೂ.5ರಂದು ತಿಳಿಸಿತ್ತು. ಸಾಮಾಜಿಕ ಜಾಲತಾಣ ಕಂಪೆನಿಗಳಿಗೆ ಸಂಬಂಧಿಸಿದ ನೂತನ ನಿಯಮಗಳನ್ನು ಪಾಲಿಸಲು ತಾನು ಪ್ರಯತ್ನಗಳನ್ನು ಮಾಡುತ್ತಿದ್ದೇನೆ ಮತ್ತು ಗುತ್ತಿಗೆಯಾಧಾರದಲ್ಲಿ ನೋಡಲ್ ವ್ಯಕ್ತಿ(ಎನ್‌ಸಿಪಿ)ಯನ್ನು ಮತ್ತು ನಿವಾಸಿ ಕುಂದುಕೊರತೆಗಳ ಅಧಿಕಾರಿಯನ್ನು ನೇಮಿಸಲಾಗಿದೆ. ಮುಖ್ಯ ಪಾಲನಾ ಅಧಿಕಾರಿಯ ನೇಮಕವನ್ನು ಅಂತಿಮಗೊಳಿಸಲಾಗುತ್ತಿದೆ ಎಂದು ಟ್ವಿಟರ್ ಜೂ.9ರಂದು ಸರಕಾರಕ್ಕೆ ಬರೆದಿತ್ತು.


ಐಟಿ ನಿಯಮ ಪಾಲಿಸುವಲ್ಲಿ ಟ್ವಿಟರ್ ವಿಫಲ ರವಿಶಂಕರ್ ಪ್ರಸಾದ್

ಹೊಸದಿಲ್ಲಿ: ಮಧ್ಯವರ್ತಿ ಮಾರ್ಗಸೂಚಿಯನ್ನು ಪಾಲಿಸುವಲ್ಲಿ ಟ್ವಿಟರ್ ವಿಫಲವಾಗಿದೆ ಮತ್ತು ಹಲವು ಅವಕಾಶಗಳನ್ನು ನೀಡಿದ ಹೊರತಾಗಿಯೂ ಉದ್ದೇಶಪೂರ್ವಕವಾಗಿ ಧಿಕ್ಕರಿಸುವ ಮಾರ್ಗವನ್ನು ಆಯ್ಕೆ ಮಾಡಿಕೊಂಡಿದೆ ಎಂದು ಕೇಂದ್ರ ಮಾಹಿತಿ ಮತ್ತು ತಂತ್ರಜ್ಞಾನ ಇಲಾಖೆಯ ಸಚಿವ ರವಿಶಂಕರ್ ಪ್ರಸಾದ್ ಬುಧವಾರ ಹೇಳಿದ್ದಾರೆ.

ವಾಕ್‌ಸ್ವಾತಂತ್ರ್ಯದ ಪ್ರತಿಪಾದಕ ಎಂದು ಸ್ವಯಂಹೇಳಿಕೊಳ್ಳುವ

ಟ್ವಿಟರ್, ಮಧ್ಯವರ್ತಿ ಮಾರ್ಗಸೂಚಿಗೆ ಸಂಬಂಧಿಸಿದ ವಿಷಯದಲ್ಲಿ ಉದ್ದೇಶಪೂರ್ವಕವಾಗಿ ಧಿಕ್ಕರಿಸುವ ಮಾರ್ಗವನ್ನು ಆಯ್ದುಕೊಂಡಿರುವುದು ವಿಸ್ಮಯಕರವಾಗಿದೆ ಎಂದು ಅವರು ಟೀಕಿಸಿದ್ದಾರೆ. 'ಗೌಪ್ಯತೆಯ ವಿಷಯದಲ್ಲಿ ಟ್ವಿಟರ್ ವೇದಿಕೆ ಸುರಕ್ಷಿತವೇ ಎಂಬ ಬಗ್ಗೆ ಹಲವರು ಪ್ರಶ್ನಿಸಿದ್ದಾರೆ.

ಇದಕ್ಕೆ ಸಿಗುವ ಸರಳ ಉತ್ತರವೆಂದರೆ, ಈ ಸಾಮಾಜಿಕ ಮಾಧ್ಯಮ ಮೇ 26ರಂದು ಜಾರಿಗೆ ಬಂದಿರುವ ಮಧ್ಯವರ್ತಿ ಮಾರ್ಗಸೂಚಿಯನ್ನು ಉದ್ದೇಶಪೂರ್ವಕವಾಗಿ ಪಾಲನೆ ಮಾಡುತ್ತಿಲ್ಲ' ಎಂದು ದೇಶೀಯವಾಗಿ ಅಭಿವೃದ್ಧಿಪಡಿಸಿರುವ ಮೈಕ್ರೋಬ್ಲಾಗಿಂಗ್ ವೇದಿಕೆ 'ಕೂ' ನಲ್ಲಿ ಸರಣಿ ಪೋಸ್ಟ್ ಮಾಡಿದ್ದಾರೆ.

ದೇಶದ ಕಾನೂನಿನ ಅನುಸಾರ ಸೂಚಿಸಿರುವ ಪ್ರಕ್ರಿಯೆ ಪಾಲಿಸಲು ನಿರಾಕರಿಸಿದ ಜೊತೆಗೆ, ಮಾಧ್ಯಮಗಳನ್ನು ದುರುಪಯೋಗಪಡಿಸಿಕೊಳ್ಳುತ್ತಿದೆ. ಸುಳ್ಳು ಸುದ್ದಿಯ ವಿರುದ್ಧದ ಕಾರ್ಯಾಚರಣೆಯ ವಿಷಯದಲ್ಲಿ ಟ್ವಿಟರ್ ಸ್ಟೇಚ್ಛಾನುಸಾರವಾಗಿ ವರ್ತಿಸುತ್ತಿದೆ ಎಂಬುದಕ್ಕೆ ಉತ್ತರಪ್ರದೇಶದಲ್ಲಿ ನಡೆದ ಪ್ರಕರಣವೇ ನಿದರ್ಶನವಾಗಿದೆ ಎಂದು, ಉತ್ತರಪ್ರದೇಶದ ಘಾಝಿಯಾಬಾದ್‌ನ ಲೋನಿ ಎಂಬಲ್ಲಿ ವೃದ್ಧರೊಬ್ಬರನ್ನು ಥಳಿಸಲಾಗಿದೆ ಎಂಬ ಸುದ್ದಿಯ ಹಿನ್ನೆಲೆಯಲ್ಲಿ ಟ್ವಿಟರ್ ವಿರುದ್ಧ ಎಫ್‌ಐಆರ್ ದಾಖಲಾಗಿರುವುದನ್ನು ಪರೋಕ್ಷವಾಗಿ ಉಲ್ಲೇಖಿಸಿ ಸಚಿವರು ಹೇಳಿದರು.

ಭಾರತದ ಐಟಿ ಅಥವಾ ಔಷಧ ಸಂಸ್ಥೆ ಅಥವಾ ಇನ್ಯಾವುದೇ ಸಂಸ್ಥೆಗಳು ಅಮೆರಿಕದಲ್ಲಿ

ಟ್ವಿಟರ್ ಈಗ ಕೇವಲ ವಿವಿಧ ಬಳಕೆದಾರರಿಂದ ಕಂಟೆಂಟ್‌ಗಳ ಪೋಸ್ಟ್‌ಗೆ ಅವಕಾಶ ನೀಡುವ ವೇದಿಕೆಯಾಗಿ ಉಳಿದಿಲ್ಲ,ಬದಲಿಗೆ ಅದು ತನ್ನ ವೇದಿಕೆಯಲ್ಲಿ ಪ್ರಕಟಿಸುವ ವಿಷಯಗಳಿಗಾಗಿ ನೇರವಾಗಿ ಹೊಣೆಗಾರನಾಗಿರುತ್ತದೆ ಮತ್ತು ತನ್ನ ವಿರುದ್ಧ ಕಾನೂನು ಕ್ರಮಗಳಿಗೆ ತೆರೆದುಕೊಳ್ಳುತ್ತದೆ.

ಈ ಬೆಳವಣಿಗೆಯ ಪರಿಣಾಮವಾಗಿ ಕಾನೂನುಬಾಹಿರ ವಿಷಯಗಳಿಗಾಗಿ ಟ್ವಿಟರ್ ವಿರುದ್ಧ ಯಾವುದೇ ಆರೋಪವಿದ್ದರೆ ಅದನ್ನು ಪ್ರಕಾಶಕನನ್ನಾಗಿ ಪರಿಗಣಿಸಲಾಗುತ್ತದೆಯೇ ಹೊರತು ಮಧ್ಯವರ್ತಿ ವೇದಿಕೆಯಾಗಿ ಅಲ್ಲ ಮತ್ತು ಐಟಿ ಕಾಯ್ದೆ ಸೇರಿದಂತೆ ಯಾವುದೇ ಕಾಯ್ದೆಯಡಿ ದಂಡನೆಗೆ ಗುರಿಯಾಗಬೇಕಾಗುತ್ತದೆ.

ಕಾರ್ಯನಿರ್ವಹಿಸಬೇಕಿದ್ದರೆ ಅಲ್ಲಿನ ನಿಯಮಗಳನ್ನು ಪಾಲಿಸಬೇಕಾಗುತ್ತದೆ. ಹೀಗಿರುವಾಗ, ನಿಂದನೆ ಅಥವಾ ಅವಹೇಳನಕ್ಕೆ ಒಳಗಾದ ಸಂತ್ರಸ್ತರಿಗೆ ಧ್ವನಿ ನೀಡುವ ಉದ್ದೇಶದಿಂದ ಭಾರತದಲ್ಲಿ ರೂಪಿಸಲಾಗಿರುವ ನಿಯಮಗಳನ್ನು ಪಾಲಿಸಲು ಟ್ವಿಟರ್‌ನಂತಹ ವೇದಿಕೆಗಳು ಹಿಂಜರಿಯುವುದೇಕೆ ಎಂದವರು ಪ್ರಶ್ನಿಸಿದರು. ಬೃಹತ್ ಭೌಗೋಳಿಕ ಪ್ರದೇಶವನ್ನು ಹೊಂದಿರುವ ಭಾರತದ ಸಂಸ್ಕೃತಿಯೂ ವಿಭಿನ್ನವಾಗಿದೆ. ಕೆಲವೊಂದು ಸಂದರ್ಭದಲ್ಲಿ, ಸಾಮಾಜಿಕ ಮಾಧ್ಯಮಗಳಲ್ಲಿ ಆಗುವ ಪ್ರಚಾರದಿಂದ ಸುಳ್ಳು ಸುದ್ದಿ ಸೃಷ್ಟಿಸುವ ಸಣ್ಣದೊಂದು ಕಿಡಿಯೂ ಕಾಳ್ಗಿಚ್ಚಿನಂತೆ ಸಮಸ್ಯೆ ತಂದೊಡ್ಡಬಹುದು. ಈ ಉದ್ದೇಶದಿಂದಲೇ ಮಧ್ಯವರ್ತಿ ಮಾರ್ಗಸೂಚಿಯನ್ನು ಜಾರಿಗೊಳಿಸಲಾಗಿದೆ ಎಂದು ರವಿಶಂಕರ್ ಪ್ರಸಾದ್ ಹೇಳಿದ್ದಾರೆ.


 


 

Read These Next

ಆರ್ಯನ್ ಖಾನ್ ಬಿಡುಗಡೆಗೆ ಎನ್‌ಸಿಬಿಯ ವಾಂಖೆಡೆ, ಮಧ್ಯವರ್ತಿಗಳಿಂದ 25 ಕೋ.ರೂ. ಲಂಚದ ಬೇಡಿಕೆ ಸಾಕ್ಷಿ ಆರೋಪ

ಪ್ರಯಾಣಿಕರ ಹಡಗಿನಲ್ಲಿ ಮಾದಕ ದ್ರವ್ಯ ಪತ್ತೆ ಪ್ರಕರಣದ ಆರೋಪಿಯಾಗಿರುವ ಆರ್ಯನ್ ಖಾನ್ ಬಿಡುಗಡೆಗೆ ಮಾದಕ ದ್ರವ್ಯ ...

ತೈಲ ಬೆಲೆ ಹೆಚ್ಚಳದ ವಿರುದ್ಧ ಪ್ರತಿಭಟನೆ ನ.5ರಂದು ಲಾರಿ ಮಾಲಕರಿಂದ ವಿಧಾನಸೌಧ ಮುತ್ತಿಗೆ

ರಾಜ್ಯ ಸರಕಾರ ಈ ಕೂಡಲೇ ಇಂಧನ ಬೆಲೆ ತಗ್ಗಿಸುವಂತೆ ಆಗ್ರಹಿಸಿ ನ5ರಂದು ವಿಧಾನಸೌಧಕ್ಕೆ ಮುತ್ತಿಗೆ ಹಾಕಲಾಗುವುದೆಂದು ಫೆಡರೇಷನ್ ಆಫ್ ...

ಹುಬ್ಬಳ್ಳಿ: ಹುಬ್ಬಳ್ಳಿಯ ಚರ್ಚ್‌ಗೆ ನುಗ್ಗಿ ಭಜನೆ ಮಾಡಿದ ಸಂಘಪರಿವಾರದ ಕಾರ್ಯಕರ್ತರು

ಬಲವಂತದಿಂದ ಮತಾಂತರಗಳನ್ನು ಮಾಡಲಾಗುತ್ತಿದೆ ಎಂದು ಆರೋಪಿಸಿ ರವಿವಾರ ಬೆಳಗ್ಗೆ ಇಲ್ಲಿಯ ಭೈರಿದೇವರ ಕೊಪ್ಪದಲ್ಲಿರುವ ಚರ್ಚೆಂದಕ್ಕೆ ...