ಭಟ್ಕಳ ಅರಣ್ಯ ಇಲಾಖೆ ವತಿಯಿಂದ ವಿಶ್ವ ಪರಿಸರ ದಿನಾಚರಣೆ

Source: so news | By MV Bhatkal | Published on 7th June 2019, 11:53 PM | Coastal News | Don't Miss |

 

ಭಟ್ಕಳ: ಪರಿಸರ ನಾಶದಿಂದ ಆಗುವಂತಹ ದುಷ್ಪರಿಣಾಮವನ್ನು ಈಗಾಗಲೆ ನಮ್ಮ ಜಿಲ್ಲೆ ಜನರು  ಅನುಭವಿಸುತ್ತಿದ್ದು,  ಪರಿಸರ ನಾಶದಿಂದಾಗಿ ಎಲ್ಲೆಡೆ ಬರಗಾಲ ಆವರಿಸಿ ಕುಡಿಯುವ ನೀರಿಗಾಗಿ ಹುಡುಕಾಟ ನಡೆಸುವ ಪರಿಸ್ಥಿತಿ ಬಂದೊದಗಿದೆ ಎಂದು ಶಾಸಕ ಸುನೀಲ ನಾಯ್ಕ ಗುರುವಾರದಂದು  ಕರ್ನಾಟಕ ಅರಣ್ಯ ಇಲಾಖೆ, ಹೊನ್ನಾವರ ಅರಣ್ಯ ವಿಭಾಗ, ಭಟ್ಕಳ ಉಪವಿಭಾಗ, ಭಟ್ಕಳ ವಲಯ ಇವರ ವತಿಯಿಂದ ವಿಶ್ವ ಪರಿಸರ ದಿನಾಚರಣೆ 2019 ರ ಅಂಗವಾಗಿ ಕಾಡು ಬೆಳೆಸಿ ನಾಡು ಉಳಿಸಿ ಜಾಥವನ್ನು ಹಸಿರು ನಿಶಾನೆ ತೋರಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು.

ನಮ್ಮ ಜಿಲ್ಲೆಗೆ ಕರ್ನಾಟಕದ ಕಾಶ್ಮೀರ ಎಂಬ ಹೆಗ್ಗಳಿಕೆ ಇದಿ.ಆದರೆ ಪರಿಸರ ನಾಶದಿಂದ ಇಂದು ಇದೇ ಜಿಲ್ಲೆಯಲ್ಲಿ ನೀರಿಗಾಗಿ ಹಾಹಾಕಾರ ಉಂಟಾಗಿದೆ. ಇದಕ್ಕೆಲ್ಲಾ ಕಾರಣ ನಾವೇ. ಕೇವಲ ಪರಿಸರ ದಿನಾಚರಣೆಯ ದಿನದಂದು ಎರಡು ಗಿಡಗಳನ್ನು ನೆಟ್ಟು ಮಿಕ್ಕ ದಿನಗಳಲ್ಲಿ ಮನೆ, ಅಂಗಡಿ ಮುಂಗಟ್ಟುಗಳನ್ನು ಕಟ್ಟುವ ಸಲುವಾಗಿ ಮರಗಳನ್ನು ಕಡಿಯುತ್ತಾ ಬಂದಿದ್ದೇವೆ, ಇನ್ನು ಮುಂದಿನ ದಿನಗಳಲ್ಲಿ ಇದು ಸಲ್ಲದು. ಪರಿಸರ ನಾಶ ಹೀಗೆ ಮುಂದುವರಿದರೆ ಅದರ ಭೀಕರತೆಯನ್ನು ನಾವು ಮತ್ತು ನಮ್ಮ ಮುಂದಿನ ಪೀಳಿಗೆಗಳು ಅನುಭವಿಸಬೇಕಾಗುತ್ತದೆ, ಈ ಭೂಮಿ ಕೇವಲ ಮನುಷ್ಯನಿಗೆ ಮಾತ್ರ ಸೀಮಿತವಲ್ಲ, ಇಲ್ಲಿ ಪ್ರಾಣಿ ಪಕ್ಷಿಗಳಿಗೂ ಇಲ್ಲಿ ಬದುಕುವ ಹಕ್ಕಿದೆ. ಪರಿಸರ ನಾಶದಿಂದ ಪ್ರಾಣಿ ಪಕ್ಷಿಗಳು ಸಾವಿಗೀಡಾಗುತ್ತಿವೆ. 

ಇನ್ನಾದರೂ ಎಚ್ಚೆತ್ತುಕೊಂಡು ಪರಿಸರವನ್ನು ಕಾಪಾಡಿಕೊಳ್ಳೋಣ. ಪ್ರಾಣಿ ಪಕ್ಷಿಗಳೊಂದಿಗೆ ನಮ್ಮ ಮುಂದಿನ ಪೀಳಿಗೆಗಾಗಿ ಪರಿಸರವನ್ನು ಉಳಿಸಿಕೊಳ್ಳೋಣ. ಪರಿಸರ ಸಂರಕ್ಷಣೆ ಕೆವಲ ಪರಿಸರ ದಿನಾಚರಣೆಯ ದಿನಕ್ಕೆ ಸೀಮಿತವಾಗಬಾರದು. ನಮ್ಮ ಸುತ್ತ ಮುತ್ತಲಿನ ಪ್ರದೇಶದಲ್ಲಿ ಪ್ರತಿಯೊಬ್ಬರೂ ಒಂದೂಂದು ಸಸಿಗಳನ್ನು ನೆಟ್ಟು ಅದನ್ನು ಪೋಷಿಸುವ ಮೂಲಕ ನೀರು, ಗಾಳಿ ಉತ್ತಮ ವಾತಾವರಣವನ್ನು ಸೃಷ್ಟಿಸೋಣ ಎಂದು ಹೇಳಿದರು.

ನಂತರ ಸಹಾಯಕ ಆಯುಕ್ತ ಸಾಜೀದ್ ಅಹಮ್ಮದ ಮುಲ್ಲಾ ಮಾತನಾಡಿ ಜನರಲ್ಲಿ ಪರಿಸರದ ಬಗ್ಗೆ ಜಾಗ್ರತಿ ಮೂಡಿಸಲು ಈ ಜಾಥಾ ಹಾಗೂ ಬೀದಿ ನಾಟಕವನ್ನು  ಹಮ್ಮಿಕೊಂಡಿದ್ದು, ಪರಿಸರ ಯಾಕೆ ಮುನಿಸಿಕೊಂಡಿದೆ, ಇಂದಿನ ದಿನಗಳಲ್ಲಿ ಬರಗಾಲವು ಯಾಕೆ ಬರುತ್ತಿದೆ ಎಂದರೆ ನಾವು ಮಾಡಿರುವ ಕರ್ಮಗಳ ಫಲವೇ ಬರಗಾಲ ಬಂದಿದೆ. ಮುಂದಿನ ದಿನಗಳಲ್ಲಿ ಜವಾಬ್ದಾರಿಯಿಂದ ವರ್ತಿಸಿದರೆ ಪರಿಸರ ದಿನಾಚರಣೆ ಒಂದು ಮಹತ್ವ ಬರುತ್ತದೆ ಎಂದು ಹೇಳಿದರು.

ಇದಕ್ಕೂ ಪೂರ್ವ ದಲ್ಲಿ ಇದಕ್ಕೂ ಪೂರ್ವದಲ್ಲಿ ಪರಿಸರ ದಿನಾಚರಣೆಯಲ್ಲಿ ಅರಣ್ಯ ಇಲಾಖೆ ಆವರಣದಲ್ಲಿ ಶಾಸಕ ಸುನೀಲ ನಾಯ್ಕ ರಿಬ್ಬನ್ ಕತ್ತರಿಸಿ ಹಸಿರು ನಿಶಾನೆ  ತೋರಿಸುವ ಮೂಲಕಪರಿಸರ ಜಾತ್ರೆಗೆ ಚಾಲನೆ ನೀಡಿದರು,  ನಂತರ ಪರಿಸರ ಜಾಥಾ ಹೊರಟು ಸಂಶುದ್ದಿನ ಸರ್ಕಲನಿಂದ  ಬಂದರ  ರಸ್ತೆಯ ಮಾರ್ಗವಾಗಿ ಸೋನಾರಾಕೇರಿಯಿಂದ  ಪೋಲಿಸ ಠಾಣೆ ರಸ್ತೆ ಮೂಲಕ   ಸಂತೆ ಮಾರ್ಕೆಟ್ ನಿಂದ ಗುರು ಸುಧೀಂದ್ರ ಕಾಲೇಜು ಆವರಣಕ್ಕೆ ತಲುಪಿ ಶಾಸಕ ಸುನೀಲ ನಾಯ್ಕ ಗಿಡ ನೆದುವುದರ ಮೂಲಕ ಪರಿಸರ ದಿನಾಚರಣೆಯನ್ನು ಆಚರಿಸಿದರು.
ನಂತರ ಅರಣ್ಯ ಮಹಾವಿದ್ಯಾಲಯ ಶಿರಸಿ ವಿದ್ಯಾರ್ಥಿಗಳಿಂದ ಶಾಸಕರು ಹಾಗೂ ಅಧಿಕಾರಿಗಳ ಮುಂದೆ ಮುಂದಿನ ದಿನಗಳಲ್ಲಿ ಪರಿಸರ ಸಂರಕ್ಷಣೆ ಬಗ್ಗೆ ತಿಳುವಳಿಕೆ ಮೂಡಿಸುವ  ಬೀದಿ ನಾಟಕವನ್ನು ಪ್ರದರ್ಶಿಸಿದರು
ಈ ಸಂದರ್ಭದಲ್ಲಿ  ಡಿವೈಎಸ್ಪಿ ವೆಲೆಂಟೆನ್ ಡಿಸೋಜಾ, ಸಿ.ಪಿ.ಐ ಕೆ.ಎಲ್ ಗಣೇಶ. ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಆರ್. ಮುಂಜಿ, ಜೆ.ಸಿ.ಐ ವಲಯ ಅಧ್ಯಕ್ಷ ರಮೇಶ್ ರ್ಖಾವಿ,ಭಟ್ಕಳ ಹಾಗೂ ಹೊನ್ನಾವರ ವಿಭಾದ ಅರಣ್ಯ ಅಧಿಕಾರಿಗಳು ಮುಂತಾದವರು ಉಪಸ್ಥಿತರಿದ್ದರು.

Read These Next

ಕಾರವಾರ: ಕುಡಿಯುವ ನೀರು ಸಮಸ್ಯೆ : ಟ್ಯಾಂಕರ್ ಮೂಲಕ ತಕ್ಷಣ ನೀರು ಒದಗಿಸಲು ಜಿಲ್ಲಾಧಿಕಾರಿ ಸೂಚನೆ

ಜಿಲ್ಲೆಯಲ್ಲಿ ಕುಡಿಯುವ ನೀರು ಸಮಸ್ಯೆ ಕಂಡು ಬರುತ್ತಿರುವ ಗ್ರಾಮಗಳಲ್ಲಿ ಟ್ಯಾಂಕರ್ ಮೂಲಕ ತಕ್ಷಣವೇ ಸಾರ್ವಜನಿಕರಿಗೆ ಕುಡಿಯುವ ನೀರು ...

ಕಾರವಾರ: ಮತದಾನ ಜಾಗೃತಿಯ ಬೆಳಕು ಎಲ್ಲೆಡೆ ಪ್ರಕಾಶಿಸಲಿ : ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ

ಬೆಳಕು ಕತ್ತಲನ್ನು ದೂರ ಮಾಡಿ, ಎಲ್ಲೆಡೆ ಬೆಳಕು ಮೂಡಿಸುತ್ತದೆ. ಅದೇ ರೀತಿ ಮತದಾನದ ಕುರಿತ ಜಾಗೃತಿಯ ಬೆಳಕನ್ನು ಎಲ್ಲಾ ಮತದಾರರ ...