ಪುರಸಭೆಯ ಆಡಳಿತದಲ್ಲಿ ಪಾರದರ್ಶಕತೆಯೇ ನನ್ನ ಪ್ರಥಮ ಆಧ್ಯತೆ

Source: sonews | By Staff Correspondent | Published on 6th November 2020, 4:23 PM | Coastal News | Special Report |

•    ಸಾಹಿಲ್‍ಆನ್‍ಲೈನ್ ವಿಶೇಷ ಮಾತುಕತೆಯಲ್ಲಿ ನೂತನ ಅಧ್ಯಕ್ಷ ಪರ್ವೇಝ್ ಕಾಸಿಮಜಿ

*ಸಂದರ್ಶನ ವರದಿ: ಎಂ.ಆರ್.ಮಾನ್ವಿ

ಭಟ್ಕಳ: ಭಟ್ಕಳ ಪುರಸಭೆಯ ಆಡಳಿತವು ಹಳ್ಳ ಹಿಡಿದಿದ್ದು ಅಧಿಕಾರಿಗಳು ಮತ್ತು ಸಿಬ್ಬಂಧಿಗಳನ್ನು ಸರಿದಾರಿಗೆ ತರುವುದರ ಮೂಲಕ ಆಡಳಿತದಲ್ಲಿ ಪಾರದರ್ಶಕತೆಯನ್ನು ತರುವುದೇ ನನ್ನ ಪ್ರಥಮ ಆಧ್ಯತೆಯಾಗಿದೆ ಎಂದು ಅವಿರೋಧ ಆಯ್ಕೆಗೊಂಡು ಭಟ್ಕಳ ಪುರಸಭೆ ಅಧಿಕಾರ ಚುಕ್ಕಾಣಿ ಹಿಡಿದಿರುವ ಮುಹಮ್ಮದ್ ಪರ್ವೇಝ್ ಕಾಶಿಮಜಿ ಹೇಳಿದ್ದಾರೆ.

ಅವರು ಸಾಹಿಲ್‍ಆನ್‍ಲೈನ್ ನಡೆಸಿದ ವಿಶೇಷ ಮಾತುಕತೆಯಲ್ಲಿ ತಮ್ಮ ಅಭಿಪ್ರಾಯ ಹಂಚಿಕೊಂಡರು. 

ಭಟ್ಕಳದ ಜನರು ನನ್ನ ಮೇಲಿನ ವಿಶ್ವಾಸ, ನಂಬಿಕೆಯಿಂದ ಎರಡನೇ ಬಾರಿ ಪುರಸಭೆಯ ಅಧ್ಯಕ್ಷನಾಗುವ ಅವಕಾಶವನ್ನು ಮಾಡಿಕೊಟ್ಟಿದ್ದಾರೆ. ಜನರ ವಿಶ್ವಾಸಕ್ಕೆ ಯಾವುದೇ ಕಾರಣನಕ್ಕೂ ದ್ರೋಹವೆಸಗದೆ ನನ್ನ ಅಧಿಕಾರ ಮಿತಿಯೊಳಗಿದ್ದು ಉತ್ತಮ ಆಡಳಿತ ನೀಡುತ್ತೇನೆ ಎಂಬ ವಿಶ್ವಾಸ ವ್ಯಕ್ತಪಡಿಸಿರುವ ಪರ್ವೇಝ್ ಕಾಶಿಮಜಿ, ಊರಿನ ಹಿರಿಯರು, ವಿವಿಧ ಸಂಘಸಂಸ್ಥೆಗಳ ಮುಖಂಡರು ಯಾವತ್ತಿಗೂ ನನ್ನ ಬೆನ್ನೆಲುಬಾಗಿ ನಿಂತು ನನಗೆ ಸಲಹೆ ಸಹಕಾರ ನೀಡುವುದರೊಂದಿಗೆ ನಾನು ಎಡವಿದ್ದಲ್ಲಿ ನನ್ನನ್ನು ಎಚ್ಚರಿಸುವ ಕೆಲಸವನ್ನು ಮಾಡಬೇಕೆಂದು ಅವರು ವಿನಂತಿಸಿಕೊಂಡರು. 

ಭಟ್ಕಳದಲ್ಲಿ ಬಹಳಷ್ಟು ಕೆಲಸಕಾರ್ಯಗಳು ಬಾಕಿ ಇವೆ. ಅವುಗಳನ್ನು ಪೂರ್ಣಗೊಳಿಸುವಲ್ಲಿ ಹೆಚ್ಚು ಗಮನ ಕೇಂದ್ರೀಕರಿಸುವೆ. ಹಲವು ಹೊಸ ಯೋಜನೆಗಳನ್ನು ತರವ ಪ್ರಯತ್ನವನ್ನು ಮಾಡುವುದು, ಪುರಸಭೆಯ ಎಲ್ಲ ಹಂತದ ಅಧಿಕಾರಿಗಳು, ಸಿಬ್ಬಂಧಿಗಳು ಸಾರ್ವಜನಿಕರೊಂದಿಗೆ ಉತ್ತಮವಾಗಿ ವರ್ತಿಸುತ್ತಿಲ್ಲ ಎಂಬ ಆರೋಪ ಕೇಳಿ ಬಂದಿದೆ. ಇದಕ್ಕೆ ಸರಿಯಾದ ಮಾರ್ಗವನ್ನು ಕಂಡುಕೊಂಡು ಎಲ್ಲ ಸದಸ್ಯರು ಹಾಗೂ ಸಿಬ್ಬಂಧಿಗಳೊಡನೆ ಸೇರಿ ಭಟ್ಕಳ ಪುರಸಭೆಗೆ ಹೊಸ ಕಾಯಕಲ್ಪ ನೀಡುವುದಾಗಿದೆ. ಹಿಂದಿನ ನನ್ನ ಆಡಳಿತಾವಧಿಯಲ್ಲಿ ಭಟ್ಕಳ ಪುರಸಭೆಗೆ ರಾಜ್ಯದಲ್ಲಿ ಎರಡನೇ ಸ್ಥಾನ ಲಭಿಸುವಂತೆ ಮಾಡಿದ್ದೆ. ಈಗ ಮತ್ತೇ ಅಧಿಕಾರ ನನ್ನ ಕೈಗೆ ಬಂದಿರುವುದರಿಂದ ಇನ್ನೂ ಉತ್ತಮ ಯೋಜನೆಗಳನ್ನು ರೂಪಿಸುವುದರೊಂದಿಗೆ ಭಟ್ಕಳವನ್ನು ಮತ್ತೊಮ್ಮೆ ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಳ್ಳುವಂತೆ ಮಾಡುತ್ತೇನೆ. ಇದಕ್ಕೆ ಸಾರ್ವಜನಿಕರ ಹಾಗೂ ಮಾಧ್ಯಮಗಳ ಸಹಕಾರ ಅಗತ್ಯ ಎಂದು ಹೇಳಿದರು. 

ತಾವು ಹಿಂದೆ ಅಧಿಕಾರದಲ್ಲಿದ್ದಾಗ ಭಟ್ಕಳವನ್ನು ಸಿಂಗಾಪುರ ಮಾಡುತ್ತೇನೆ ಎಂದು ಹೇಳಿದ್ದೀರಿ ಆ ಕಾರ್ಯ ಈ ಅವಧಿಯಲ್ಲಿ ಪೂರ್ಣಗೊಳ್ಳುವುದೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಖಂಡಿತ ಜನರ ಸಹಕಾರ ಮತ್ತು ದೇವರ ಆಶೀರ್ವಾದ ಇದ್ದರೆ ಭಟ್ಕಳವನ್ನು ಸಿಂಗಾಪುರದ ರೀತಿಯಲ್ಲಿ ಅಭಿವೃದ್ಧಿಗೊಳಿಸಲು ಸಾಧ್ಯವಿದೆ ಎಂದರು. 

ಎಡಿಬಿ ಯೋಜನೆಯಡಿ ನಿರ್ಮಿಸಿದ್ದ ಒಳಚರಂಡಿ ಕಾಮಾಗಾರಿಯಲ್ಲಿ ಕೆಲವೊಂದು ಲೋಪದೋಷಗಳು ಕಂಡುಬಂದಿದ್ದು ಅದನ್ನು ಸರಿಪಡಿಸುವ ಪ್ರಮಾಣಿಕ ಪ್ರಯತ್ನ ಮಾಡುವೆ, ನಗರದ ಕೆಲ ಪ್ರದೇಶಗಳು ಎಡಿಬಿ ಒಳಚರಂಡಿ ಯೋಜನೆಯಿಂದ ಬಿಟ್ಟುಹೋಗಿದ್ದು ಅದನ್ನು ಪುನರ್ ಯೋಜಿಸಲು ಸರ್ಕಾರ 115ಕೋಟಿ ರೂ ಹಣ ಬಿಡುಗಡೆಗೊಳಿಸಿದೆ. ಟೆಂಡರ್ ಕಾರ್ಯ ಮುಗಿದು ಕೆಲವು ಕಡೆಗಳಲ್ಲಿ ಕಾಮಾಗಾರಿಯೂ ಆರಂಭಗೊಂಡಿದೆ. ಒಂದೆರಡಗು ಪ್ರದೇಶಗಳಲ್ಲಿ ಕೆಲವೊಂದು ಆಕ್ಷೇಪಣೆಗಳು ಬಂದಿದ್ದು ಆ ಭಾಗದ ಮುಖಂಡರು, ಹಿರಿಯರು ಹಾಗೂ ಅಧಿಕಾರಿಗಳೊಂದಿಗೆ ಸೇರಿ ಮಾತುಕತೆ ನಡೆಸುವುದರ ಮೂಲಕ ನಗರದ ಒಳಚರಂಡಿ ವ್ಯವಸ್ಥೆಗಾಗಿ ಉತ್ತಮ ಯೋಜನೆಯನ್ನು ರೂಪಿಸಲಾಗುವುದು ಎಂದರು. 

ಪುರಸಭಾ ಅಧಿಕಾರಿಗಳು, ಸಿಬ್ಬಂಧಿಗಳು ಜನರ ಸಮಸ್ಯೆಗಳಿಗೆ ಸರಿಯಾದ ಸ್ಪಂದನೆ ನೀಡುತ್ತಿಲ್ಲ ಎಂಬ ಆರೋಪದ ಅತ್ಯಂತ ತೀಕ್ಷಣವಾಗಿ ಉತ್ತರಿಸಿದ ಕಾಶಿಮಜಿ, ಅವರನ್ನು ಯಾವ ರೀತಿಯಲ್ಲಿ ಸರಿದಾರಿಗೆ ತರಬೇಕು, ಹದ್ದುಬಸ್ತಿನಲ್ಲಿಡಬೇಕು ಎಂದು ನನಗೆ ಗೊತ್ತು. ನನ್ನ ಹಿಂದಿನ ಆಡಳಿತಾವಧಿಯ ಅನುಭವ ನನಗೆ ಬಹಳಷ್ಟು ಕಲಿಸಿದೆ. ಅವರ ಲಗಾಮು ನನ್ನ ಕೈಯಲ್ಲಿದ್ದು ಅವರನ್ನು ಯಾವ ರೀತಿ ಕೆಲಸಕ್ಕೆ ಹಚ್ಚಬೇಕು ಎಂಬುದು ನನಗೆ ಗೊತ್ತಿದೆ ಮುಂದಿನ ದಿನಗಳಲ್ಲಿ ನೀವು ಅದರ ವ್ಯತ್ಯಾಸವನ್ನು ನೋಡಬಹುದು ಎಂದು ವಿಶ್ವಾಸ ವ್ಯಕ್ತಪಡಿಸಿದರು. 

 
 

Read These Next

ಕಾರವಾರ: ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಬೇಕಾಗಿ ಅಧಿಕಾರಿಗಳಿಗೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸೂಚನೆ

ಮುಂದಿನ ಎರಡು ವರ್ಷದೊಳಗಾಗಿ ಜಿಲ್ಲೆಯಲ್ಲಿರುವ ಕುಡಿಯುವ ನೀರಿನ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳಬೇಕಾಗಿದ್ದು, ...

ಭಟ್ಕಳ: ತೆವಳುತ್ತಲೇ ಸಾಗಿದೆ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ; ಉದ್ಘಾಟನೆ ಮುಗಿದರೂ ಕೆಲಸ ಮುಗಿಯಲೇ ಇಲ್ಲ

ಯಾವುದೇ ದೇಶ, ರಾಜ್ಯ ಆಗಿರಲಿ, ಸುಸಜ್ಜಿತ ರಸ್ತೆ ಎನ್ನುವುದು ಅಭಿವೃದ್ಧಿಯ ಸಂಕೇತವಾಗಿದೆ. ಅದರಲ್ಲಿಯೂ ಹೆದ್ದಾರಿಗಳು ಆಧುನಿಕತೆಯ ...

ಭಟ್ಕಳ ಮಿನಿ ವಿಧಾನಸೌಧದಲ್ಲಿ ಕಲ್ಲೇರಿ ನಿಂತರಷ್ಟೇ ಕೆಲಸ ! ಮರಿಪುಢಾರಿಗಳ ಕಾಟ ತಾಳಲಾರದೆ ಒಳಗಡೆಗೂ ಬಿದ್ದಿದೆ ಬೀಗ; ಸದ್ದಿಲ್ಲದೇ ಸೊರಗುತ್ತಿದೆ ಕನಸಿನ ಸೌಧ

ಇದು ಜನರ ಅಲೆದಾಟವನ್ನು ತಪ್ಪಿಸಿ ಒಂದೇ ಸೂರಿನಡಿ ಜನರಿಗೆ ಸೇವೆ ನೀಡಲು ರು.10ಕೋ.ಗೂ ಅಧಿಕ ಹಣವನ್ನು ವ್ಯಯಿಸಿ ಕಟ್ಟಲಾದ ಭಟ್ಕಳ ಮಿನಿ ...

ಜಾನುವಾರು ಸಾಗಾಟಕ್ಕೆ ನಿರಂತರ ತಡೆ ಹಿನ್ನೆಲೆ; ಬಕ್ರೀದ್ ಹಬ್ಬಕ್ಕಾಗಿ ಭಟ್ಕಳಕ್ಕೆ ಬಂದ ಸಾವಿರಾರು ಕುರಿಗಳು; ಭಟ್ಕಳದಲ್ಲಿ ಬೀಡುಬಿಟ್ಟ ಪರ ಜಿಲ್ಲೆಗಳ ಕುರಿಗಾಹಿಗಳು

ಇಸ್ಲಾಮ್ ಧರ್ಮೀಯರ ಪವಿತ್ರ ಹಬ್ಬ ಬಕ್ರೀದ್‍ಗೆ 3 ದಿನಗಳಷ್ಟೇ ಬಾಕಿ ಇದೆ. ಜಾನುವಾರು ಸಾಗಾಟಕ್ಕೆ ಪೊಲೀಸರು ನಿರಂರವಾಗಿ ತಡೆಯೊಡ್ಡಿರುವ ...

ರಾಜ್ಯದಲ್ಲಿ ಕೊರೊನಾ, ಲಸಿಕೆ ಪೂರೈಕೆ ಸಂಕಟದ ನಡುವೆ ಡಯಾಲಿಸೀಸ್ ರೋಗಿಗಳಿಗೂ ಆತಂಕ ತಂದ ಸರಕಾರ; ಸೇವೆಯಿಂದ ಹಿಂದೆ ಸರಿಯಲು ಬಿ.ಆರ್.ಶೆಟ್ಟಿ ಫೌಂಡೇಶನ್ ನಿರ್ಧಾರ

ಸರಿಯಾದ ಪೂರ್ವ ತಯಾರಿ, ವ್ಯವಸ್ಥಿತ ಕಾರ್ಯಯೋಜನೆ ಇಲ್ಲದೇ ಕೊರೊನಾ ಸೋಂಕು ನಿಯಂತ್ರಣ, ಲಸಿಕೆ ಪೂರೈಕೆ ಕೆಲಸ ಕಾರ್ಯಗಳ ನಡುವೆ ಬಿದ್ದು ...