ಕಾರವಾರದಲ್ಲಿ ನಡೆದ ಆತ್ಮ ಯೋಜನೆಯಡಿ ತರಬೇತಿ ಕಾರ್ಯಕ್ರಮ

Source: S O News | By I.G. Bhatkali | Published on 6th August 2022, 5:36 PM | Coastal News |

ಕಾರವಾರ : ಆತ್ಮ ಯೋಜನೆಯಡಿ  ಕೈಗೊಂಡತಹ ತರಭೇತಿ ಕಾರ್ಯಕ್ರಮಗಳಲ್ಲಿ  ಭಾಗವಹಿಸಿದ ರೈತರು ಮಾಹಿತಿ ಪಡೆದು ಅದರ ಸದುಪಯೋಗ ಪಡೆದುಕೊಳ್ಳಬೇಕು ಹಾಗೂ ತಮ್ಮ ಕ್ಷೇತ್ರ ಮಟ್ಟದಲ್ಲಿ  ಅಳವಡಿಸಿಕೊಳ್ಳುವಂತೆ ಅಧಿಕಾರಿಗಳು ಮಾರ್ಗದರ್ಶನ ನೀಡಬೇಕು ಎಂದು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಪ್ರೀಯಾಂಗಾ ಎಂ ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲಾ ಪಂಚಾಯತ್  ಸಭಾಭವನದಲ್ಲಿ ಆಗಸ್ಟ್ 6 ರಂದು ಆಯೋಜಿಸಿದ್ದ ಆತ್ಮ ಯೋಜನೆಯ 2022-23 ನೇ ಸಾಲಿನ ಅನುಷ್ಠಾನದ ಬಗ್ಗೆ  ಜಿಲ್ಲಾ ಮಟ್ಟದ ಚಾಲನಾ ಸಮಿತಿ ಅಧಿಕಾರಿಗಳ  ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಸಮುದ್ರ ಪಾಚಿ ಪ್ರಾತ್ಯಕ್ಷಿಕೆಯ ಫಲಶೃತಿ ಹಾಗೂ ಕ್ಷೇತ್ರ ವಿಸ್ತರಣೆ ಮತ್ತು ಸಾಧಕ ಭಾದಕಗಳ ಬಗ್ಗೆ ವರದಿ ನೀಡಬೇಕು ಎಂದು ಮೀನುಗಾರಿಕಾ ಉಪನಿರ್ದೇಶಕರಿಗೆ ಸೂಚಿಸಿದರು.

ಕಳೆದ ಸಾಲಿನಲ್ಲಿ ಕೈಗೋಡಂತಹ ಅಭಿವೃದ್ಧಿ ಕಾರ್ಯಗಳನ್ನು ಯಾವ ರೀತಿ ನಡೆಸಲಾಗಿತ್ತು ಹಾಗೂ ಈ  ಪ್ರಸಕ್ತ ಸಾಲಿನಲ್ಲಿ ಇಂತಹ ಕಾರ್ಯಕ್ರಮಗಳಲ್ಲಿ ಯಾವ ರೀತಿ ಬದಲಾವಣೆಗಳನ್ನು ತರಬಹುದು, ಹಾಗೂ ಇನ್ನೂ ಹೇಗೆಲ್ಲಾ ನವೀಕರಿಸಬಹುದು  ಎಂದು ಅಧಿಕಾರಿಗಳು ಸಲಹೆ ನೀಡಬೇಕು ಎಂದು  ಎಲ್ಲಾ ಇಲಾಖಾ ಅಧಿಕಾರಿಗಳಿಗೆ ಸೂಚಿಸಿದರು.

ಭಟ್ಕಳ ಮತ್ತು ಹೊನ್ನಾವರ ತಾಲೂಕುಗಳಲ್ಲಿ ಲಾವಂಜ ಬೆಳೆಯುವ ಬಗ್ಗೆ ಹಾಗೂ ತರಭೇತಿಯನ್ನು ಆಯೋಜಿಸಲು ಮತ್ತು ಜಿಲ್ಲೆಯಲ್ಲಿ ನಿರ್ಧಿಷ್ಟ ಬೆಳೆಯ ಉತ್ಪನ್ನ ಆಧಾರಿತ ರೈತ ಮೇಳಗಳನ್ನು ಆಯೋಜಿಸಲು ಸೂಚಿಸಿ, ಪಸ್ತುತ ಸಾಲಿನಲ್ಲಿ ಆತ್ಮ ಯೋಜನೆಯಲ್ಲಿ ಕೈಗೊಳ್ಳಬೇಕಾದ ವಿವಿಧ ಚಟುವಟಿಕೆಗಳ ಬಗ್ಗೆ ಸಭೆಯಲ್ಲಿ ಚರ್ಚಿಸಿದರು.

ಸಭೆಯಲ್ಲಿ ಜಂಟಿ ಕೃಷಿ ನಿರ್ದೇಶಕ ಹೊನ್ನಪ್ಪ ಗೌಡ, ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಮಿಷನ್ ಪ್ರಾಜೆಕ್ಟ್ ಆಫೀಸರ್ ಕರೀಮ್ ಆಸಾದಿ, ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥರು ಹಾಗೂ ವಿಜ್ಞಾನಿಗಳು, ಕದಂಬ ಮಾರ್ಕೆಟಿಂಗ್ ಸೂಸೈಟಿ ವಿಶ್ವೇಶ್ವರ ಭಟ್ಟ, ನಬಾರ್ಡ ವ್ಯವಸ್ಥಾಪಕರು ಹಾಗೂ ಇನ್ನಿತರ ಇಲಾಖಾ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಹಾಜರಿದ್ದರು.

Read These Next

ಭಟ್ಕಳದ ತೆಂಗಿನಗುಂಡಿಯಲ್ಲಿ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳ ಜಿಲ್ಲಾ ಮಟ್ಟದ ಕ್ರೀಡಾಕೂಟಕ್ಕೆ ಚಾಲನೆ ನೀಡಿದ ಶಾಸಕ ಸುನೀಲ ನಾಯ್ಕ

ಭಟ್ಕಳದ ತೆಂಗಿನಗುಂಡಿಯಲ್ಲಿ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳ ಜಿಲ್ಲಾ ಮಟ್ಟದ ಕ್ರೀಡಾಕೂಟಕ್ಕೆ ಚಾಲನೆ ನೀಡಿದ ಶಾಸಕ ಸುನೀಲ ನಾಯ್ಕ

ಉಡುಪಿ ಜಿಲ್ಲಾ ಮಟ್ಟದ ಪುಟ್ಬಾಲ್ ಪಂದ್ಯಾಟದಲ್ಲಿ ಗ್ರೀನ್‍ವ್ಯಾಲಿ ಪದವಿ ಪೂರ್ವ ಬಾಲಕರ ತಂಡ ರಾಜ್ಯ ಮಟ್ಟಕ್ಕೆ ಆಯ್ಕೆ

ಉಡುಪಿ ಜಿಲ್ಲಾ ಮಟ್ಟದ ಪುಟ್ಬಾಲ್ ಪಂದ್ಯಾಟದಲ್ಲಿ ಗ್ರೀನ್‍ವ್ಯಾಲಿ ಪದವಿ ಪೂರ್ವ ಬಾಲಕರ ತಂಡ ರಾಜ್ಯ ಮಟ್ಟಕ್ಕೆ ಆಯ್ಕೆ

ಜಿಲ್ಲೆಯ ಅಭಿವೃದ್ಧಿ ದೃಷ್ಠಿಯಿಂದ ಹುಬ್ಬಳ್ಳಿ-ಅಂಕೋಲಾ ರೈಲ್ವೆ ಉತ್ತಮವಾದ ಯೋಜನೆ

ಕಾರವಾರ  : ಜಿಲ್ಲೆಯು ಅಭಿವೃದ್ಧಿಯಾಗುವ ನಿಟ್ಟಿನಲ್ಲಿ ರೈಲು ಮಾರ್ಗ ಕಾಮಗಾರಿ ಪ್ರಾರಂಭವಾಗುವುದು ಅವಶ್ಯಕವಾಗಿದ್ದು, ಜಿಲ್ಲೆಯ ಜನರ ...

ಜಿಲ್ಲೆಯ ಆಧ್ಯಾತ್ಮಿಕ ಮತ್ತು ಸಾಂಸ್ಕೃತಿಕ ಶ್ರೀಮಂತಿಕೆ ರಾಷ್ಟ್ರಕ್ಕೆ ವಿಸ್ತರಣೆಯಾಗಬೇಕು : ಸಚಿವ ಸುನೀಲ್

1997 ರಲ್ಲಿ ಘೋಷಣೆಯಾದ ಹೊಸ ಜಿಲ್ಲೆಗಳ ನಡೆದಿರುವ ಅಭಿವೃದ್ದಿಗೆ ಹೋಲಿಸಿದಲ್ಲಿ, ಉಡುಪಿ ಜಿಲ್ಲೆ 20 ವರ್ಷ ಮುಂದಿದ್ದು, ಸ್ಟಾರ್ಟಪ್ ...