ಕುಡಿದ ಅಮಲಿನಲ್ಲಿ ಎರ್ರಾಬಿರ್ರಿ ಕಾರು ಚಲಾಯಿಸಿ ಮಹಿಳೆಯರಿಗೆ ಅಸಭ್ಯ ವರ್ತನೆ

Source: sonews | By Staff Correspondent | Published on 20th September 2018, 6:47 PM | Coastal News | Incidents | Don't Miss |

•    ನಾಲ್ವರು ಆರೋಪಿಗಳು ಪೊಲೀಸ್ ವಶಕ್ಕೆ

ಭಟ್ಕಳ: ಕುಡಿದ ಅಮಲಿನಲ್ಲಿ ಭಟ್ಕಳದ ಮಹಿಳೆಯರಿದ್ದ ಕಾರನ್ನು ಹಿಮ್ಮೆಟ್ಟಿಕೊಂಡು ಬಂದು ಮಹಿಳೆಯರೊಂದಿಗೆ ಅಸಭ್ಯದಿಂದ ವರ್ತಿಸಿದ ಆರೋಪದ ಮೇಲೆ ಭಟ್ಕಳ ನಗರಠಾಣೆಯ ಪೊಲೀಸರು ಮಂಗಳೂರು ಮೂಲದ ನಾಲ್ವರನ್ನು  ವಶಪಡೆದುಕೊಂಡ ಬುಧವಾರ ರಾತ್ರಿ ನಡೆದಿದೆ. 

ಇಲ್ಲಿನ ಮುಷ್ತಾಖ್ ಆಹ್ಮದ್ ಎಂಬುವವರು ತಮ್ಮ ಕುಟುಂಬದೊಂದಿಗೆ ಕುಂದಾಪುರದಿಂದ ಭಟ್ಕಳಕ್ಕೆ ಕಾರಿನಲ್ಲಿ ಬರುವಾಗ ಬೈಂದೂರು ಬಳಿ ಕುಡಿದ ಮತ್ತಿನಲ್ಲಿನದ್ದ ಯುವಕರ ಕಾರೊಂದು ತಮ್ಮ ಕಾರನ್ನು ಹಿಂಬಾಲಿಸಿಕೊಂಡು ಅಡ್ಡದಿಡ್ಡಿಯಾಗಿ ಚಲಿಸಿಕೊಂಡು ಬರುತ್ತಿದ್ದು ಕಾರಿನಲ್ಲಿದ್ದ ಮಹಿಳೆಯರೊಂದಿಗೆ ಅಸಭ್ಯವಾಗಿ ವರ್ತನೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಮಂಗಳೂರಿನಿಂದ ಜೋಗಫಾಲ್ಸ್ ಗೆ ಹೋಗುತ್ತಿದ್ದ ನಾಲ್ವರು ಯುವಕರು ಕುಡಿದ ಅಮಲಿನಲ್ಲಿ ಎರಡು ಮೂರು ಕಡೆ ರಸ್ತೆಯಲ್ಲಿ ಬೈಕ್ ಗೆ ಅಪಘಾತ ಮಾಡಿಕೊಂಡು ಎರ್ರಾಬಿರ್ರಿಯಾಗಿ ಕಾರನ್ನು ಚಲಾಯಿಸುತ್ತಿದ್ದರು ಎನ್ನಲಾಗಿದ್ದು ಮುಷ್ತಾಖ್ ರ ಕಾರನ್ನು ಹಿಂಬಾಲಿಸಿಕೊಂಡ ಭಟ್ಕಳದವರೆಗೆ ಬಂದ ಯುವಕರನ್ನು ಇಲ್ಲಿನ ಪಿ.ಎಲ್.ಡಿ. ಬ್ಯಾಂಕ್ ಬಳಿ ಅಡ್ಡಗಟ್ಟಿ ನಿಲ್ಲಿದ ಸಾರ್ವಜನಿಕರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ ಎನ್ನಲಾಗಿದೆ. 

ನಾಲ್ವರನ್ನು ವಶಕ್ಕೆ ಪಡೆದುಕೊಂಡ ನಗರ ಠಾಣೆಯ ಪೊಲೀಸರು ಯುವಕರನ್ನು ವಿಚಾರಿಸಿ ನಂತರ ಪ್ರಕರಣ ದಾಖಲಿಸಿಕೊಳ್ಳಲಾಗುವುದೆಂದು ತಿಳಿಸಿದ್ದಾರೆ. 

ಘಟನೆಯ ಸುದ್ದಿ ತಿಳಿಯುತ್ತಿದ್ದಂತೆ ತಂಝಿಮ್ ಉಪಾಧ್ಯಕ್ಷ ಇನಾಯತುಲ್ಲಾ ಶಾಬಂದ್ರಿ ಹಾಗೂ ಕಾರ್ಯದರ್ಶಿ ಮೌಲಾನ ಯಾಸಿರ್ ಬರ್ಮಾವರ್ ನದ್ವಿ ಪೊಲೀಸ್ ಠಾಣೆ ತಲುಪಿ ಅಲ್ಲಿ ಗುಂಪುಗೂಡಿದ ಜನರನ್ನು ಮನವೊಲಿಸಿ ಪೊಲೀಸರು ಆರೋಪಿಗಳ ವಿರುದ್ಧ ಕಾನೂನು ಕ್ರಮ ಜರಗಿಸುತ್ತಾರ ನೀವು ಮನಗಳಿಗೆ ತೆರಳಿ ಎಂದು ಮನವಿ ಮಾಡಿಕೊಂಡ ಹಿನ್ನೆಲೆಯಲ್ಲಿ ಪೊಲೀಸ್ ಠಾಣೆಯ ಎದುರು ಸೇರಿದ ಸಾರ್ವಜನಿಕರು ಅಲ್ಲಿಂದ ಜಾಗಖಾಲಿ ಮಾಡಿದರು ಎಂದು ತಿಳಿದುಬಂದಿದೆ. 

Read These Next

ಭಟ್ಕಳ : ಈದುಲ್ ಫಿತ್ರ್ ನಿಮಿತ್ತ ಒಂದು ಲಕ್ಷ ಇಪ್ಪತ್ತು ಸಾವಿರಕ್ಕೂ ಅಧಿಕ ಫೀತ್ರ್ ಅಕ್ಕಿ ವಿತರಣೆ

ಭಟ್ಕಳ: ಈದುಲ್ ಫಿತ್ರ್ ಸಂದರ್ಭದಲ್ಲಿ ಪ್ರತಿಯೊಬ್ಬ ಮುಸ್ಲಿಮನು ತನ್ನ ಈದ್ ಹಬ್ಬಕ್ಕೆ ಒಂದು ಮುಂಚೆ ಕಡ್ಡಾಯವಾಗಿ ನೀಡುವ ಫಿತ್ರ್ ...

ಭಟ್ಕಳ ಸ್ಪೋರ್ಟ್ಸ್ ಅಕಾಡೆಮಿ ಮತ್ತು BMYF ಸಹಯೋಗದೊಂದಿಗೆ ಎ.20-21 ರಂದು ಯುವ ಪ್ರತಿಭೆಗಳಿಗಾಗಿ ಇಂಟರ್-ಕ್ರಿಕೆಟ್ ಲೀಗ್ ಆಯ್ಕೆ

ಭಟ್ಕಳ: ಉತ್ತರ ಕನ್ನಡ ಜಿಲ್ಲೆಯ ಉದಯೋನ್ಮುಖ ಕ್ರಿಕೆಟ್ ಪ್ರತಿಭೆಗಳನ್ನು ಗುರುತಿಸುವ ಮತ್ತು ಪೋಷಿಸುವ ಪ್ರಯತ್ನದಲ್ಲಿ, ಭಟ್ಕಳ ...

ಭಟ್ಕಳ ತಾಲೂಕಿನಲ್ಲಿ ಸರಣಿ ಕಳ್ಳತನ; ತಲೆಗೆ ಹೆಲ್ಮೆಟ್ ಹಾಗೂ ಮುಖಕ್ಕೆ ಮಾಸ್ಕ್ ಧರಿಸಿ ಲಕ್ಷಾಂತರ ರೂ ಲೂಟಿ

ಭಟ್ಕಳ: ನಗರದ ರಂಗನಕಟ್ಟೆಯಲ್ಲಿರುವ ವಿನಾಯಕ ಸಹಕಾರಿ ಸಂಘ ಸೇರಿದಂತೆ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಒಂದು ಅಂಗಡಿ ಹಾಗೂ ...