ನವದೆಹಲಿ : ದೆಹಲಿ ಪೊಲೀಸ್ನ ತಕರಾರಿನ ನಡುವೆಯೂ ದೆಹಲಿ ಗಡಿಯಲ್ಲಿ ನೆರೆದಿರುವ ರೈತರು ತಮ್ಮ ಈ ಹಿಂದಿನ ನಿರ್ಧಾರದಂತೆ ಜನವರಿ 26ರ ಗಣರಾಜ್ಯೋತ್ಸವದಂದು ಟ್ರ್ಯಾಕ್ಟರ್ ಪರೇಡ್ ನಡೆಸುವುದು ಖಚಿತವಾಗಿದೆ.
ಪರೇಡ್ ನ್ನು ಅತ್ಯಂತ ಶಾಂತಿಯುತವಾಗಿ ದೆಹಲಿ ಔಟರ್ ರಿಂಗ್ ರೋಡಿನಲ್ಲಿ ನಡೆಸಲಾಗುತ್ತದೆ ಎಂದು ರೈತ ಸಂಘಟನೆಗಳ ಒಕ್ಕೂಟ ತಿಳಿಸಿದೆ.
ಪರೇಡ್ ಐತಿಹಾಸಿಕವಾದ ಘಟನೆಯಾಗಲಿದೆ ಎಂದು ರೈತ ಒಕ್ಕೂಟದ ಹೇಳಿಕೆ ತಿಳಿಸಿದೆ.